ಅಂತರ್ಜಾತಿ ವಿವಾಹ ಸರಿಯೋ ತಪ್ಪೋ ?

Submitted by Vinutha B K on Tue, 07/16/2013 - 18:46

Comments

partha1059

Tue, 07/16/2013 - 21:34

ವಿನುತ ರವರೆ ನೀವು ಪ್ರಶ್ನಾರ್ಥಕ ಚಿಹ್ನೆ (????) ಎಷ್ಟು ಸಾರಿ ಹಾಕಿದರು, ಪ್ರಶ್ನೆ ಒಂದೆ !!
ನನ್ನ ಅಭಿಪ್ರಾಯದಲ್ಲಿ , ಪ್ರೇಮ ವಿವಾಹ ಸ್ವಿಕಾರ ಯೋಗ್ಯ , ಆದರೆ ಯಾವಾಗ ?
ಆ ಬಗ್ಗೆ ಹುಡುಗ ಹಾಗು ಹುಡುಗಿ ಇಬ್ಬರು ಸಹ ಸರಿಯಾದ ತೀರ್ಮಾನ ತೆಗೆದುಕೊಳ್ಳಲು ಸಮರ್ಥರಿದ್ದಾಗ ಆದರೆ ಈಗೆಲ್ಲ ಆಗುತ್ತಿರುವದಾದರು ಏನು. ಹುಡುಗ ಇನ್ನು ಓದು ಮುಗಿಸಿರುವದಿಲ್ಲ, ತನ್ನ ಅನ್ನ ತಾನೆ ದುಡಿಯಲು ಕೆಲಸವಿರುವದಿಲ್ಲ, ಹಾಗೆ ಹುಡುಗಿಯಾದರೊ ಹೈಸ್ಕೂಲ್ ಮುಗಿಸಿ ಇನ್ನು ಕಾಲೇಜಿನ ಹಂತ ಮುಗಿಸಿರುವದಿಲ್ಲ, ಆಗಲೆ ಅವರಲ್ಲಿ ಪ್ರೇಮ ಪ್ರಾರಂಬವಾಗುತ್ತಿದೆ, ಅವರ ಜವಾಬ್ದಾರಿ ಅರ್ಥಮಾಡಿಕೊಳ್ಳುವ ಮಟ್ಟದಲ್ಲಿ ಅವರು ಇರುವದಿಲ್ಲ. ಅದೆ ಸಮಸ್ಯೆ ಎಲ್ಲ ಕಡೆ ಸಾಗುತ್ತಿದೆ, ಪ್ರತಿ ಸಂದರ್ಬದಲ್ಲಿ ಅವರ ಅಪ್ಪ ಅಮ್ಮ ನನ್ನು ವಿಲನ್ ಗಳಂತೆ ಕಾಣಲಾಗುತ್ತಿದೆ. ನನಗೆ ಅನ್ನಿಸುವಂತೆ, ಹುಡುಗ ಹಾಗು ಹುಡುಗಿ ಸರಿಯಾದ ವಯಸ್ಸು ಮುಟ್ಟಿರಬೇಕು, ಹುಡುಗ ಒಂದು ಕೆಲಸದಲ್ಲಿದ್ದು ತನ್ನ ಸಂಸಾರ ನಿರ್ವಹಿಸುವಷ್ಟು ಶಕ್ತನಾಗಿರಬೇಕು, ಹಾಗೆ ಹುಡುಗಿ ಸಹ ಹುಡುಗನನ್ನು ತನಗೆ ಸರಿಹೊಂದುವನು ಎಂದು ನಿರ್ದರಿಸುವ ಸ್ಥಿರ ಮನಸಿನಾವಳಾರಬೇಕು ಆಗ ಅದು ಅಂತರ್ಜಾತಿಯೊ ಎಂತದೊ ಒಟ್ಟಿನಲ್ಲಿ ವಿವಾಹಕ್ಕೆ ಒಪ್ಪಬಹುದು. ಆದರೆ ಯಾವುದನ್ನು ಸಮರ್ಥವಾಗಿ ಯೋಚಿಸಲು ಸಾದ್ಯವಿಲ್ಲದ ಹುಡುಗಿಯ ಮನದಲ್ಲಿ ಪ್ರೇಮ ವೆಂಬ ಪೊಳ್ಳು ಭಾವವನ್ನು ತುಂಬಿ , ಹುಡುಗನ ಹಿಂದೆ ಹೋಗಿ ನಂತರ ಜೀವನ ಪೂರ್ಣ ಸರಿಪಡಿಸಲಾಗದ ಹಿಂದೆ ಹೆಜ್ಜೆ ಇಡಲು ಆಗದ ತಪ್ಪು ಮಾಡಿ ನಂತರ ಪರಿತಪಿಸುವುದು ಸರಿಯಲ್ಲ ಎಂದು ನನ್ನ ಭಾವ.
ಆದರೆ ಏನು ಮಾಡಲು ಸಾದ್ಯವಿಲ್ಲ ಈಗೆಲ್ಲ ಯಾರ ಬುದ್ದಿ ಮಾತುಗಳು , ವಾದಗಳು ರುಚಿಸುವದಿಲ್ಲ ಸುತ್ತಲಿನ ಪರಿಸರವೆ ಹಾಗಿದೆ . ಅವರವರ ಕಾರ್ಯಗಳಿಗೆ ಅವರೆ ಜವಾಭ್ದಾರಿ.

