ಆರ್ಥಿಕ‌ ಸ್ವಾವಲಂಬನೆಯ‌ 5 ಮಂತ್ರಗಳು

ಆರ್ಥಿಕ‌ ಸ್ವಾವಲಂಬನೆಯ‌ 5 ಮಂತ್ರಗಳು

 

ಜೀವನವು ಒಂದು ವ್ಯವಹಾರದಂತೆ. ಜೀವನದ ವ್ಯವಹಾರವನ್ನು ಅರ್ಥಪೂರ್ಣ‌, ಲಾಭಯುಕ್ತವಾಗಿ ನಡೆಸಲು ತಾಳ್ಮೆಯಿಂದ ಕೂಡಿದ ಧೀರ್ಘಕಾಲಿನ ಯೋಜನೆ ಅತ್ಯವಶ್ಯಕ‌. ಯೋಜನೆಯು ಶಿಸ್ತುಬದ್ಧವಾಗಿದ್ದಲ್ಲಿ, ಕಾಲಕಾಲಕ್ಕೆ ಸರಿಯಾದ ರೀತಿಯಲ್ಲಿ ಪರಿಶೀಲಿಸುತ್ತಿದ್ದಲ್ಲಿ ಅದು ಯಾವುದೇ ರೀತಿಯ ತೊಂದರೆಗಳಿಲ್ಲದೇ ಸಾಗುತ್ತದೆ. ಹಾಗೆಯೇ ಈ ಜೀವನದ ವ್ಯವಹಾರದಲ್ಲಿ ಹಣವಂತು ಅವಶ್ಯಕ‌. ಆದರೇ ಹಣವಿದ್ದವರೆಲ್ಲ ಸುಖಿಯಾಗಿದ್ದಾರೆ ಎಂಬುದಂತು ಶುದ್ಧ ಸುಳ್ಳು.

ನನ್ನ ಅನಿಸಿಕೆಯಂತೆ ಹಣದ ಸರಿಯಾದ ವ್ಯವಹಾರ ಜ್ನಾನ ಹೊಂದಿರುವವನು ಸುಖಿ.    ಪ್ರತಿಯೊಬ್ಬ ವ್ಯಕ್ತಿಯೂ ತನ್ನ ವಿದ್ಯಾಭ್ಯಾಸವನ್ನು ಮುಗಿಸಿ ಯಾವುದೇ ಒಂದು ಉದ್ಯೋಗವನ್ನು ಕಂಡುಕೊಳ್ಳುತ್ತಾನೆ. ಉದ್ಯೋಗದಿಂದ ಗಳಿಸುವ ಹಣದಿಂದ ಆತ ತನ್ನ ಜೀವನಾವಶ್ಯಕ ವಸ್ತುಗಳನ್ನು ಪೂರೈಸಿಕೊಳ್ಳುತ್ತಾನೆ. ಅವುಗಳಲ್ಲಿ ಸ್ವಲ್ಪಹಣವನ್ನು ಉಳಿತಾಯವೂ ಮಾಡುತ್ತಾನೆ. ಆದರೇ ಬಹಳ‌ಷ್ಟು ಜನ‌ ಯಾವುದೇ ಗೊತ್ತು ಗುರಿಯಿಲ್ಲದೇ ಉಳಿತಾಯವನ್ನು ಮಾಡುತ್ತಾರೆ. ಅದು ಹೆಚ್ಚಿನ‌ ಸಮಯದಲ್ಲಿ ವ್ಯರ್ಥವಾಗಿ ಪರಿಣಮಿಸುತ್ತದೆ. ನನ್ನ ಜೀವನದಲ್ಲಿ ಅನುಸರಿಸಿದ 5 ಮಂತ್ರಗಳನ್ನು ನಿಮ್ಮಲ್ಲಿ ಹಂಚಿಕೊಳ್ಳಲು ಪ್ರಯತ್ನಿಸುತ್ತೇನೆ. ಈ ಮಂತ್ರಗಳಿಂದ ನಾನು ಯಶಸ್ವಿ 4ನೇ ವರ್ಷ ಪೂರೈಸಿದ್ದೇನೆ. ಇನ್ನು ಮುಂದೆಯೂ ಯಶಸ್ವಿಯಾಗುವ ಆತ್ಮವಿಶ್ವಾಸವಿದೆ.  

