ಮರೀಚಿಕೆ!
ಕವನ
ಮರೀಚಿಕೆಯ ಬೆನ್ನತ್ತಿ ಹೊರಟವನು ನಾನು..
ಆಗಸದಲಿ ನೀಲಿ ಚಂದ್ರನ ಹುಡುಕುತಿಹೆನು..
ಹೊಳೆಯಲ್ಲಿ ಹುಣಸೆಯನು ತೊಳೆದವನು ನಾನು..
ಬಿದ್ದರೂ ಮೀಸೆ ಮಣ್ಣಾಗಿಲ್ಲ ಎನ್ನುತಿಹೆನು..
ಗಾಳಿ ಗೋಪುರವ ಕಟ್ಟುತಿಹೆನು..
ಉತ್ತರ ತಿಳಿದು ಪ್ರಶ್ನಿಸುತಿಹೆನು..
ಹಗಲುಗನಸಲ್ಲೆ ಜೀವಿಸುತಿಹೆನು..
ನನ್ನ ಚಿತೆಗೆ ನಾನೇ ಕೊಳ್ಳಿ ಇಡುತಿಹೆನು..
ಏನೀ ಮೋಹ, ಯಾಕೀ ದಾಹ..
ಬಯಸಿದಿರು ಗೆಳೆಯ ನೀನೇನನ್ನು..
ಬಯಸಿದಿರು ಗೆಳೆಯ ನೀನೇನನ್ನು..
Comments
ಉ: ಮರೀಚಿಕೆ!
ಗಾದೆಗಳನ್ನ ಜೋಡಿಸಿ ಬರೆದ ಕವನ ಚೆನ್ನಾಗಿದೆ
In reply to ಉ: ಮರೀಚಿಕೆ! by Vinutha B K
ಉ: ಮರೀಚಿಕೆ!
ಧನ್ಯವಾದಗಳು ವಿನುತ ಅವರೆ.