ಕೊರಗು
ಚಿತ್ರ
“ಇದು ಕಪ್ಪು” “ಕಪ್ಪು, ಹೌದು ”
“ಮೈ ಬಿಳುಪಲ್ಲವೇ?” “ಅಲ್ಲದೇ ಏನು!”
“ಹೋಗೋಣ ನಡೆ ” “ನಡೆ ಮತ್ತೆ ”
“ಈ ದಾರಿಯಲ್ಲಿ” “ಇದುವೆ ದಾರಿ!”
ಗೆಳತಿ! ಮೂರು ಹೊತ್ತೂ
ಬಿಡದೆ ಹಿಂದಿರುತಿದ್ದ ನಲ್ಲ
ಬೇರೆಯವನಾಗಿಯೇ ಹೋದನಲ್ಲ!
ಈ ಗಂಡಸರನು ಅರಿತವರಿಲ್ಲ!
ಸಂಸ್ಕೃತ ಮೂಲ (ಅಮರುಕನ ಅಮರುಶತಕದ 94ನೇ ಪದ್ಯ):
ಇದಂ ಕೃಷ್ಣಂ ಕೃಷ್ಣಂ ಪ್ರಿಯತಮ ತನುಃ ಶ್ವೇತಮಥ ಕಿಂ
ಗಮಿಷ್ಯಾಮೋ ಯಾಮೋ ಭವತು ಗಮನೇನಾಥ ಭವತು
ಪುರಾಯೇನೈವಂ ಮೇ ಚಿರಮ್ ಅನುಸೃತಾಚಿತ್ತಪದವೀ
ಸ ಏವಾನ್ಯೋ ಜಾತಃ ಸಖೀ ಪರಿಚಿತಾಃ ಕಸ್ಯ ಪುರುಷಾಃ
-ಹಂಸಾನಂದಿ
ಚಿತ್ರ: ರಾಜಾ ರವಿವರ್ಮನ "Ladies in the Moonlight" ಎನ್ನುವ ವರ್ಣಚಿತ್ರ. ಕೃಪೆ: ವಿಕಿಪೀಡಿಯಾ
Rating