ವಿಶ್ವಭಾರತಿ

ವಿಶ್ವಭಾರತಿ

ರುಳಳಿದು ಬೆಳಕಿಳಿದು ಒಳಿತುಗಳೆ ಮೈದಳೆದು

ಬಳಿಸುಳಿವ ಸುಳಿಗಾಳಿ ಮಳೆಮೋಡ ಸೆಳೆದೆಳೆದು

ಮಳೆಯಿಳಿದು ಇಳೆಹೊಳೆದು ಮೊಳಕೆಗಳೆ ಮೇಲೆದ್ದು

ಹಸಿರೊಡೆದು ಬೆಳೆಬೆಳೆದು ಬರವಡಗಿ ಸಿರಿಯೆದ್ದು

ಹಸಿವಡಗಿ ಕಸುವೇರಿ ಪಟ್ಹಿಡಿದು ದುಡಿದೆದ್ದು

ಪುಡಿಗಾಸ ಕೂಡಿಟ್ಟು ಹೊನ್ನಿನಾ ಹೊಗೆಯೆದ್ದು

ಸಮೃದ್ಧ ಸಮಾಜದಲಿ ಸಿರಿತನದ ಜೀವನದಿ 

ಜೀವನದಿ ಸುರಗಂಗೆ ಮೈದುಂಬಿ ಹರಿದಿರಲು

ಅಳದಳೆದು ಗುಣವುಳಿಸಿ ಅಳಿದುಳಿದ ಕಳೆಕಳೆದು

ಅಳುಕಗಳ ಬದಿಗೊತ್ತಿ ಕೆಡುಕುಗಳ ಹಿಮ್ಮೆಟ್ಟಿ

ಮೈಮುರಿದು ಸಿಡಿದೆದ್ದು ಸೆಡ್ಹೊಡೆದು ತೊಡೆತಟ್ಟಿ

ಗುರುಬಲದ ಗರಿಮೆಯಲಿ ತೋಳ್ಬಲದ ಹಿರಿಮೆಯಲಿ

ಕನಸುಗಳ ಬೆಂಬತ್ತಿ ನನಸುಗಳ ಹಿಡಿದಿಟ್ಟು

ದಶದಿಕ್ಕನಾವರಿಸಿ ವೈರಿಗಳ ಸಂಹರಿಸಿ

ವಿಶ್ವದಲಿ ವಿಜಯಗಳ ಸರಮಾಲೆ ಧರಿಸುತಲಿ

ಜಗಜ್ಜನನಿ ಭಾರತಿಯ ಮೊಗವೆಂದು ಬೀಗಿರಲಿ

Rating
No votes yet

Comments

Submitted by nageshamysore Tue, 06/25/2013 - 16:29

ನಮಸ್ಕಾರ ಜಯಪ್ರಕಾಶರೆ, 'ವಿಶ್ವಭಾರತಿ'ಯಲ್ಲಿ ಮೊಳಗುವ ಆಶಯ, ಪ್ರಾಯಶಃ ಪ್ರತಿ ಪ್ರಾಜ್ಞ ಭಾರತಿಯನೆದೆಯಲಿ ಅನುರಣಿಸುವ, ಧ್ವನಿಸುವ ಕಲ್ಪನೆ, ಬೇಡಿಕೆ, ಸಂಕಲ್ಪ. ಚೆನ್ನಾಗಿದೆ :-)  - ನಾಗೇಶ ಮೈಸೂರು