ಸ್ವಾತಂತ್ರೋತ್ಸವದ ಹಬ್ಬವನ್ನು ಆಚರಿಸುವುದು ಹೇಗೆ ?

ಸ್ವಾತಂತ್ರೋತ್ಸವದ ಹಬ್ಬವನ್ನು ಆಚರಿಸುವುದು ಹೇಗೆ ?

ಅಯ್ಯೋ ಒಬ್ಬರಾದರೂ ಇದರ ಅರ್ಥವನ್ನು ಸರಿಯಾಗಿ ಅರಿತಿಲ್ಲವಲ್ಲಾ ಎಂದು ಖೇದವಾಗುತ್ತದೆ, ಮನಸ್ಸು ಪಿಚ್ ಎನ್ನಿಸುತ್ತದೆ  !

ಸ್ವಾತಂತ್ರ್ಯ ಬಂದರೂ ನಮ್ಮ ಆರ್ಥಿಕ  ಪರಿಸ್ಥಿತಿ ಸುಧಾರಿಸಿಲ್ಲ. ನಮ್ಮ ನೆರೆಯ ರಾಷ್ಟ್ರದ ಆಕ್ರಮಣದ ಭಯ ಇನ್ನೂ ತೊಲಗಿಲ್ಲ. ಒಟ್ಟಿನಲ್ಲಿ ಹೇಳಬೇಕೆಂದರೆ ನಾವು ಇನ್ನೂ ಸಮರ್ಥ ದೇಶವೆಂದು ಎದೆಯುಬ್ಬಿಸಿ ಹೇಳುವ ಸ್ಥಿತಿಯಲ್ಲಿಲ್ಲ

ನನಗೆ ಪತ್ರಿಕೆಗಳನ್ನು ಮತ್ತು ಯಾವುದೇ ಮಾಧ್ಯಮಗಳನ್ನು ಅವಲೋಕಿಸಿದಾಗ ಅನ್ನಿಸುವುದು,  ಅದೇನೋ ಮಜಾಮಾಡುವುದು,  ಮತ್ತು ಎಂಜಾಯ್ ಮಾಡುವುದು ಅನ್ನುವ ಅರ್ಥ ಬರುವಂತೆ ಆಚರಣೆಯಲ್ಲಿರುವ ನಮ್ಮ ರಾಷ್ಟ್ರದ ಮಹಾನ್ ಸ್ವಾತಂತ್ರ್ಯ ಸಮರದ  ಕತೆ-ವ್ಯಥೆಗಳನ್ನು ನೆನೆಸುವ ಹಬ್ಬ ಎನ್ನುವ ವಿಷಯವನ್ನು ಮನದಟ್ಟು ಮಾಡಬೇಕು ಪ್ರತಿ ಯೋಧನ ಮತ್ತು ಸಾಮಾನ್ಯ ಹೋರಾಟಗರಣ ಕಥೆಯೂ ಅಷ್ಟೇ  ಅರ್ಥಪೂರ್ಣ.  ಅಂದು ತಮ್ಮ ತನು-ಮನ-ಧನ ವನ್ನು ಒತ್ತೆಯಾಗಿಟ್ಟು ಇಂದು ನಾವು ಹೀಗೆ ಹುಚ್ಚಾಪಟ್ಟೆ ಪಡುತ್ತಿರುವ ಸಂಭ್ರಮಕ್ಕೆ ದಾರಿಮಾಡಿಕೊಟ್ಟ ಮಹಾನ್ ಜನಗಳನ್ನು ಸ್ಮರಿಸಲು ಎನ್ನುವ ಮಾತಿನ ತಿರುಳು ಎಲ್ಲಿಯೂ ಲವಲೇಷವೂ ಕಾಣಿಸದಷ್ಟು ತಿಳಿಯಾಗಿಹೋಗಿದೆಯಲ್ಲಾ?  ಎನ್ನುವ ಬೇಸರ ನಮಗೆ ಕಾಣಿಸುತ್ತಿದೆ.

