ಮತ್ತೊಂದು ಪ್ರೇಮ ಪತ್ರ

ಮತ್ತೊಂದು ಪ್ರೇಮ ಪತ್ರ

ಚಿತ್ರ

ಓ ಗೆಳತಿ,

ನನ್ನಂತ ಮುನಿಸು ಹುಡುಗನ ನೀನ್  ಬಿಟ್ರೆ ಯಾರು ತಡಿಯೋಲ್ಲ ಅಂತಾನೆ ಆ ದೇವ್ರು ನಿನ್ನ ಅಷ್ಟು ಸಮದಾನದಲ್ಲಿ ಸೃಷ್ಟಿಸಿದಾನೆ ನನ್ನ ಈ ಭೂಮಿಗೆ ಕಳಸಿದ್ಮೇಲೆ ಅನ್ಸುತ್ತೆ ಕಣೇ ,ಒಂದೊಂದು ಸಲ ನೀನು  ಬೈದ್ರುನು ನಗು ಬರುತ್ತೆ ,ಮತ್ತೆ ಲವ್ ಯು ಅಂತಿಯಲ್ಲ ಅದೇ ನಂಗೆ ಸಕತ್ ಇಷ್ಟ ಅದರಿಂದಾನೆ ನಂಗೆ ಜಂಬ ಬಂದಿರೋದು ಅನ್ಸುತ್ತೆ ಕಣೇ ...
   ಅದ್ಯಾಕೆ ದೇವ್ರು ನನ್ನನ್ನ ಇಷ್ಟೊಂದು ಪ್ರೀತ್ಸೋ ಜೀವಕ್ಕೆ ನನ್ನಿಂದ ಪದೇ ಪದೇ ನೋವು ಕೊಡ್ತಾನೋ ಗೊತ್ತಿಲ್ಲ , ಏನು ಬೇಡ ಅಂತ ನಾನು ಎಷ್ಟು ಸಲ ಕೋಪದಲ್ಲಿ  ಅನ್ತಿರ್ತಿನೋ ಅಷ್ಟು ಸಲನು ನನ್ನ ಕಣ್ಣೀರಿಗೆ ನಾನ್ ಇಷ್ಟ ಆಗದೆ ಬಿಟ್ಟು ಹೋಗ್ತಾ ಇರುತ್ತೆ ,ಅದಕ್ಕೆ ಸಮಾದಾನ ಮಾಡೋಕೆ  ನಾನಂತೂ ತಡಿಯೊಕಾಗಲ್ಲ ಅನ್ನೋ ಮಟ್ಟಕ್ಕೆ ಈ ಮನಸುನು ಮೌನವಾಗಿರುತ್ತೆ , ಮತ್ತೆ ಮತ್ತೆ ಯಾಕ್ ಹೀಗೆ ಒಂದೊಂದ್ಸಲ ಆಡ್ತೀನಿ ಅಂತ ಪ್ರಶ್ನೆ ನನ್ನ ಮೆದುಳಿಗೆ ಪದೇ ಪದೇ ಬಂದಾಗ ,ಲೆಕ್ಕ ಹಾಕೋದು ಲಕ್ಷಣವಲ್ಲ ಅಂತ ಇದಕೆಲ್ಲ ನನ್ನ ಹೃದಯಾನೆ ಕೇಳಬೇಕು ಅಂದ್ಕೊಂಡ್ರೆ ಈ ಹೃದಯ ಆಗಲೇ ನಿನ್ನ ಸ್ವತ್ತಾಗಿ ನಿನ್ನ ಹೃದಯಾನ ಇಲ್ಲಿ ಬಿಟ್ಟಿರೋ ನಿನ್ನ ತಿಳಿದು ಅದಕು ನಾನ್ ಇಷ್ಟ ಆಗದೆ ಬೇಜಾರಾಗಿ ಅದು ನೊಂದುಲೊಳ್ಳಲು ಶುರುಮಾಡಿದಾಗ ಅದರ ಮೇಲ್ಪದರ (ತಲೆ ಬಾಗ )ದಲ್ಲಿ ನೋವು ಕಾಣಿಸಿಕೊಳ್ಳೊಕೆ  ಶುರುವಾಗುತ್ತೆ , ಮೆದುಳೇ ಬೇಜರಾದಮೇಲೆ ಇನ್ನು ಅದರ ಆಜ್ಞೆ ಕೇಳಿ ಮಾಡೋ  ಕೆಲಸದಾಳುಗಳು (ಕೈ ,ಕಾಲುಗಳು ) ಸುಮ್ಮನೆ ನಿದ್ರಾವಸ್ತೆಗೆ ಹೋಗ್ತಾವೆ ,ನನ್ನ ಹೃದಯದ ಜಾಗದಲ್ಲಿ ನಿನ್ನ ಹೃದಯವಿಟ್ಟುಕೊಂಡೂ ಈ ರೀತಿ ನಿನ್ನ ಮನವನ್ನ ನೋಯಿಸೋದಕ್ಕೆ ಇಡೀ ದೇಹಕ್ಕೆ ನನ್ನ ಕಂಡರೆ ಇಷ್ಟವಾಗದೆ ಎಲ್ಲಿಯಾದರೂ ಬೀಳು ,ಎನಾದರಾಗು ಎನ್ನುವಂತೆ ಕೈಕಟ್ಟಿ ನಿಂತಿರುತ್ತವೆ ,ಓ ಗೆಳತಿ ಗೊತ್ತ ನಿನಗೆ - ನಾನು ನನ್ನಲ್ಲಿ ಬಿಟ್ಟು ಹೋಗಿರೋ ನಿನ್ನ ಹೃದಯವನ್ನು ಎಂದಿಗೂ ಬಿಡಲಾರೆ ಎಂದು ಮನಗಂಡು  ನಿನ್ನಲ್ಲಿ ಕ್ಷಮೆ ಕೋರಿದಾಗ ತುಸು ಮುನಿಯದೇ ಎಲ್ಲ ಮರೆತಂತೆ ನಟಿಸಿ ಒಮ್ಮೆಲೇ ಕ್ಷಮಿಸಿ ಪ್ರೀತಿಯಿಂದ ಮಾತನಾಡಿದಾಗ ಮತ್ತೆ ನಿನ್ನ ಮದುರ ದ್ವನಿ ಕೇಳಿದ ಮೇಲೆಯೇ ಇವಕ್ಕೆಲ್ಲಾ ಜೀವ ತುಂಬಿದಂತಾಗೋದು ,ಇವೆಲ್ಲಾ ನನ್ನನು ಕ್ಷಮಿಸಿ ತಮ್ಮ ತಮ್ಮ ಕೆಲಸಗಳನ್ನ ಶುರುಮಾಡೋದು ,ಮೌನವಾಗಿದ್ದ ಮನಸು ರೆಕ್ಕೆ ಬಂದ ಹಕ್ಕಿಯಂತೆ ಹಾರೋದು ,ಮುನಿಸಿಕೊಂಡ ಮೆದುಳು ಬರಿ ಲೆಕ್ಕ ಮಾತ್ರ ಅಲ್ಲ ನನ್ನ ಕೆಲಸ ಎಂದು ನನಗೆ ತಿಳಿಸಲು ನಿನ್ನ ಗುಣದ ಮೇಲೆ ನೂರು ಸಾಲುಗಳ ಕವನ ಬರೆವಂತೆ ಮಾಡಿ ನಿನಗೆ ಅರ್ಪಣೆ ಮಾಡಲು ತಿಳಿಸೋದು ,ನಿನ್ನೊಂದಿಗೆ ನನ್ನ ಹೃದಯ ಕಳಿಸಿ ನಿನ್ನ ಹೃದಯವ ನನ್ನಲ್ಲೇ ಇರಿಸಿ ನಾ ನಿಮ್ಮ ನೋಯಿಸಿದರೆ ಇವರ್ಯಾರಿಗೂ ಇಷ್ಟ ಆಗೋಲ್ಲ ಇನ್ನು ನಿನ್ನ ಸೇರುವುದು ಕಷ್ಟ ಎಂದಾಗ ಇವರೆಲ್ಲಾ ಏನು ಮಾಡಬಹುದು ಎಂದು ನೀನೆ ಊಹಿಸಿಕೊ ,ಇನ್ನೂ ನಿನ್ನ ಬಿಟ್ಟು ಈ ಬದುಕೇ ನಡೆಸಬೇಕು ಎಂದರೆ ಇವರೆಲ್ಲರ ಜೊತೆ ನನ್ನ ಉಸಿರು ಮುನಿಸಿಕೊಂಡು ನನ್ನ ಬಿಟ್ಟು ಹೊರಡುತ್ತೆ ,ಪ್ರಾಣಪಕ್ಷಿ ನಿನ್ನನು ಸೇರಲು ಮತ್ತೊಂದು ಜೀವಕ್ಕೂ ಹೋಗಲಾರದೆ  "ನೀನು ನನಗೆ ಮಾತ್ರ ನಿನಗೆ ನಾನು ಮಾತ್ರ" ಎಂದು ನಾ ಹೇಳುತಿದ್ದ ಸ್ವಾರ್ತತನಕ್ಕು ಶಾಪ ಹಾಕುತ್ತಿರುತ್ತದೆ ...  ಇಷ್ಟು ಗೊತ್ತಿದ್ದೂ ಇನ್ನೂ ಮುದ್ದಿಸಲಿ ಎಂದೇನೋ ಈ ಮನಸು ಪದೇ ಪದೇ ಜಗವಾಡಿ ಗೋಳಾಡಿಸಿ ಮತ್ತೆ ಮತ್ತೆ ಕ್ಷಮೆ ಕೇಳೋದು.. ಒಂದು ನಿರ್ಧಾರವಂತು ನಿಜ ಕಣೇ ನಾನು ತುಂಬಾ ಜಗಳಮಾಡಿದಾಗಲೋ ,ಕೋಪ ತೋರಿಸಿದಾಗಲೋ ಮತ್ತೆ ಮುದ್ದು ಮಾಡಲು ನೀನೇನಾದರೂ ಬಾರದೆ ಹೋದರೆ ನಿನ್ನಲ್ಲಿಯೇ  ಬಂದು ಕ್ಷಮಿಸೆಂದು ಕೇಳಿ ಶರಣಾಗುತ್ತೇನೆ ಹೊರತು ನಿನ್ನನ್ನು ಬಿಟ್ಟಿರಲಾರೆ .

