ಹೀಗೂ ಆಗಬಹುದು; ನಮಗೆ ಪ್ರತಿ ದಿನವೂ ಕಲಿಯಲು ಹೊಸ ಹೊಸ ಪಾಠಗಳಿವೆ !

ಮುಂಬೈ ಮಿರರ್ ಪತ್ರಿಕೆಯ ವರದಿಗಳಲ್ಲಿ ಇದೊಂದು ವಿಶೇಷ :
ಮುಂಬನಿಂದ ಟೈಮ್ಸ್ ಆಫ್ ಇಂಡಿಯ ಸಮೂಹದಲ್ಲಿ ಪ್ರಕಟವಾಗುತ್ತಿರುವ ಪತ್ರಿಕೆ ಮಿರರ್, ಬಹಳ ವಿಶ್ವಸನೀಯವೆಂದು ಈಗಾಗಲೇ ರಾಷ್ಟ್ರದಲ್ಲಿ ಹೆಸರುಮಾಡಿದೆ. ಮುಂಬೈ ದಂಗೆ, ಟಾಜ್ ಹೋಟೆಲಿನ ಉಗ್ರಗಾಮಿಗಳ ಮತ್ತು ಕಸಬ್ ನ ಅತಿ ಹತ್ತಿರದ ಚಿತ್ರವನ್ನು ಜನತೆಗೆ ಹಿಡಿದು ತೋರಿಸಿಕೊಟ್ಟು ಬಹಳ ಉಪಕಾರಿಯಾಗಿದೆ. ದಿನಪ್ರತಿ ರಾಜ್ಯದಲ್ಲಿ ನಡೆಯುತ್ತಿರುವ ಕಳ್ಳತನ ವಂಚನೆ ರಾಷ್ಟ್ರ ದ್ರೋಹಗಳ ಪಟ್ಟಿ ದುರದೃಷ್ಟವಶಾತ್ ಹೆಚ್ಚುತ್ತಲೇ ಇದೆ. ಇಂದಿನ ಮಿರರ್ ಪತ್ರಿಕೆಯ ಮತ್ತೊಂದು ಅಂತಹದೇ ಮೋಸದ ಪ್ರಸಂಗ ಜನರಿಗೆ ಯೋಚಿಸಲು ಮಜಬೂರ್ ಮಾಡಿದೆ. ವಾಲಿವ್ ವಸೈನ ಸಂತೋಷ್ ಕಾಂಪೌಂಡ್ ನಲ್ಲಿ ವಾಸಿಸುವ ಪಾಟಿಲ್, ಇಲ್ಲಿ ಅಕ್ಷಯ್ ಕುಮಾರ್ ನಟಿಸಿದ ಹಿಂದಿ ಚಲನ ಚಿತ್ರದ ಪ್ರಸಂಗ ನಕಲಿ ಪೋಲೀಸ್ ಕಾರ್ಯಚರಣೆಗೆ ಪ್ರೇರಣೆ ನೀಡಿರಬಹುದೇ. ಉತ್ತರ ಹುಡುಕಬೇಗಾಗಿದೆ. ತನ್ನ ಈ ನಕಲಿ ಇನ್ ಸ್ಪೆಕ್ಟರ್ ಕಾಲಾವಧಿಯಲ್ಲಿ ಯಾವ ಮೋಸದ ಪ್ರಕರಣಗಳಿವೆ ಎನ್ನುವುದು ತಿಳಿಯಬೇಕಾಗಿದೆ.
ಪೊಲೀಸ್ ಎಸ್ಪಿ ಯೂನಿಫಾರಾಮ್ ಧರಿಸಿ ಎಲ್ಲರಿಗೂ ಮೋಸಮಾಡಿದ ಹೇಮಂತ್ ಪಟೇಲ್ ?
