ರಾಷ್ಟ್ರಪತಿ ಭವನದ ಕಾರ್ಯ ವೈಖರಿ ಎಲ್ಲದಕ್ಕೂ ಮಾದರಿಯಾಗಿದೆಯೇ?

ರಾಷ್ಟ್ರಪತಿ ಭವನದ ಕಾರ್ಯ ವೈಖರಿ ಎಲ್ಲದಕ್ಕೂ ಮಾದರಿಯಾಗಿದೆಯೇ?

ಚಿತ್ರ

(ವಿದ್ಯುತ್ ಬಿಲ್ಲು ದಿನಕ್ಕೆ ೨ ಲಕ್ಷವಾದರೆ ಸಾಮಾನ್ಯ ನಾಗರಿಕನ ಗತಿ ಏನು) ! ಈಗ ಮಾಹಿತಿ ದೊರಕಿಸಿರುವ ಪ್ರಕಾರ ನಮ್ಮ ರಾಷ್ಟ್ರಪತಿ ಭವನದ ಒಂದು ದಿನದ ವಿದ್ಯುತ್ ಬಿಲ್ ೨ ಲಕ್ಷ ರೂಪಾಯಿಗಳು  ಕರ್ನಾಲದಲ್ಲಿರುವ ಆರ್. ಟಿ. ಐ. ಕಾರ್ಯಕರ್ತ 'ರಾಜೇಶ್ ಶರ್ಮ' ತಯಾರಿಸಿದ ಮಾಹಿತಿ ಪಟ್ಟಿಯ ಅನುಸಾರ ೨೦೧೧- ೧೨ ರಲ್ಲಿ ೭ ಕೋಟಿ ೪ ಲಕ್ಷ  ೯೪  ಸಾವಿರ ೩೮೫ ರೂಪಾಯಿತ್ ಬಿಲ್ಲಿನ ಮೊತ್ತ ಭರಿಸಲಾಗಿದೆ. ಅಂದರೆ,  ಇದರ ಪ್ರಕಾರ ಪ್ರತಿ ತಿಂಗಳ ಮೊತ್ತ ೫೮ ಲಕ್ಷ, ೭೪ ಸಾವಿರ, ೫೩೨ ರೂಪಾಯಿ ಬಿಲ್ ಮೊತ್ತವಾಗಿದೆ. ಅಂದರೆ ದಿವಸಕ್ಕೆ   ೧ ಲಕ್ಷ ೯೩ ಸಾವಿರ ೧೩೫ ರೂಪಾಯಿಗಳು  (ಹತ್ತಿರ ಹತ್ತಿರ ೨ ಲಕ್ಷ ರೂಪಾಯಿಗಳು)  ರಾಷ್ಟ್ರದ ಗ್ರಾಮೀಣ ಭಾಗದ ನಮ್ಮ ರೈತರಿಗೆ ಬೆಸಾಯಮಾಡಲು ಪಂಪ್ ಸೆಟ್ ಚಾಲುಮಾಡಲು ಸರಿಯಾದ ವಿದ್ಯುತ್ ನ  ಪೂರ್ತಿ ವ್ಯವಸ್ಥೆ ಇಲ್ಲ.  ೧೦-೧೨ ಗಂಟೆ ಲೋಡ್ ಶೆಡ್ಡಿಂಗ್ ಇರುವಾಗ ದೆಹಲಿಯ ನಮ್ಮ ರಾಷ್ಟ್ರಪತಿಗಳು ಹೀಗೆ ವಿದ್ಯುತ್ತಿನ  ದುಂದುವೆಚ್ಚ ಮಾಡುವುದು ಯಾವ ನ್ಯಾಯ ? 'ರಾಷ್ಟ್ರಪತಿ ಭವನ ಒಂದು ಮಹಾ ಬಿಳಿ ಸಲಗ' ! ಅದರ ಹೊಟ್ಟೆಬಾಕತನವನ್ನು ತಮ್ಮ ಪ್ರತಿಷ್ಟೆಯ ಸಂಕೇತವಾಗಿ ಬ್ರಿಟಿಷರು ಬಳಸುತ್ತಿದ್ದರು. ನಿರಾಯಾಸವಾಗಿ ಬ್ರಿಟಿಷ್ ಸರಕಾರಕ್ಕೆ ಸಿಕ್ಕ ಭಾರತದೇಶದ ಜನರ ಮಹಾನಾಯಕನಿಗೆ(ಗವರ್ನರ್ ಜನರಲ್ ಗೆ) ಇಂತಹ ವೈಭವದ ಭವನದ ಅಗತ್ಯ ಆಗ ಅವರಿಗಿತ್ತು. ವಿಶ್ವದಲ್ಲೆಲ್ಲಾ ತಮ್ಮ ಕಾಲಿಟ್ಟು ಬೃಹತ್ ಬ್ರಿಟಿಷ್ ಸಾಮ್ರಾಜ್ಯವನ್ನು ಸ್ಥಾಪಿಸಿ ಭಾರತದಂತಹ ಮಹಾ-ಉಪಖಂಡದ ನಾಯಕ ಎಂದು ಹೇಳಿ ಮೀಸೆ ತಿರುಗಿಸುವ ಗತ್ತನ್ನು ಅವರು ಸಂಪಾದಿಸಿದ್ದರು ಸಹಿತ. ಅಮೆರಿಕವನ್ನೊಂದು ಬಿಟ್ಟು ಅವರಿಗೆ ಸರಿಸಾಟಿ ಯಾರೂ ಇರಲಿಲ್ಲ. ಅದಕ್ಕಾಗಿ ಅವರು ತಮ್ಮ ಗವರ್ನರ್ ಜನರಲ್ ಗಾಗಿ ಅಂತಹ ಅದ್ಭುತ ಭವನವನ್ನು ನಿರ್ಮಿಸುವುದಕ್ಕೆ ಬಲವಾದ ಕಾರಣಗಳಿದ್ದವು. 'ದೆಹಲಿ ದರ್ಬಾರ್' ಎಂದೇ ಹೆಸರಾದ ಸಮಾರಂಭ :(೫ ನೆಯ ಜಾರ್ಜ್ ಮತ್ತು ಅವರ ಪತ್ನಿ ಮೇರಿ ಅದಕ್ಕಾಗಿಯೆ ಬಂದಿದ್ದರು)(ನವ ದೆಹಲಿಯಲ್ಲಿ ಒಂದು ಭಾರಿ ಭವನದ ನಿರ್ಮಾಣದ ಯೋಜನೆಯನ್ನು ಅನುಮೋದಿಸಲು ಆಯೋಜಿಸಲಾದ ಸಮಾರಂಭ. ಕಲ್ಕತ್ತಾದಿಂದ ದೆಹಲಿಗೆ ರಾಜಧಾನಿಯ ವರ್ಗಾವಣೆಯ ಬಗ್ಗೆ ಭಾರಿ ಯೋಜನೆಯ ತಯಾರಿ ಇಲ್ಲಿ ಜರುಗಿತ್ತು.)ಆ ಸಮಯದಲ್ಲಿ ನಮ್ಮ ದೇಶದ ೬ ನೂರಕ್ಕೂ ಹೆಚ್ಚು ಮಹಾರಾಜರುಗಳು 'ದೆಹಲಿ ದರ್ಬಾರ್' ಗೆ ಆಗಮಿಸಿ ತಮ್ಮ ಧಣಿ, ಸಾಮ್ರಾಟ ಇಂಗ್ಲೆಂಡ್, ಭಾರತದ ಉಪಖಂಡದ ಚಕ್ರವರ್ತಿ ೫ ನೆಯ ಜಾರ್ಜ್ ರಿಗೆ ಸಲಾಮು ಹೊಡೆದು, ಬಳುಕುತ್ತಾ ಬಂದು ಹಿಂದೆ ತಿರುಗಿ ನೋಡದೆ ನಡೆದು ತಮ್ಮ ಆಸನಗಳನ್ನು  ಗ್ರಹಣ ಮಾಡುವ ಚಿತ್ರಗಳನ್ನು ನಾವು 'ಯು ಟ್ಯೂಬ್'ನಲ್ಲಿ ನೋಡಿದರೆ ಮುಜುಗರವಾಗುತ್ತದೆ. 'ಅಯ್ಯೋ' ಎಂದು ಕಸಿವಿಸಿಗೊಳ್ಳಬೇಕೆನಿಸುತ್ತದೆ.  