ಪಾರ್ಥರ ಅಭಿಪ್ರಾಯಕ್ಕೆ ನನ್ನ ಪೂರ್ಣ ಬೆಂಬಲ. ಈಗ ಕಾಲ ಇನ್ನೂ ಮುಂದುವರೆದಿದೆ. ಲಾಗ್ ಇನ್ ಸಾರಿ ಲಿವ್ ಇನ್ ಏನೋ ಒಂದು... ವಿವಾಹ ಅಗತ್ಯವೋ ಎನ್ನುವಲ್ಲಿಗೆ ಬಂದಿದೆ. ನೀವಿನ್ನೂ ಅಂತರ್ಜಾತಿ ವಿವಾಹದ ಹಳೇ ಟಾಪಿಕ್‌ನಲ್ಲಿದ್ದೀರಿ..:)

ಗಣೇಶರೆ ಹೌದಲ್ಲವೆ ? ಲಿವ್ ಇನ್ ರೀತಿಯ ವಿದೇಶಿ ಸಂಪ್ರದಾಯಗಳು ಸಾಮಾನ್ಯವೆನಿಸುತ್ತಿರುವ ಕಾಲದಲ್ಲಿ, ಗಂಡು-ಗಂಡು, ಹೆಣ್ಣು-ಹೆಣ್ಣು ವಿವಾಹ ಕಾನೂನುಬದ್ದ ಎಂದು "ಸ್ವಜಾತೀಯ" ವಿವಾಹಗಳನ್ನು ಉನ್ನತ ನ್ಯಾಯಾಲಯಗಳೆ ಹೇಳುತ್ತಿರುವ ಕಾಲದಲ್ಲಿ, .... ಅಂತರ್ಜಾತಿಯ ವಿವಾಹ ಸರಿಯೊ ತಪ್ಪೊ ಎನ್ನುವ ಪ್ರಶ್ನೆ ಈಗ ಪ್ರಸ್ತುತವಾಗದೆ ’ವಿವಾಹವಾಗುವುದು ಪುಣ್ಯ " ಎನ್ನುವ ಕಾಲ ಬರುತ್ತಿದೆ.

ಪಾರ್ಥ ರವರೆ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ... ಈ ಪ್ರಶ್ನೆ ಅಂತರಾಳದಲ್ಲಿ ಬಹುವಾಗಿ ಕೆದಕುತ್ತಿದುದರಿಂದ ಪ್ರಶ್ನಾರ್ತಕ ಚಿಹ್ನೆಗಳು ಜಾಸ್ತಿಯೇ ಹಾಕಿದ್ದೆ ... ನೀವೆಳಿದ ಹಾಗೆಯೇ ಅವರ ಜೀವನವನ್ನು ಅವರು ನಿಭಾಯಿಸುವಂತೆ ಇದ್ದಾರೆಯೇ ಎಂದು ಪರೀಕ್ಷಿಸಿ ಒಪ್ಪಲಿ ,ಜಾತಿ ಬೇಧ ಬೇಡ ಎಂದಷ್ಟೇ ನನ್ನ ವಾದವಾಗಿತ್ತು .. ಹದಿಹರೆಯದಲ್ಲಾಗುವ ಬರಿ ಆಕರ್ಷಣೆಯನ್ನು ನಾನು ಪ್ರೀತಿಯೆಂದು ಒಪ್ಪುವುದಿಲ್ಲ .. ಪ್ರೀತಿಯನ್ನು ಇಬ್ಬರ ಜೀವನದ ಏಳಿಗೆಗೆ ಮೆಟ್ಟಿಲಾಗುವಂತೆ ಮಾಡಿಕೊಳ್ಳುವ ನಿಜವಾದ ಪ್ರೇಮಿಗಳನ್ನು ಜಾತಿ ಎಂಬ ಹೆಸರು ಹೇಳಿ ದೂರ ಮಾಡಬಾರದು ಎಂಬ ಕೋರಿಕೆ ..

Vinutha B K

Wed, 07/17/2013 - 11:15

ಪಾರ್ಥ ಹಾಗೂ ಗಣೇಶರವರೆ ಧನ್ಯವಾದಗಳು .. ನೀವಿಬ್ಬರು ಹೇಳಿದ ಹಾಗೆ ಲೀವ್ ಇನ್ ಬಂದಿದೆ ಎನ್ನುವ ಮಾತು ಎಷ್ಟು ಸತ್ಯ ಎಂದು ಹೇಳಲು ನಾನು ಕಣ್ಣಾರೆ ಕಂಡಿಲ್ಲ ಹೀಗೆ ಕೆಲವರ ಬಾಯಲ್ಲಿ ಕೇಳಿದ್ದೀನಿ ಅಷ್ಟೇ .. ಆದರೆ ನಿಜವಾಗಿಯೂ ನೋಡುತ್ತಿರುವುದು ಬರಿ ವಿರೋದವೇ ,ಎಲ್ಲಾ ವಾದ ವಿವಾದಗಳಲ್ಲಿ ಹೇಳುವವರು ಕೂಡ ತನ್ನ ಮನೆಯಲ್ಲಿ ಮಾತ್ರ ಆಧ್ಯತೆ ಕೊಡದೆ ಇರುವವರೇ ಜಾಸ್ತಿ ಇದ್ದಾರೆ ..
ಎಲ್ಲಾ ವಿವಾಹವಾದ ಒಂದೆರಡು ವರ್ಷಗಳಾದ ಮೇಲೆ ಒಂದಾಗುತ್ತಾರೆ ಎಂಬ ದೈರ್ಯದಿಂದ ಮದುವೆಯಾಗಿ ಲವ್ ಮ್ಯಾರೇಜ್ ಎಂದು ಹೇಳಿರುತ್ತಾರೆ ಹೊರತು ಆ ಒಂದು ವರ್ಷವನ್ನು ಸಂಬಂದಗಳಿಂದ ದೂರವಿದ್ದು ಕಳೆದವರಿಗೆ ಗೊತ್ತಿರುತ್ತದೆ ..