೩೫ ವರ್ಷದ ಮುಂಬೈನ ಉಪಗರ ವಿರಾರ್ ನಿವಾಸಿ ಪೋಲಿಸ್ ವರ್ದಿ ಧರಿಸಿದ ಹೇಮಂತ್ ದತ್ತಾತ್ರೇಯ್ ಪಾಟಿಲ್, ಐಪಿಎಸ್ ಎಂದು ಎಲ್ಲರಮುಂದೆ ಹೇಳಿಕೊಂಡು ಸುಮಾರು ೬ ತಿಂಗಳಿನಿಂದಲೂ ರಾಜಾರೋಷವಾಗಿ ಪೋಲಿಸ್ ಡ್ರೆಸ್ ಧರಿಸಿ ಸುತ್ತಾಡುತ್ತಿದ್ದಾನೆ. ಬಿಳಿಬಣ್ಣದ ಶೆವರ್ಲೆಟ್ ಗಾಡಿಯಲ್ಲಿ ಬೀಟ್ ತಿರುಗುತ್ತಿರುವ ಪಾಟಿಲ್ ನ್ನು ನೋಡಿದರೆ ಸ್ವಲ್ಪವೂ ಅನುಮಾನವೇ ಬರುವುದಿಲ್ಲ.
ಎನೇನು ಮೋಸ ಮಾಡಲು ಸಾಧ್ಯವಿದೆ ಎನ್ನುವುದನ್ನು ಇಲ್ಲಿ ಕಾಣ ಬಹುದು :
ಎತ್ತರದ ವ್ಯಕ್ತಿತ್ವ, ತುಂಬುಮೀಸೆ, ಖಾಕಿ ವರ್ದಿಧರಿಸಿ ಶೆವರ್ಲೆಟ್ ಕಾರಿನಲ್ಲಿ ವಿಂಡ್ ಸ್ಕ್ರೀನ್ ಹತ್ತಿರ ಪೋಲಿಸ್ ಎನ್ನುವ ದೊಡ್ಡ ಪಟ್ಟಿ ಹಾಕಿಕೊಂಡಿದ್ದಾನೆ. ನಿಜವಾದ ಪೋಲೀಸ್ ಆಫೀಸರ್ ಗೂ ಇರದ ಗತ್ತು ಜರ್ಬು ಆತನ ನಡವಳಿಕೆಯಲ್ಲಿ ಕಂಡುಬರುತ್ತಿದೆ. ಆದರೆ ಎಷ್ಟು ದಿನ ಸುಳ್ಳು ಹಾಗೆಯೇ ಇರಲು ಸಾಧ್ಯ.
ಶಾಲಾ ಮಕ್ಕಳಿಗೆ ನೀತಿ ಬುದ್ಧಿ ಹೇಳಿದ ವ್ಯಕ್ತಿ :
ಆಗಸ್ಟ್ ೬ ನೆಯ ತಾರೀಖು ಇಫ್ತಾರ್ ಪಾರ್ಟಿಯ ದಿನ ವಿಶೇಷ ಅತಿಥಿಯಆಗಿ ಬಂದಿದ್ದ. ಪಾಟೀಲ್ ಹೆಮ್ಮೆಯ ಗೊಂಡಿಯ ಜಿಲ್ಲೆಯ ವಾಸಿಯಾದ್ದರಿಂದ ಅವರನ್ನು ಸಮಾರಂಭಗಳಲ್ಲಿ ಸತ್ಕರಿಸುವ ಪರಿಪಾಠ ನಡೆದಿತ್ತು. ಹಿಂದೆ ಉಪ-ಎಸ್ಪಿ ಯಾಗಿದ್ದ ಸಂಗ್ರಾಮ್ ಸಿಂಗ್ ನಿಶಂದಾರ್ ಈಗ ಅಡಿಶನಲ್ ಸೂಪರಿಂಟೆಂಡೆಂಟ್ ಆಫ್ ಪೋಲೀಸ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಪಾಟೀಲ್, ಸಿಂಗ್ ಗೆ ತಮ್ಮ ಪರಿಚಯ ಮಾಡಿಕೊಡುತ್ತಾ ತಾವು ಈಗ ಜಾಗಕ್ಕೆ ಹೊಸದಾಗಿ ಎಸ್ಪಿಯ ಹುದ್ದೆಗೆ ಬಂದಿರುವ ವ್ಯಕ್ತಿ ಎಂಬುದಾಗಿ ಹೇಳಿದರು. ಆದರೆ, ಈ ಸರ್ಕಲ್ ನಲ್ಲೇ ೨೦೦೫ ರಿಂದ ೨೦೦೮ ರವರೆಗೆ ಕೆಲಸದಲ್ಲಿದ್ದು ಇಲ್ಲಿನ ಎಲ್ಲರನ್ನೂ ಚೆನ್ನಾಗಿ ಬಲ್ಲ ನಿಶಂದಾರ್ ಗೆ ಸ್ವಾಭಾವಿಕವಾಗಿಯೇ ಅನುಮಾನ ಬಂತು. ಹಾಗಾದರೆ, ವಾಲಿವ್ ಪೋಲೀಸ್ ಸ್ಟೇಷನ್ ನ ಹಿಂದಿನ ಎಸ್ಪಿ ಯಾರು ಎಂದು ಪಾಟೀಲ್ ನನ್ನು ಕೇಳಿದಾಗ ಆತ ತಕ್ಷಣ ಉತ್ತರ ಕೊಡಲು ತಿಳಿಯದೆ ತಬ್ಬಿಬ್ಬಾದನು. ಹಿಂದಿ ಚಲನ ಚಿತ್ರದ ಒಬ್ಬಹೆಸರಾಂತ ನಾಯಕ ನಟ ಅಕ್ಷಯ ಕುಮಾರ್ ಮೂವಿ ಸ್ಪೆಶಲ್-೨೬ ನಟನೆಯ ಚಿತ್ರವನ್ನು ನೋಡಿದ ಪ್ರಭಾವದಿಂದ ಈ ತರಹದ ಅನ್ಹೊನಿ ಘಟನೆ ನಡೆಯಿತೆಂಬುದು ತಜ್ಞರ ಅಭಿಪ್ರಾಯ.
ಕಳ್ಳ ಒಂದಲ್ಲ ಒಂದು ದಿನ ಸಿಕ್ಕಿ ಬೀಳಲೇ ಬೇಕಲ್ವ ?
ಫೆಬ್ರವರಿಯಲ್ಲಿ ಮುಂಬೈನ ಒಬ್ಬ ಟೈಲರ್ ಗೆ ಹೇಳಿ ಹೊಲಿಸಿಕೊಂಡನು. ನಾಶಿಕ್ ಪುಣೆ, ಎಲ್ಲಾ ಕಡೆ ಬೀಟ್ ಓಡಾಟ ಟೋಲ್ ನಾಕಗಳ ಮೂಲಕವೂ ದಿನಪ್ರತಿ ತಿಂಗಳುಗಟ್ಟಳೆ ಯಾರಿಗೂ ಅನುಮಾನ ಬರದಂತೆ ಎಚ್ಚರವಾಗಿದ್ದನು
ನಂತರ ೨೦೧೩ ರ, ಫೆಬ್ರವರಿ ೨ ರಂದು ವಸಾಯಿನ ನ್ಯೂ ಇಂಗ್ಲೀಷ್ ಸ್ಕೂಲ್ ಪ್ರೈಮರಿ ಮತ್ತು ಸೆಕೆಂಡ ಗೊಂಡಿಯಾ ಪೋಲೀಸ್ ಸ್ಟೇಷನ್ ಗೆ ಹೊಸದಾಗಿ ನಿಯುಕ್ತನಾಗಿರುವ ವಿಷಯ. ಅಮರಾವತಿಯ ಪೋಲೀಸ್ ಡಿಎಸ್ಪಿ ಯವರ ಕೈಕೆಳಗೆ ಪ್ರೊಬೇಷನ್ ಆಫೀಸರ್ ಎಂದು ಹೇಳಿಕೊಂಡನು. ಸೆಕ್ಷನ್ ಗಳನ್ನೂ ಉದ್ದೇಶಿಸಿ ಒಬ್ಬ ಸಹೃದಯಿ ವೀರ ಪೊಲೀಸ್ ಯೋಧನ ತರಹ ಮಕ್ಕಳ ಮೇಲೆ ಪರಿಣಾಮ ಬೀರುವ ಭಾಷಣ ಬಿಗಿದಿದ್ದರು. ಅವರು ಕೊಟ್ಟ ಭಾಷಣ ಚೆನ್ನಾಗಿಯೇ ಇತ್ತು.