ಆ ರಾಜರು ಹೆಂಗಸರ ತರಹ, ಕಿವಿಯಲ್ಲಿ ಲೋಲಾಕು, ದೊಡ್ಡ ದೊಡ್ಡ ಮಣಿಹಾರಗಳನ್ನು ಧರಿಸಿ ಕಿಂಕಾಪಿನ ಹೊಳೆಯುವ ಉಡುಪು ಧರಿಸಿ ರಾಜನರ್ತಕಿಯರ ತರಹ ಕಾಣಿಸುತ್ತಿದ್ದರು. ನಮ್ಮ ಮೈಸೂರು ಮಹಾರಾಜರೂ ಆ ಲೈನ್ ನಲ್ಲಿ  ಇದ್ದರಲ್ಲ.  'ರಬ್ಬರ್ ಸ್ಟಾಂಪ್' ಎಂದು ಸುಮ್ಮನೆ ಹೇಳುವ ಈ ರಾಷ್ಟ್ರಪತಿಗಳಿಗೆ ಅದೆಷ್ಟು ಸವಲತ್ತುಗಳೇಕೋ  ?  ರಾಷ್ಟ್ರಪತಿ ನಿವಾಸದ ಸುಮಾರು ೩೪೦ ರೂಮ್ ಗಳ ಬೃಹತ್ ಭವನದ ಅದೆಷ್ಟೋ  ಕೊಠಡಿಗಳ ಬಾಗಿಲು ತೆರೆದು ತೆಗೆದು ನೋಡಲು ಆಗಿಲ್ಲವೆಂದು ವರದಿ ತಿಳಿಸುತ್ತದೆ. ಕುದುರೆ ಸಾರೋಟ್ ನಲ್ಲಿ ಓಡಾಟ, ವಿದೇಶಗಳಿಗೆ ಭೇಟಿ ಮಾಡಿ ರಾಷ್ಟ್ರದ  ಬೊಕ್ಕಸ ಖಾಲಿಮಾಡುವ ಸವಲತ್ತು ಎಲ್ಲರಿಗೂ ಇವೆ.  ಭಾರಿ ರಕ್ಷಣಾ ಪಡೆ, ಎಲ್ಲೆಲ್ಲೂ ಆದ್ಯತೆ, ಮರ್ಯಾದೆ, ತಮ್ಮ ಅವಧಿಯಲ್ಲಿ  ಏನು ಕೆಲಸ ಸಾಧಿಸಿದರು, ಅವರ ಕೆಲಸದ ವೈಖರಿ ಹೇಗಿತ್ತು. ರಾಷ್ಟ್ರಕ್ಕೆ ಅವರ ಕೊಡುಗೆಯೇನು ಇತ್ಯಾದಿಗಳ ಬಗ್ಗೆ ಒಂದು ವರದಿಕೊಡುವುದು ಅತಿ ಅನಿವಾರ್ಯ. ಈ ವರದಿಯನ್ನು ಒಬ್ಬ ನಿಶ್ಠಾವಂತ ಖಾಸಗಿ ವ್ಯಕ್ತಿಯನ್ನೊಳಗೊಂಡ ಸಮಿತಿ ತಯಾರಿಸಬೇಕು.(ಎನ್. ಆರ್. ನಾರಾಯಣ ಮೂರ್ತಿಯ ಸ್ಥರದಲ್ಲಿರುವವರು)ರಾಷ್ಟ್ರಪತಿ ಬಹು ಬಲವಂತ :ರಾಷ್ಟ್ರಪತಿ ಮೂರು ಸೇನೆಗಳ ಪ್ರಧಾನ ದಂಡನಾಯಕ. ಅಂದರೆ ಅಪಾರ ಬಲವಂತ; ಸಮಯ ಬಂದರೆ ಪ್ರಧಾನಮಂತ್ರಿಯವರ ಕೆಟ್ಟಕೆಲಸವನ್ನು ಖಂಡಿಸಿ ತರಾಟೆಗೆ ತೆಗೆದುಕೊಳ್ಳಬಹುದು.  