ಹಳೇ ಜೋಡಿಯ ಹೊಸ ಸಿಲ್ ಸಿಲಾ.!

ಕಭೀ..ಕಭೀ ಮೇರೆ ದಿಲ್ ಮೇ...ಖಯಾಲ್ ಆತಾ ಹೈ..!
ಹೀಗೆ ಗೀತರಚನಾಕಾರ ಸಾಹಿರ್ ಲುಧಿಯಾನ್ವಿ ಅದ್ಯಾವ ಮನಸ್ಥಿಯಲ್ಲಿ ಬರೆದರೋ ಗೊತ್ತಿಲ್ಲ. ಪ್ರೀತಿಸುವ ಪ್ರತಿ ಹೃದಯಲ್ಲಿ ಈ ಒಂದು ಭಾವ ಕಂಡತಿ ಮೂಡುತ್ತದೆ. ಅಷ್ಟೊಂದು ಸರ್ವ ಕಾಲಿಕ ಸಾಲನ್ನ ಬರೆದು ಹೋದ ಸಾಹಿರ್ ಗೆ ಒಂದು ಹೃದಯ ಪೂರ್ವಕ ಧನ್ಯವಾದ. ವಿಷ್ಯಕ್ಕೆ ಬರೋಣ. ಕಭೀ..ಕಭೀ ಅಂತ ಬರೆಯೋಕೆ ಆರಂಭಿಸಿರೋದು ಅಭಿತಾಭ್ ಗೋಸ್ಕರ. ರೇಖಾ ನೆನಪಿಗೋಸ್ಕರ. ಇವರ ಅಮರ ಪ್ರೇಮ ನಿನ್ನೆ ಮೊನ್ನೆಯದ್ದಲ್ಲ. ಎತ್ತರದ ಅಮಿತಾಭ್ ಈಗ ಅಜ್ಜ ಆಗಿದ್ದಾರೆ. ರೇಖಾ ಇನ್ನೂ ಆಸೆ ಗಣ್ಣಿನಿಂದ ಅಮಿತ್ ಕಡೆ ನೋಡುತ್ತಲೇ ಇರುತ್ತಾರೆ. ತಮ್ಮ ಹೃದಯದಲ್ಲಿ ಹಳೇ ಪ್ರೀತಿ ಮಿಡಿಯುತ್ತಿದ್ದರೂ ಅಮಿತಾಭ್ ಅದನ್ನ ಲೆಕ್ಕಿಸದೇ ಸಾಗಿ ಬಿಡುತ್ತಾರೆ. ಕಾರಣ ಇದು ಹಳೇ ಸಿಲ್ ಸಿಲಾ..
ಈಗ ಹೊಸದೊಂದು ಸಿಲ್ ಸಿಲಾ ಶುರುವಾಗೋ ಲಕ್ಷಣಗಳು ಹೆಚ್ಚು ಕಂಡು ಬರುತ್ತಿದೆ.. ಹಾಗಂತ ಅದು ಬೇರೆ ಏನೂ ಅಲ್ಲ. ಈ ಜೋಡಿ ಮತ್ತೆ ತೆರೆ ಮೇಲೆ ಜೊತೆಯಾಗಿ ಬರೋ ಸತ್ಯ. ಅದನ್ನ ನಿರ್ದೇಶಕ ಅನೀಷ್ ಬಾಜ್ಮಿ ಬಹಿರಂಗ ಪಡಿಸಿದ್ದಾರೆ. ಮುಂಬರೋ ವೆಲ್ ಕಮ್ ಬ್ಯಾಕ್ ಚಿತ್ರದಲ್ಲಿ ಅಮಿತ್ ಮತ್ತು ರೇಖಾ ರನ್ನ ಜೋಡಿಯಾಗಿಸೋ ಸಾಹಸ ಮಾಡೋಕೆ ಮುಂದಾಗಿದ್ದಾರೆ ಅನೀಷ್..