ವಿವಾಹವೆನ್ನುವುದು ಒಂದು ಅತಿ ದೊಡ್ಧ ಲಾಂಗ್ ಟರ್ಮ್ ಪ್ರಾಜೆಕ್ಟ್. ಅದನ್ನು ನಿಭಾಯಿಸಲು ಬಹಳ ಸಾಮರ್ಥಗಳ ಅತ್ಯವಶ್ಯಕತೆ ಇದೆ. ಇದಲ್ಲದೆ ಇದು ಜೀವನ ವಿಡಿ ಹಾಕಿಕೊಂಡ ಬಹಳ ದೊಡ್ಡ ಜವಾಬ್ದಾರಿಯುತ ಪ್ರಾಜೆಕ್ಟ್. ಇದನ್ನು ಅರಿಯುವುದು ಬಹಳ ಮುಖ್ಯ. ಮದುವೆಯನ್ನು ಮೊದಲು ಆಕರ್ಷಣೆಗೆ ಹೋಲಿಸಬಹುದು. ಆಕರ್ಷಣೆ ಕ್ಷಣಿಕ. ಅದು ಕಡಿಮೆಯಾದಾಗ ನಿಜವಾದ ಸಮಸ್ಯೆ ಉದ್ಭವವಾಗುತ್ತೆ. ಪ್ರೀತಿ ಪ್ರೇಮಗಳನ್ನು ನಿಭಾಯಿಸುವುದು ಬಹಳ ಕಸ್ಥ. ನಮ್ಮ ಮನೆಯ ಹತ್ತಿರ ಒಬ್ಬ ತಮಿಳಿ ನವನು ಉತ್ತರ ಭಾರತೀಯ ಹುಡುಗಿಯ ಜೊತೆ ಪ್ರೇಮ ವಿವಾಹ ಮಾಡಿಕೊಂಡ. ಇಬ್ಬರ ಮನೆಯವರು ಇದಕ್ಕೆ ಒಪ್ಪಿಗೆ ಕೊಟ್ಟಿರಲಿಲ್ಲ. ಮದುವೆಯಾಗಿ ಒಂದು ವಾರದಲ್ಲಿ ಮದುವೆ ಮುಗಿಯಿತು. ಮನೆಗೆ ಬಂದ ವಧು ತನ್ನ ತಿಂಗಳ ಸಂಬಳವನ್ನು ಅತ್ತೆಯ ಕೈಗೆ ಕೊಡದೆ ಅದು ಮುರಿಯಿತು. ಅಂದರೆ ಪ್ರೇಮ ಪ್ರೀತಿಗಳ ಜೊತೆಗೆ ಹಲವಾರು ಸಾಮಾಜಿಕ ಒತ್ತಡಗಳಿಗೆ ನಾವು ಸ್ಪಂದಿಡಬೇಕು. ನಿಜವಾದ ಪ್ರೀತಿ ಬಲವಾಗಿಲ್ಲದೆ ಮದುವೆಗಳು ಮುರಿಯುತ್ತವೆ. ಇನ್ನೂ ಅಂತರ್ಜಾತಿ ಮದುವೆಗಳ ಬಗ್ಗೆ ಬಹಳ ಹೊಂದಾಣಿಕೆ ಅಗತ್ಯ. ಬಹುಶಃ 300 % ಅಂತಹ ಮನೋಬಲ ಉಳ್ಳವರು ಪ್ರಯತ್ನಿಸಬಹುದು. ಪ್ರೀತಿ ಮುಖ್ಯ,.ವಿನೂತಾರವರೇ, ನಾನು ಅದಕ್ಕೆ ಖಂಡಿತ ವಿರುದ್ಧವಿಲ್ಲ. ಗುಡ್ ಲಕ್

ಧನ್ಯವಾದಗಳು ವೆಂಕಟೇಶ್ ರವರೇ ... ನೀವು ಕೊಟ್ಟ ಉಪಮಾನದಲ್ಲಿ "ಇಬ್ಬರ ಮನೆಯವರು ಇದಕ್ಕೆ ಒಪ್ಪಿಗೆ ಕೊಟ್ಟಿರಲಿಲ್ಲ" ,"ಮನೆಗೆ ಬಂದ ವಧು ತನ್ನ ತಿಂಗಳ ಸಂಬಳವನ್ನು ಅತ್ತೆಯ ಕೈಗೆ ಕೊಡದೆ ಅದು ಮುರಿಯಿತು" ಇದೆರದರಿಂದಲೇ ಈ ಮದುವೆ ಮುರಿಯಲು ಕಾರಣವಾಗಿದ್ದು .. ಇಬ್ಬರ ಮನೆಯಲ್ಲೂ ಒಪ್ಪಿದ್ದರೆ ಅತ್ತೆಯ ದರ್ಬಾರಿನಲ್ಲಿ ಪ್ರೀತಿಯಿಂದ ಹೇಗೆ ನಡೆಯಬೇಕೆಂದು ಅಮ್ಮನಿಂದ ತಿಳುವಳಿಕೆಯ ಮಾತುಗಳಿರುತ್ತಿದ್ದವು ,ಹಾಗೆಯೇ ತಾನು ಒಪ್ಪಿ ತಂದ ಸೋಸೆಯಾಗಿದ್ದರೆ ತಾನೇ ದುಡ್ಡುಕೊಟ್ಟು ಕಳಿಸಿ ಒಳ್ಳೆಯ ಅತ್ತೆ ಎನಿಸಿಕೊಳ್ಳಬೇಕೆಂಬ ಆಸೆಯಲ್ಲಿ ಸೊಸೆಯ ದುಡಿಮೆಯ ಮೇಲಿನ ದುರಾಸೆ ಇರುತ್ತಿರಲಿಲ್ಲ ಎಂದು ನನ್ನ ನಂಬಿಕೆ ..
 

