೧. ಹೊಗೆ ಹಾಕ್ಸಿ ಬಿಟ್ಟವು ........ಕತ್ತೆಗಳು..."
೧. ಹೊಗೆ ಹಾಕ್ಸಿ ಬಿಟ್ಟವು ........ಕತ್ತೆಗಳು..."
ಒಮ್ಮೆ ಸಂಜೆ ಮನೆಗೆ ತಡವಾಗಿ ಬಂದ ಮನೆಗೆ ಬಂದ ಮರಿ ತ್ಯಾಂಪನನ್ನು
ಅಟಕಾಯಿಸಿ ತ್ಯಾಂಪಿ ಕೇಳಿದಳು ಯಾಕೋ ತಡ?
"ಸ್ಪೆಶೆಲ್ ಕ್ಲಾಸ್ ಇತ್ತು " ಮರಿ ತ್ಯಾಂಪನ ಉತ್ತರ ಸಿಧ್ಧವಾಗಿತ್ತು.
ತ್ಯಾಂಪಿ ಅವನ ಜಂಗಮವಾಣಿಯನ್ನ ತೆಗೆದು ಅವನ ಸ್ನೇಹಿತರಿಗೆ ಕರೆ ಮಾಡಿದಳು.
ಹೌದು ಆಂಟಿ ಇವತ್ತು ಸ್ಪೆಷೆಲ್ ಕ್ಲಾಸ್ ಇತ್ತು ಆತ ನಮ್ಮೊಂದಿಗೇ ಇದ್ದ" ಮೊದಲಿನ ಹೇಳಿದ.
"ಈಗ ತಾನೇ ಹೊರಹೊರಟ ಆಂಟಿ" ಇನ್ನೊಬ್ಬನೆಂದ.
ಇಲ್ಲೇ ಇದ್ದಾನೆ ಆಂಟಿ ಫೋನು ಅವನಿಗೆ ಕೊಡಲಾ" ಎಂದ ಮತ್ತೊಬ್ಬ.
ಮತ್ತೊಬ್ಬ ಎಲ್ಲಾ ಸೀಮೆಗಳನ್ನೂ ಉಲ್ಲಂಘಿಸುತ್ತಾ ನುಡಿದ" ಹೇಳಮ್ಮಾ ಏನು ವಿಷಯ..?"
"ಕತ್ತೆಗಳಿರಾ ಎಲ್ಲ ಸೇರಿ ನನ್ ಹೊಗೆ ಹಾಕ್ಸಿ ಬಿಟ್ರಲ್ಲಾ, ನೀವೆಲ್ಲಾ ನನ್ನ ಸ್ನೇಹಿತರಾ?, ಹೋದ ಜನ್ಮದ ವೈರಿಗಳು" ಎಂದು ಅಲವತ್ತುಕೊಂಡ ಮರಿತ್ಯಾಂಪ.
೨. ರಿಸಲ್ಟ್!!!!!!!!
ತರ್ಕಾರಿ ಸಿದ್ದನ ಮಗ ಮರಿಸಿದ್ದ ಮರಿತ್ಯಾಂಪನ ಚಡ್ಡಿ ದೋಸ್ತ್.
ಏಯ್ ಮಚಾ ಶಾಲೆಗೆ ಹೋಗ್ತಾ ಇದ್ದೀಯಾ ಪಲಿತಾಂಶ ( ) ನೋಡೋಕೆ‘ ಕೇಳಿದ ಮರಿತ್ಯಾಂಪ.
ಹೌದು ಕಲಾ ಏನ್ ವಿಸ್ಯಾ..??
ಹಾಗಾದ್ರೆ ಜತೇಲಿ ನಂದೂ ನೋಡ್ಕ ಬಾ, ಆದ್ರೆ ಹುಷಾರು ಜತೆಲೇ ಅಮ್ಮ ಗೂರ್ಖ ನ ತರಾ ಕಾವ್ಲ್ ಕಾಯ್ತಾ ಇರ್ತಾಳೆ.
ಅದ್ಕೇ..? ಮರಿ ಸಿದ್ದ
ಹೀಂಗ್ ಮಾಡಾ, ನಂದು ಒಂದ್ರಗೆ ಫೈಲ್ ಆದ್ರೆ ದೋಸೆ ಮಾಡಿದ್ದಾರೆ ಅನ್ನು, ಎರಡ್ರಾಗೆ ಫೈಲ್ ಆದ್ರೆ ಇಡ್ಲಿ ಸಾಂಬಾರ್ ಮಾಡಿದ್ದಾರೆ ಅನ್ನು‘
ಮೂರರಂಗೆ ಆರೆ‘ ಮರಿ ಸಿದ್ದ.
‘ನಿಂಗೆ ಯಾವಾಗ್ಲೂ ಡೌಟೇ, ಅಪಶಕುನ್ದ್ ಮುಂಡೇದು, ಇಡ್ಲಿ ಸಾಂಬಾರ್ ಚಟ್ಣಿ ಅನ್ನೋ‘ ಬೇಗ್ ಹಾಳಾಗಿ ಹೋಗ್ ಅಮ್ಮ ಬೈತಾಳೆ ಜಾಸ್ತಿ ಮಾತಾಡೋ ಹಾಂಗಿಲ್ಲ‘
‘ಗೊತ್ತಾಯ್ತು ಬುಡು ಸಿವಾ‘ ಅರ್ಥ ಆಯ್ತು ಮರಿ ಸಿದ್ದಂಗೆ.