ಇಂದು ಆ ಗಣ್ಯರು, ಸಾಧಕರು ನಮಗೆ ಇಷ್ಟು ದೊಡ್ಡ ದೇಶವನ್ನು ಬಿಟ್ಟುಹೋಗಿದ್ದಾರೆ. ಅದರ ಉದ್ದಗಲ, ವ್ಯಾಪ್ತಿಯನ್ನು ಇನ್ನೂ ಅದೆಷ್ಟೊ ಜನ ಅರಿತಿಲ್ಲ. ಮೇಘಾಲಯ, ನಾಗಾ ಲ್ಯಾಂಡ್, ಅರುಣಾಚಲ ಪ್ರದೇಶ್, ಮೊದಲಾದ ಉತ್ತರಪೂರ್ವ ರಾಜ್ಯಗಳ ಜನ ನಮ್ಮದೇಶದವರೇ  ಎಂದು ಕೇಳುವ ಜನರನ್ನೂ ಮುಂಬೈನಂತಹ ಕಾಸ್ಮೋಪಾಲಿಟನ್ ಶಹರಿನಲ್ಲಿ ಕಂಡಿದ್ದೇನೆ.

ಮುಖ್ಯವಾಗಿ ಸ್ವಾತಂತ್ರ್ಯದಿನದಂದು ನಮ್ಮ ರಾಷ್ಟ್ರ ಗಳಿಸಿದ ಸ್ವಾತಂತ್ರ್ಯದ ಮಹತ್ವವೇನು ?  ಅನುಪಮ ರಾಷ್ಟ್ರಪ್ರೇಮಿಗಳ  ಸಹಕಾರದಿಂದ ನಮ್ಮ ರಾಷ್ಟ್ರಪಿತ ಗಾಂಧೀಜಿಯವರ ಮುಂದಾಳತ್ವ, ಅವರ  ನೀತಿ, ಮತ್ತು  ತ್ಯಾಗದಿಂದ ಇಡೀ ಭಾರತ ನಮ್ಮ ಕೈಗೆ ದಕ್ಕುವಂತಾಯಿತು ಎನ್ನುವ ಸತ್ಯವನ್ನು ನಮ್ಮ ದೇಶದ ಯುವಕರಿಗೆ  ತಿಳಿಸುವುದು ಅನಿವಾರ್ಯ.

ನಮ್ಮ ನೆರೆಯ ರಾಷ್ಟ್ರ ದಕ್ಷಿಣ ಆಫ್ರಿಕ ಹೇಗೆ ಛಿದ್ರಛಿದ್ರವಾಗಿ ಹಲವಾರು ರಾಷ್ಟ್ರಗಳಾಗಲು ಅಲ್ಲಿನ ಜನ ಒಗ್ಗಟ್ಟಾಗಿ ಹೋರಾಡಲು ತಿಳಿಯದೆ ಕಳೆದುಕೊಂಡರು ಎನ್ನುವ ಮಾತನ್ನು ನೆನೆಯುವುದು ಅನಿವಾರ್ಯ.  ಆಗ ಅವರ ಮಧ್ಯದಲ್ಲಿ ಒಬ್ಬ ಸಮರ್ಥ ನಾಯಕನಿರಲಿಲ್ಲ. ಬಡತನ, ಅವಿದ್ಯೆ ಇವುಗಳ ಆಗರವಾಗಿದ್ದ ಆದೇಶ ತನ್ನ ಸರ್ವಸ್ವವನ್ನೂ ವಿದೇಶಿಯರಿಗೆ ಬಿಟ್ಟುಕೊಟ್ಟು ಬೆತ್ತಲೆಯಾಯಿತು.

ಡಾ ನೆಲ್ಸನ್ ಮಂಡೇಲರ ಅಸಾಧಾರಣ ಹೋರಾಟ, ತ್ಯಾಗ, ಬಲಿದಾನಗಳಿಂದ ದಕ್ಷಿಣ ಆಫ್ರಿಕವನ್ನು ಮಾತ್ರ ಕಷ್ಟಪಟ್ಟು ಉಳಿಸಿಕೊಳ್ಳುವ ಹೊತ್ತಿಗೆ ಸಾಕುಸಾಕಾಯಿತು. ಪಾಪ ಅವರಿಗೆ ನಮ್ಮ ದೇಷದಲ್ಲಿದ್ದಷ್ಟು ವಿದ್ಯಾವಂತ ಜನ ಸಹಾಯ ದೊರೆಯಲಿಲ್ಲ. ಅವರು ಕೆಲವೇ ಗೆಳೆಯರ ಸಹಕಾರ ನೆರವಿನಿಂದ  ಹೆಚ್ಚುಕಡಿಮೆ ಒಬ್ಬಂಟಿಗರಾಗಿಯೇ ಕೆಲವು ವೇಳೆ ಎಲ್ಲವನ್ನೂ ಎದುರಿಸಬೇಕಾಯಿತು.