ಹೊಂದಿಕೆಯೆಂಬುದು ಎಲ್ಲರಿಗು ಅಗತ್ಯವೇ,ಇದು ಅರಂಜ್ ಮದುವೆಯಾಗಿದ್ದರೆ ಮನಸುಗಳು ಒಡೆದ ಒಂದೇ ಮನೆಯಲ್ಲಿ ಪ್ರೀತಿಯಿಲ್ಲದಿದ್ದ ಬರಡು ಜೀವನ ನಡೆಸುತಿದ್ದರು ಅದು ಕೇವಲ ಮರ್ಯಾದಿಕೊಸ್ಕರ ಅಷ್ಟೆ ,ಮೀರಿದರೆ ವಿಚ್ಚೇದನ . ಮನೆಯಲ್ಲೇ ಹುಡುಕಿ ಒಪ್ಪಿ ಮಾಡಿದ ಮದುವೆಗಳು ಯಾವುದು ವಿಚ್ಚೆದನವಾಗಿಲ್ಲವೇ ? ಇದೆಲ್ಲ ಅವರವರ ಭಾವನೆ ವ್ಯಕ್ತಿತ್ವಕ್ಕೆ ಸಂಬಂದಿಸಿದ್ದು ಅಷ್ಟೆ ..
ತಾನು ಹೋದ ಮನೆಯಲ್ಲಿಯೂ ಹೇಗೆ ಇರಬೇಕೆಂದು ಸೊಸೆ ಅರ್ಥ ಮಾಡಿಕೊಂಡು ,ತನ್ನ ಮಗಳಿಗೆ ಎಷ್ಟು ಸ್ವಾತಂತ್ರವಿರುತ್ತದೋ ಅಷ್ಟೇ ಕೊಟ್ಟರೆ ಈ ತೊಂದರೆ ಇರುವುದಿಲ್ಲ .

ಬಸವ ಯುಗ ಅಂದ್ರೆ 800 ವಷ೯ಗಳ ಹಿಂದಿನಿಂದಲೇ ಗಂಡು ‍ ಹೆಣ್ಣು ಮದ್ಯೆ ಪ್ರೀತಿ ಪ್ರೇಮಾಂಕುರವಾಗುತ್ತಿತ್ತು. ಕ್ರಮೇಣ ಇದು ಎರಡು ಊರುಗಳಲ್ಲಿ ಇರುವ ಗಂಡು ಹೆಣ್ಣು ಮದ್ಯೆ ಶುರುವಾಯ್ತು. ಇದಕ್ಕೆ ಕಾರಣ ಯಾವುದೇ ಕ್ರಾಂತಿ ಅಲ್ಲ‌ ... ಕಾರಣ ಒಂದೇ .. ಮನುಷ್ಯ ಸಂಘಜೀವಿ. ಸ್ವಾಭಾವಿಕ ಬದಲಾವಣೆ ಬಯಸಿದ‌. ಇದಕ್ಕೆ ಪ್ರೇರಣೆಗಳು .... ಊರುಗಳಲ್ಲಿ ನೆಡೆಯುತ್ತಿದ್ದ ಜಾತ್ರೆಗಳು ಮತ್ತು ಹತ್ತು ಹಲವು. ಆದರೆ ಬಸವಣ್ಣನವರ ವಚನಗಳು ಬರಿ ಪುಸ್ತಕಕ್ಕೆ ಸೀಮಿತವಾಗೀಬಿಟ್ಟಿವೆ. 

ಈಗ ಅಂತಜಾ೯ತೀಯ ವಿವಾಹ ವ್ಯವಸ್ತೆ ವಿವಿಧ ಬಾಗಗಳಾಗಿವೆ. ಹಿಂದುಳುದ ವಗ೯ಗಳಲ್ಲಿ ಕಾಣಿಸುವ ಅಂತ‌ಜಾ೯ತೀಯ ಪ್ರೇಮ ಪ್ರಕರಣಗಳ ಹಿಂದೆ ದೇವರ‌  ಮೇಲೆ ಇರುವ ಮೂಡನಂಬಿಕೆಗಳು ಮತ್ತು ಭಯದ ವಾತಾವರಣದಲ್ಲಿ ಬಹಿಶ್ಕಾರಗಳ ಭೀತಿಯಿಂದ ಬದುಕುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಶಿಕ್ಸಣದ ಕೊರತೆ.  ಮೇಲು ವಗ೯ಗಳಲ್ಲಿ ಈ ಸಮಸ್ಯೆ ಕಡಿಮೆ. 

ನಾನು  ಅಂತಜಾ೯ತೀಯ ವಿವಾಹವಾಗಿದ್ದೇನೆ. ಮೇಲೆ ಹೇಳಿರುವ‌ ಹಿಂದುಳುದ ವಗ೯ಗಳಲ್ಲಿ ಕಾಣಿಸುವ ಅಂತ‌ಜಾ೯ತೀಯ ವಿವಾಹದಿಂದ‌ ಆಗುವ‌ ಎಲ್ಲಾ ಮೂಡನಂಬಿಕೆಗಳ ವಾತಾವರಣ ಇದೆ. ನನ್ನ ಹಳ್ಳಿಯಲ್ಲಿ ನಾನು ಅಂತಜಾ೯ತೀಯ ವಿವಾಹವಾಗಿದ್ದೇನೆಂದು ಹೇಳುವ ಹಾಗಿಲ್ಲ‌. ಹೇಳಿದರೆ ನಮ್ಮ ಕುಟುಂಬವನ್ನು ಬಹಿಶ್ಕಾರ ಮಾಡಲಾಗುವುದು. ನಾನು ಸಾಫ್ತ್ ವೇರ್ ಇಂಜಿನೀರ್ ಆಗಿಯೂ ನನ್ನ ಹಳ್ಳಿಯ‌ ಮೂಡನಂಬಿಕೆಗಳ ವಿರುದ್ದ ಏನು ಮಾಡದ‌ ಪರಿಸ್ತಿತಿ ಇದೆ. ಹೀಗಿದೆ ನಮ್ಮ ನಂಬಿಕೆಗಳು. 