ಕೇವಲ ಮುದ್ರೆ ಗುರುವಲ್ಲ. ಎಲೆಕ್ಷನ್ ಮಹಾನಿರ್ದೇಶಕ ಶ್ರೀ ಶೇಷನ್  ರಿಗೆ ಇದೇ ಪದವಿ ದೊರೆತಿದ್ದಿದ್ದರೆ ಅವರು ತೋರಿಸುತ್ತಿದ್ದರು ಹೇಗೆ ರಾಷ್ಟ್ರಪತಿ ದೇಶದ ಸುವ್ಯವಸ್ಥೆಗೆ ಮುಂದಾಳಾಗಿ ಎಲ್ಲರಿಗೂ ಮಾದರಿಯಾಗಬಹುದೆಂದು !ರಾಷ್ಟ್ರಪತಿ ನಿವಾಸದ ಅಪರದಂಡ ವನ್ನು ವಿರೋಧಿಸಿ ವರ್ತಿಸಿದ ರಾಷ್ಟ್ರಪತಿಗಳು  ಕೆಲವೇ ರಾಷ್ಟ್ರಪತಿಗಳನ್ನು ಹೆಸರಿಸಬಹುದು. ನಮ್ಮದೇಶದ  ಮೊಟ್ಟಮೊದಲ ಗವರ್ನರ್ ಜನರಲ್, ಚಕ್ರವರ್ತಿ ರಾಜಗೋಪಾಲ ಚಾರ್ಯರು, ಸರ್ವೇಪಲ್ಲಿ ರಾಧಾಕೃಷ್ಣನ್.  ಡಾ. ಕಲಾಂ ಕೇವಲ ದೊಡ್ಡ ದಾರ್ಶನಿಕರಾಗದೆ, ವಿಜ್ಞಾನಿಯಾಗದೆ, ಒಬ್ಬ ಒಳ್ಳೆಯ ರಾಷ್ಟ್ರಪತಿಯ ಹುದ್ದೆಗೆ ಬೇಕಾದ ಕೌಶಲ್ಯವನ್ನು ಸಂಪಾದಿಸಿ, ತಮ್ಮ ಕರ್ತವ್ಯ ನಿರ್ವಹಣೆಯನ್ನು ಮಾಡಿ ಒಂದು 'ದಾಖಲೆ' ನಿರ್ಮಿಸಬಹುದಾದ  ಸದವಕಾಶವನ್ನು ಕಳೆದುಕೊಂಡರು.ಹೌದಪ್ಪ ಬೇಡ :ನಮಗೆ ಒಬ್ಬ ವಿಜ್ಞಾನಿ, ಶಾಸ್ತ್ರಜ್ಞ, ಗುಣಸಂಪನ್ನನಾದ ವ್ಯಕ್ತಿ ಅಂತಹ ಉಚ್ಚ ಹುದ್ದೆಗೆ ಬೇಕೇ ಬೇಕು. ಆದರೆ ಆ ಹುದ್ದೆ ಕೇವಲ ಸಹಿಮಾಡುವ ಸರಕಾರದ 'ಪ್ರಧಾನ ಮಂತ್ರಿಗೆ 'ಹೌದಪ್ಪಾ' ಆಗದೆ, ಸಮಯ ಬಂದಾಗ 'ಇದು ತಪ್ಪು ಸರಿಯಿಲ್ಲ' ಎಂದು ಜೋರಾಗಿ ಹೇಳುವ ದಾರ್ಷ್ಟ್ಯವಿರುವ ವ್ಯಕ್ತಿಯ ಅವಶ್ಯಕತೆ ಇದೆ. ನನಗೇನೂ ಅಧಿಕಾರವಿಲ್ಲ. 'ನಾನೊಬ್ಬ ಮುದ್ರೆ ಗುರು' ಎನ್ನುವ ವ್ಯಕ್ತಿ ಖಂಡಿತ ಆ ಪದವಿಗೆ ಅನರ್ಹ ! ರಾಷ್ಟ್ರಪತಿ  ದೇಶದ ಅತಿ ಹೆಚ್ಚು ಬಲವಂತ ; ಆತನಷ್ಟು ಬಲಶಾಲಿಗಳು ಯಾರೂ ಇಲ್ಲ ಎನ್ನುವ ಮಾತನ್ನು ಎಲ್ಲರಿಗೂ ತಿಳಿಯ ಹೇಳಿ ಹುಶಾರ್ ನೀವೆಲ್ಲಾ ಬೇಕಾಬಿಟ್ಟಿ ವರ್ತಿಸಿದರೆ ನಾನು ಬುದ್ಧಿಕಲಿಸುತ್ತೇನೆ ಎನ್ನುವ ದಿಟ್ಟ ವ್ಯಕ್ತಿಯಾಗಿರಬೇಕು. ಹಾ . ಅದಕ್ಕಾಗಿ ಚೆನ್ನಾಗಿ ಕಷ್ಟಪಟ್ಟು ಆತ ತನ್ನ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು. ಆತನ ಸಮಯದಲ್ಲಿ ಬರುವ ಸಮಸ್ಯೆಗಳನ್ನು ಎದುರಿಸಲು ಸಿದ್ಧನಾಗಬೇಕು. ಒಂದು ಬ್ಯಾಂಕಿನಿಂದ ಮತ್ತೊಂದು ಬ್ಯಾಂಕಿಗೆ ಬದಲಾಗಿ ಹೋಗುವ ಒಬ್ಬ ವ್ಯವಸ್ಥಾಪಕನಂತೆ !ರಾಷ್ಟ್ರಪತಿ ಸ್ಥಾನಕ್ಕೆ ಬಂದ ವ್ಯಕ್ತಿಗಳು ಸಾಮಾನ್ಯವಾಗಿ ಆರಾಮಾಗಿ ಕಾಲಕಳೆದು ನಿವೃತ್ತರಾಗಲು ಬಯಸುವ ಮಾನಸಿಕ ಸಿದ್ಧತೆ ಇರುವವರು :  * ಹೆಚ್ಚಾದವರು ತಮಗೆ ಅನಿರೀಕ್ಷಿತವಾಗಿ ಸಿಕ್ಕ ಸನ್ನಿವೇಶದ/ಅವಕಾಶವನ್ನು ಬಳಸಿಕೊಂಡು ಹಾಯಾಗಿ ಯಾವ ವಿವಾದಗಳಿಗೂ ತಮ್ಮ ಸ್ಪಂದನೆ ಕೊಡದೆ  ೫ ವರ್ಷ ಕಾಲ ನೂಕುವ ಕಲೆಯಲ್ಲಿ ಪರಿಣಿತರು. * ಪ್ರೆಸಿಡೆಂಟ್ ಮಾಡಬೇಕಾದ ಕರ್ತವ್ಯಗಳನ್ನು  ಲೆಕ್ಕಕ್ಕೆ ತೆಗೆದುಕೊಂಡರೆ ಈಗಿನ ಪ್ರಣಬ್ ಮುಖರ್ಜಿಯೋಬ್ಬರು ಹೆಸರಿಸಲು ಯೋಗ್ಯರು ಎನ್ನಿಸುತ್ತದೆ. ಬಂದ ಕೂಡಲೇ ರಾಷ್ಟ್ರದ ದೊಡ್ಡ ಆತಂಕವಾದಿ ಕಸಬ್ ನನ್ನು  ಜೈಲಿನಲ್ಲಿಟ್ಟು  ಪೋಷಿಸುತ್ತಿದ್ದ  ಭಾರಿ ದುಬಾರಿ ವ್ಯವಸ್ಥೆಗೆ ಒಂದು ಮಾರ್ಗ ಕಲ್ಪಿಸಿದರು, * ಇನ್ನೊಬ್ಬ ರಾಷ್ಟ್ರಪತಿ ಭವನವನ್ನೇ ನೆಲಸಮ ಮಾಡುವ ಆಶೆಯಿಂದ ಬಂದ  ಅಫ್ಜಲ್ ಗುರುವಿಗೆ ಫಾಸಿ ಸಜೆಯನ್ನು ವಿಧಿಸಲು ಆಜ್ಞೆಯನ್ನು ಮಂಜೂರು ಮಾಡಿದ್ದು ಒಂದು ಚಾರಿತ್ರ್ಯಿಕ ಘಟನೆ.  * ಈ ಸಮಯದಲ್ಲಿ ಸಚಿವರಾಗಿದ್ದ ಶುಶೀಲ್ ಕುಮಾರ್ ಶಿಂಧೆಯವರು ಸ್ಮರಣೀಯರು.  ಇಂತಹ ಸರಕಾರವನ್ನು ನಿಯಂತ್ರಿಸುವ ಮಾರ್ಗದರ್ಶನ ಮಾಡುವ ಕೆಲಸದ ಮುಂದಾಳತ್ವವನ್ನು ಸಮರ್ಥವಾಗಿ ವಹಿಸಲೆಂದೇ  ಅವರಿಗೆ ಕುದುರೆ ಸಾರೋಟ್ ದೊಡ್ಡ ಭವನ ಭಾರಿ ವೇತನ ಮಹಾ ಮರ್ಯಾದೆಗಳು ಇವನ್ನು ನಮ್ಮ ಸಂವಿಧಾನ ಒದಗಿಸಿಕೊಟ್ಟಿದೆ. ಖಂಡಿತ ಅವರು ರಬ್ಬರ್ ಸ್ಟಾಂಪ್ ಅಲ್ಲ.ಪ್ರಥಮ ಮಹಿಳಾ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಬೇರೆ ಎಲ್ಲಾ ಹೆಸರಿಸಬಹುದಾದ  ದುಬಾರಿ ರಾಷ್ಟ್ರಪತಿಗಳಿಗಿಂತ  ಮುಂದೆ ಸಾಗಿ ಒಂದು ಮಹಾ ದಾಖಲೆ ಸೃಷ್ಟಿಸಿದರು.ಡಾ. ಅಬ್ದುಲ್ ಕಲಾಂ :ಹೆಸರಾಂತ ವಿಜ್ಞಾನಿ, ಅತ್ಯುತ್ತಮ ಉಪಾಧ್ಯಾಯ, ಸಜ್ಜನ ವ್ಯಕ್ತಿ ರಾಷ್ಟ್ರಪತಿಯಾಗಿ ಅವರ ಸಮಯದಲ್ಲಿ ರಾಷ್ಟ್ರದಮಹಾನ್ ಆತಂಕವಾದಿಗೆ ವಿಧಿಸಬೇಕಾದ ನಿರ್ಧಾರವನ್ನು ತೆಗೆದುಕೊಳ್ಳದೆ ತಪ್ಪಿತಸ್ಥರಿಗೆ ಶಿಕ್ಷೇ ಅನಿವಾರ್ಯ ಎನ್ನುವ ಮಾತಾಡಬಹುದಿತ್ತು. ಆದರೆ ಅದನ್ನು ಅವರು ಹೇಳಲಿಲ್ಲ. ಪ್ರಪ್ರಥಮ ಮಹಿಳಾ ರಾಷ್ಟ್ರಾ ಧ್ಯಕ್ಷೆಯಾಗಿ ಯಾವ ವಿಶೇಷತೆ ಯನ್ನು ಪ್ರದರ್ಶಿಸದೆ ದಿನ ನೂಕಿ ವಿಶ್ರಾಂತ ರಾದರುಪ್ರತಿಭಾ ಪಾಟೀಲ್ ಮಹಿಳೆಯೊಬ್ಬರು ರಾಷ್ತ್ರಪತಿಯಾಗಬೇಕು ಎನ್ನುವ ರಾಷ್ಟ್ರದ  ಆಶಯಕ್ಕೆ ಒಳಪಟ್ಟು ಬಂದ ವ್ಯಕ್ತಿ. ಯಾವ ಒಳ್ಳೆಯ ಕೆಲಸವನ್ನೂ ಮಾಡಲಿಲ್ಲ. ತಮ್ಮ ವಿದೇಶಯಾತ್ರೆಯ ವಿಚ್ಚಕ್ಕೆ ಒಂದು ಹೊಸದಾಖಲೆ ಸೃಷ್ಟಿಸಿ ವಿವಾದಾಸ್ಪದವಾದ ರೀತಿಯಲ್ಲಿ ನಿವೃತ್ತರಾದರು. (ಭವನದ ಪರಿಸರದಲ್ಲಿ ಸೋಲಾರ್ ವ್ಯವಸ್ಥೆಯಲ್ಲಿ ವಿದ್ಯುತ್ ಸರಬರಾಜಿಗೆ ಸ್ವಲ್ಪ ಗಮನ ಕೊಟ್ಟರು). 'ಕರ್ನಾಟಕ ಮಲ್ಲ, ದಿನ ಪತ್ರಿಕೆ'  (ಮುಂಬೈ)(೧೭-೦೭-೨೦೧೩)