ಭಾರತದಲ್ಲಿ ಶ್ರೀ ಬಾಲಗಂಗಾಧರ್ ಟಿಳಕ್, ಗೋಖಲೆ, ಸಾವರ್ಕರ್ ಮೊದಲಾದವರು ಸ್ವತಂತ್ರ್ಯಕ್ಕಾಗಿ ಹೋರಾಡಲು ತಮ್ಮ ಪ್ರಯತ್ನವನ್ನು ಆರಂಭಿಸಿದ್ದರು, ನಿಜವಾಗಿ, ಸನ್ ೧೯೨೦ ರಲ್ಲಿ ದಕ್ಷಿಣ ಆಫ್ರಿಕದಿಂದ ಭಾರತಕ್ಕೆ ಗಾಂಧೀಜಿಯವರ ಆಗಮನಿಂದಲೇ ಶುರುವಾದ ನಿಜವಾದ ಆಂದೋಳನ ಕೇವಲ  ೨೭-೩೦ ವರ್ಷಗಳಲ್ಲಿ ಫಲಕಾರಿಯಾಯಿತು. (ಇದಕ್ಕೆ ಹಲವಾರು ರಾಜಕೀಯ ಕಾರಣಗಳೂ ನಮಗೆ ಸಹಾಯಕವಾಗಿಬಂದವು).

ನಮ್ಮ ನೆರೆಯ ರಾಷ್ಟ್ರ ಪಾಕಿಸ್ತಾನಕ್ಕೆ ಯಾವ ಹೊಸ ಪ್ರಧಾನಿ ಬಂದರೂ ನಮ್ಮ ಮೇಲೆ ಕತ್ತಿಮಸೆಯುವ, ಸೇಡುತೀರಿಸಿಕೊಳ್ಳುವ ವೃಥಾ ಗೊಂದಲ ಸೃಷ್ಟಿಸುವ ನೆಲೆಯಲ್ಲೇ ಯೋಜನೆಗಳನ್ನು ಹೊಸೆದು ಅಲ್ಲಿನ ಮುಗ್ಧಜನರನ್ನು ಒಲಿಸಿಕೊಂಡು ತನ್ನ ಬೇಳೆ ಬೇಯಿಸಿಕೊಳ್ಳುವದರಲ್ಲೇ ಯಶಸ್ಸು ಕಾಣುತ್ತಾನೆ. ಕಾಶ್ಮೀರದಲ್ಲಿ ಪ್ರತಿ ದಿನವೂ  ನಮ್ಮ ಸೈನಿಕರು ಕಾರಣವಿಲ್ಲದೆ ತಮ್ಮ ಜೀವ ಕಳೆದುಕೊಳ್ಳುತ್ತಿದ್ದಾರೆ. ಇದು ಪಾಕಿಸ್ತಾನ ನಿಯೋಜಿಸಿದ ಷಡಯಂತ್ರದ ಫಲವಾಗಿದೆ. ಇದನ್ನು ನಮ್ಮ ಯುವ ಜನರಿಗೆ ಅರಿವುಮಾಡಿಕೊಡಬೇಕು. ಅವರೆಲ್ಲಾ ರಾಜನೀತಿ ಅರ್ಥಮಾಡಿಕೊಳ್ಳಬೇಕು.

* ರಾಷ್ಟ್ರದ ಯುವಕರು/ಯುವತಿಯರು ರಾಜಕೀಯಕ್ಷೇತ್ರಕ್ಕೆ ಧುಮುಕಲೇಬೇಕು. ಪಾಲಿಟಿಕ್ಸ್ ತಮ್ಮ ಓದಿನ ಭಾಗವಾಗಬೇಕು ಇಂಜಿನಿಯರಿಂಗ್, ವೈದ್ಯಕೀಯದ ಜೊತೆಗೆ ಇದನ್ನೂ ಹೆಚ್ಚುಹೆಚ್ಚುಜನ ಪುರಸ್ಕರಿಸಿ ಒಳ್ಳೆಯ ರಾಜಕೀಯ ಧುರೀಣರಾಗಲು ಶಪಥತೊಡಬೇಕು.