--------------
ಅಮ್ಮ ಏನಾರೂ ನಂಗೆ ಫೋನ್ ಬಂತಾ..?‘ ಕೇಳಿದ ಮರಿತ್ಯಾಂಪ ಅಮ್ಮಂಗೆ.
‘ಹೌದು ಅದ್ಯಾರೋ ಮರಿ ಸಿದ್ದ ಅಂತೆ‘ ತ್ಯಾಂಪಿ ಎಂದಳು“
‘ಏನಾಯ್ತು, ಏನ್ ತಿಂಡಿಯಂತೆ ಇವತ್ತು..?? ಮರಿ ತ್ಯಾಂಪ“
‘ಅಲ್ಲ, ಅದೇನೋ... ಅಂ“ ತ್ಯಾಂಪಿಗೆ ಸ್ವಲ್ಪ ಮರೆವು.
ಏನಂದ ಇಡ್ಲಿ ಅಂದನಾ ದೋಸೇನ..? ಆತುರ ಮರಿತ್ಯಾಂಪನಿಗೆ.
‘ಅದು ಯಾವ್ದೂ ಅಲ್ಲ ಅದೇನ್ ತಿಂತಾರೋ ಬೆಳಿಗ್ಗೆ ಬೆಳಿಗ್ಗೆ ಈ ಜನ‘ ತ್ಯಾಂಪಿ.
‘ಏನಾಯ್ತಮ್ಮ...‘ ಮರಿ ತ್ಯಾಂಪ.
ಅದೇನೋ ತರಕಾರೀ ಪಲಾವ್ ಅಂತೆ ನೋಡು., ಹೋಗ್ಲೀ ನಿಂಗೆ ಬಿಸಿ ಬಿಸಿ ಇಡ್ಲಿ ಕೊಡ್ತೀನಿ ಬಾ
...................................????????
Comments
ಉ: ೧. ಹೊಗೆ ಹಾಕ್ಸಿ ಬಿಟ್ಟವು ........ಕತ್ತೆಗಳು..."
ತರಕಾರಿ ಪಲಾವ್.....ಹಹ... ! ನಮ್ಮ ಇಂಜಿನಿಯರಿಂಗ್ ಕಾಲೇಜು ದಿನಗಳ ಜ್ಞಾಪಕ ಬಂತು ಗೋಪಿನಾಥರೆ :-) ಆಗೆಲ್ಲ ಒಂದೊಂದು ಸಬ್ಜೆಕ್ಟಿಗೂ ಒಂದೊಂದು 'ಸ್ಟಾರ್' ಲೆಕ್ಕ. ಹೀಗಾಗಿ - ಟು ಸ್ಟಾರ್, ತ್ರಿ ಸ್ಟಾರ್, ಫೋರ್ ಸ್ಟಾರ್...ಗಳಿಂದಲೆ ಗೆಳೆಯರನ್ನು ಗುರುತಿಸುವ ಚಟ. ಐದು ಸ್ಟಾರಿಗೂ ಹೆಚ್ಚಿದ್ದರೆ ಮುಂದಿನ ಸೆಮಿಸ್ಟರಿಗೆ ಹೋಗುವಂತಿಲ್ಲ - ಒಂದು ವರ್ಷ ಕೂತಿದ್ದೆ ಎಲ್ಲಾ ಕ್ಲಿಯರ್ ಮಾಡಿಕೊಂಡು ಮುಂದುವರೆಯಬೇಕು - ಹಾಗೆ ಕೂತವರಿಗೆ ದಂಡಯಾತ್ರೆ ಪಟ್ಟ! ಮರಿ ತ್ಯಾಂಪ ಅದೆಲ್ಲವನ್ನು ಒಂದೆ ಸಾರಿ ನೆನಪಿಸಿಬಿಟ್ಟ!
In reply to ಉ: ೧. ಹೊಗೆ ಹಾಕ್ಸಿ ಬಿಟ್ಟವು ........ಕತ್ತೆಗಳು..." by nageshamysore
ಉ: ೧. ಹೊಗೆ ಹಾಕ್ಸಿ ಬಿಟ್ಟವು ........ಕತ್ತೆಗಳು..."
ನಿಜ ನಾಗೇಶರೇ
ನಿಮ್ಮ ಹಳೆಯ ಕಾಳೆಜಿನ ದಿನಗಳ ಮಜ ಈಗ ಇಲ್ಲ, ಆಗೆಲ್ಲಾ ಜವಬ್ದಾರಿ ಎಂಬ ಭಾರವಿಲ್ಲದೇ ಮಜವಾಗಿದ್ವೀ. ಈಗ ನಮ್ಮ ಜವಾಬ್ದಾರಿ ಎಂಬ ಭಾರದಿಂದ ನಗಲೂ ಕಷ್ಟ.
ನಿಮ್ಮ ಮೆಚ್ಚುಗೆಗೆ ನನ್ನಿ