ಶಿಬಿರಕ್ಕೆ ಬನ್ನಿ
ಸಂಪದ ಮಿತ್ರರೇ,
ವೇದೋಕ್ತಜೀವನ ಶಿಬಿರ-ಇದು ಒಂದು ವಿನೂತನ ಪ್ರಯೋಗ. ವೇದವು ಪ್ರಪಂಚದಲ್ಲಿಯೇ ಅತ್ಯಂತ ಪ್ರಾಚೀನ ಸಾಹಿತ್ಯವೆಂಬುದು ಅಲ್ಲಗಳೆಯಲಾರದ ಸತ್ಯ. ವೇದ ಅಂದರೆ ಕೇವಲ ಪೂಜೆಪುನಸ್ಕಾರದ ಮಂತ್ರಗಳೇ? ಶ್ರಾದ್ಧಕರ್ಮಗಳನ್ನು ಮಾಡಿಸುವ ಮಂತ್ರಗಳೇ? ಬಹುಪಾಲು ಜನರ ಅನಿಸಿಕೆ ಇದೇ ಆಗಿದೆ. ಆದರೆ ಮನುಷ್ಯನ ನೆಮ್ಮದಿಯ ,ಆರೋಗ್ಯಕರ ಜೀವನಕ್ಕೆ ಬೇಕಾದ ಸಕಲ ಮಾರ್ಗದರ್ಶನವು ವೇದದಲ್ಲಿ ಲಭ್ಯ ಎಂಬ ಅರಿವು ಹಲವರಿಗೆ ಇಲ್ಲ. ಬೆಂಗಳೂರಿನಲ್ಲಿರುವ ಶತಾಯುಷಿ ಪಂಡಿತ್ ಸುಧಾಕರ ಚತುರ್ವೇದಿಯವರು ವೇದವನ್ನು ಒಂದು ನೂರು ವರ್ಷಗಳಿಂದ ಅಧ್ಯಯನ ಮಾಡುತ್ತಿದ್ದಾರೆಂದರೆ ಆಶ್ಚರ್ಯವಾಗುತ್ತದಲ್ಲವೇ? ಮತ್ತು ವೇದಾಧ್ಯಾಯೀ ಶ್ರೀ ಸುಧಾಕರಶರ್ಮರು ಕಳೆದ 25ವರ್ಷಗಳಿಂದ ಪಂಡಿತರ ಮಾರ್ಗದರ್ಶನದಲ್ಲಿ ವೇದಾಧ್ಯನ ಮಾಡುತ್ತಾ ಅತ್ಯಂತ ಸರಳವಾಗಿ ವೇದದ ಅರಿವನ್ನು ಸಾಮಾನ್ಯರಿಗೆ ತಿಳಿಸುವ ಕಾಯಕದಲ್ಲಿ ತೊಡಗಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಮೂರು ದಿನಗಳ ವೇದೋಕ್ತ ಜೀವನ ಶಿಬಿರವು ಹಾಸನದಲ್ಲಿ ಆಯೋಜಿತವಾಗಿದೆ. ಕರ್ನಾಟಕದ ಏಳು ಜಿಲ್ಲೆಗಳಿಂದ ಮತ್ತು ಮಹಾರಾಷ್ಟ್ರದ ಪುಣೆಯಿಂದ ಆಸಕ್ತರು ಬಂದು ಶಿಬಿರದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ವೇದದ ಮಾರ್ಗದರ್ಶನದಲ್ಲಿ ನೆಮ್ಮದಿಯ ಜೀವನ ನಡೆಸುವ ಬಗೆಯನ್ನು ಶ್ರೀ ಶರ್ಮರು ನಮಗೆ ತಿಳಿಸಿಕೊಡಲಿದ್ದಾರೆ. ಆಸಕ್ತರಿಗೆ ಸ್ವಾಗತವಿದೆ.