ನಮ್ಮ ಭಾರತೀಯ ಸಂಸ್ಕ್ಱುತಿಯಲ್ಲಿ ಮದುವೆ ಎಂಬ ಆಚರಣೆಗೆ ತುಂಬ ಮಹತ್ವವಿದೆ ಇದಕ್ಕೆ ಜಾತಿಯ ಸಂಕೋಲೆ ಇಲ್ಲ‌., ಅದು ಯಾವುದೇ ರೀತೆಯವಿವಾಹವಾಗಿರಬಹುದು. 

ನಾವೆಲ್ಲ ಒಂದು ನಾವೆಲ್ಲ ಬಂಧು ಎಂಬ ಸತ್ಯ ಎಂದು ಸತ್ಯವಾಗುತ್ತದೋ ??

 

 

kavinagaraj

Wed, 07/17/2013 - 12:23

ನನ್ನ ವೈಯಕ್ತಿಕ ಅಭಿಪ್ರಾಯವಿದು. ಹುಟ್ಟಿನ ಜಾತಿಯ ಮೇಲೆಯೇ ವ್ಯವಹಾರ ನಡೆಯುತ್ತಿರುವ ಇಂದಿನ ವ್ಯವಸ್ಥೆ ಬದಲಾಗಲು ರಾಜಕಾರಣಿಗಳು ಬಿಡಲಾರರು. ನನ್ನ ದೃಷ್ಟಿಯಲ್ಲಿ ಹುಟ್ಟಿನ ಜಾತಿಗೆ ಪ್ರಾಧಾನ್ಯತೆ ಅಗತ್ಯವಿಲ್ಲ. ಸಮಾನ ಮನೋಭಾವ, ಸಮಾನ ಅಭಿರುಚಿಗಳು ಪ್ರಾಧಾನ್ಯತೆಗೆ ಅರ್ಹ.

ಧನ್ಯವಾದಗಳು ನಾಗರಾಜು ರವರೆ ... "ಹುಟ್ಟಿನ ಜಾತಿಗೆ ಪ್ರಾಧಾನ್ಯತೆ ಅಗತ್ಯವಿಲ್ಲ. ಸಮಾನ ಮನೋಭಾವ, ಸಮಾನ ಅಭಿರುಚಿಗಳು ಪ್ರಾಧಾನ್ಯತೆಗೆ ಅರ್ಹ" ಇದಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ  . ಹೌದು ಇತ್ತೇಚೆಗಿನ ರಾಜಕೀಯವೇ  ಬಹುಪಾಲು ಜಾತಿ ಬೇದ ದ ನಿರ್ಮಾಣ ಮಾಡುತ್ತಿದೆ ..

Manjunatha D G

Thu, 07/18/2013 - 19:17

ಜಾತ್ಯಾತೀತ, ಪ್ರಜಾಪ್ರಭ್ಜುತ್ವ‌  ಸರಕಾರ ಬ್ಂದ ಮೇಲೆ ಜಾತಿಗಳ ನಡುವಿನ ಅಂತರ ಜಾಸ್ತಿಯಾಗಿದೆ ಅನಿಸುತ್ತಿದೆ.  ಇದಕ್ಕೆ ನಮ್ಮ ರಾಜಕೀಯ‌

ಮತ್ತು ರಾಜಕಾರಣಿಗಳು ಕಾರಣವಿರಬಹುದು. ಜಾತಿಗಳ ನಡುವಿನ ಅಂತರ ಜಾಸ್ತಿಯಾಗುತ್ತಾ ಸಾಗುತ್ತಿರುವಾಗ ಅಂತರ ಜಾತಿಯ ಶಕ್ತಿ ಬಲಗೊಳ್ಳಲು ಸಾಧ್ಯವೇ ?

