ಅವಳೆ...!

ಅವಳೆ...!

ಅದು ಒಂದು ಭಾನುವಾರದ ಸಂಧ್ಯಾಕಾಲ ಸುಮಾರು 4:30 ರ ಸಮಯ. ಮಾರನೇ  ದಿನ ನನ್ನ ಕಾಲೇಜಿನ ಎರಡನೇ ವರ್ಷದ ಮೊದಲ ದಿನವಾಗಿದ್ದರಿಂದ ಕೆಲವು ಅಗತ್ಯ ಸಾಮಾಗ್ರಿಗಳನ್ನು ಕೊಳ್ಳಲು ಎಷ್ಟೋ ಹುಡುಗ ಹುಡುಗಿಯರ common meeting point ಆಗಿರುವ ಜಯನಗರ 4th ಬ್ಲಾಕ್ ಗೆ ಹೋಗಿದ್ದೆ. ಇನ್ನೇನು ಶಾಪಿಂಗ್ ಎಲ್ಲ ಮುಗಿದು ಹಾಸ್ಟೆಲ್ ಗೆ ಮರಳಲೆಂದು ಕಾಂಪ್ಲೆಕ್ಸ್ busstop ತಲುಪುವಷ್ಟರಲ್ಲೇ, ಧೋ ಎಂದು  ಶುರುವಾಯ್ತು ವರುಣರಾಯನ ಆರ್ಭಟ. ನನಗೂ-ವರುಣನಿಗೂ-ಟೀ/ಕಾಫೀಗೂ ಅವಿನಾಭಾವ ಸಂಬಂಧ. ಇಂಥ ಸಮಯದಲ್ಲಿ ಟೀ/ಕಾಫೀ ಹುಚ್ಚು ತುಸು ಜಾಸ್ತಿಯೇ ಇರುವ ನನಗೆ  ಥಟ್ಟೆಂದು ನೆನಪಾಗಿದ್ದು ಅಲ್ಲೇ ಇದ್ದ ಹೋಟೆಲ್ ಪವಿತ್ರ. ಪವಿತ್ರ ಹೋಟೆಲ್ ನ ಕೊತಾಸ್ ಕಾಫೀ ಎಂದಾಕ್ಷಣ ನನಗೆ ಥಟ್ಟನೆ ನೆನಪಾಗೋದು ನನ್ನ hostel ಮಿತ್ರರಾದ ಯಡವಟ್ ಯೆಡ್ಡಿ ಖ್ಯಾತಿಯ ಮಹೇಶ್, ಸದಾನಂದಗೌಡರ ಥರಾನೆ always ಹಸನ್ಮುಖಿ ಅಭಿಷೇಕ್ ಮತ್ತು ಸದಾರೋಗಿ, ತಮಿಳುನಾಡಿನ ಮಾನಸಪುತ್ರ  ನಟೆಸನ್. ಹಾಗೇ ಇನ್ನು ಕೆಲವು ಬಾರಿ ನನ್ನ ಇತರೆ ಮಿತ್ರರಾದ SPB ಟಿಕ್ಕಿ, ಉಪ್ಪಿಟ್ ಸಂಪಿ ಮತ್ತು download ಕಿಸ್ನ ಅವರೂ ಕೂಡ ಸಾಥ್ ನೀಡಿದ್ದುಂಟು. But ಆ ದಿನ ಇವರೆಲ್ಲಾ ಇಲ್ಲದೇ ಸ್ವಲ್ಪ ಬೇಜಾರಿನಿಂದಲೇ ಚಹಾ ಕೈಯಲ್ಲಿಡಿದುಕೊಂಡು ನಿಂತಿರುವಾಗಲೇ, ಎಂಥಾ ಗಟ್ಟಿ ಮನುಷ್ಯನೇ ಆದ್ರೂ ಒಮ್ಮೆ ಥರಗುಟ್ಟುವಂಥಹ ಜೋರಾದ ಸಿಡಿಲ ಅಬ್ಬರ. ಅದೇ ಸಮಯಕ್ಕೆ ಸಿಡಿಲಿಗೆ ಬೆಚ್ಚಿ ಬಿದ್ದ ಯಾವುದೋ ಒಂದು ಹೆಣ್ಣಿನ ಧ್ವನಿ ಪಕ್ಕದಲ್ಲೇ ಇದ್ದ cool joint ಕಡೆಯಿಂದ ಬಂದು ಅಪ್ಪಳಿಸಿತು ನನ್ನ ಕಿವಿಯ ಬಳಿ. ಸುಮ್ನೆ ಸಹಜ ಕುತೂಹಲದಿಂದ ಆ ಧ್ವನಿ ಯಾರದ್ದಿರಬಹುದು ಎಂದು ಅವಳ ಕಡೆ ಕತ್ತು ಹಾಯಿಸಿದೆ. but ನನಗೆ ಕಾಣಿಸಿದ್ದು ಅರ್ಧ ಮುಖ ಮಾತ್ರ. ರೇಷ್ಮೆಯಂಥ ಮುಂಗುರುಳ ಕೂದಲಿನಿಂದ ಮುಚ್ಚಿದ್ದ ಉಳಿದರ್ಧ ಮುಖ ನನ್ನ ಕುತೂಹಲವನ್ನು ಇನ್ನೂ ಹೆಚ್ಚಿಸಿತು. ಅಂತಹ ಮಳೆಗಾಲದಲ್ಲೂ white&white ಬಟ್ಟೆ ಧರಿಸಿದ್ದಳು ಆ ಚೆಲುವೆ. ಅವಳ ಮತ್ತು ನನ್ನ ಮಧ್ಯ ಇದ್ದ ೧೫ ಅಡಿ ಅಂತರ ಜಾಸ್ತಿಯಾಯ್ತ್ಹೇನೋ ಅನ್ನಿಸಿ, ಇನ್ನೂ ಹತ್ತಿರದಿಂದ ಅವಳನ್ನು ನೋಡುವ ಆಸೆಯಾಗಿ ಬೇಗಬೇಗನೆ ಚಹಾ ಕುಡಿದು ಮುಗಿಸಿದೆ. ಹುಡುಗಿಯ ಹತ್ತಿರ ಹೋಗುವ ಭರದಲ್ಲಿ ಚಹಾವನ್ನು ಸ್ವಾಲ್ಪವೂ waste ಮಾಡದೆ ಸವಿದೆ. To be frank ಅವಳನ್ನು ನೋಡುನೋಡುತ್ತಾ ಸವಿದ ಆ ಚಹಾ ಎಂದಿಗಿಂತ ಸ್ವಲ್ಪ ಜಾಸ್ತಿಯೇ ಮಜಾ ಕೊಟ್ಟಿತ್ತು. ಯಾವುದೋ ಒಂದು ಅಪರಿಚಿತ ಹುಡುಗಿಯ ಮುಂದೆ pose  ಕೊಡಲು ಹುಡುಗರು ಏನೆಲ್ಲಾ ಸಿದ್ಧತೆ ಮಾಡಿಕೊಳ್ಳುತ್ತಾರೋ, ಅವನ್ನೆಲ್ಲಾ ಮಾಡಿಕೊಳ್ಳುತ್ತಾ ಹುಡುಗಿಯ ಕಡೆ ನಡೆಯತೊಡಗಿದೆ. But ಆ ಹುಡುಗಿಯೇನೋ ಅವಳ ಗೆಳತಿಯೊಂದಿಗೆ ಮಾತಾಡುವುದರಲ್ಲಿ busy.