ಆದ್ರೆ, ಈ ಜೋಡಿ ತೆರೆ ಮೇಲೆ ಒಂದಾಗಿ ಕಾಣಿಸೋ ಸಾಧ್ಯೆತೆ ಕಡಿಮೆ. ಯಾಕೆಂದ್ರೆ, ಅಮಿತಾಭ್ ಡಾನ್ ಪಾತ್ರಕ್ಕೆ ಜೀವ ತುಂಬಲಿದ್ದಾರೆ. ರೇಖಾ ಪಾತ್ರದ ಪೋಷಣೆನೆ ಬೇರೆ. ಅನಿಲ್ ಕಪೂರ್ ಹಾಗೂ ನಾನಾ ಪಾಟೇಕರ್ ಪಾತ್ರಗಳು ರೇಖಾ ಪಾತ್ರವನ್ನ ಪ್ರೇಮಿಸೋ ಸನ್ನಿವೇಶಗಳೇ ಇಲ್ಲಿ ಇರೋದು. ಹಾಗಾಗಿ, ಅಮಿತಾಭ್ ಮತ್ತು ರೇಖಾ ಒಂದೇ ಚಿತ್ರದಲ್ಲಿ ನಟಿಸುತ್ತಿದ್ದಾರೆ ಹೊರತು, ಜೊತೆ..ಜೊತೆಯಾಗಿ ಕಾಣಿಸಿಕೊಳ್ಳುತ್ತಿಲ್ಲ.
ಇರಲಿ. ಅದು ಒಂದು ರೀತಿ ಖುಷಿನೇ. ಆದ್ರೆ, ಈ ಜೋಡಿಯ ಸಿನಿಮಾಗಳು ಪ್ರೇಮಿಸೋ ಪ್ರತಿ ಹೃದಯಗಳಿಗೆ ಸ್ಪೂರ್ತಿಯಾಗಿದಂತು ನಿಜ.ದೋ ಅಂಜಾನೆ ಅನಿಸುತ್ತದೆ. 1979 ರಲ್ಲಿ ಅಮಿತಾಭ್-ರೇಖಾ ಒಟ್ಟಿಗೆ ನಟಿಸಿದ್ದರು. ಅದಾದ್ಮೇಲೆ ಮಿಸ್ಟರ್ ನಟವರಲಾಲ್ ಬಂತು. ಮುಕ್ಕದರ್ ಕಾ ಸಿಕಂದರ್ ನಲ್ಲೂ ಅಮಿತ್ -ರೇಖಾ ಕಾಣಿಸಿಕೊಂಡ್ರು. ಸುಹಾಗ್ ಇದೇ ಜೋಡಿ ಮತ್ತೊಂದು ಮೋಡಿ. ಆದ್ರೆ, ಸಿಲ್ ಸಿಲ್ ಕೊನೆ ಚಿತ್ರವಾಗಿ ಹೋಯಿತು. ಎಸ್.ಚೋಪ್ರಾ ಈ ಜೋಡಿಯನ್ನ ಮತ್ತೊಮ್ಮೆ ರೊಮ್ಯಾನ್ಸ್ ಮಾಡಲು ತೆರೆಗೆ ಬಿಟ್ಟರು. ಅಷ್ಟೆ. ನಂತರವಾಗಿದೆಲ್ಲ ಅಂತ್ಯ. ಅಮಿತಾಭ್ ರೇಖಾರಿಂದ ದೂರವಾದರು. ರೇಖಾಜೀ ಅಮಿತ್ ಗಾಗಿ ಈಗಲೂ ಕಾತರದಿಂದ ಕಾಯುತ್ತಿದ್ದಾರೆ.
ರೇಖಾರಂತೆ, ಪ್ರೇಕ್ಷಕರು ರೇಖಾ-ಅಮಿತಾಭ್ ಜೋಡಿಯನ್ನ ಮತ್ತೊಮ್ಮೆ ತೆರೆ ಮೇಲೆ ಜೊತೆಯಾಗಿ ನೋಡಲು ಕಾಯುತ್ತಿದೆ. ಅದ್ಯಾವ ನಿರ್ದೇಶಕರು ಈ ಹಳೇ ಜೋಡಿಗೆ ಹೊಸ ಪ್ರೇಮ ಪುರಾಣ ಬರೀತಾರೋ ಕಾದು ನೋಡಬೇಕಷ್ಟೆ. ಇದಕ್ಕೂ ಮುಂಚೇನೆ ಇಳಿವಯಸ್ಸಿನಲ್ಲಿರೋ ಇಬ್ಬರಲ್ಲಿ ಯಾರಾದರೂ ಒಬ್ಬರು ಹೋದರೆ ಮುಗೀಯಿತು. ಎಲ್ಲವೂ ಆಗ ಕಭೀ..ಕಭೀ ಉನ್ ಕೇ ದಿಲ್ ಮೇ ಪ್ಯಾರ್ ಹೋತಾತಾ ಅಂತ ಹೇಳಬೇಕಾಗುತ್ತದೆ.
-ರೇವನ್