ಮೋಸಗಾರ ಕೊನೆಗೂ ಸಿಕ್ಕಿ ಬಿದ್ದ :
೨೦೧೩ ರ, ಜುಲೈ ೧೪ ರಂದು ವಸಾಯಿ ವಿರಾರ್ ಮುನಿಸಿಪಲ್ ಕಾರ್ಪೊರೇಷನ್ ಫಂಕ್ಷನ್ ನಲ್ಲಿ ಪ್ರಮುಖ ಪಹುಣೆಯಾಗಿ ಆಹ್ವಾನಿಸಲ್ಪಟ್ಟಿದ್ದ ಸಮಯದಲ್ಲಿ ಥಾಣೆಯ ಮೇಯರ್ ನಾರಾಯಣ್ ಮಂಕರ್ ಅವರಿಗೆ ಹುಗುಚ್ಛ ಕೊಟ್ಟು ಗೌರವಿಸಿದ್ದರು. ನಿಶಾಂದಾರ ತಮ್ಮ ಸಹಾಯಕ ಇನ್ಸ್ಪೆಕ್ಟರ್ ರಾಜೇಂದ್ರ ಮೋಹಿತೆಗೆ ಇದರ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಆದೇಶ ನೀದಿದರು. ಪಾಟೀಲ್ ಹೇಳಿದ ಯಾವ ಮಾತೂ ನಿಜವಾಗಿರಲಿಲ್ಲ. ತಕ್ಷಣ ಅವರು ಪಾಟೀಲ್ ನನ್ನು ಅರೆಸ್ಟ್ ಮಾಡಿದರು. ಇಂಡಿಯನ್ ಪೀನಲ್ ಕೋಡ್ ಸೆಕ್ಷನ್ ೧೭೦, ೧೭೧, ೪೧೯ ಪ್ರಕಾರ ಮೋಸಮಾಡಿದ ತಪ್ಪಿಗಾಗಿ ಪೋಲೀಸ್ ಕಷ್ಠಡಿಯಲ್ಲಿ ೨ ದಿನ ಜೈಲುವಾಸದಲ್ಲಿ ಇರಿಸಲಾಯಿತು. ತಪಾಸಣೆಯ ನಂತರ ಪಾಟೀಲ್ ವಿದ್ಯಾವಂತನಲ್ಲ. ಸರಿಯಾಗಿ ಇಂಗ್ಲೀಷ್ ಬರುವುದಿಲ್ಲವೆನ್ನುವ ಸತ್ಯ ತಿಳಿಯಿತು . ಮರಾಠಿಯಲ್ಲಿ ಮಾತಾಡುವಾಗಲೂ ತಡವರಿಸುತ್ತಾನೆ.
ನಮಗೆ ಕಲಿಯಲು ಮತ್ತೊಂದು ನೀತಿಯ ಪಾಠ :
ಇದು ಇಲ್ಲಿನ ವರೆಗಿನ ಕಥೆ. ಪೊಲೀಸ್ ಇಲಾಖೆ ತನ್ನದೇ ಆದ ಕೆಲವು ನಿಯಮ ಶಿಸ್ತು ಗಳನ್ನು ಹೊಂದಿದೆ. ಅದಲ್ಲದೆ ವಿಶ್ವಸೀನತೆ ಅತಿ ಪ್ರಧಾನ ವಿಷಯ. ಮೋಸ ಮೊದಲಾದ ಮಾತಿಗೆ ಇಲ್ಲಿ ಬೆಲೆಯಿಲ್ಲ.
ಸುದ್ದಿ ಸಂಗ್ರಹ ಮತ್ತು ಸಚಿತ್ರ ವರದಿಗಾರ :
-ಹೊರಂಲವೆಂ
ಮುಂಬೈ -೪೦೦೦೮೪