ವಿಕಿಪೀಡಿಯದ ಇಂಟರ್ನೆಟ್ ಬರವಣಿಗೆ ಕಮ್ಮಟ ಮುಂಬೈವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ !

ವಿಕಿಪೀಡಿಯದ ಇಂಟರ್ನೆಟ್ ಬರವಣಿಗೆ ಕಮ್ಮಟ ಮುಂಬೈವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ !

'ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗ'ದಲ್ಲಿ 'ವಿಕಿಪೀಡಿಯದ ಇಂಟರ್ನೆಟ್ ಬರವಣಿಗೆ ಕಮ್ಮಟ'ವನ್ನು ಇದೇ ಸನ್. ೨೦೧ ೩, ರ, ಅಗಸ್ಟ್, ೨೩ ರ ಮದ್ಯಾನ್ಹ ೧-೩೦ ಕ್ಕೆ ಕನ್ನಡ ವಿಭಾಗದಲ್ಲಿ ಆಯೋಜಿಸಲಾಗಿದೆ. ಸಮರ್ಥ, ಜನಪ್ರಿಯ ವಿಜ್ಞಾನ ಲೇಖಕ, ಬಿ ಎ ಅರ್.ಸಿ ವಿಜ್ಞಾನ ಸಂಸ್ಥೆಯಲ್ಲಿ ದುಡಿದು ನಿವೃತ್ತರಾಗಿರುವ ಯುವಹುರುಪಿನ  ಮನಸ್ಸಿನ ಹಿರಿಯ ವಿಜ್ಞಾನಿ ಡಾ. ಪವನಜರವರು ಇದನ್ನು ನದಡೆಸಿಕೊಡಲಿದ್ದಾರೆ. ಪವನಜ ಇತ್ತೀಚಿನ ದಿನಗಳಲ್ಲಿ ಅತ್ಯಂತ ಜನಪ್ರಿಯ ವ್ಯಕ್ತಿಯಾಗಿ ಪ್ರಿಂಟ್ ಮೀಡಿಯ ಮತ್ತು ಟೆಲಿವಿಶನ್ ವಲಯಗಳಲ್ಲಿ ಹೆಚ್ಹು ಹೆಚ್ಹಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಕಿಪೀಡಿಯದಲ್ಲಿ ಅವರು ಪಾದಾರ್ಪಣೆಮಾಡಿದಮೆಲಂತೂ ಅತಿ ಕಡಿಮೆ ಸಮಯದಲ್ಲಿ ಹಲವಾರು ಹೊಸ ಹೊಸ ಕಾರ್ಯಕ್ರಮಗಳನ್ನು ಆಯೋ ಜಿಸುತ್ತಿದ್ದಾರೆ. ಕನ್ನಡ ವಿಕಿಪೀಡಿಯ ಬಳಗ  ಅವರ ಮಾರ್ಗದರ್ಶನದಲ್ಲಿ ಬಹಳಷ್ಟು ಸಾಧನೆಗಳನ್ನು ಮಾಡುವ ಹುರುಪಿನಲ್ಲಿದೆ.

ಇದರ ಬಗ್ಗೆ ಹೆಚ್ಚು ಮಾಹಿತಿ :

ಹೆಚ್ಚಿನ ಮಾಹಿತಿಯನ್ನು ಸನ್. ೨೦೧೩ ರ  ಆಗಸ್ಟ್, ೨೨ ನೇ ತಾರೀಖಿನ  ‘ಕರ್ನಾಟಕ  ಮಲ್ಲ’ ದ ೧೧ ನೆ ಪುಟದಲ್ಲಿ ಓದಿ ಪಡೆಯಬಹುದು.

ಬಸ್ ಬಗ್ಗೆ ಸ್ವಲ್ಪ ಮಾಹಿತಿ :

ಘಾಟ್ಕೊಪರ್ ಉಪನಗರದಿಂದ ಬರುವ ವಿಕಿಪಡಿಯಾಸಕ್ತರು, ನಾರಾಯಣ್ ನಗರದಲ್ಲಿ ೩೦೬ ನೆಯ ಬಸ್ ಹಿಡಿದು ಬಂದರೆ, ಅವರ  ಬಸ್, ಕಾಲೇಜ್  ಕ್ಯಾಂಪಸ್ ಮುಖಾಂತರವೇ ಹಾದು ಹೋಗುತ್ತದೆ.  ಕಲೀನಾದ, ವಿಶ್ವವಿದ್ಯಾಲಯದ ಕನ್ನಡ ಭವನ, ಕಣ್ಣಿಗೆ ಕಾಣಿಸುವಷ್ಟು  ಸಮೀಪ.

ಕನ್ನಡ ವಿಶ್ವವಿದ್ಯಾಲಯದ ಮುಖ್ಯಸ್ಥರ ಆದರದ ಸ್ವಾಗತ :

ಕನ್ನಡಪ್ರಸಾರಕ್ಕಾಗಿ, ತಮ್ಮ ಅಮೂಲ್ಯ ಸಮಯವನ್ನು ಮುಡಿಪಾಗಿಟ್ಟು  ಪ್ರಾಮಾಣಿಕವಾಗಿ, ಆಸ್ಥೆಯಿಂದ ಮುಂಬೈ ಮಹಾನಗರದಲ್ಲಿ ಅತ್ಯಂತ ಆಸಕ್ತಿಯಿಂದ ದುಡಿಯುತ್ತಿರುವ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ, ಡಾ. ಜಿ. ಎನ್.  ಉಪಾಧ್ಯರವರು ಕಳಕಳಿಯಿಂದ ಎಲ್ಲರನ್ನೂ ಸ್ವಾಗತಿಸುತ್ತಾ, ಬೆಳಿಗ್ಯೆ(ಮದ್ಯಾನ್ಹದ) ಊಟದ ವ್ಯವಸ್ಥೆ ಮಾಡಲಾಗಿದೆ ಆದ್ದರಿಂದ ದಯಮಾಡಿ ೧೧-೩೦ ರ ಹೊತ್ತಿಗೆ ಬನ್ನಿ ಎಂದು ಆದರದ ಸ್ವಾಗತ ನೀಡಿದ್ದಾರೆ.