ರಂಗಶಂಕರದಲ್ಲಿ ಹೊಸ ಪುಸ್ತಕದಂಗಡಿ

ಮುಂಬೈನ ಪೃಥ್ವಿ ಥಿಯೇಟರಿನಲ್ಲಿ ಕಳೆದ ಮೂರು ವರ್ಷಗಳಿಂದ ವಿಭಿನ್ನ ರೀತಿಯ ಪುಸ್ತಕದಂಗಡಿಯನ್ನು ನಡೆಸುತ್ತಿರುವ 'ಪೇಪರ್ ಬ್ಯಾಕ್' ಈಗ ರಂಗಶಂಕರದಲ್ಲಿ ಅದರ ಶಾಖೆಯನ್ನು ತೆರೆದಿದೆ. ಇದರ ಉದ್ಘಾಟನಾ ಸಮಾರಂಭ ಇದೇ ಭಾನುವಾರ ಜೂನ್ 30ರಂದು. ಸಾಹಿತ್ಯ, ರಂಗಭೂಮಿ, ಸಿನಿಮಾ, ವಿಜ್ಞಾನ, ಮಹಿಳಾ ಅಧ್ಯಯನ, ಸಮಾಜ ವಿಜ್ಞಾನದ ಪುಸ್ತಕಗಳು ಕನ್ನಡ ಮತ್ತು ಇಂಗ್ಲೀಷ್ಗಳಲ್ಲಿ ಇಲ್ಲಿ ಲಭ್ಯವಿದೆ. ಅಂದು ಎಚ್. ಎಸ್. ವೆಂಕಟೇಶಮೂರ್ತಿ,ವಿವೇಕ್ ಶಾನಭಾಗ್, ಜಯಂತ ಕಾಯ್ಕಿಣಿ, ಜೋಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ನಿಮ್ಮ ನೆಚ್ಚಿನ ಸಾಹಿತಿಗಳನ್ನು ಭೇಟಿ ಮಾಡುವುದರೊಂದಿಗೆ ನಿಮ್ಮ ನೆಚ್ಚಿನ ಪುಸ್ತಕಗಳನ್ನು ಕೊಳ್ಳಲು ಇದೊಂದು ಸುವರ್ಣಾವಕಾಶ. ತಪ್ಪದೇ ಭಾಗವಹಿಸಿ.