ಗುಟ್ಟುಬಿಡದ ಗೌರಿಗೊಂದು ಸ್ತುತಿ

ಗುಟ್ಟುಬಿಡದ ಗೌರಿಗೊಂದು ಸ್ತುತಿ

ಚಿತ್ರ

“ತರಳೆಯೇನಿದು ಬೆವೆತೆ?” “ಕಣ್ಗಳೊ

ಳಿರುವ ಬೆಂಕಿಗೆ!” “ನಡುಕವೇ ಚಂ

ದಿರ ಮೊಗದವಳೆ?” “ ದಿಟದಲಂಜಿಕೆ ಕೊರಳ ಹಾವಿನಲಿ!”

“ಅರರೆ ಮೈಯಲಿ ಪುಳಕವೇನಿದು?”

“ಶಿರದ ಮೇಲಿನ ಗಂಗೆ ತುಂತುರು

ತರುವ ಚಳಿಗೆ”ನ್ನುತಲಿ ಗುಟ್ಟನು ಕಾಯ್ವವಳೆ ಕಾಯ್ಗೆ!

 

ಸಂಸ್ಕೃತ ಮೂಲ (ಸುಭಾಷಿತ ರತ್ನಕೋಶದಿಂದ) :

 

ಸ್ವೇದಸ್ತೇ ಕಥಮೀದೃಶಃ ಪ್ರಿಯತಮೇ ತ್ವನ್ನೇತ್ರವಹ್ನೇರ್ವಿಭೋ

ಕಸ್ಮಾದ್ವೇಪಿತಮೇತಾದಿಂದು ವದನೇ ಭೋಗೀಂದ್ರಭೀತೇರ್ಭವ ।

ರೋಮಾಂಚಃ ಕಥಮೇಶ ದೇವಿ ಭಗವನ್ ಗಂಗಾಂಭಸಾಂ ಶೀಕರೈಃ

ಇತ್ಥಂ ಭರ್ತಾರಿ ಭಾವಗೋಪನಪರಾ ಗೌರೀ ಚಿರಂ ಪಾತು ವಃ ॥

 

-ಹಂಸಾನಂದಿ

 

ಕೊ: ಇದು ಗೌರಿ-ಶಂಕರರ ನಡುವಿನ ಮಾತುಕತೆಯಂತೆ ಹೆಣೆದಿರುವ ಗೌರಿಯ ಸ್ತುತಿ ಅಂತ ಹೇಳಬೇಕಿಲ್ಲ ಅಂದುಕೊಂಡಿದ್ದೀನಿ

 

ಕೊ.ಕೊ: ಈ ಪದ್ಯವನ್ನ ಹಿಂದೆ ಗೌರಿಯ ಗುಟ್ಟು ಅನ್ನುವ ಹೆಸರಿನಲ್ಲಿ ಅನುವಾದಿಸಿದ್ದೆ. ಆಗ ಯಾವುದೇ ಛಂದಸ್ಸಿಗೆ ಕಟ್ಟು ಬಿದ್ದಿರಲಿಲ್ಲ - ಈಗ ಈ ಪದ್ಯವನ್ನ ಭಾಮಿನೀ ಷಟ್ಪದಿಯಲ್ಲಿ ಬರೆದಿದ್ದು ಪದ್ಯಪಾನದಲ್ಲಿ ಕೇಳಿದ ಸಂಭಾಷಣೆಯ ಪದ್ಯವೊಂದನ್ನು ಬರೆಯಬೇಕೆಂಬ ಸವಾಲಿಗೆ. ಸಂಸ್ಕೃತ ಮೂಲ ಶಾರ್ದೂಲವಿಕ್ರೀಡಿತ ವೃತ್ತದಲ್ಲಿದೆ.

 

ಕೊ.ಕೊ.ಕೊ: ಮೂಲದ ಪೂರ್ತಿ ಆಶಯವನ್ನು ನನ್ನ ಭಾಮಿನಿಯಲ್ಲಿ ಸೇರಿಸಲಾಗದ್ದು ನನ್ನ ಕೊರತೆಯಷ್ಟೇ!

 

ಚಿತ್ರ ಕೃಪೆ: http://www.exoticindiaart.com/paintings/

Rating
No votes yet

Comments