* ಇತ್ತೀಚೆಗೆ  ನಮ್ಮ ವೀರ ಯೋಧರು ಕಾಶ್ಮೀರದಲ್ಲಿ ಪಾಕ್ ಯೋಧರ ಗುಂಡಿನೇಟಿಗೆ ಬಲಿಪಶುವಾಗಿ ಜೀವತೆತ್ತರೂ ನಮ್ಮ  ಪ್ರಧಾನಿಯವರು ಒಂದು ಹೇಳಿಕೆಯನ್ನೂ ಕೊಡದೆ ಸುಮ್ಮನಿರುವುದು ಅವರ ನಿಷ್ಕ್ರಿಯತೆಯ ವ್ಯಕ್ತಿತ್ವವನ್ನು ಸೂಚಿಸುತ್ತದೆ. ರಾಷ್ಟ್ರಪತಿಗಳೇನೊ ಹೀಗೆ ನಾವು ನೋಡಿಕೊಂಡು ಸುಮ್ಮನ್ನಿರುವುದಿಲ್ಲ. ಬಿಸಿಮುಟ್ಟಿಸುತ್ತೇವೆ ಎನ್ನುವ ಚೇತಾವನಿಯ ಒಂದು ಗುಡುಗಿನ ವಾಕ್ಯವನ್ನಾದರೂ ಹೇಳಿದ್ದಾರೆ.

* ಇದೇ ಸಮಯದಲ್ಲಿ ಮುಂಬೈನ ಕೊಲಾಬ ಪೋರ್ಟ್ ನಲ್ಲಿ ಕೋಟ್ಯಾಂತ ರೂಪಾಯಿ ತೆತ್ತು ತಂದ ಸಬ್ಮೆರೀನ್ ಹಡಗು ಸಿಡಿದು ಅದರ ಕ್ರ್ಯೂ ಸಹಿತ ನೀರಿನಪಾಲಾಯಿತು. ಇದರ ನೈಜ ಸಂಗತಿ ರಾಷ್ಟ್ರಕ್ಕೆ  ತಿಳಿಸಬೇಕು. ಇವೆಲ್ಲಾ ಲಾಪರವಾಯಿ ಎನ್ನುವ ತರಹ ಆಗಬಾರದು.

* ಎಲ್ಲರೂ ಜಾತಿಮತದದ ಕ್ಷುಲ್ಲಕ ಕಾರಣ ಕೊಡದೆ ಪರಿವಾರ ನಿಯಂತ್ರಣ ಮಾಡಲೇ ಬೇಕು ಎನ್ನುವ ಕಾಯಿದೆ ತಕ್ಷಣ ಜಾರಿಗೆ ತರಬೇಕು.

* ಹಲವಾರು ಪಕ್ಷಗಳನ್ನು ಕಿತ್ತುಹಾಕಿ ಕೆಲವೇ ಪ್ರಮುಖ ಪಕ್ಷಗಳನ್ನು ತರಬೇಕು. ಪ್ರತಿ ಕಾರ್ಯವಹಿಸಿಕೊಂಡಾಗ ರಾಷ್ಟ್ರದ ಹಿತಕ್ಕೆ ಮಾಡಿದ ಕಾರ್ಯಗಳ ವರದಿ ಒಪ್ಪಿಸಬೇಕು. ಪ್ರವಾಹಗಳನ್ನು ತಡೆಯುವ ಮತ್ತು ಹೊಸ ರಸ್ತೆ, ಫ್ಲೈಓವರ್ ಗಳ ನಿರ್ಮಾಣ, ಹೊಸಹೊಸ ಕಾಲೇಜ್ ತೆರೆಯದೆ ಇರುವ ಕಾಲೇಜ್ ವಿದ್ಯಾಸಂಸ್ಥೆಗಳ ಗುಣಮಟ್ಟ ಮತ್ತು ಗಳನ್ನು ಸರಿಪಡಿಸುವ ದಾರಿಯಲ್ಲಿ ಕೆಲಸಮಾಡಬೇಕು. ಇತ್ಯಾದಿಗಳನ್ನು ಯುವಜನರಿಗೆ ಪಠ್ಯವಾಗಿ ಓದಲು ಅನುವುಮಾಡಿಕೊಡಬೇಕು.

* ಯುವ ಡಾಕ್ಟರ್ ಗಳು ೧೦ ವರ್ಷಗಳಾದರೂ ನಮ್ಮ ದೇಶದ  ಕಗ್ಗ ಹಳ್ಳಿಗಳಲ್ಲಿ ತಮ್ಮ ವೃತ್ತಿಯನ್ನು ನಡೆಸಿ ಅಲ್ಲಿನ ಜನರಿಂದ ಒಂದು ಒಳ್ಳೆಯ ಸರ್ಟಿಫಿಕೇಟ್ ತಂದು ಅದನ್ನು ದಿನಪತ್ರಿಕೆಯಲ್ಲಿ ಪ್ರಕಟಿಸಬೇಕು.