ಮೊದಲನೇ ಮಂತ್ರ ‍  ಜೀವವಿಮೆ   

ನಾವು ನಮ್ಮ ಉದ್ಯೋಗ ಆರಂಭಿಸಿದ ನಂತರ ಅಥವಾ ಮದುವೆಯಾದ ನಂತರ ನಮ್ಮ ಜವಾಬ್ದಾರಿ ವೃದ್ಧಿಯಾಗುವುದು ಸಹಜ‌........... ಆಗ ನಮ್ಮ ಅಸಹಜ ಮರಣದಿಂದ ನಮ್ಮನ್ನು ಅವಲಂಬಿಸಿರುವವರ ಜೀವನವು ತೊಂದರೆಯಲ್ಲಿ ಸಿಲುಕದಂತೆ ಜೀವವಿಮೆ ಆಧಾರ ನೀಡುತ್ತದೆ. ಇಂದು ವಿಧವಿಧವಾದ ವಿಮೆಗಳು ಲಭ್ಯ‌. ನಮಗೆ ಸರಿ ಹೊಂದುವಂತಹದನ್ನು ಕೂಲಂಕುಶವಾಗಿ ಪರಿಶೀಲಿಸಿ ಅಥವಾ ತಜ್ನರ ಸಲಹೆ ಪಡೆದು ಮುಂದುವರಿಯುವುದು ಅತ್ಯುತ್ತಮ‌. ಈ ವ್ಯವಹಾರದಲ್ಲಿ ಮೋಸಗಳು ಸರ್ವೇಸಾಮಾನ್ಯ‌.  ((  

ಜೀವ ವಿಮೆಯ ಬಗ್ಗೆ ವಿಸ್ತಾರವಾಗಿ ಮುಂದಿನ ಲೇಖನದಲ್ಲಿ ಬರೇಯುತ್ತೇನೆ.  

ಏರಡನೇ ಮಂತ್ರ‌ ಆರೋಗ್ಯ ವಿಮೆ  

ಈ ವಿಮೆಯ ಮುಖ್ಯ ಉದ್ದೇಶ ಆರೋಗ್ಯದಲ್ಲಿ ಯವುದೇ ರೀತಿಯ ಏರು ಪೇರುಗಳಾಗಿದ್ದಲ್ಲಿ ಅದರ ಸಂಪೂರ್ಣ ಖರ್ಚನ್ನು ಈ ವಿಮೆ ಭರಿಸುತ್ತದೆ. ಇದರಿಂದ ನಮಗೆ ಆಕಸ್ಮಿಕವಾಗಿ ಆಗುವ ರೋಗ‌, ಅಪಘಾತದಿಂದ ತೊಂದರೆ ಅನುಭವಿಸುವಂತಾಗಲಾರದು. ಉದಾ: 23 ವಯಸ್ಸಿನ ಯುವಕನಿಗೆ 2 ಲಕ್ಷ‌ ರೂ ವಿಮೆಗೆ ವರ್ಷಕ್ಕೆ ಕೇವಲ 3000ರೂ ಕಂತು ಕಟ್ಟಬೇಕಾಗುತ್ತದೆ. ಇದು ವಿಮಾ ಕಂಪನಿಯನ್ನನುಸರಿಸಿ ಬದಲಾಗುತ್ತದೆ. ಈ ವಿಮೆಯನ್ನು ಪಡೆಯುವ‌ ಮೊದಲು ವಿಮೆಯ ಯಾವತ್ತು ನಿಯಮಗಳನ್ನು ಜಾಗೃತೆಯಿಂದ‌ ಓದಿ ಅರ್ಥವಾಗದಿದ್ದಲ್ಲಿ ಅವನ್ನು ತಿಳಿದವರ ಸಹಾಯದಿಂದ ಅರ್ಥ ತಿಳಿದುಕೊಂಡು ನಂತರ ನಿರ್ಧಾರ ಮಾಡುವುದು ಅತಿ ಮುಖ್ಯ‌.  

ಸಣ್ಣ ವಯಸ್ಸಿನಲ್ಲಿ ಈ ವಿಮೆ ಮಾಡುವುದರಿಂದ ವರ್ಷದ ಕಂತಿನಲ್ಲಿ ಬಹಳ ರಿಯಾಯತಿ ಇರುತ್ತದೆ ಹಾಗೂ ವಿಮೆಯೂ ಬೇಗ ದೊರೆಯುತ್ತದೆ.

 ಮೂರನೇ ಮಂತ್ರ ‍ ನಿಯಮಿತವಾದ ಹಣದ ಹೂಡಿಕೆ  

ನಮ್ಮ ತಿಂಗಳಿನ ಅವಶ್ಯಕ ಖರ್ಚುಗಳನ್ನು ಬಿಟ್ಟು ಉಳಿದ‌ ಹಣವನ್ನು ನಿಯಮಿತವಾಗಿ ಶಿಸ್ತುಬದ್ಧವಾಗಿ ಸಂಗ್ರಹ‌ ಮಾಡಬೇಕು. ಇಲ್ಲಿ ನಮಗೆ ಬಹಳಷ್ಟು ಮಾರ್ಗಗಳು ಲಭ್ಯವಿದೆ.   1. ಬ್ಯಾಂಕ ಎಫ್ ಡಿ ಮತ್ತು ಆರ್ ಡಿ.   2. ಮ್ಯೂಚ್ಯುವಲ್ ಫಂಡ‌   3. ಶೇರು ಮಾರುಕಟ್ಟೆ   4. ಸರ್ಕಾರಿ ಮತ್ತು ಇತರ ಸರ್ಕಾರೇತರ ಸಂಸ್ಥೆಯ ಸಾಲಪತ್ರಗಳು   5.ಪಬ್ಲಿಕ್ ಪ್ರೊವಿಡೆಂಟ ಫಂಡ‌   6. ಎನ್ ಎಸ್ ಸಿ ಇತ್ಯಾದಿ   ನಮ್ಮ ಆಯ್ಕೆ ಹಾಗೂ ಆದ್ಯತೆ ಅನುಗುಣವಾಗಿ ಹೂಡಿಕೆ ಮಾಡುವುದು ಉತ್ತಮ‌.

