ಆನೆ ಬಂತು ಆನೆ - 1

ಆನೆ ಬಂತು ಆನೆ - 1

"ಏ ಇ ನಡು ರಾತ್ರಿಲ್ಲಿ ಅದು ಇ ಹುಣ್ಣಿಮೆ ಚಂದ್ರನ ಬೆಳಕಿನಲ್ಲಿ ಇ ತಂಗಾಳಿಯಲ್ಲಿ ಇ ತೋಟ್ಟಗಳ ಪಕ್ಕದಲಿ  ನಡೆಯೋ ಭಾಗ್ಯ ಎಷ್ಟು ಜನರಿಗೆ ಸಿಗುತೋ , ಒಂದು ಬೀಡಿ ಇದ್ದಾರೆ ತತ್ಹಾರಲ್ಲ " ಎಂದು ಮಂಜ ಸಿದ್ದಯ್ಯನಿಗೆ ತನ್ನ ಹೆಗಲ ಮೇಲೆ ಏರಿಕೊಂಡು ಇದ್ದ ಕೊಡಲಿ ಕೆಳೆಗೆ ಇಳಿಸುತ್ತಾ ಕೇಳಿದ . ಆರು ಅಡಿ ಎತ್ತರದ ಆಜನುಭಾಹು ಮಂಜ . ತೆಳುವಾದ ಬಿಳಿ ಅಂಗಿ  , ಬಿಳಿ ಕಚೇ ಪಂಚೆ ಉಟ್ಟಿದ, ತಲೆಗೆ ಒಂದು ಟವೆಲ್ ಪೇಟ್ಟದ ರೀತಿ ಸುತ್ತಿಕೊಂಡು ಇದ್ದ . ಅವನ ಬಿಳಿ ಬಟ್ಟೆ ಕೆಂಪು ಕಂದು ಬಣ್ಣಕ್ಕೆ ತಿರುಗಿತು . ಅವನ ಇ ವೇಷ ದಿಂದ ಅವನು ಸೌದೆ ಹೊಡೆಯುವವನು ಅಂತ ನೋಡಿದವರಿಗೆ ಗೊತ್ತುಆಗುತ್ತಿತು.
 
ಅವನ ಜೊತೆ ಇದ್ದ ಸಿದ್ದಯ್ಯ ಮಂಜನಂಥಹ ಆಳು ಅಲ್ಲದಿದರು ಸಾಧಾರಣ ಮೈಕಟ್ಟು ಹೊಂದಿದವನು. ಅವನು ಸಹ ಮಂಜನ ವೇಷಧಾರಿಯೇ. ಅವನು ಸೌದೆ ಹೊಡೆಯುವವನೆ ಆಗಿದ. ಮಂಜ ಬೀಡಿ ಕೇಳಿದಕ್ಕೆ ತನ್ನ ಹೆಗಲ ಮೇಲೆ ಹಿಡಿದುಕೊಂದು ಇದ್ದ ಗಡಾರಿ ಇಳಿಸುತ್ತಾ ತನ್ನ ಅಂಗಿ ಜೇಬಿನಿಂದ ಬೀಡಿ ತೆಗೆಯಲು ಕೈ ಹಾಕಿದ ಅಷ್ಟರಲ್ಲಿ ತನ್ನ ಎದುರು  ಕಾಲು ದಾರಿಯ ಬದಿಯಲ್ಲಿ ಇದ ತೋಟ್ಟದ ಗಿಡ ಸಂದುಗಳಲ್ಲಿ ಯಾವುದು ಆಕೃತಿ ಓಡಿದ ಹಾಗೆ ಕಂಡಿತು ಸಿದ್ದಯ್ಯನಿಗೆ.