* ಆಗಸ್ಟ್ ೧೫ ,  ಬೇಕಾಬಿಟ್ಟಿ ಕೂಗಡಿ ಕುಡಿದು-ಕುಣಿದು ಕುಪ್ಪಳಿಸಿ ಸುಮ್ಮನೆ ಹಣ ಪೋಲುಮಾಡಿ ಕಾಲಹರಣಮಾಡುವ ದಿನವಲ್ಲ. ನಮ್ಮ ರಾಷ್ಟ್ರದ ಏಳಿಗೆಗಾಗಿ ಎಲ್ಲರೂ ಧೃಢ ನಿರ್ಧಾರ ಮಾಡುವ, ಪ್ರತಿಜ್ಞೆಮಾಡುವ ದಿನವೆಂದು ಮನವರಿಕೆ ಮಾಡಿಕೊಡಬೇಕು.  

ಜೈ ಹಿಂದ್.

ಓ ಪರಮಾತ್ಮನೇ,  ನಮಗೆ,  ನಮ್ಮ ದೇಶದ ಘನ ಸರ್ಕಾರಕ್ಕೆ ಒಳ್ಳೆ ಬುದ್ಧಿ ಕೊಡು.

ಎಲ್ಲರಿಗೂ ಮಂಗಳವಾಗಲಿ …

http://sampada.net/b...

 

Comments

Submitted by kavinagaraj Thu, 08/15/2013 - 15:33

ನಿಮ್ಮ ಕಳಕಳಿ ಮೆಚ್ಚುವಂತಹದು ವೆಂಕಟೇಶರೇ. ಉತ್ತಮ ಲೇಖನ. ಧನ್ಯವಾದಗಳು. ಇದೇ ವಿಷಯದಲ್ಲಿ ನಾನೂ ಒಂದು ಲೇಖನ ಬರೆದು ಪ್ರಕಟಿಸಿದಾಗ ನಿಮ್ಮ ಲೇಖನವೂ ಕಣ್ಣಿಗೆ ಬಿತ್ತು. ಹಿತವಾಯಿತು.

ಕವಿವರ್ಯರೇ, ನಮಸ್ಕಾರಗಳು. ತಮಗೆ ಮತ್ತು ನಿಮ್ಮ ಪರಿವಾರದವರಿಗೆ, ಸ್ವಾತಂತ್ರ್ಯದಿನದ ಶುಭಾಶಯಗಳು. ನಿಮ್ಮ ಲೇಖನವನ್ನು ನಾನು ಓದುವಲ್ಲಿ ಉತ್ಸುಕನಾಗಿದ್ದೇನೆ. ಪ್ರತಿಯೊಬ್ಬರ ಅನಿಸಿಕೆಗಳು ಅತಿ ಮುಖೈವಲ್ಲವೇ ಆದೂ ಕವಿವರ್ಯರ ಮಾತುಗಳು....

ಇಂದಿನ ಪವಿತ್ರದಿನದಂದು ನಮ್ಮ ನಿಮ್ಮ ನಮ್ಮೆಲ್ಲರ 'ರೆಸಲ್ಯೂಷನ್ಸ್ '(ಪ್ರತಿಜ್ನ) ಎಂದು ಒಬ್ಬರನ್ನೊಬ್ಬರು ವಿಚಾರಿಸುವ ಪರಿಪಾಠ ಕಂಡಿದ್ದೇನೆ. ಅದರ ಬಗ್ಗೆ ಎಲ್ಲರೂ ಬಾರೆಯಾಬೇಕು . ಸುಮ್ಮನೆ ಎಂಜಾಯ್ ಮಾಡಿದ್ದೆ ಬರೆಯದೆ. ನನ್ನ ವೈಯಕ್ತಿಕ ಕೊಡುಗೆ ಏನು ಎನ್ನುವುದನ್ನು ಓದಲು ನನಗೆ ಆಸಕ್ತಿ.....!

