ಮನಸು-ಕನ್ನಡಿ(ಶ್ರೀ ನರಸಿಂಹ 68)

ಮನಸು-ಕನ್ನಡಿ(ಶ್ರೀ ನರಸಿಂಹ 68)

ನೀರು, ಕನ್ನಡಿಯೊಳು ಕಾಣುವ ಚಂದ್ರ ಬಿಂಬವದು

ನೀರು, ಕನ್ನಡಿಗಳ  ಸ್ವಚ್ಚತೆಯನದವಲಂಬಿಸಿಹುದು

ಕೊಳೆಯಿಂದ ನೀರು,ಕನ್ನಡಿ ಬಿಂಬ ಮಂಕಾದರೇನು 

ಮೂಲ ಚಂದ್ರನ  ಬಿಂಬವದು ಕಳೆಗುಂದುವುದೇನು

 

ಆತ್ಮ ಪರಮಾತ್ಮನ ಬಿಂಬದಂತೆಲ್ಲ ದೇಹದಲಿಹುದು

ಮನಸಿನಜ್ಞಾನದಿಂದಲದರನುಭವ  ಆಗದಂತಿಹುದು

ಅಜ್ಞಾನದ ಕೊಳೆಯ ತೊಳೆದು ಕೊಳ್ಳಬೇಕು ಮನವು

ಭಕ್ತಿ ಎಂಬುದೆ ಈ  ಕೊಳೆಯ ತೊಳೆಯೆ ಸಾಧನವು

 

ಮನಸು  ಎಂಬುವುದು ಪ್ರತಿಪಲಿಪ ನೀರು, ಕನ್ನಡಿಯ ತೆರದಿ

ಶುದ್ದವಾಗಿರಿಸಲದ ಸ್ಮರಿಸನವರತ ಶ್ರೀನರಸಿಂಹನ ಮನದಿ

Rating
No votes yet

Comments

Submitted by partha1059 Fri, 09/20/2013 - 19:41

ನೀರು, ಕನ್ನಡಿಯೊಳು ಕಾಣುವ ಚಂದ್ರ ಬಿಂಬವದು

ನೀರು, ಕನ್ನಡಿಗಳ ಸ್ವಚ್ಚತೆಯನದವಲಂಬಿಸಿಹುದು

ಕೊಳೆಯಿಂದ ನೀರು,ಕನ್ನಡಿ ಬಿಂಬ ಮಂಕಾದರೇನು

ಮೂಲ ಚಂದ್ರನ ಬಿಂಬವದು ಕಳೆಗುಂದುವುದೇನು >>>

ನಿಜ ಅತ್ಯಂತ ಸತ್ಯ. ಸತ್ಯ ಎಷ್ಟೆ ಪ್ರಖರವಾಗಿರಬಹುದು ಆದರೆ ಅದನ್ನು ನಮ್ಮ ಮನ ಅರ್ಥಮಾಡಿಕೊಳ್ಳದಿದ್ದರೆ ಉಪಯೋಗವಿಲ್ಲ
ನಾವು ಅರ್ಥಮಾಡಿಕೊಳ್ಳಲಿಲ್ಲ ಅಂದ ಮಾತ್ರಕ್ಕೆ ಸತ್ಯವೇನು ತನ್ನ ಮೌಲ್ಯ ಕಳೆದುಕೊಳ್ಳದು , ಅದು ಪ್ರಖರವಾಗಿಯೆ ಇರುತ್ತದೆ
ಈ ಪ್ರಪಂಚದಲ್ಲಿ ಬಹಳಷ್ಟು ವಿಷಯಗಳು ಅಷ್ಟೆ ಅವು ಸ್ವಷ್ಟವಾಗಿಯೆ ಇರುತ್ತದೆ, ನಮ್ಮ ಮನದಲ್ಲಿ ಮುಸುಕಿರುವ ಮೋಡದಿಂದಾಗಿ ಸ್ವಷ್ಟತೆ ನಮಗೆ ಗೋಚರಿಸುವದಿಲ್ಲ. ಉತ್ತಮ ತರ್ಕ

Submitted by sathishnasa Fri, 09/20/2013 - 20:52

In reply to by partha1059

ಧನ್ಯವಾದಗಳು ಪಾರ್ಥಸಾರಥಿಯವರೆ, ಮನಸ್ಸಿನಲ್ಲಿ ತುಂಬಿರುವ ಕಲ್ಮಶದಿಂದ ನಮ್ಮ ೊಳಗಿರುವ ದೇವನ ಬಿಂಬ ಕಾಣಿಸುವುದಿಲ್ಲ ಭಕ್ತಿಯೆಂಬ ಶುದ್ದ ಜಲದಿಂದ ಮನದ ಕಲ್ಮಶವನ್ನು ತೊಳೆಯಬೇಕು ಆಗ ಪರಮಾತ್ಮನ ಅನುಭವ ದೊರೆಯುವುದು ......ಸತೀಶ್

Submitted by nageshamysore Sat, 09/21/2013 - 06:32

In reply to by partha1059

<<ಈ ಪ್ರಪಂಚದಲ್ಲಿ ಬಹಳಷ್ಟು ವಿಷಯಗಳು ಅಷ್ಟೆ ಅವು ಸ್ವಷ್ಟವಾಗಿಯೆ ಇರುತ್ತದೆ, ನಮ್ಮ ಮನದಲ್ಲಿ ಮುಸುಕಿರುವ ಮೋಡದಿಂದಾಗಿ ಸ್ವಷ್ಟತೆ ನಮಗೆ ಗೋಚರಿಸುವದಿಲ್ಲ. ಉತ್ತಮ ತರ್ಕ >>
+ 1