ಬರಹ

 ಪ್ರೀತಿ  ,ಜಾತಿ ಎರಡಕ್ಕೂ ಆಗಿಬರದಿದ್ದರು ,ಪ್ರೀತಿ ಹುಟ್ಟುವುದು ಅಂತರ್ಜಾತಿಯ ನಡುವೆ ಜಾಸ್ತಿ ಯಾಕೆ ,ಇದು ಇಂದಿನ ಕತೆಯಲ್ಲ ಅನಾದಿ ಕಾಲದಿಂದಲೂ ಇದು ಇಂದಿಗೂ ಮುಂದುವರೆಯುತ್ತಿದೆ .. ಒಂದೇ ಜಾತಿಯವರು ಪ್ರೆಮಿಸಿದ್ದಲ್ಲಿ ಕೂಡ ಮನೆಯವರು ಅಂತಸ್ತು ,ವಯಸ್ಸಿನ ನೆಪ ಹೇಳಿ ಪ್ರೇಮ ವಿವಾಹವನ್ನು ದ್ವೇಷಿಸುವುದು ಹೊಸತೇನಲ್ಲ ಏಕೆಂದರೆ ,ತನ್ನ ಮಗ ಅಥವಾ ಮಗಳು ನಾವು ಹುಡುಕಿ ಮದುವೆ ಮಾಡಿದವರೊಂದಿಗೆ ಸುಖವಾಗಿರುತ್ತಾರೆ ,ಅವರು ಆಯ್ಕೆ ಮಾಡುವುದು ತಪ್ಪು ಎಂಬ ಗಟ್ಟಿಯಾದ ನಂಬಿಕೆಯಲ್ಲೇ ಬದುಕಿರುತ್ತಾರೆ ,ಅದರಲ್ಲೂ ಪ್ರೇಮವಿವಾಹ ವೆಂದರೆ ಅದು ತಪ್ಪು ,ನೋವುಗಳೇ ಜಾಸ್ತಿ ಎಂದು ತಮ್ಮ ಮನಸ್ಸಿನಲ್ಲಿ ಅಚ್ಚೆಯಂತೆ  ಬರೆದಿಟ್ಟುಕೊಂಡಿರುತ್ತಾರೆ .ಒಂದು ಬೀಜ ಮೊಳಕೆಯೊಡೆಯಲು ನೀರಲ್ಲಿ ಸ್ವಲ್ಪ ಹೊತ್ತು ಮಿಂದು ಹೊರಗೆ ಬಂದರೆ ಸಾಕು ,ಇನ್ನೂ ಗಾಳಿ ಸಿಗದಿದ್ದರೆ ಬೇಗ ಮೊಳಕೆಯೊಡೆಯುತ್ತದೆ  ,ಜೊತೆಗೆ ಉತ್ಕೃಷ್ಟ ಫಲವತ್ತಾದ ಮಣ್ಣಾಗಿದ್ದರೆ ಅದು ಬೇರು ಬಿಟ್ಟು ಭಲಿಷ್ಟವಾದ ಗಿಡ ,ಮರವಾಗುತ್ತದೆ ...
ಒಂದು ಜೀವದಲ್ಲಿ(ಬೀಜ) ಪ್ರೀತಿಯೆಂಬ  ಮೊಳಕೆಯೊಡೆಯಲು ಅದನ್ನು ಅರ್ಥ ಮಾಡಿಕೊಳ್ಳೋ ಮನಸ್ಸು (ನೀರು) ಸಿಕ್ಕಿದರಾಯ್ತು ,ಅಂತಹ ಮನಸ್ಸಿನ ಜೊತೆ ಸ್ವಲ್ಪ ದಿನ ಒಡನಾಟವಾಗಿ ಬಿಟ್ಟರೆ ,ಅದರಲ್ಲೂ ತನಗೆ ಹೊಂದಿಕೊಳ್ಳದ ಪರಿಸರ ಅಥವಾ ಏನಾದ್ರು ಇಕ್ಕಟ್ಟಿನ ಪರಿಸ್ತಿತಿಯಲ್ಲಿ ಸಿಕ್ಕಿಕೊಂಡರೆ ,ತನಗೆ ಹತ್ತಿರವಾಗಿದ್ದ ಮನಸಿನ ನೆನಪು ಕಾಡಿ ಪ್ರೀತಿಯೆಂಬ ಮೊಳಕೆ ಬರಲು ಜಾಸ್ತಿ ಸಮಯ ಬೇಕಿರುವುದಿಲ್ಲ , ಆ ಮನಸ್ಸಿನ ಪ್ರೀತಿ ನಿಜವಾಗಿ ,ಹೊಂದಿಕೊಳ್ಳಲಾರಂಭಿಸಿದರೆ ( ಉತ್ಕೃಷ್ಟ ಫಲವತ್ತಾದ ಮಣ್ಣಾಗಿದ್ದರೆ) ನಾನು ಅಚ್ಚಿಕೊಂಡ ಮನಸಿನೊಂದಿಗೆ ಜೀವನ ಪೂರ ಇರಬೇಕೆಂದು (ಬೇರು ಬಿಡಲು )ನಿರ್ದರಿಸಲು ಆರಂಬಿಸುತ್ತದೆ , ಹೊಂದಿಕೊಂಡ ಜೀವಗಳಿಗೆ ಯಾವ ವಿರುದ್ದವು ಇಲ್ಲದಿದ್ದರೆ ಪ್ರೀತಿ ದೊಡ್ಡ ಮರವಾಗಿ ನಾಲ್ಕಾರು  ಜನಕ್ಕೆ ನೆರಳು ನೀಡುವುದರಲ್ಲಿ ಸಂಶಯವಿಲ್ಲ ...     