ಮರಳಿ ಯತ್ನವ ಮಾಡು

Submitted by Manasa G N on Tue, 06/25/2013 - 17:23
ಚಿತ್ರ

ಯಾವುದೇ ವಿಷಯದಲ್ಲಿ  ಪ್ರಯತ್ನ ಎಂಬುದು ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಒಮ್ಮೊಮ್ಮೆ  ನಾವು ಎಷ್ಟೇ ಪ್ರಯತ್ನಿಸಿದರು ಕೆಲಸ ಆಗುವುದಿಲ್ಲ, ಅದಕ್ಕೆ ಹಿತೋಪದೇಶ ಮರಳಿ ಯತ್ನವ ಮಾಡು  ಎಂದು ಹೇಳಲಾಗಿದೆ. 

ಕಳೆದ ೨ ವರುಷಗಳಿಂದ ಕನ್ನಡ ವಿಕಿಯ  ಎಷ್ಟೇ ಕಾರ್ಯಕ್ರಮ ನಡೆದರೂ, ನನಗೆ ಅದರ ಮಾಹಿತಿ ಎಷ್ಟೇ ಇದ್ದರೂ ಯಾವುದಾದರೂ ಅಡಚಣೆಯಿಂದ ನಾನು ಭಾಗವಹಿಸಲು ಸಾದ್ಯವಾಗುತ್ತಿರಲ್ಲಿಲ್ಲ.  ಕೊನೆಗೆ ಮರಳಿ ಯತ್ನವ ಮಾಡು ಅನ್ನೋಹಾಗೆ ಈ ಬಾರಿ ಪ್ರಯತ್ನಿಸಿದೆ ಸ್ವಲ್ಪ ಅಡಚಣೆ ಆದರೂ ಸಾದ್ಯವಾಯಿತು. ಬೆಳಗ್ಗೆ ೧೦ ರಿಂದ ಸಂಜೆ ೫ ರವರಗೆ ಕನ್ನಡ ವಿಕಿ ಕಾರ್ಯಾಗಾರ ತುಂಬಾ ಸೊಗಸಾಗಿ ಮೂಡಿಬಂತು. ಸಾಮಾನ್ಯವಾಗಿ ಬೆಳಗ್ಗೆ ಇಂದ ಸಂಜೆವರೆಗೂ ನಡೆಯುವ ಕಾರ್ಯಕ್ರಮಗಳೆಂದರೆ ಇಷ್ಟವಾಗದೆ ಇರಬಹುದು ಅಥವಾ ಊಟದ ನಂತರ ನಿದ್ದೆ ಬರಬಹುದು. ಭಾನುವಾರ ಅಂದರೆ ಆಲಸ್ಯ ಮತ್ತು ಜಾಸ್ತಿ ಸಮಯ ಆಸಕ್ತಿಯಿಂದ ಕಾರ್ಯಾಗಾರದಲ್ಲಿ ನಮ್ಮನು ನಾವು ತೊಡಗಿಸಿಕೊಳ್ಳುವುದು ಸ್ವಲ್ಪ ಕಷ್ಟವಾಗುವಂತಹದು. ಆದರೆ ಪವನಜರವರು  ಈ ಯಾವುದೇ ಕಷ್ಟವನ್ನು ನಮ್ಮ ಹತ್ತಿರ ಸುಳಿದಾಡುವಾಗೆ ಮಾಡಲ್ಲಿಲ್ಲ. ತುಂಬಾ ಚೆನ್ನಾಗಿ ನಿರುಪಾಣೆ, ಮಾಹಿತಿ ಹಾಗೂ ಹಾಸ್ಯ ಸಂಗತಿಗಳನ್ನು ಹಂಚಿಕೊಂಡರು.

ಅವರು ಹೇಳಿದ ಕೆಳಗಿನ ಮಾತು ಗಮನಾರ್ಹ - 

ಇಂದಿನ ಕಾಲದಲ್ಲಿ ಕನ್ನಡ ಭಾಷೆಯನ್ನು ಉಳಿಸಬೇಕಾದರೆ ತಂತ್ರಜ್ಙರು ಸ್ವಲ್ಪ ಸಾಹಿತ್ಯ ಕಲಿಯಬೇಕು (ಮತ್ತು ಅದಕ್ಕಾಗಿ ಕೆಲಸ ಮಾಡಬೇಕು) ಮತ್ತು ಸಾಹಿತಿಗಳು ಸ್ವಲ್ಪ ತಂತ್ರಜ್ಞಾನ ಕಲಿಯಬೇಕು ಎಂದು ನಾನು ಸುಮಾರು ವರ್ಷಗಳಿಂದ ಹೇಳಿಕೊಂಡು ಬಂದಿದ್ದೇನೆ. ಇದರಲ್ಲಿ ಮೊದಲನೆಯ ಭಾಗ ಸ್ಚಲ್ಪ ಮಟ್ಟಿಗೆ ನಡೆಯುತ್ತಿದೆ. ಆದರೆ ದುಃಖದ ಸಂಗತಿ ಎಂದರೆ ಎರಡನೆಯದು ಆಗುತ್ತಲೇ ಇಲ್ಲ. ಸಾಹಿತಿಗಳು ತಮ್ಮದೇ ಭದ್ರ ಕೋಟೆ ಕಟ್ಟಿಕೊಂಡು ಅದರೊಳಗೇ ಕುಳಿತುಕೊಂಡು ಒಬ್ಬರೊಬ್ಬರ ಬೆನ್ನುತಟ್ಟಿಕೊಂಟು ಕನ್ನಡ ಕಟ್ಟುತ್ತಿದ್ದೇವೆ, ಉಳಿಸುತ್ತಿದ್ದೇವೆ ಎಂಬ ಭ್ರಮೆಯಲ್ಲಿದ್ದಾರೆ. ಎಲ್ಲಿ ತನಕ ಕನ್ನಡ ಸಾಹಿತಿಗಳು, ಕನ್ನಡ ಎಂಎಗಳು ತಂತ್ರಜ್ಞಾನದಲ್ಲಿ ಕನ್ನಡ ಬಳಕೆ ಮಾಡುವುದಿಲ್ಲವೋ ಅಲ್ಲಿ ತನಕ ಕನ್ನಡಕ್ಕೆ ಭವಿಷ್ಯವಿಲ್ಲ. ಉದಾಹರಣೆಗೆ ಕನ್ನಡ ವಿಕಿಪೀಡಿಯಕ್ಕೆ ಮಾಹಿತಿ ಸೇರಿಸುತ್ತಿರುವ ಕನ್ನಡ ಸಾಹಿತಿಗಳು ಇಲ್ಲವೇ ಇಲ್ಲ ಎನ್ನಬಹುದೇನೋ?

http://kn.wikipedia.org ಯನ್ನು ಬಳಸಿ ಮತ್ತು ಮಾಹಿತಿಯನ್ನು ಸೇರಿಸಿ.

ಚಿತ್ರ ಕೃಪೆ - https://commons.wikimedia.org/wiki/File:KannadaWikipediaWorkshopSuchitra_022.jpg

Rating
No votes yet