ನಾನು ಮತ್ತು ನನ್ನ ಹೆಂಡತಿ ಕೆನಡ ದೇಶದ ಲ್ಲಿ ಹೋದವರ್ಷ (೨೦೧೨) ಕಣ್ಣಾರೆ ಕಂಡ ಸ್ವತಂತ್ರ್ಯದಿನದ ಸೆಲೆಬ್ರೇಷನ್ಸ್ ನೋಡಿ ದಿಗ್ಭ್ರಮೆಯಾಗಿತ್ತು. ಇದು ನಮಗೂ ಪ್ರೇರಣೆ ಕೊಡಬಲ್ಲದು. ಬೇರೆದೇಶವನ್ನೇ ಮೆಚ್ಚುವ ಸ್ವಾಭಾವ ನಮ್ಮದು ಎನ್ನುವ ಮಾತು ಸತ್ಯವೂ ಹೌದು. ಇದು ಉತ್ಪ್ರೇಕ್ಷೆಯಲ್ಲ. ನಿಜ ನಿಜವೇ ಅಲ್ಲವೇ. ಕೆನಡಾದ ನಾಗರಿಕರೆಲ್ಲಾ, ಮಕ್ಕಳು, ಸ್ತ್ರೀಯರು, ಗಂಡಸರು, ಮತ್ತು ಹಿರಿಯ ನಾಗರಿಕರು, ಎಲ್ಲರೂ ತಮ್ಮ ದೇಶದ ಸಂಸ್ಕೃತಿ, ಭಾಷೆ, ಕಲೆ ಮತ್ತು ಜನಜೀವನದ ಬಗ್ಗೆ ತೋರಿಸಿದ ಅಸ್ತೆ, ಪ್ರೀತಿ ವಿಶ್ವಾಸ ನಮ್ಮನ್ನು ಮಂತ್ರಮುಗ್ಧರನ್ನಾಗಿಸಿತು. ಅವರೆಲ್ಲಾ ತಮ್ಮ ದೇಶವನ್ನು ಮನಸಾರೆ ಪ್ರೀತಿಸುತ್ತಾರೆ. ಇದು ನಿಜಕ್ಕೂ ಅನುಕರಣೀಯ. ದೇಶದಲ್ಲಿ ಆಗುವ ಅತಿವೃಷ್ಟಿ, ಮತ್ತು ಇತರೆ ಅನಾಹುತಗಳು ಮತ್ತು ಸಂಕಟಗಳು ಬಂದಾಗ ಮೊಟ್ಟಮೊದಲು ದೇಶದ ನಾಯಕರು ಟೆಲಿವಿಶನ್ ನಲ್ಲಿ ಮೊದಲು ಪ್ರಕಟವಾಗಿ ತಮ್ಮ ಸಂತಾಪವನ್ನು ತೋರಿಸುತ್ತಾರೆ. ಇವೆಲ್ಲವನ್ನೂ ನಾವು ನಮ್ಮ ಕಣ್ಣಾರೆ ಕಂಡೆವು. ಅವು ತೊಂದರೆಯಿಂದ ಮುಕ್ತವಾದಮೇಲೆಯೇ ಅವರು ತಮ್ಮ ಉಸುರು ತೆಗೆದುಕೊಳ್ಳುವುದು. ಇದೇ ವಿಷಯ ಅಮೆರಿಕದಲ್ಲೂ ಆದದ್ದನ್ನು ವಿಶ್ವದ ಜನ ನೋಡಿರಬಹುದು ! ನಮ್ಮ ಮುಂಬೈನಲ್ಲಾದ ಆಗಸ್ಟ್, ೧೪ ನೇತಾರೀಖಿನ (ಸ್ವಾತಂತ್ರ್ಯ ದಿನದೋತ್ಸವದ ಹಿಂದಿನ ದಿನದಂದು) ಸ್ಫೋಟದ ನಂತರ, ಮುಂಬೈನ ಅತಿ ಹೆಚ್ಚು ಆಳವಿಲ್ಲದ ಸ್ಥಳದಲ್ಲಿ ಮುಳುಗಿದರೂ ಅದನ್ನು ಪತ್ತೆ ಹಚ್ಚಲು (ಅದರಲ್ಲಿನ ೧೬ ಜನ ತಂತ್ರಜ್ಞರು ಸತ್ತರೂ) ಇನ್ನೂ ಆಗಿಲ್ಲ. ನಾಯಕರುಗಳು ಅದರ ಬಗ್ಗೆ ಹೆಚ್ಚು ಪ್ರಾಮುಖ್ಯತೆಯಿಂದ ಮಾತಾಡಿದ್ದು ಕಾಣಿಸಲಿಲ್ಲ.