ಸಂಗಾತಿಯೊಲವು
ಸಂಗಾತಿಯೊಲವು
ಸಂಗಾತಿಯೊಲವಿರಲು ಸುಪ್ತಸಾಗರಗಳನು
ತಲ್ಲಣಿಸಿ ಮೀರುವಾಸೆ
ಬಯಕೆಗಳ ಹರಿಗೋಲನೇರಿ ಪಯಣಿಸುತಿರಲು
ಹುಟ್ಟು ಹಿಡಿದವಳು ಚೆಲುವಿನಾಕೆ ||
ಸಂಗಾತಿಯೊಲವೋ ಅಮೃತ
ನಿತ್ಯ ಸಂಜೀವಿನಿ
ಅಧರಾಮೃತವೇ ಅದರ ಪ್ರತಿರೂಪ
ಚೆಲುವು ತೋರುವಳು ಆಸ್ತೆ ವಹಿಸುವಳು
ಮೆದುವೆರಳ ಆಟದಲಿ ಪುಳಕಗೊಳಿಸುವಳು
ಮಯ್ಯ ಮರೆಸುವಳು ಅರಿವು ನೀಡುವಳು
ಇದಕೆಲ್ಲ ಕಾರಣವು ಅವಳ ಒಲವು
ಭಾವಕ್ಕೆ ಪ್ರತಿಸ್ಪಂದಿ
ಸತ್ಯಕ್ಕೆ ಅನುವರ್ತಿ
ನಿತ್ಯವೂ ಎನಗಿವಳು ಸ್ಪೂರ್ತಿ
ಸಪ್ತ ಸಾಗರದಲೆಯು ಅಪ್ಪಳಿಸಿ ಬರುತಿರಲು
ಹುಟ್ಟುಹಿಡಿದವಳೊಲವು ನಿರತವಿರಲು
ತೀರವೆತ್ತಲುಯೆಂದು ತಿಳಿಯದವರಾದರೂ
ಪಯಣದಲಿ ಆನಂದ ಕಾಣಬಹುದು
- ಸದಾನಂದ
Rating
Comments
ತುಂಬಾ ಸುಂದರ ಕವನ ಸದಾನಂದ ಅವರೆ,
ತುಂಬಾ ಸುಂದರ ಕವನ ಸದಾನಂದ ಅವರೆ, ನಿಮ್ಮ ಕವನ ಕೃಷಿ ಹೀಗೇ ಮುಂದುವರೆಯಲಿ.
In reply to ತುಂಬಾ ಸುಂದರ ಕವನ ಸದಾನಂದ ಅವರೆ, by Vasant Kulkarni
<p>ಧನ್ಯವಾದಗಳು
ಧನ್ಯವಾದಗಳು - ಸದಾನಂದ
In reply to ತುಂಬಾ ಸುಂದರ ಕವನ ಸದಾನಂದ ಅವರೆ, by Vasant Kulkarni
<p>+1 ನಿಮ್ಮ ಕವನ ಕಣ್ಣಿಗೆ
+1 ನಿಮ್ಮ ಕವನ ಕಣ್ಣಿಗೆ ಬಿದ್ದಿರಲಿಲ್ಲ - ಚೆನ್ನಾಗಿದೆ ಸದಾನಂದ :-) - ನಾಗೇಶ ಮೈಸೂರು
In reply to <p>+1 ನಿಮ್ಮ ಕವನ ಕಣ್ಣಿಗೆ by nageshamysore
<p>ಓದಿದ ತಮಗೂ ಧನ್ಯವಾದಗಳು
ಓದಿದ ತಮಗೂ ಧನ್ಯವಾದಗಳು - ಸದಾನಂದ
In reply to <p>ಓದಿದ ತಮಗೂ ಧನ್ಯವಾದಗಳು by sada samartha
<p>ಕವನ ಚೆನ್ನಾಗಿದೆ.</p>
ಕವನ ಚೆನ್ನಾಗಿದೆ.
In reply to <p>ಕವನ ಚೆನ್ನಾಗಿದೆ.</p> by Premashri
ಉ: ಸಂಗಾತಿಯೊಲವು
ಧನ್ಯವಾದಗಳು ಪ್ರೇಮಾಶ್ರೀ - ಸದಾನಂದ
ಉ: ಸಂಗಾತಿಯೊಲವು
ಸದಾನಂದರೇ, ಸದಾ ಆನಂದವಾಗಿರಿ ಎಂದು ಹಾರೈಸುವೆ.
In reply to ಉ: ಸಂಗಾತಿಯೊಲವು by kavinagaraj
ಉ: ಸಂಗಾತಿಯೊಲವು
ಧನ್ಯವಾದಗಳು ಕವಿಗಳೇ ತಮ್ಮ ಹಾರೈಕೆ ಫಲಿಸಲೆಂಬ ಬಯಕೆ ನನ್ನದು. - ಸದಾನಂದ