ಹೃದಯಕ್ಕು ಮನಸಿಗು ಹೋರಾಟ
ಚಿತ್ರ
ಹೃದಯಕ್ಕು ಮನಸಿಗು ಹೋರಾಟ
ಕಣ್ಣ ಕೊನೆಯಲ್ಲಿ ನಿಂತ ನೀರ ಹನಿ ಕೆಳಗೆ ಜಾರದೆ ಹಾಗೆ ಉಳಿದಿದೆ
ಅಭಿಮಾನ ನಾಚಿಕೆಗಳು ಆ ಕಣ್ಣೀರನ್ನು ಕೆಳಗೆ ಬೀಳದಂತೆ ತಡೆದಿದೆ.
ಹೃದಯದ ಭಾವಗಳು ಮನಸಿಗೆ ಅರ್ಥವಾಗುವುದೆ ಇಲ್ಲ
ಮನಸಿನ ಬಿಗುಮಾನವನ್ನು ಎಂದು ಹೃದಯ ಅರಿಯುವದಿಲ್ಲ
ಮನುಜನ ಜೀವನವೆ ಹಾಗೆ ಸದಾ ಹೃದಯಕ್ಕು ಮನಸಿಗು ಹೋರಾಟ.
ಕೃತಜ್ಞತೆಗಳು : emotions and thought
Rating
Comments
ಎಲ್ಲದಕ್ಕೂ ಕಾರಣನು ಮನಸ್ಸೆ೦ಬ
ಎಲ್ಲದಕ್ಕೂ ಕಾರಣನು ಮನಸ್ಸೆ೦ಬ ಮಹಾರಾಜ....... ಮನಸ್ಸಿಲ್ಲದೆ ಇರುವ ಮನುಷ್ಯನು ಮನುಷ್ಯನೇ ಅಲ್ಲ... ಮಾನವಾಧಿಪತಿ!!!
In reply to ಎಲ್ಲದಕ್ಕೂ ಕಾರಣನು ಮನಸ್ಸೆ೦ಬ by ksraghavendranavada
ನಾವಡರೆ ಬಹಳ ದಿನಗಳ ನಂತರ ತಮ್ಮ
ನಾವಡರೆ ಬಹಳ ದಿನಗಳ ನಂತರ ತಮ್ಮ ದರ್ಶನ, ಪ್ರತಿಕ್ರಿಯೆಗೆ ವಂದನೆಗಳು. ನನಗಂತು ಮನಸಿದೆ :-)
ಹೃದಯಕ್ಕೂ, ಮೆದುಳಿಗೂ ಇರುವ ಭೌತಿಕ
ಹೃದಯಕ್ಕೂ, ಮೆದುಳಿಗೂ ಇರುವ ಭೌತಿಕ ಅಂತರ ಸುಮಾರು ಸುಮಾರು ಒಂದೂ ಕಾಲು ಅಡಿ! ಜಗತ್ತಿನ ಅತ್ಯಂತ ದೂರದಲ್ಲಿರುವ ಸಂಗತಿಗಳೆಂದರೆ ಅವೇ, ಹೃದಯ ಮತ್ತು ಮನಸ್ಸು!! ದೂರವಿದ್ದಷ್ಟೂ ತೊಂದರೆ ಜಾಸ್ತಿ. ಹತ್ತಿರವಿದ್ದವರಿಗೆ ಇತರರು ತೊಂದರೆ ಕೊಡುತ್ತಾರೆ!!:)) ಧನ್ಯವಾದ, ಪಾರ್ಥರೇ.