ಈ ರೀತಿ ನಿಯಮಿತವಾಗಿ ಹೂಡಿಕೆ ಮಾಡಿದಲ್ಲಿ 10 ವರ್ಷಗಳಲ್ಲಿ ನಾವು ದೊಡ್ಡ ಮೊತ್ತವನ್ನು ಸಂಗ್ರಹಿಸಬಹುದು. ನನ್ನ ಹಿಂದಿನ ಲೇಖನ ಓದಿ http://sampada.net/%...   ಇಲ್ಲಿ ಹೂಡಿಕೆಯ ಮೊದಲು ಅವುಗಳ ಬಗ್ಗೆ ಸಂಪೂರ್ಣ‌ ಜ್ನಾನ‌ ಬಹಳ‌ ಮುಖ್ಯ‌..  

ನಾಲ್ಕನೇ ಮಂತ್ರ‌ ‍ ನಿಯಮಿತ ಅವಲೋಕನ‌  

ವ್ಯವಹಾರ‌ ಶುರು ಮಾಡಿದ‌ ಮೇಲೆ ಅದನ್ನು ಸರಿಯಾಗಿ ನಿಭಾಯಿಸದಿದ್ದರೆ ಆ ವ್ಯವಹಾರದ‌ ಆಯಸ್ಸು ಕೆಲವೇ ದಿನ‌.............. ವ್ಯವಹಾರದಲ್ಲಿ ಬರುವಂತಹ‌ ಸಣ್ಣ‌ ತೊಂದರೆಗಳನ್ನು ಅಲ್ಲಿಯೇ ನಿಭಾಯಿಸಿ ಸೂಕ್ತ‌ ಮಾರ್ಗೋಪಾಯ‌ ಕಂಡು ಕೊಳ್ಳುವುದು ಅವಶ್ಯಕ‌.  ಹೂಡಿಕೆಯಲ್ಲಿ ಮಾಡಬೇಕಾದ ಬದಲಾವಣೆಗಳನ್ನು ಅಭ್ಯಸಿಸಿ ಅವುಗಳಲ್ಲಿ ಆಗಬೇಕಾಗಿರುವ ಬದಲಾವಣೆಗಳನ್ನು ಮಾಡುವುದು. ಉದಾ: ತಿಂಗಳಿಗೆ 1000 ರೂ ನಂತೆ 1 ವರ್ಷಕ್ಕೆ ಬ್ಯಾಂಕನ ಆರ್ ಡಿ ಖಾತೆಯಲ್ಲಿ ಜಮಾ ಮಾಡಿ ವರ್ಷದ ಕೊನೆಯಲ್ಲಿ ದೊರೆಯುವ ಹಣವನ್ನು (12000 + ಬಡ್ಡಿ) ಬೇರೆ ವಿಧಾನದಿಂದ ಹೂಡಿಕೆ ಮಾಡುವುದು.   

ಐದನೇ ಮಂತ್ರ‌  

ಈ ಮೇಲೆ ತಿಳಿಸಿದ ಎಲ್ಲ ಮಂತ್ರಗಳನ್ನು ಜೀವನದ ವ್ಯವಹಾರದಲ್ಲಿ ಅಳ‌ಡಿಸುವುದು. ಎಲ್ಲಾ ಗೊತ್ತಿದ್ದು ಅದು ಕಾರ್ಯರೂಪಕ್ಕೆ ಬರದಿದ್ದರೆ ಅದು ನಿರರ್ಥಕ‌.. ವಿದ್ಯೆ ತಿಳಿದು ಅದರ ಓಳ ಮರ್ಮ ತಿಳಿಯದಿದ್ದರೆ ಅದು ವ್ಯರ್ಥ‌.    ಯುವಕರೇ ಸಮಯ ಹಾಳು ಮಾಡದೇ ಈ 5 ಮಂತ್ರಗಳನ್ನು ಇಂದಿನಿಂದಲೇ ಅಳವಡಿಸಿ ಹಾಗೂ ಅರ್ಥಯುತವಾದ ಜೀವನ ನಡೆಸಿ.   

ಈ ಮೇಲೆ ತಿಳಿಸಿದ ಹೂಡಿಕೆಯ ಪ್ರತಿ ವಿಧಾನವನ್ನು ನನ್ನ ಮುಂದಿನ ಲೇಖನಗಳಲ್ಲಿ ವಿವರವಾಗಿ ಎಲ್ಲರ ಮನಮುಟ್ಟುವಂತೆ ಬರೆಯುವ ಪ್ರಯತ್ನ ಮಾಡುತ್ತೇನೆ.