ಎಂಥವರನ್ನೂ ಒಮ್ಮೆ ಆಕರ್ಷಿಸುವಂಥಹ ದೇಹಸೌಂದರ್ಯ. ಶುಭ್ರ ಹಾಲಿನಂಥಹ ಬಣ್ಣ. Still ಅವಳ ಮುಖ ನೋಡಲು ಸಾಧ್ಯವಾಗಿರಲಿಲ್ಲ. ಸುತ್ತಮುತ್ತಲ ವಾತಾವರಣ ಗಮನಿಸಿದರೆ 70% ಗಂಡಸರ ಕಣ್ಣು ಇದ್ದಿದ್ದು ಅವಳ ಮೇಲೆಯೇ. ಇನ್ನೇನು ಅವಳು ನಿಂತಿದ್ದ ದಿಕ್ಕಿಗೆ ಎದುರಾಗಿ ಅವಳ ಮುಖವನ್ನು ನೋಡೇಬಿಡಬೇಕು ಎಂದುಕೊಳ್ಳುವಷ್ಟರಲ್ಲೇ, ಅವಳು ತಿನ್ನುತ್ತಿದ್ದ ice cream ಖಾಲಿಯಾಗಿ, dustbin ಕಡೆ ನಡೆದುಹೋಗಿ ಅವಳೇ ನನ್ನ ಕಡೆ ತಿರುಗಿದಳು. ತಿದ್ದಿ ತೀಡಿದಂಥಹ ಮುಖ, ಕಾಡಿಗೆ ಹಚ್ಚಿದ ಆಶಾಭಾವನೆಯಿಂದ ಕೂಡಿದ ಕಣ್ಣುಗಳು, ಉದ್ದ ಮೂಗು, lipstickನ ಲೇಪ ಇಲ್ಲದೆಯೂ ಆಕರ್ಷಿಸುವಂಥಹ ತುಟಿಗಳು. ಹೀಗೆ ಅವಳ ಅಂದವನ್ನು ಸವಿಯುತ್ತಾ ನನ್ನನ್ನು ನಾನೇ ಮರೆತುಹೊದೆ. ಅಷ್ಟರಲ್ಲಾಗಲೇ ಅವಳು ಅವಳ ಗೆಳತಿಗೆ bye ಹೇಳುತ್ತಿರುವದನ್ನು ನೋಡಿ ಖುಷಿಯಾಯ್ತು. Because ಅವಳು ಒಬ್ಬಂಟಿಯಾದಾಗ ಹೇಗೋ ಹೋಗಿ ಅವಳನ್ನು ಮಾತಾಡಿಸಿ ಪರಿಚಯ ಮಾಡಿಕೊಳ್ಳಬೇಕೆಂಬ ಹಂಬಲ. But ದೇವ್ರು ನನಗೆ ಆ ಧೈರ್ಯ ಕೊಟ್ಟೇ ಇರಲಿಲ್ಲ. ಹುಡುಗಿಯರನ್ನು ಪರಿಚಯ ಮಾಡಿಕೊಳ್ಳುವ ಕಲೆಯಲ್ಲಿ ನಾನು ಆಗಿನ್ನೂ ಅ ಆ ಇ ಈ ಮಾತ್ರ ಗೊತ್ತಿರುವಂತಹವನು. ನನ್ನ ಬಗ್ಗೆ ನನಗೇ ನಾಚಿಕೆಯಾಗಿ, ಒಂದು ಕ್ಷಣ ಬೇಸರವಾಯ್ತು. ಅಷ್ಟರಲ್ಲೇ ಆ ಹುಡುಗಿ ಅವಳ scooty ಹತ್ತಿ ಹೊರಟೇ ಹೋದ್ಲು. ಇನ್ನು ಬೇಸರ ಮಾಡಿಕೊಂಡು ಉಪಯೋಗವಿಲ್ಲ ಎಂದುಕೊಂಡು "ಹೇ, ಇದೇನು ನನಗೆ ಹೊಸದಲ್ಲ ಬಿಡು" ಎಂದು ನನಗೆ ನಾನೇ ಸಮಾಧಾನ ಮಾಡಿಕೊಳ್ಳುತ್ತಾ bus stop ಕಡೆ ಹೊರಟೆ. ಬಸ್ಸಲ್ಲಿ ಕುಳಿತು ನಡೆದದ್ದೆಲ್ಲವನ್ನೂ ಒಂದು ಸುಂದರ ಕನಸಿನಂತೆ ನೆನಪಿಸಿಕೊಳ್ಳುತ್ತಿರುವಾಗ FMನಲ್ಲಿ ಗುನುಗುತ್ತಿದ್ದ ರವಿಮಾಮನ ಹಾಡುಗಳು ಕೊಂಚ ಸಮಾಧಾನ ನೀಡಿದವು.