ಮರವಾಗುವ ಮುನ್ನವೇ ಒಂದೊಂದು ಕೊಂಬೆಯನ್ನು ಚುಚ್ಚುಮಾತಿನಿಂದ ದುರ್ಬಲಗೊಳಿಸುವ ಜನರೇ ಜಾಸ್ತಿಯಾದುದರಿಂದಲೇ ,ಮರವಾಗಿ ಬಹಳಕಾಲ ಉಳಿಯದೇ ಹೋಗುತ್ತದೆ .. ಕೆಲ ಸಂದರ್ಭಗಳೆಂದರೆ ಮೊಳಕೆಯೊಡೆಯುವ ಮುನ್ನವೇ ಮುರಿದಾಕಬೇಕಿತ್ತು ನೀನು ತಪ್ಪು ಮಾಡಿದೆ ಎಂದು ನೂರಾರು ಉಪಮಾನಗಳನ್ನು ಮುಂದಿಟ್ಟು ,ಮರ್ಯಾದೆ ಎಂಬ ದೊಡ್ಡ ಪದ ಬಳಸಿ ಗಿಡವಾಗಿದ್ದಾಗಲೆ  ಬೇರೆ ಕಸಿ ಮಾಡಿಬಿಡುತ್ತಾರೆ , ಪ್ರೀತಿಯನ್ನರಿತು ಬದುಕಿದ ಹೆತ್ತವರು ಕೂಡ ಕಸಿಮಾಡಿದರೆ ತನ್ನ ಭಾಗವನ್ನು ಕಳೆದುಕೊಂಡು ನೋವು ಅನುಭವಿಸುತ್ತಾರೆ ಎಂಬ ಯೋಚನೆ ಮಾಡುವುದಿಲ್ಲ ,ಏನೋ ಅವಳು /ಅವನು ಮಾಡಿದ್ದು ತಪ್ಪು ನಾವು ಮಾಡಿದರೆ ಸರಿಯಿರುತ್ತದೆ ಎಂಬ ಗಾಡ  ನಂಬಿಕೆ ,ಕಸಿಮಾಡಿದ ಮತ್ತೊಂದು ಜೀವ ಏನಾದ್ರೂ ಕೆಟ್ಟದಾಗಿದ್ದು ಪ್ರಾಣ ಹೋದರು ಕೂಡ ಅವಳ/ನ  ಹಣೆಬರಹ ಎಂದೋ ,ಹೊಂದಿಕೊಂಡು ಬಾಳಲು ಬರಲಿಲ್ಲ ಎಂದೋ ಹೇಳುವರೇ ಹೊರತು ತಮ್ಮ ತಪ್ಪನ್ನು ಒಪ್ಪಿಕೊಳ್ಳುವುದಿಲ್ಲ , ತನ್ತನವನ್ನು ಉಳಿಸಿಕೊಳ್ಳಲಾಗದೇ ಸಹಜವಲ್ಲದ  ಕಸಿಯಾದ ಜೀವದೊಂದಿಗೆ ತಾನು ಸಾಯುವರೆಗು ಬದುಕಬೇಕೆಂಬ ಚಿಂತೆಯಲ್ಲಿರುತ್ತದೆ , ಕಸಿಭಾಗವನ್ನೇ ಎತ್ತಿಹಿಡಿಯಬೇಕೆ ಹೊರತು ತನ್ನ ಯಾವ ಭಾವನೆಗಳನ್ನೂ ,ಕಷ್ಟಗಳನ್ನೋ ಹೇಳಲು ಹೇಗಾದರೂ ಮನಸು ಒಪ್ಪುತ್ತದೆ ಹೇಳಿ ಯಾಕೆಂದರೆ ಸಮದಾನದ ಮಾತುಗಳೆಂದರೆ "ಹೊಂದಿಕೊಂಡು ಹೋಗು "ಎಂಬುದೊಂದೇ .ಇವರುಗಳ ಖುಷಿಗೊಸ್ಕರ ತನ್ನ ಕಸಿಬಾಗವನ್ನು ಪೋಷಿಸುತ್ತಾ ತನ್ನ ಜೀವನವನ್ನು ಸವೆಸುತಿದ್ದರೆ ಮಾತ್ರ ಒಳ್ಳೆಯವರಾಗಿ ಉಳಿಯುವುದು ,ಜೊತೆಗೆ ಈ ಸ್ವಾರ್ತ ಸಮಾಜದಲ್ಲಿ ಬೆಲೆ ..        ಪ್ರೀತಿ ಮೊಳಕೆಯೊಡೆದು ಬೇರು ಬಿಡುವಾಗ ಇದು ಯಾವ ದೇಶದ ಮಣ್ಣು ಎಂದು ಪರೀಕ್ಷೆ ಮಾಡಿ ಬೇರೂರಬೇಕೆ ? ಹಾಗಾಗಿದ್ದರೆ ಕೆಸರಿನಲ್ಲಿ ಹುಟ್ಟಿ ಬೆಳೆದ ಕಮಲವನ್ನೇಕೆ ಶ್ರೇಷ್ಠ ಎಂದು ದೇವರ ಮುಡಿಗೇರಿಸುವಿರಿ ? ಎಲ್ಲಿ ಬೆಳೆಯುತ್ತದೆ ಎಂಬುದಲ್ಲ ಮುಖ್ಯ ಅದರ ಗುಣ ಎಂದಲ್ಲವೇ ವಾದ ಕಮಲದ ವಿಷಯಕ್ಕೆ ,ಹಾಗೆ ಯಾರನ್ನ ಯಾವ ಜಾತಿಯವರನ್ನ ಎಂಬುದು ಮುಖ್ಯವಲ್ಲ ,ಯಾರಿಗೂ ಕೆಡುಕು ಮಾಡದೆ ತನ್ನವರೊಂದಿಗು ಸಹಬಾಳ್ವೆಯಿಂದ ಬದುಕುವಂತ ಸಂಗಾತಿಯನ್ನು ಹುಡುಕಿಕೊಂಡವರಿಗೆ ಯಾಕೆ ಬದುಕಲು ಅವಕಾಶ ಕೊಡಬಾರದು ?
ನಿಮ್ಮ ಮೆಚ್ಚುಗೆಯಿಂದ ಕೊಟ್ಟ ಅವಕಾಶವನ್ನು ಅವರು ನಿಷ್ಟೆಯಿಂದಲೇ ಉಪಯೋಗಿಸಿಕೊಳ್ಳುತ್ತಾರೆ ಅಲ್ಲವೇ ? ತಾವು ಬದುಕಿ ತೋರಿಸಬೇಕೆಂಬ ಹಟವಿರುತ್ತದಲ್ಲವೇ ? ಅವಕಾಶ ಕೊಟ್ಟು ನೋಡಿ ..
