ದ್ವೈತ, ಅದ್ವೈತ ಮತ್ತು ವಿಷ್ಟಾ ದ್ವೈತ ಹಾಗೂ ಪೂಜ್ಯಭಾವನೆ

Submitted by ritershivaram on Mon, 06/24/2013 - 19:13

ಪೂಜ್ಯದೃಷ್ಟಿ ಪ್ರೇಮದಿಂದ ಉದಿಸುತ್ತದೆ. ನಾವು ಯಾರನ್ನು ಪ್ರಿತಿಸಲಾರೆವೋ ಅವರನ್ನು ಗೌರವಿಸಲಾರೆವು.   
ಯಾವಾಗ ನಾವು ದೈತಿಗಳಂತೆ( ದೇವರು ಒಬ್ಬನೇ. ಅವನು ಯಾವಾಗ ನಾವು ದ್ವೈತಿಗಳಂತೆ(ದೇವರು ಸರ್ವಶಕ್ತನು. ಅವನೆಲ್ಲಿ ನಾನೆಲ್ಲಿ?)
 ಆರಾಧನಾ ಭಾವಹೊಂದುವೆವೋ ಆಗ ಪೂಜ್ಯಭಾವವು ಬರುತ್ತದೆ.

ಹಾಗಾಗಿ ಪ್ರತಿಮೆ ಅಥವಾ ಮೂರ್ತಿ ಪೂಜೆಯ ಅರ್ಥವೇನೆಂದರೆ, ಯಾವುದು ಬ್ರಹ್ಮವಲ್ಲವೋ ದೇವರು ಅಲ್ಲವೋ ಅದನ್ನು ದೇವರೆಂದೂ
ಅದರಲ್ಲಿ ಆ ದೈವೀಶಕ್ತಿಯ ಸಂಚಲನವಿದೆಯೆಂದೂ ಭಾವಿಸಿಕೊಂಡು ಪೂಜಿವುಸುವೇ ಆಗಿದೆ. ಅಂದರೆ, ಮೂರ್ತಿಯೊಂದರ ಪ್ರಾಣಪ್ರತಿಷ್ಟಾಪನೆಯಲ್ಲಿ
ಆ ದೈವಿಶಕ್ತಿಯನ್ನೇ ಆವಾಹನೆ ಮಾಡಿರುತ್ತಾರೆ. ಮೂರ್ತಿಯನ್ನು ಪೂಜಿಸವುದೆಂದರೆ ಆ ದೈವೀಶಕ್ತಿಯನ್ನೇ ಕುರಿತು ತದೇಕ ಚಿತ್ತದಿಂದ ಧ್ಯಾನಿಸುವುದು.

ಪ್ರತಿಯೊಂದು ವಸ್ತುವಿನಲ್ಲೂ ಇರುವ ನಾಮ ರೂಪಗಳನ್ನು ತೆಗೆದುಬಿಟ್ಟರೆ ಎಲ್ಲ ಬ್ರಹ್ಮಮಯವೇ.
ಅದೆಂದರೆ, ದೈವಿಕತೆಯೇ ಎನ್ನುವನು ಅದೈತಿ. ದೇವರೇ ಎಲ್ಲರಲ್ಲೂ ಇರುವ ಅಂತರ್ಯಾಮಿ ಎನ್ನುವನು ವಿಶಿಷ್ಟಾದ್ವೈತಿ.
ದೈತಿ-ದೇವರು ಒಬ್ಬನೇ. ಅವನೆಲ್ಲಿ ನಾನೆಲ್ಲಿ...? ಎನ್ನುವನು.
ಅದ್ವೈತಿ- ವಿಶ್ವಿಸೃಷ್ಟಿಯಲಿ ಎಲ್ಲ ವಸ್ತುಗಳೂ ಬ್ರಹ್ಮಮಯವೇ ನಾನೂ ಸೇರಿದಂತೆ ಎನ್ನುವನು.
ವಿಶಿಷ್ಟಾದ್ವೈತಿ- ದೇವರು ದೇವರೇ. ನಾನು ನಾನೇ. ನನ್ನಲ್ಲೂ  ಎಲ್ಲದರಲ್ಲೂ ದೇವರನ್ನು ಕಾಣಬಹುದು.

ದೇವರು ಸಮಷ್ಟಿಯೇ ಆಗಿರುವನು.
 

Rating
No votes yet