ನನ್ನವಳಿಗೋಸ್ಕರ ಮಾತ್ರ ಈ ಜೀವ ಕಾದು ಬದುಕಿರುತ್ತೆ
ಅವ್ಳ ಜೊತೆ ಬದುಕಲು ಅವಕಾಶ ಸಿಕ್ರೆ ,ಬದುಕು ಕಷ್ಟ ಅನ್ನೋರ್ಗೆ ಸಹಾಯ ಮಾಡೋ ಕನಸು ನನಸಾಗುತ್ತೆ

                                                                            ಇಂತಿ ನಿನ್ನ,
                                                                              ಗೆಳಯ

Rating
No votes yet

Comments

Submitted by nageshamysore Sat, 07/06/2013 - 20:56

ವಿನುತೆಯವರೆ ಎಲ್ಲ ಸರಿ ಪತ್ರವೇನೊ ಚಂದ
ಯಾಕೆ ಅಲ್ಲಿ ಬರೆದಿಲ್ಲ, ಬಂದಿದ್ದು ಯಾರಿಂದ ?
ಯಾರಿಗೆ ಕಳಿಸಿದ್ದೆಂದು ಕೂಡ, ಯಾಕೆ ಬರೆದಿಲ್ಲ?
ಗುಟ್ಟಿದು ರಟ್ಟಾಗಿಸಿಬಿಡಿ ಕುತೂಹಲ ಬಿಡುತಿಲ್ಲ!

- ನಾಗೇಶ ಮೈಸೂರು

Submitted by Vinutha B K Mon, 07/08/2013 - 15:55

In reply to by nageshamysore

ಹ ಹ ಚೆನ್ನಾಗಿ ಹೇಳಿದಿರಿ ..

ಎಷ್ಟೋ ಪ್ರೇಮಿಗಳ ಮನದ ಮಾತು ಇದು
ಯಾರದಾರೆನೆಂದು ಹಾಗೆ ಬರೆದ ಪತ್ರವಿದು
ಇದು ನನ್ನ ಕಾದಂಬರಿಯ ಮೂರನೇ ಪತ್ರವಾಗುವುದು
ಸಾಕಲ್ಲವೇ ಒಬ್ಬ ಗೆಳಯ ಗೆಳತಿಗಾಗಿ ಬರೆದಿದ್ದಾನೆಂಬುದು