 

" ಲೇ ಮಂಜ , ಆ ಶೇಷಪ್ಪನ ತೋಟ್ಟದಲ್ಲಿ ಏನೋ ಓಡಿದಂಗೆ ಕಾಣ್ತಾದೆ ನೋಡಲ ವಸಿ ಆ ಕಡಿಕೆ ". ಮಂಜಣ್ಣ ತಲೆ ಎತ್ತಿ ಶೇಷಪ್ಪನ ತೋಟ್ಟದ ಕಡೆ ನೋಡಿದ , ಅವನಿಗೂ ಗಿಡ ಸಂದಿಗಳಲ್ಲಿ ಏನೋ ಇದೆ ಅಂತ ಗೋಚರವಾಗುತ್ತ ಇತ್ತು. ಮಂಜಣ್ಣ " ಲೇ ಸಿದ್ದ ಹೌದು ಕಣ್ಣಲ್ಲ ಏನೋ ಅದೇ ಅಲ್ಲಿ ಬಾರಲ್ಲ ನೋಡೋಣ , ಯಾವನಾದರೂ ತೋವಟಕ್ಕೆ ನುಗಿದಾನೋ ಹೆಂಗೋ ಅಂತ " ಎಂದು ಹೇಳಿ ಎರಡು ಹೆಜ್ಜೆ ಮುಂದೆ ನಡೆದನು . ಶೇಷಪ್ಪನ ತೋಟ್ಟದಲ್ಲಿ ಇದ್ದ ಆಕೃತ್ತಿ ತನ್ನ ದೊಡ್ಡ ಗಂಟಲ್ಲಿನ ಶಬ್ದ ಮಾಡಿತು. ಆ ಶಬ್ದಕ್ಕೆ ಮಂಜ ಸಿದ್ದ ಇಬ್ಬರು ಬೆಚ್ಚಿ ಬಿದ್ದರು.

" ಲೇ ಮಂಜ ಆನೆ ಕಣ್ಣಲ್ಲ ನುಗಿರೋದು , ಸುತ್ತ ಮುತ್ತ ಕಣ್ಣು ಹಾಯಿಸಲ್ಲ ಯಾವುದಾದರು ನಮ್ಮ ಹಿಂದೆ ಬಂದು ಬಿಟ್ಟರೆ ಕಷ್ಟ , ಎಷ್ಟು ಅವೋ ಅಲ್ಲಿ ಗೊತ್ತಿಲ್ಲ " . " ಲೋ ಸಿದ್ದ ಬಾರೋ ಆನೆ ಓಡಿಸೋಣ ಇಲ್ಲ ಅಂದರೆ ಶೇಷಪ್ಪ ಕಷ್ಟ ಪಟ್ಟು ಬೆಳೆದಿರೋ ಬಾಳೇ , ಸಪ್ಪೊಟ್ಟ ಎಲ್ಲ ಹಾಳು ಮಾಡಿ ಬಿಡುತ್ತೆ , ಪಾಪ್ಪ" .

 

 

 

" ಲೇ ಮಂಜ ದಡ್ಡನ ಹಾಗೆ ಹೇಳುತ್ತಿಯಲ್ಲೋ , ನಾವು ಹೋಗಿ ಓಡಿಸೋಕ್ಕೆ ಅದೇನು ನಾಯಿ ಮಾರಿ ಮಾಡಿದ್ದಿ , ಲೇ ತಮ್ಮ ಅದು ಆನೆ ಅಯಿತ್ತಿ ಆನೆ , ಇಬ್ಬರನು  ಹಾಕಿ ಅಪ್ಪಚ್ಚಿ ಮಾಡಿ ಬಿಡುತ್ತೆ ಅಷ್ಟೇ ಅಮ್ಯಾಕ್ಕೆ " . " ಆಗ್ ಅನುತ್ತೀಯ , ಸರಿ ಆ ಶೇಷಪ್ಪ ಅಣ್ಣನ ಪೋನ್ ನಂಬರ್ ಇದ್ದಾರೆ ಕೊಡು ಕಾಲ್ ಆದರು ಮಾಡಿ ಹೇಳೋಣ ". " ಆ ದೊಡ್ಡ ಕೇರಿ ಜನಗಳ ನಂಬರ್ ನನ್ನ ಅಂತ ನಿನಂಥ ಜನರಿಗೆ ಎಲ್ಲಿ ಸಿಗಬೇಕ್ಕೋ ಬೆಪ್ಪ " .

ಮತ್ತೆ ಆನೆ ತನ್ನ ದೊಡ್ಡ ಗಂಟಲಿನ ಶಬ್ದ ಮಾಡಿತು . " ಲೇ ಮಂಜ ನಾವು ಇರೋದು ಆನೆಗೆ ಕಾಣಿಸಿರಬೇಕು , ಬಾರಲ್ಲ ಬೇಗ ಇಲ್ಲಿಂದ ಹೊಗೊನೋ ". ಮಂಜ ಏನನ್ನೋ ನೋಡುತಿರುವದನ ಗಮನಿಸಿದ ಸಿದ್ದಣ್ಣ "ಏನಲ್ಲ ಅದು ಯಾವುದು ಪ್ರಾಣಿ ಕಣ್ಣುಗಳು ಇದ್ದ ಹಾಗೆ ಕಾಣಿಸುತ ಇದೆ , ಪಳ ಪಳ ಅಂತ ಒಳ್ಳಿತ ಇದೆ , ನಡೀಲ ಮೊದಲು , ಯಾವುದೊ ಕರಡಿ ನೋ ಇಲ್ಲ ಚಿರತೆ ನೋ ಹಾಗಿದ್ರೆ ಕಷ್ಟ , ಜೀವ ಉಳಿಸಿಕೊಳೋಣ " ಎಂದು ಹೇಳುತ ಮಂಜನ ಬಲಗೈ ಹಿಡಿದು ಎಳೆದನು. ಇಬ್ಬರು ಬೇರೆ ದಾರಿ ಇಡಿದು ಮನೆಗೆ ಹೋದರು.

ಗೇಣಿ ಕೊಪ್ಪಲು ನಾಗರಹೊಳೆ ಕಾಡು ಪಕ್ಕದಲ್ಲಿ ಇರೋ ಒಂದು ಸಣ್ಣ ಹಳ್ಳಿ. ಸುಮಾರು ೩೦ ರಿಂದ ೪೦ ಜನ ಇರೋ ಹಳ್ಳಿ . ಅದರಲ್ಲಿ ಮೇಲಿನ ಕೇರಿಯಾ ೧೦ ರಿಂದ ೧೫ ಜನ , ಮತ್ತೆ ಕೆಳಿಗಿನ ಹಟ್ಟಿ ೨೫ ಜನ ಇರೋ ಹಳ್ಳಿ. ಗೇಣಿ ಕೊಪ್ಪಲು ಸುತ್ತ ಮುತ್ತ ಗೋರವಾದ ದಟ್ಟ ಕಾಡು. ಅಲ್ಲಿಯ ಜನರಿಗೆ ಕಾಡಿನ ನಂಟು ಹೊಸದೇನು ಅಲ್ಲ. ಕೆಳಗಿನ ಹಟ್ಟಿ ಜನರಿಗೆ ಹೇಳಿ ಕೊಳುವಂತ ಜಮೀನು ಇಲ್ಲ. ಅವೆಲ್ಲ ಏನೇ ಇದ್ದರು  ಮೇಲಿನ ಕೇರಿ ಜನಗಳಿಗೆ ಮಾತ್ರ. ಮೇಲಿನ ಕೇರಿಗೆ ಸೇರಿದ ಶೇಷಪ್ಪನ ಜಮೀನು ಕೂಡ ಕಾಡಿನ ಪಕ್ಕದಲ್ಲಿ ಇರೋದು . ಶೇಷಪ್ಪ ಸಾಲನೋ ಸೊಲನೊ ಮಾಡಿ ಬಾಳೇ, ಸಪ್ಪೊಟ್ಟ ಮತ್ತು ಇತ್ತರೆ ತರಕಾರಿ ಹಾಕಿದ. ಇವನ ಪಕ್ಕದಲ್ಲೇ ಆ ಊರಿನ ಹೆಗ್ಡೆ , ರಂಗಯ್ಯ , ಮಾದಪ್ಪನವರ ತೋಟ್ಟ ಗಳು ಇದವು . ಇವರ ತೋಟ್ಟಗಳಲ್ಲಿ  ಕೂಲಿ ನಾಲಿ ಮಾಡಿಕೊಂಡು ಮಂಜಣ್ಣ , ಸಿದ್ದಯ್ಯ , ಬೋರಯ್ಯ ಮತ್ತೆ ಇತ್ತರೆ ಕೆಳಿಗಿನ ಕೇರಿ ಅವರು ತಮ್ಮ ತಮ್ಮ ಉದರ ಬಾದೆ ನೀಗಿಸಿ ಕೊಳುತ್ತ ಇದ್ದರು. ಆವತು ಮಂಜಣ್ಣ , ಸಿದ್ದಯ್ಯ ಪಕ್ಕದ ಊರಿನಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ವಾಪಸು ಆಗುತ್ತಾ ಇದರು .

ಮುಂಜಾನೆಯ ನಿತ್ಯ ಕರ್ಮಗಳನೆಲ್ಲ ಮುಗಿಸಿ ಹೆಂಡತಿ ಕೊಟ್ಟ ಕಾಪಿ ಹೀರುತ್ತ ತಮ್ಮ ರೂಂ ಇಂದ ಹಾಲ್ ಕಡೆಗೆ ಹೆಜ್ಜೆ ಹಾಕುತ್ತ ಗೆಣಿಕೊಪ್ಪಲಿನ ಛೇರ್ಮನ್ ಸಾಹೇಬರು ಬಂದರು. ಅರ್ಧ ತಲೆ ಬೆಳ್ಳಗೆ , ಇನ್ನು ಅರ್ಧ ಕಪ್ಪಗೆ ಇದ್ದ ಅವರ ತಲೆ ಕೂದಲು ನೋಡುವವರಿಗೆ ಅವರು ಮಧ್ಯ ವಯಸಿನವರು ಅಂತ ಹೇಳುತ್ತಿತು , ಕೋಲು ಮುಖ , ಬೋಳಿಸಿದ ಮೀಸೆ , ಹಣೆ ತುಂಬಾ ವಿಭೂತಿ ಇಟ್ಟು ಕೊಂಡು , ಮೈ ಮೇಲೆ ಒಂದು ಬಿಳಿ  ಫುಲ್ಲು ಬನಿಯನ್ ಹಾಕ್ಕಿಕೊಂಡು , ಬಿಳಿ ಪಂಚೆ  ಹುಟ್ಟಿಕೊಂಡು , ಹೆಗಲ ಮೇಲೆ ಟವೆಲ್ ಹಾಕ್ಕಿಕೊಂಡು ಇದರು ಛೇರ್ಮನ್ ಸಾಹೇಬರು. ನೋಡಲು ಕೃಷ್ಣ ಬಣ್ಣದವರು, ಸಾದಾರಣ ಮೈ ಕಟ್ಟು ಹೊಂದಿದವರು ಛೇರ್ಮನ್ ಸಾಹೇಬರು . ಕೈ ಅಲ್ಲಿ ಹಿಡಿದಿದ ಕಾಪಿ ಗ್ಲಾಸ್ನ  ಟಿವಿ ಸ್ಟಾಂಡ್ ಮೇಲೆ ಇಡುತ್ತ , " ಲೇ ಇವಳೇ ಟಿವಿ ರಿಮೋಟ್ ಎಲ್ಲೇ ಹಾಕಿದ್ದೀ , ಸ್ವಲ್ಪ ತಕೊಡ್ ಬಾರ್ ಅಮ್ಮಿ " , "ಅಲ್ಲೇ ಟಿವಿ ಸ್ಟಾಂಡ್ ಪಕ್ಕದಲ್ಲಿ ಇರೋ ರಾಗಿ ಮೂಟೆ ಮೇಲೆ ಇಟ್ಟಿದೀನಿ ನೋಡ್ರಿ ".

ಛೇರ್ಮನ್ ಸಾಹೇಬರು ಟಿವಿ ರಿಮೋಟ್ ಕೈಗೆ ತಗೊಂಡು ಟಿವಿ ಹಾಕಿದರು , ಅವರು ಟಿವಿನಲ್ಲಿ ಕಂಡ ವಾರ್ತೆಯನು ನೋಡುತ್ತಾ ಗಾಬರಿ ಆದವರಂತೆ " ಲೇ ಚೆನ್ನ ಲೇ ಚೆನ್ನ ಬಾರಲ್ಲ ಇಲ್ಲಿ " ಅಂತ ತಮ್ಮ ಮನೆ ಆಳನ ಜೋರಾಗಿ ಕರೆದರೂ , ಚೆನ್ನ ತಾನು ಮಾಡುತ್ತಿದ ಕೆಲಸವನು ಬಿಟ್ಟು ಮನೆ ಒಳ್ಳಗೆ ಬಂದು " ಹೇಳಿ ಒಡೆಯ " ಅಂತ ಮಂಡಿ , ಬೆನ್ನು ಸ್ವಲ್ಪ ಬಾಗಿಸಿ ವಿನಮ್ರತೆ ಇಂದ ಕೇಳಿದನು "ಎನ್ನೋ ಚೆನ್ನ ಊರು ಒಳ್ಳಗೆ ಹೋಗಿದೆನು , ಏನೋ ಇದು ಟಿವಿನಲ್ಲಿ ನಮ್ಮ ಊರಿಗೆ ಆನೆ ಬಂದಿತು ಅಂತ ತೋರಿಸುತಾವರೆ , ಏನೋ ಇದು " , "ಹೌದು ಬುದ್ದಿ , ಹೊತ್ತಾರೆ ನಾನು ಆ ರಂಗಯ್ಯ ನವರ ಮನೆಗೆ ಅಮ್ಮಾವರು ಕೊಟ್ಟರು ಅಂತ ಗಿಣ್ ಹಾಲು ತಗೊಂಡು ಹೋಗೋವಾಗ ಊರಲೆಲ್ಲ ಆ ಶೇಷಪ್ಪ ಅಣ್ಣನ ತೋಟ್ಟಕ್ಕೆ ರಾತ್ರಿ ಆನೆ ಬಂದಿತಂತೆ , ಅದನ ನೋಡೋಕ್ಕೆ ಎಲ್ಲ ಟಿವಿ ಚಾನೆಲ್ನವರು ಅಲ್ಲಿ ಜಮೈಸಿದರೆ ಅಂತ ಗುಸು ಗುಸು ಮಾತು ಹಾಡಿಕೊಳುತ್ತ ಇದ್ದರು " , " ನಾನು ಈ ಊರಿನ ಛೇರ್ಮನ್ ನಂಗೆ ಒಂದು ಮಾತು ಯಾರು ಹೇಳಿಲ , ಇರಲ್ಲಿ , ಸರಿ ನನ್ನ ಚಪ್ಲಿ ತೆಗೆದು ಇಡೋ , ಶರ್ಟ್ ಹಾಕಿಕೊಂಡು ಬರುತ್ತೀನಿ , ಏನು ಅಂತ ಒಸಿ ಹೋಗಿ ನೋಡೋಣ ".

ಛೇರ್ಮನ್ರು , ಮತ್ತು ಅವರಿಗೆ ಛತ್ರಿ ಇಡಿದು ಕೊಳ್ಳೋಕೆ ಚೆನ್ನ ಇಬ್ಬರು ಶೇಷಪ್ಪನವರ ತೊಟ್ಟದ  ಕಡೆ ಹೊರಟ್ಟರು. ಅಲ್ಲಿ ಇವರು ಬರುವ ಮೊದಲೇ ಎಲ್ಲ ಟಿವಿ ಚಾನೆಲ್ ನವರು ತಮ್ಮ ತಮ್ಮ ಕ್ಯಾಮೆರಾ , ರಿಪೋರ್ಟರ್ಗಳೊಂದಿಗೆ ದಾವಿಸಿದರು . ಕಿಕ್ಕಿರಿದು ಸೇರಿತ್ತು ಜನ. ಇದನೆಲ್ಲ್ಲಕಂಡ  ಛೇರ್ಮನ್ರು " ಅಲ್ಲಲೇ ಇದೆನಲ್ಲ ಚೆನ್ನ ಈ ಪಾಟಿ ಜನ ಸೇರವರೆ , ಏನೋ ಆನೆ ನೋಡೋಕೆ ಬಂದವರ ಇಲ್ಲ ಯಾರದಾದರೂ ತಿಥಿ ಮಾಡೋಕ್ಕೆ ಬಂದವರೋ , ಯಾರೋ ಈ ಸುದ್ದಿನ ಇವರಿಗೆ ಹೇಳಿದು , ಈ ಊರಿನ ಛೇರ್ಮನ್ ನಾನು ದಂಡಕೆ , ಒಬ್ಬರನ ಫೋನ್ ಮಾಡಿಲವಲ್ಲೋ " ಅನ್ನುತ್ತಾ ಶೇಷಪ್ಪನ ತೊಟ್ಟದ ಹತ್ತೀರ ಬಂದರು.