ಹದಿ ಬದೆಯ ಧರ್ಮ - ಲಕ್ಷ್ಮೀಕಾಂತ ಇಟ್ನಾಳ

ಹದಿ ಬದೆಯ ಧರ್ಮ - ಲಕ್ಷ್ಮೀಕಾಂತ ಇಟ್ನಾಳ

ಹದಿ ಬದೆಯ ಧರ್ಮ
                          - ಲಕ್ಷ್ಮೀಕಾಂತ ಇಟ್ನಾಳ


ನೆರೆಹೊರೆ ಎಂದು ತೋಡಿದ, ಕಾಗೆಯ ಕಿವಿಗುಟ್ಟನ್ನೆ
ಗೂಡಾಗಿಸಿತು, ಮೊಟ್ಟೆಯಿಡಲು ಕೋಗಿಲೆ

ಹೆಗಲಮೇಲಿನ ಕೈಯಿಗೆ, ಒಡಲುರಿ ಬಿಚ್ಚಿಟ್ಟರೆ,
ಅದೇ ಬೇಳೆ, ಮೆಟ್ಟಿಲು, ಮೇಲೇರಲು ಕೈಯಿಗೆ

ತನಗೇನಾಗಿದೆ ಎಂದು ಬಿಚ್ಚಿ ಬಿಡಿಸಿ ಹೇಳಿದ, ರೋಗಿ,
ಕೊನೆಗೂ ಹೇಳಲಿಲ್ಲ ಅದೇನು, ಮುಸುಕು ಹಿಂದಿನ ಮುಖಗಳು

ಹೊಸ ದಿನ ಹೊಸ ನೀರು ಬರಲು
ನೆಮ್ಮದಿಯ ನೆಲೆಯ ಕನಸಲ್ಲಿ, ಕುಣಿದಾಡಿದ್ದೆ
ಧ್ವಜ ಬದಲಿಸಿ, ಆಯಕಟ್ಟುಗಳೆಲ್ಲ, ಮತ್ತೆ ಬೇರು ಬಿಟ್ಟವು
ಬಾಗಿಲು ತೆರೆಯಿತೊ, ಮುಚ್ಚಿತೊ, ನಾನಿನ್ನೂ ಕುಣಿಯುತ್ತಲೇ ಇದ್ದೆ

Rating
No votes yet

Comments

Submitted by nageshamysore Fri, 06/21/2013 - 22:13

ನಮಸ್ಕಾರ ಇಟ್ನಾಳರೆ, ಒಂದು ರೀತಿ ಎಲ್ಲರೂ ಅವರವರ ಹದಿಬದೆಯ ಧರ್ಮದ ಸಂಕೋಲೆಯಲಿ ಬಂಧಿಗಳೆ ಅಲ್ಲವೆ? ಪರಪುಟ್ಟನಾಗೆ ಕಾಗೆಯ ಗೂಡಲಿ ಮೊಟ್ಟೆಯಿಕ್ಕುವ ಕೋಗಿಲೆ ಬಗೆ ಪರರಿಗೆ ದೌರ್ಜನ್ಯ, ವಂಚನೆಯಾಗಿ ಕಂಡರೆ, ಬಹುಶಃ ಕೋಗಿಲೆಗೆ ಮಾತ್ರ ಚಾತುರ್ಯಪೂರ್ಣ ಹದಿಬದೆಯ ಧರ್ಮದಂತೆ ಅನಿಸುತ್ತದೆ ಏನೊ? ಅಂತ್ಯದ ಆಶಾವಾದದ ಸಾಲುಗಳು ಚೆನ್ನಾಗಿವೆ :-) - ನಾಗೇಶ ಮೈಸೂರು

Submitted by H A Patil Sat, 06/22/2013 - 20:01

ಲಕ್ಷ್ಮೀಕಾಂತ ಇಟ್ನಾಳರಿಗೆ ವಂದನೆಗಳು

' ಹದಿಬದೆಯ ಧರ್ಮ ' ಬಹಳ ಅರ್ಥಗಳನ್ನೊಳಗೊಂಡ ಕವನ," ಬಾಗಿಲು ತೆರೆಯಿತೋ ಮುಚ್ಚಿತೋ ನಾನಿನ್ನೂ ಕುಣಿಯುತ್ತಲೆ ಇದ್ದೆ " ಬಹಳ ಗಂಭೀರ ಗೂಢಾರ್ಥಗಳನ್ನೊಳಗೊಂಡ ಸಾಲು ಎಂದೆನಿಸಿತು.ಜೊತೆಗೆ ಯೋಚಿಸಿದಷ್ಟೂ ಅರ್ಥ ಬಿಚ್ಚಿಕೊಳ್ಳುತ್ತ ಹೋಗುವ ಸಾಲು, ಧನ್ಯವಾದಗಳು.