ಸೃಷ್ಟಿ ರಹಸ್ಯದರಿವು (ಶ್ರೀನರಸಿಂಹ 70)

ಸೃಷ್ಟಿ ರಹಸ್ಯದರಿವು (ಶ್ರೀನರಸಿಂಹ 70)

ತಲೆಯನೆತ್ತಿ  ನೋಡು  ಇರುಳಲೊಮ್ಮೆ ನೀ ಆಗಸವನು

ಕಾಣ್ವ ಗ್ರಹ,ತಾರೆಗಳ ನೋಟ ಕಾಡುವುದೆಮ್ಮ ಚಿತ್ತವನು 

ಕೋಟ್ಯಾನುಕೋಟಿ ಸೃಷ್ಠಿಗಳಿರುತಿಹ  ಈ  ಬ್ರಹ್ಮಾಂಡಕೆ 

ಸಣ್ಣ  ಕಣದೊಳಗೊಂದು  ಸಣ್ಣ  ಕಣದಂತಿಲ್ಲೆಮ್ಮಿರುವಿಕೆ

 

ಎಲ್ಲವನು,ಎಲ್ಲರನು ಸೃಷ್ಠಿಸಿ ನಡೆಸುತಿಹುದೊಂದು ಶಕ್ತಿ

ಇದರೊಳಹೊರಗನರಿಯೆ  ನಡೆದಿದೆ ತರತರದ ಯುಕ್ತಿ

ಹೇಗಾಯಿತೀ ಸೃಷ್ಠಿ ಎಂಬುವುದನೆಲ್ಲ ಹೇಳಲೆತ್ನಿಸಿದರು

ಅರಿಯಲಾಗಿಲ್ಲ ಏತಕಾಯಿತೀ ಸೃಷ್ಠಿ ಎಂಬುವುದನ್ಯಾರು

 

ಏಕೆನುವುದಕೆ ಉತ್ತರವನರಸಿದರೆ ಮೌನವಾಗುವುದು ಮನವು

ಜಗದೊಡೆಯ ಶ್ರೀ ನರಸಿಂಹ ನೀಡಬೇಕಿದೆಮಗೆ ಇದರ ಅರಿವು

 

ಇದು" ಶ್ರೀ ನರಸಿಂಹ" ಸರಣಿಯಲ್ಲಿ ಸ್ವಂತವಾಗಿ ಪ್ರಕಟಿಸಿರುವ ಬರಹ

Rating
No votes yet

Comments

Submitted by sathishnasa Sun, 09/29/2013 - 19:24

In reply to by makara

ಬಹಳ ದಿನಗಳ ನಂತರದ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಶ್ರೀಧರ್ ರವರೇ. ಬಹಳ ದಿವಸಗಳಿಂದ ಸಂಪದಕ್ಕೆ ಬಂದಿರಲಿಲ್ಲ ಹೀಗಾಗಿ ನಿಮ್ಮ ಲಲಿತಾ ಸಹಸ್ರನಾಮದ ವಿವರಣೆಯನ್ನು ಮೊದಲಿನಿಂದ ಈಗ ಓದುತ್ತಿದ್ದೇನೆ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ ನಮಗೆ ತಿಳಿಯದಿದ್ದ ವಿಷಯಗಳನ್ನು ತಿಳಿಸುತ್ತಿದ್ದೀರಿ ಧನ್ಯವಾದಗಳು......ಸತೀಶ್

Submitted by makara Sun, 09/29/2013 - 20:50

In reply to by sathishnasa

ನಿಮ್ಮ ಮರು ಪ್ರತಿಕ್ರಿಯೆಗೆ ಧನ್ಯವಾದಗಳು ಸತೀಶರೆ. ಲಲಿತಾ ಸಹಸ್ರನಾಮದ ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವುದರಿಂದ ಅನೇಕ ಬಾರಿ ಎಷ್ಟೋ ಕವನಗಳನ್ನು ಓದಲಾಗಿರಲಿಲ್ಲ. ಓದಿದರೂ ಪ್ರತಿಕ್ರಿಯಿಸಿರಲಿಲ್ಲ. ಅದೇನೇ ಇರಲಿ ನೀವು ಮತ್ತೆ ಸಂಪದದಲ್ಲಿ ಸಕ್ರಿಯರಾಗಿರುವುದಕ್ಕೆ ಸಂತಸವೆನಿಸುತ್ತಿದೆ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

Submitted by ಗಣೇಶ Sun, 09/29/2013 - 23:46

ಸತೀಶರೆ, ನಿನ್ನೆ ರಾತ್ರಿ ಟೆರೆಸ್ ಮೇಲೆ ನಿಂತು ನಾನೂ ಇದನ್ನೇ ಯೋಚಿಸುತ್ತಿದ್ದೆ. ಮೇಲೆ ಕೋಟ್ಯಾಂತರ ತಾರೆಗಳು, ಸುತ್ತಲೂ ಎಲ್ಲಿ ನೋಡಿದರಲ್ಲಿ ಮನೆಗಳು..
ತಾರೆಗಳ ಸಂಗತಿ ಬಿಡಿ..ಈ ಫ್ಲಾಟ್‌ನಲ್ಲೇ ಅನೇಕರಿಗೆ ನನ್ನ ಪರಿಚಯವಿಲ್ಲ.ಇನ್ನು ಬೀದಿಯಲ್ಲಿ..ಬೆಂಗಳೂರಲ್ಲಿ..ಕಣದ ಲೆಕ್ಕಕ್ಕೂ ಬರಲಾರೆ. ಏತಕಾಯಿತೀ ಸೃಷ್ಠಿ!?
"ಏಕೆನುವುದಕೆ ಉತ್ತರವನರಸಿದರೆ ಮೌನವಾಗುವುದು ಮನವು
ಜಗದೊಡೆಯ ಶ್ರೀ ನರಸಿಂಹ ನೀಡಬೇಕಿದೆಮಗೆ ಇದರ ಅರಿವು"
..ಜಗದೊಡೆಯನಿಗೆ ಈ ಕಣಕ್ಕೆ ವಿವರಿಸುವ ಕೆಲಸವೇಕೆ? ಹೀಗೇ ನಡೀತಾ ಇರಲಿ ಜೀವನ.

Submitted by RAMAMOHANA Mon, 09/30/2013 - 17:08

In reply to by ಗಣೇಶ

..ಜಗದೊಡೆಯನಿಗೆ ಈ ಕಣಕ್ಕೆ ವಿವರಿಸುವ ಕೆಲಸವೇಕೆ? `ಮಡಕೆ ಮಾಡುವ‌ ಕುಂಬಾರ‌ ಮಣ್ಣನ್ನು ಹದಮಾಡುವಾಗ‌, ಆ ಮಣ್ಣಿನ‌ ಮುದ್ದೆಗೆ ಕಾರಣವನ್ನೇಕೆ ಹೇಳುಬೇಕು..?`
ಸರಿಯಾಗಿ ಹೇಳಿದ್ದೀರ‌ ಗಣೇಶ್ ಜಿ. ಅಂತೆಯೆ ಅದಕ್ಕೆ ಅವನಿಂದ‌ ಸರಿಯಾದ‌ ಉತ್ತರ‌ ಸತೀಶ್ ಅವ್ರು ಹೇಳಿರುವಂತೆ, ``ಅವನು ಮೌನಿ`` ಧನ್ಯವಾದಗಳು. ‍‍_ ರಾಮೋ.

Submitted by sathishnasa Mon, 09/30/2013 - 20:30

In reply to by ಗಣೇಶ

ಧನ್ಯವಾದಗಳು ಗಣೇಶ್ ರವರೇ
>> .ಜಗದೊಡೆಯನಿಗೆ ಈ ಕಣಕ್ಕೆ ವಿವರಿಸುವ ಕೆಲಸವೇಕೆ? ಹೀಗೇ ನಡೀತಾ ಇರಲಿ ಜೀವನ.<< ಅದು ನಿಜವೇ ಅದನ್ನು ತಿಳಿದು ನಾವು ಮಾಡುವುದಾದರೂ ಏನು .....ಸತೀಶ್

Submitted by sathishnasa Tue, 10/01/2013 - 21:00

In reply to by venkatb83

ಧನ್ಯವಾದಗಳು ವೆಂಕಟೇಶ್ ರವರೇ
" ಇದು" ಶ್ರೀ ನರಸಿಂಹ" ಸರಣಿಯಲ್ಲಿ ಸ್ವಂತವಾಗಿ ಪ್ರಕಟಿಸಿರುವ ಬರಹ ???? " -- ಇದು ಸ್ವಂತ ಬರಹವೇ ಅಥವಾ ಬೇರೆಯವರದ್ದೆ ಎಂಬುದನ್ನು ಸೇರಿಸುವಂತೆ ಸಂಪದ ನಿರ್ವಾಹಕರು ತಿಳಿಸಿದ್ದರಿಂದ ಈ ವಾಕ್ಯವನ್ನು ಸೇರಿಸಿದ್ದೇನೆ ಅಷ್ಟೆ ......ಸತೀಶ್