ತಿಳಿಯದೋ ನಿನ್ನಾಟ

ತಿಳಿಯದೋ ನಿನ್ನಾಟ

ಆ ಹುಡುಗನಿಗೆ ರಸಾಯನಶಾಸ್ತ್ರದ ವಿಜ್ಞಾನಿಯಾಗಬೇಕೆಂಬಾಸೆ.ಎಲ್.ಎಸ್ ಪರೀಕ್ಷೆಯಲ್ಲಿ ಮೈಸೂರು ರಾಜ್ಯಕ್ಕೇ ಮೊದಲ ಸ್ಥಾನ ಪಡೆದ...ಇಂಟರ್ ಪರೀಕ್ಷೆ ಬರೆಯುತ್ತಿದ್ದಾಗ ಇದ್ದಕಿದ್ದಂತೆ ಕಣ್ಣು ಕಾಣಿಸದಾಯಿತು. ಕನಸು ಕನಸಾಗಿಯೇ ಉಳಿಯಿತು.

ಆದರೆ ಹುಡುಗ ಕರ್ನಾಟಕ ಸಂಗೀತದತ್ತ ಮನ ಹರಿಸಿದ. ಛಲದಿಂದ ಸಂಗೀತಗಾರನಾಗಿ ಸರ್ಕಾರಿ ಶಾಲೆಯಲ್ಲಿ ಸಂಗೀತದ ಮಾಸ್ತರಾದ. ನೂರಾರು ಕಛೇರಿಗಳನ್ನು ನೀಡಿ ಸಂಗೀತ ರಸಿಕರ ಮನ ಗೆದ್ದ.

ಅವರು ಟಿ.ಎಸ್.ಸೇತೂರಾಂ. ಕಡೂರು ತಾಲೂಕಿನ ತಂಗಲಿಯ ಟಿ. ಶಾಮಯ್ಯಂಗಾರ್ ಅವರ ಮಗ. ಬೆಂಗಳೂರಿನಲ್ಲಿದ್ದಾರೆ. ಅಂಧಕಾರದಲ್ಲೂ ಸಂಗೀತ ಸಾಧನೆ ಮಾಡಿದ ಸೇತೂರಾಂ ಅವರು ಈಗ ನಿವೃತ್ತರು. "ತಿಳಿಯದೋ ನಿನ್ನಾಟ" ಎಂಬ ಧ್ವನಿಸುರುಳಿ ಹೊರತಂದಿದ್ದಾರೆ. ರಾಯರ ಅನನ್ಯ ಭಕ್ತರು. ರಾಯರ ಸೂಚನೆಯಂತೆ ಸೇತೂರಾಂ ಅವರನ್ನು ಮದುವೆಯಾದಾಕೆ ತಾರಾ. ಅವರೇ ಸೇತೂರಾಂ ಕಣ್ಣುಗಳು.

ಇಂತಹ ಕಲಾವಿದನಿಗೆ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿಯನ್ನು ಸರ್ಕಾರ ನೀಡಲಿ  ಅಲ್ಲವೇ?