-ವಿವರಣೆ, ಹೊರಂಲವೆಂ, ಮುಂಬೈ   

Rating
No votes yet

Comments

Submitted by venkatesh Wed, 07/17/2013 - 16:34

ಪ್ರತಿಯೊಬ್ಬ ವ್ಯಕ್ತಿಗೂ 'ಪರ್ಫಾರ್ಮೆನ್ಸ್ ರಿಪೋರ್ಟ್' ಇರಬೇಕು. ರಾಷ್ಟ್ರಪತಿಯೂ ಇದಕ್ಕೆ ಬದ್ದನು. ಸಾರ್ವಜನಿಕ ಕ್ಷೇತ್ರದಲ್ಲಿ ವರ್ಷ ವರ್ಷ ನಡೆಸುವ ವಾರ್ಷಿಕ ಆಯವ್ಯಯ ರಿಪೋರ್ಟ್ ತಯಾರುರುರ್ ಮಾಡಿ ಸಮಿತಿಯ ಮುಂದೆ ಒಪ್ಪಿಸುವಂತೆ, ಇಲ್ಲಿಯೂ ನಡೆಸುವುದು ಅನಿವಾರ್ಯ. ಈಗಿನ ಚಟರ್ಜಿಯವರು ಇದಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎನ್ನುವದರ ಮೇಲೆ ಅವರ ವ್ಯಕ್ತಿತ್ವ ನಿಂತಿದೆ.
ಇದು ವರ್ಷಾನುಗಟ್ಟಲೆ ನಡೆದುಕೊಂಡು ಬಂದಿದೆ. ನಾನ್ಯಾರು ಬದಲಾಯಿಸಲು
ಇದರ ಬಗ್ಗೆ ನಾನು ಅಧಿಕಾರಿಗಳನ್ನು ಕಂಡು ಕಡಿಮೆ ಮಾಡಲು ಪ್ರಯತ್ನಿಸುತ್ತೇನೆ.
ಅರೆ, ಇದು ಅತಿ ಹೆಚ್ಚು ವೆಚ್ಚ. ನನಗೆ ಸುತಾರಾಂ ಇದು ಇಷ್ಟವಿಲ್ಲ. ಇದನ್ನು ನನ್ನ ಗಮನಕ್ಕೆ ತಂದ ಮೀಡಿಯಾಕ್ಕೆ ಧನ್ಯವಾದಗಳು.
ರಾಷ್ಟ್ರಪತಿ ಭವನದಲ್ಲಿ ಇಂತಹ ಖರ್ಚುಗಳು ಆಗುತ್ತಲೇ ಇರುತ್ತವೆ. ನಾನೊಬ್ಬ ಮಾಡಿದರೆ ಏನು ಉಪಯೋಗ.
ಹಾಗೆ ನೋಡಿದರೆ ಪ್ರತಿಭಾಡಿದಿ ಗೆ ಹೋಲಿಸಿದರೆ ನನ್ನದು ಯಾವ ಲೆಕ್ಖವು ಇಲ್ಲ.
ಧನಾತ್ಮಕವಾದ ಅವರ ಉತ್ತರಕ್ಕೆ ಕಾಯೋಣವೇ ?!