    ತುಂಬಾ ಶ್ರೇಷ್ಟ ಪೋಷಕರು ಇರುತ್ತಾರೆ ಪ್ರೀತಿ ಮಾಡಿ ಮದುವೆ ಆದವರಲ್ಲಿ ಏನಾದರು ಚಿಕ್ಕ ಪುಟ್ಟ ಸಮಸ್ಯೆಗಳು ಬಂದಾಗ ನಾನು ಮೊದಲೇ ಹೇಳಿರಲಿಲ್ವ ವಿಚ್ಛೇದನ ತೆಗೆದುಕೋ ಎಂದು ಸಲೀಸಾಗಿ ಹೇಳುವ ಇವರು ತಾವು ಹುಡುಕಿ ಮಾಡಿದ್ದರಲ್ಲಿ ಕಲಹ ಬಂದರೆ ಮಾತ್ರ ಹೊಂದಿಕೊಂಡು ಬಾಳಬೇಕು ,ಇದೆಲ್ಲ ಸಾಮಾನ್ಯ ಎಂದುಬಿಡುವರು .. ಏನೇನೋ ಪ್ರಯೋಗಗಳನ್ನು ಮಾಡಿ ಒಂದು ಮಾಡಲು ಪ್ರಯತ್ನಿಸುವರು .ಇದೇ ರೀತಿಯು ಪ್ರೆಮವಿವಾಹಗಳಲ್ಲು ಒಂದೇ ಒಂದು ಬಾರಿ ಪ್ರಯತ್ನ ಮಾಡಿ ,ಅವರು ಮತ್ತೆ ಜಗಳವಾಡುವುದಿಲ್ಲ ಏಕೆಂದರೆ ನಿಮ್ಮ ಮೇಲಿನ ಭಯ ಅಭಿಮಾನ ಎರಡು ಜಾಸ್ತಿಯಾಗಿರುತ್ತದೆ .
             ಹಾಗೆಂದು ಕೆಸರಿಗೆ ತಳ್ಳಿ ಬಿಟ್ಟುಬಿಡಿ ಎಂಬುದು ನನ್ನ ವಾದವಲ್ಲ ,ಕೆಸರಲ್ಲಿ ಹುಟ್ಟಿದ ಕಮಲಕ್ಕೆ ಬೇದ ಮಾಡದೆ ದೇವರಿಗೆ ಅರ್ಪಿಸುವ ನಾವು ,ಹುಡುಕಿಕೊಂಡಿರುವ ಸಂಗಾತಿಯ ಕುಲ ,ಜಾತಿಗೆ ಪ್ರಾಮುಕ್ಯತೆ ಕೊಡದೆ ,ತಾವುಗಳು ಮೂರು ತಿಂಗಳುಗಳಲ್ಲಿ ಹುಡುಕಿ ಬೀಗರ ಮನೆ ಆಸ್ತಿ ಮೇಲೆ ಅಭಿಮಾನವಿಟ್ಟುಕೊಂಡು ಮದುವೆಮಾಡುವುದರ ಬದಲಾಗಿ ,ಬಹುದಿನಗಳಿಂದ ಸ್ನೇಹಿತರಾಗಿದ್ದು -ಎಷ್ಟೋ ಜಗಳ ಮಾಡಿಕೊಂಡರು,ಮುಂದೆ ಏನೇ ಕಷ್ಟ ಬಂದರು ಅವರೊಂದಿಗೆ ಬಾಳುತ್ತೇವೆ ಎಂದು ನಿರ್ಧರಿಸಿಕೊಂಡ ಪ್ರೇಮಿಗಳಿಗೆ ಬದುಕಲು ಅವಕಾಶ ಮಾಡಿಕೊಡಿ ಎಂದಷ್ಟೇ ...
                  ಜಾತಿ ಎಂಬುದು ಕೆಲಸದ ಆದಾರದ ಮೇಲೆ ಶುರುವಾಗಿದ್ದು ಅಚಾರ, ಸಂಸ್ಕೃತಿ ಎಂಬ ಹೆಸರಲ್ಲಿ ಹೆಚ್ಚುತ್ತಾ ಹೋಗಿ ತಾವು ಮನುಜರು ಎಂಬುದನ್ನ ಮರೆತು ಬರಿ ದ್ವೇಷದಲ್ಲೇ ಮಿಂದುಹೋಗುತ್ತಿದೆಯೇ ಹೊರತು ನೆಮ್ಮದಿಯ ದಾರಿಯ ಕಡೆ ಕೈ ತೋರಲು ಬಿಡುತ್ತಿಲ್ಲ .ಕಟ್ಟುಪಾಡುಗಳನ್ನು ಒಂದನ್ನು ಪಾಲಿಸದೆ ತನ್ನ ಇಷ್ಟಕ್ಕೆ ಇದ್ದು ಹೆಸರಿಗೆ ಮಾತ್ರ ತನ್ನ ಜಾತಿಯನ್ನು ಹೇಳಿ ಹೊಗಳಿಕೊಳ್ಳುತ್ತಾ ಬದುಕುವವರು ಎಷ್ಟು ಜನವೋ ..
 ಇದು ತಿಳಿದಿದ್ದರು ಜಾತಿಯ ನಿಯಮಗಳನ್ನು ಅನುಸರಿಸದಿದ್ದರು ಪರವಾಗಿಲ್ಲ ತನ್ನ ಜಾತಿಯವರನ್ನೇ ಮದುವೆಯಾಗಬೇಕು ಎಂಬ ಹಠ ಹಾಗಿದ್ದಲ್ಲೇ ಮರ್ಯಾದಿ ಉಳಿಯೋದು ಎಂಬ ತಪ್ಪು ನಂಬಿಕೆಯನ್ನು ದಯವಿಟ್ಟು ಮರೆತುಬಿಡಬೇಕು  .
  ಜಾತಿ ಬೇಧ ಬಿಟ್ಟು ಮಾನವರಾಗಿ ಸಹಬಾಳ್ವೆಯಿಂದ ಬದುಕಬೇಕು ಎಂಬುದು ನನ್ನ ನಂಬಿಕೆ ಇದಕ್ಕೆ ನಿಮ್ಮ ಅಭಿಪ್ರಾಯ ತಿಳಿಸಿ ......                 
 

 

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet