ಪಡುವಲ‌ ಗಣೇಶ‌

ಪಡುವಲ‌ ಗಣೇಶ‌

ನಮ್ಮ‌ ಪಕ್ಕದ‌ ಮನೆಯವರಾದ‌ ಬಸವರಾಜ‌ ಇಂಡಿ ಅವರ‌ ಮನೆಯಲ್ಲಿನ‌ ಪಡುವಲ‌ ಬಳ್ಳಿಯಲ್ಲಿ ಅನೇಕ‌ ಕಾಯಿಗಳಿವೆ.ಅವುಗ‌ಳ‌ ನಡುವೆ ಈ ಕಾಯಿ ತೆರೆಮರೆಯಲ್ಲಿಂದಂತೆ ಇತ್ತು.ಇಂದು ಮುಂಜಾನೆ ಅವರು ಇದನ್ನು ಗಮನಿಸಿ ನನ್ನ‌ ಗಮನಕ್ಕೂ ತಂದರು.ಇದರಲ್ಲಿ ಏನು ವಿಶೇಷವಿದೆ ಎಂದು ಕೇಳಿದರು.ನಾನೂ ತಟ್ಟನೆ ಗಣಪ‌ ಎಂದು ಹೇಳಿದೆ.ಅವರೂ ಇದೇ ಉತ್ತರ‌ ನಿರೀಕ್ಷಿಸಿದ್ದರು.ಗಣೇಶ‌ ಹಬ್ಬದ‌ ಸಂದರ್ಭದಲ್ಲಿ, ಬಳ್ಳಿಯಲ್ಲಿ ಅವನು ಅವತರಿಸಿದ್ದು ಅವರಿಗೆ ವಿಶೇಷ‌ ಸಂತೋಷವನ್ನುಂಟು ಮಾಡಿದೆ.ಎಲ್ಲ‌ ಸಂಪದಿಗರೂ ಇದನ್ನು ನೋಡಿ ಖುಷಿ ಪಡಲಿ ಎಂಬುದೇ ನನ್ನ‌ ಉದ್ದೇಶ‌.ಇದರಲ್ಲಿ ಮತ್ತೆ ವಿಶೇಷ‌ ಅರ್ಥ‌ ಕಲ್ಪಿಸಿಕೊಳ್ಳಬಾರದೆಂದು ನನ್ನ‌ ಸವಿನಯ‌ ಪ್ರಾರ್ಥನೆ. ನಾಟಕದಲ್ಲಿ ಗಣೇಶನ ಪಾತ್ರ‌ ಮಾಡಿದವ‌ ಗಣೇಶ‌ ದೇವರಾಗಲಿಕ್ಕೆ ಸಾಧ್ಯವಿಲ್ಲಾ.ಆದರೆ ಪಾತ್ರಧಾರಿಯ‌ ಪರಕಾಯ‌ ಪ್ರವೇಶದಿಂದಾ ಅದ್ಭುತ‌ ಎಂದಷ್ಟೇ ಹೇಳಬಹುದು.ಇಲ್ಲಿಯೂ ಕೂಡಾ ಅಷ್ಟೆ.ಸೃಷ್ಟಿಯ‌ ಕಲ್ಪನೆಗಳೂ ಹೇಗಿರುತ್ತವೆ ನೋಡಿ‌