ವಿವೇಕಾನಂದ ವಿಚಾರಧಾರೆಯ ಚಿಂತನ -ಮಂಥನ:

ವಿವೇಕಾನಂದ ವಿಚಾರಧಾರೆಯ ಚಿಂತನ -ಮಂಥನ:

ಸ್ವಾಮಿ ವಿವೇಕಾನಂದರ ಸಾರ್ಧಶತಮಾನೋತ್ಸವ ಸಮಿತಿಯ ವತಿಯಿಂದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆವರಣದಲ್ಲಿ  ಚಿಂತನ-ಮಂಥನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. 

           ಚಿಂತನ-ಮಂಥನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಉಪನ್ಯಾಸವನ್ನು ನೀಡಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕ್ಷೇತ್ರೀಯ ಬೌದ್ಧಿಕ್ ಪ್ರಮುಖ್ ಶ್ರೀ ವಿ.ನಾಗರಾಜ್ ಅವರು ಮಾತನಾಡುತ್ತಾ “ ರಾಷ್ಟ್ರೀಯ ಸ್ವಾಭಿಮಾನವನ್ನು ಬಡಿದೆಬ್ಬಿಸಿದ ರಾಷ್ಟ್ರಭಕ್ತ, ಪ್ರಾಚೀನ ಮತ್ತು ಆಧುನಿಕ ಚಿಂತನೆಗಳ ಸಮನ್ವಯದಿಂದ ಆಧುನಿಕ ಭಾರತದ   ಸಮಗ್ರ ವಿಕಾಸಕ್ಕೆ  ಹೊಸ ದೃಷ್ಟಿ ನೀಡಿದ  ದಾರ್ಶನಿಕ ವಿವೇಕಾನಂದರ  ಚಿಂತನೆಗಳು ಸಾರ್ವಕಾಲಿಕವೆಂದು ನುಡಿದರು. ವಿವೇಕಾನಂದರ ವಿಚಾರಗಳನ್ನು ಇಂದಿನ ಯುವಪೀಳಿಗೆಯು ಅಳವಡಿಸಕೊಳ್ಳಬೇಕಾದುದು ಅತ್ಯಗತ್ಯವಾಗಿದೆ, ಎಂದರು.

                  ವಿವೇಕಾನಂದರ 150ನೇ ಜನ್ಮ ವರ್ಷ ಅಭಿಯಾನವೆಂದರೆ ವಿವೇಕಾನಂದರನ್ನು ಪೂಜಿಸುವುದಲ್ಲಾ, ಅವರ ವಿಚಾರಧಾರೆಯನ್ನು ಹಳ್ಳಿ ಹಳ್ಳಿಗೂ ಮುಟ್ಟಿಸುವ ಕೆಲಸ ಆಗಬೇಕೆಂದರು. ಶಿವನನ್ನು ಪೂಜಿಸುತ್ತಾ ಶಿವನೇ ಆಗಬೇಕೆನ್ನುವ ನುಡಿಯಂತೆ ವಿವೇಕಾನಂದರ ಕೆಲಸವನ್ನು ಮಾಡುತ್ತಾ ವಿವೇಕಾನಂದರ ಗುಣಗಳನ್ನು ಬಾಳಿನಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆನೀಡಿದರು

               ಪ್ರಶ್ನೋತ್ತರದಲ್ಲಿ ಪಾಲ್ಗೊಂಡು  ಕೇಳುಗರ ಪ್ರಶ್ನೆಗೆ ಉತ್ತರಿಸುತ್ತಾ  ಕೇವಲ ಭಾಷಣ    ಮಾಡುವ ಮತ್ತು ಕೇಳುವುದರಿಂದ ಸಮಾಜ ಸುಧಾರಣೆ ಸಾಧ್ಯವಿಲ್ಲವೆಂದೂ ಸಮಾಜದ ನೋವಿಗೆ ಸ್ಪಂಶಿಸುತ್ತಾ     ಅದನ್ನು ಅನುಷ್ಠಾನಕ್ಕೆ ತಂದಾಗ ಮಾತ್ರ  ಸುಧಾರಣೆ ಸಾಧ್ಯವೆಂದೂ ಹೇಳಿದರು. ಸಕ್ರಿಯ ಮತ್ತು ಜಾಗೃತ ಸಜ್ಜನ ಶಕ್ತಿಯಿಂದ ಮಾತ್ರ ಸಮಾಜದ ಪರಿವರ್ತನೆ ಮತ್ತು ರಾಷ್ಟ್ರದ ಅಭ್ಯುದಯ ಸಾಧ್ಯವೆಂದು ಉಧಾಹರಣೆ ಸಹಿತ ವಿವರಿಸಿದರು.

              ಕಾರ್ಯಕ್ರಮದ ಕಡೆಯಲ್ಲಿ ಈ ವರ್ಷ ಹಾಸನ ಜಿಲ್ಲೆಯಲ್ಲಿ ನಡೆಯಲಿರುವ ಅಭಿಯಾನದ  ವಿಶೇಷ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲಾಯ್ತು. ಬರುವ ತಿಂಗಳುಗಳಲ್ಲಿ  ದೊಡ್ದ ಮಟ್ಟದ ವಿಚಾರಸಂಕಿರಣ, ಮಾತೆಯರ ಸಮ್ಮೇಳನ, ಯುವಕರಿಗಾಗಿ ವಿಶೇಷ ಕಾರ್ಯಕ್ರಮಗಳು  ಮತ್ತು  ಹಳ್ಳಿ ಹಳ್ಳಿಗೆ    ವಿವೇಕಾನಂದರ ವಿಚಾರ ಧಾರೆಯನ್ನು ತಲುಪಿಸುವ ಹಲವು ಕಾರ್ಯಕ್ರಮಗಳನ್ನು ನಡೆಸಲು ನಿರ್ಧರಿಸಲಾಯ್ತು. ಕಡೆಯಲ್ಲಿ ಮಾತನಾಡಿದ ಪ್ರಾಂತ ಸಮಿತಿಯ ಸದಸ್ಯರಾದ ಡಾ|| ಜನಾರ್ಧನ್ ರವರು ಮುಂದಿನ ಕಾರ್ಯಕ್ರಮಗಳಲ್ಲಿ ಇನ್ನೂ ಹೆಚ್ಚಿನ ಹಿತೈಶಿಗಳು ಪಾಲ್ಗೊಳ್ಳಲು  ಕರೆ ನೀಡಿದರು.

Rating
No votes yet

Comments

Submitted by hariharapurasridhar Mon, 06/17/2013 - 22:16

ಕೈ ತಪ್ಪಿನಿಂದ ಎರಡು ಭಾರಿ ಪ್ರಕಟವಾಗಿದೆ.ಒಂದು ಲೇಖನವನ್ನು ದಯಮಾಡಿ ಸಂಪಾದಕ ಮಂದಳಿಯವರು ತೆಗೆದು ಹಾಕಲು ವಿನಂತಿಸುವೆ.