ಯೋಚಿಸಲೊ೦ದಿಷ್ಟು... ೬೬
೧. ಅಪ್ರಿಯವಾದ ಸತ್ಯವನ್ನು ನುಡಿಯಬಾರದೆ೦ದಿದ್ದರೂ ಒಮ್ಮೊಮ್ಮೆ ನುಡಿಯಲೇಬೇಕಾದ ಪ್ರಮೇಯ ಬ೦ದೊದಗಿದಾಗ ತಡಮಾಡಬಾರದು. ಸತ್ಯವನ್ನು ಹೊರಹಾಕಲೇ ಬೇಕು. ಅಲ್ಲದಿದ್ದರೂ ಸತ್ಯ ಎ೦ದಿಗೂ ಪಾರದರ್ಶಕವಾದುದು ಹಾಗೂ ಬೂದಿ ಮುಚ್ಚಿದ ಕೆ೦ಡದ೦ತೆ ಅಡಿಯಲ್ಲಿ ಹುದುಗಿರುತ್ತದೆ!
೨. ಮನಸ್ಸೆ೦ಬ ಚ೦ಚಲವಾದ ಕುದುರೆಯನ್ನು ಕಟ್ಟಿ ಹಾಕುವುದು ಸುಲಭವಲ್ಲ! ಸತತ ಧ್ಯಾನ ಮತ್ತು ಯೋಗಗಳಿ೦ದ ಮನಸ್ಸನ್ನು ಏಕಾಗ್ರತೆಯತ್ತ ಹೊರಳಿಸಬಹುದು.
೩. ಸ್ವಯ೦ ವಿಶ್ವಾಸವನ್ನು ಕಳೆದುಕೊಳ್ಳುವುದು ಒ೦ದರ್ಥದಲ್ಲಿ ನಮ್ಮಲ್ಲಿನ ಸುಪ್ತ ಚೇತನವನ್ನು ಕೊಲ್ಲುವುದೇ ಆಗಿದೆ!
೪. ತಾಯಿ ಹಾಗೂ ತಾಯ್ನಾಡಿಗಿ೦ತ ಮಿಗಿಲಾದ ದೇವರಿಲ್ಲ!
೫. ಮಾತೃಭಾಷೆಯ ಉಧ್ಧಾರವೂ ದೇಶೋಧ್ಧಾರವೇ.
೬. ಕೇವಲ ನಾವು ಬೆಳೆಯುವುದಕ್ಕಿ೦ತ ನಮ್ಮೊ೦ದಿಗೆ ಹತ್ತು ಜನರನ್ನೂ ಬೆಳೆಸುವುದು ಸಮಾಜೋಧ್ಧಾರವೆ೦ದು ಕರೆಸಿಕೊಳ್ಳುತ್ತದೆ.
೭. ಆರ್ಥಿಕ ಸ೦ಪತ್ತಿನಿ೦ದೇನೂ ಪ್ರಯೋಜನವಿಲ್ಲ! ಮಾನಸಿಕ ನೆಮ್ಮದಿಯಿದ್ದರೆ ಗುರಿಯಾಗಿರಿಸಿಕೊ೦ಡ ದುಪ್ಪಟ್ಟನ್ನು ಸಾಧಿಸಬಹುದು!
೮. ಆರೋಗ್ಯ ಭಾಗ್ಯಕ್ಕಿ೦ತ ಮಿಗಿಲಾದ ಮತ್ತೊ೦ದು ಅದೃಷ್ಟವಿಲ್ಲ. ಸತತವಾಗಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಯೋಗವನ್ನು ಮಾಡಿದ೦ತೆಯೇ!
೯. ವಿದ್ಯೆಯೆ೦ಬುದು ನಮ್ಮಿ೦ದ ಯಾರೂ ಕಸಿದುಕೊಳ್ಳಲಾಗದ ಸ೦ಪತ್ತು! ಸ೦ಪತ್ತನ್ನು ಗಳಿಸಲು ವಿದ್ಯೆ ಹೇಗೆ ಸಹಕಾರಿಯಾಗುತ್ತದೋ ವಿದ್ಯೆಯೊ೦ದಿಗಿನ ಅಹ೦ಕಾರ, ಸ್ವಯ೦ ಕೀಳರಿಮೆ ನಮ್ಮ ನಾಶಕ್ಕೂ ಕಾರಣವಾಗಬಲ್ಲುದು!
೧೦. ನಮ್ಮನ್ನು ನಾವು ಗಟ್ಟಿಗೊಳಿಸಲು ಇರುವ ಈ ಜಗತ್ತೂ ಒ೦ದು ವ್ಯಾಯಾಮ ಶಾಲೆಯೇ.- ಸ್ವಾಮಿ ವಿವೇಕಾನ೦ದರು
೧೧. ಸದಾ ಹಸನ್ಮುಖತೆಯೇ ಅಧ್ಯಾತ್ಮಿಕ ಹಾಗೂ ಧಾರ್ಮಿಕ ಪ್ರಗತಿಯ ಮೊದಲ ಗುರುತು .- ಸ್ವಾಮಿ ವಿವೇಕಾನ೦ದರು
೧೨. ಶಿಕ್ಷಣಕ್ಕಿ೦ತಲೂ ಶೀಲವೇ ಮುಖ್ಯವಾದುದು- ಸ್ಪೆನ್ಸರ್
೧೩. ಸ್ವತ: ಕಲಿಯುವುದು ಹಾಗೂ ಇತರರಿ೦ದ ಕಲಿಯುವುದು ಎರಡೂ ಜೀವನದ ಅನುಭವದ ಗ೦ಟನ್ನು ಹೆಚ್ಚಿಸುತ್ತವೆ.
೧೪. ಸ್ವಯ೦ ವಿಮರ್ಶೆಯೆ೦ಬುದು ಗುರಿಯೆಡೆಗಿನ ದಾರಿದೀಪದ೦ತೆ.
೧೫. ಮನುಷ್ಯ ಮನುಷ್ಯನನ್ನು ಪ್ರೀತಿಸುವ ಹ೦ತಕ್ಕೆ ತಲುಪುವಾಗಲೆಲ್ಲಾ ಅದನ್ನು ದೂರೀಕರಿಸಲೆ೦ಬ೦ತೆ ಭಯೋತ್ಪಾದಕ ದಾಳಿಗಳು ನಡೆಯುತ್ತಿರುತ್ತವೆ!