ಜಾಗತೀಕರಣ ಮತ್ತು ಟ್ಯಾಟೂ

Submitted by naanu on Wed, 06/26/2013 - 15:46

ಇಸವಿ 1990ರ ಆಸುಪಾಸು! ಪ್ರೈಮರೀ ಸ್ಕೂಲಿನ ಮಧ್ಯ ವಾರ್ಷಿಕ ಪರೀಕ್ಷೆ ಅಣತಿ ದೂರದಲ್ಲಿತ್ತು. ನಮ್ಮೂರು ಗ್ರಾಮದೇವತೆ ಸಮಾರಂಭಕ್ಕೆ ಸಜ್ಜಾಗಿ ನಿಂತಿತ್ತು. ಪರೀಕ್ಷೆಯ ಬಗ್ಗೆ ಯೋಚಿಸದ ನನಗೇ ಸಂಜೆ ನಡೆಯುವ ಆರ್ಕೆಸ್ಟ್ರಾ ಮತ್ತು ರಾತ್ರೀ ನಮ್ಮೂರಲ್ಲಿ ಎಲ್ಲರೂ ನೋಡಲಿಕ್ಕೆ ವೀಡಿಯೋ ಕ್ಯಾಸೆಟ್ ಹಾಕುತ್ತಾರೆ ಎಂಬ ಸಿರಿ. ಆರ್ಕೆಸ್ಟ್ರಾ ನಡೆಯುತ್ತಿದ್ದ ಹಾಗೇ ಕಪ್ಪು ಕಾರಿನಲ್ಲಿ ನನ್ನ ಆರಾಧ್ಯ ದೈವ "ಅಂಬಿ" ಮಾಮನ ಎಂಟ್ರೀ. ಕುಣಿದು ಕುಪ್ಪಳಿಸಿ ಎಲ್ಲರ ಮಧ್ಯೆ ತೂರಿಕೊಂಡು "ರೆಬಲ್"ನನ್ನು ಹತ್ತಿರದಿಂದ ನೋಡಿ,ತಂದಿದ್ದ ಒಂದಷ್ಟ್ತು ಹೂವನ್ನು ಎರಚಿ ಸಂಭ್ರಮಿಸಿದ್ದನ್ನು ನಾನೆಂದೂ ಮರೆಯಲಾರೆ. ಕಾಲಚಕ್ರ ತಿರುಗಿದಂತೆ ಈ ತರಹದ ಸಂಭ್ರಮಕ್ಕೆ "ಜಾಗತೀಕರಣ" ಎಂಬ ಆಶೀರ್ವಾದ ಒಂದು ಪೂರ್ಣ ವಿರಾಮ ನೀಡಿತ್ತು.

ಜಾಗತೀಕರಣದ ಜಾಡು ಹಿಡಿದು ಹೊರಟಾಗ ನನಗೆ ಕಂಡ ಮೊಟ್ಟ ಮೊದಲ ವಸ್ತು "ಟ್ಯಾಟೂ." ಪೇಟೇಯಾದರೂ ಸೈ ಹಳ್ಳಿಯಾದರೂ ಸೈ ಪ್ರೇಮಿಗಳನ್ನು,ದೈವ ಭಕ್ತರನ್ನು ಮತ್ತು ಸಂಭಂದಗಳನ್ನು ವ್ಯಕ್ತಪಡಿಸುತ್ತಿದ್ದ ಮೊದಲ ಮಾಧ್ಯಮ "ಹಚ್ಚೇ." ರಟ್ಟೆಯ ಮೇಲೆ ಎದೆಯ ಮೇಲೆ ಹಸಿರು ಬಣ್ಣದ ಹೆಸರು, ಸಂಭಂದಗಳ ಉಸಿರಾಗಿತ್ತು ಈ "ಹಚ್ಚೇ." ಕ್ರಮೇಣ ಹಚ್ಚೇ ಹಾಕುವರು ಮರೆಯಾಗಿ ಹೊಸದೊಂದು ಪ್ರವೃತಿ ಶುರುವಾಯಿತು. ಬಬಲ್ ಗಮ್ ಕೊಂಡ ಮಕ್ಕಳಿಗೆ ಚಿಟ್ಟೆಯ ಚಿತ್ರ ಬಿತ್ತರಿಸಿ ಶುರುವಾದ ಸಂಗತಿ, ದೊಡ್ಡ ದೊಡ್ಡ ಅಂಗಡಿ ತೆರೆದು ಸಾವಿರಕ್ಕೆ ಮೂರು ಸಾವಿರಕ್ಕೆ ವಿಧ್ಯಾರ್ಥಿಗಳನ್ನು, ಉದ್ಯೋಗಸ್ಥರನ್ನು,ಬುದ್ಧಿ ಜೀವಿಗಳನ್ನು ಸೆಳೆದು ಅವರ ಅಂಗಾಂಗಗಳ ಮೇಲೆ ಸೃಜನಶೀಲ ಕೆತ್ತನೆಗಳನ್ನು ಮಾಡಲಾಯಿತು. ಇವೆಲ್ಲದರ ಮಧ್ಯೆ ಬಂಡವಾಳಶಾಹಿ ಗುಂಪುಗಳಿಗೆ ತಂಗಾಳಿಯಂತೆ "ಕೈ"ಕೃಪಾ ಕಟಾಕ್ಷ ಒಲಿದು ಚಿನ್ನದ ಚಿದಂಬರನ ಖಾಸಗೀಕರಣದ ಕೂಸಿಗೆ ಕುಲಾವಿ ಹೋಲಿಸಿದ್ದು ಆಯಿತು. ಕೈ ಬಿದ್ದು ಕಮಲ ಅರಳಿದರು ಪ್ರಯೋಜನವಾಗಲಿಲ್ಲ ಸರಕಾರ ಬೇರೆ ಸವಾಲುಗಳು ಅವೇ!

ದೇಶದ ಬೆನ್ನೆಲುಬು ಅನ್ನಿಸಿಕೊಂಡ ಕೃಷಿಯನ್ನು ಕಡೆಗಣಿಸಿ, ಐಟಿ ಬೀಟಿಯ ಬೀಜವನ್ನು ಬಿತ್ತಿದಾಯಿತು. ಇವೆಲ್ಲದರ ಪರಿಣಾಮ ಪಧವೀದಾರರಾಗಲೇಬೇಕು ನೌಕರಿ ಸಿಗಲಿಕ್ಕೆ ಎನುತ್ತಿದ ಯುವಜನತೆ ಐನೂರರ ಮೊಬೈಲ್ ಹಿಡಿದ್ದು ಸೇರಿಕೊಂಡಿದ್ದು "ಚಂದಾದಾರರು ಬಿಜಿಯಾಗಿದ್ದಾರೇ" ಎಂಬ ಮಾಹಿತಿ ನೀಡಲು. ಜಾಗತೀಕರಣ ಒಳ್ಳೆಯದ್ದೋ ಕೆಟ್ಟದ್ದೋ ಇದು ಬಹು ಚರ್ಚಿತ ವಿಷಯ. ಇದರ ಬಗ್ಗೆ ಮಾತನಾಡುತ್ತಾ ಹೋದಲ್ಲಿ ನಾವು "ಮುಕ್ತ ಮುಕ್ತ"ರಾಗ ಬೇಕಾದ ಪರಿಸ್ಥಿತಿ ಉಂಟಾಗಬಹುದು.

ಜಾಗತೀಕರಣದ ಜಾಲದಲ್ಲಿ ಸಿಕ್ಕಿ ಸಂಭಂದಗಳು ಹಳಸಿವೆ. ಅಜ್ಜಿ ತಾತನ ಜೊತೆ ಕಳೆಯುತಿದ್ದ ಸಮಯವನ್ನು ಶಾಪಿಂಗ್ ಮಾಲ್ ಗಳು ಸೆರೆ ಹಿಡಿದಿವೆ. ಒಂಬತ್ತರಿಂದ ಹತ್ತರ ಒಳಗೆ ಮನೆ ಸೇರುತ್ತಿದ್ದ ಪಕ್ಕದ ಮನೆ ಸಾವಿತ್ರಮ್ಮನ ಮಗಳು ಈಗ ಮಲ್ಟೀಪ್ಲೇಕ್ಸ್ನಲ್ಲಿ ಸಿನಿಮಾ ನೋಡಿಕೊಂಡು ತಡ ರಾತ್ರೀ ಮನೆಗೆ ಬರಲು ಫಾರಿನ್ ಕಂಪನೀ ಅಗ್ಗದ ಕಾರ್ ಕೊಳ್ಳಲು ಸುಲಭವಾಗಿ ಕಂತನ್ನು ನೀಡುತ್ತಿವೆ. ಆಶ್ಚರ್ಯವೆನಿಸಿದರೂ ಬಲಾತ್ಕಾರಗಳು ಬಸ್ಸಿನಲ್ಲಿ ಕೂಡ ನಡೆಯುತ್ತಿವೆ.

ಇವೆಲ್ಲರ ಮಧ್ಯೆ ನನ್ನೊಳಗೆ ಹುಟ್ಟಿಕೊಂಡ ಪ್ರಶ್ನೆ

ಅಂತರಂಗ ಜಾಗತೀಕರಣವೆಂದು??

Rating
No votes yet