ಉಳ್ಳವರು ಕಂಡಂತೆ ಶೀತಲ್​ ಸಮರ..!

ಉಳ್ಳವರು ಕಂಡಂತೆ ಶೀತಲ್​ ಸಮರ..!

ಚಿಟ್ಟೆ ಹೆಜ್ಜೆ ಬಲ್ಲವರಾರು...ಚೆಂದನೆ ಹುಡುಗಿ ಮನಸನ್ನ ತಿಳಿದವರು ಯಾರು. ಯಾರು..ಯಾರನ್ನೂ ತಿಳಿಯೋಕೆ ಆಗೋದಿಲ್ಲ. ತಿಳಿದವರು ಮನಸ್ಸಿನ ಕೊನೆಯಲ್ಲಿ ಏನೋ ಒಂದು ಹೊಸ ಆಸೆ..ಹೊಸ ಹೆಜ್ಜೆ. ಹಾಗೆ, ಸಿನಿಮಾ ಮಂದಿ. ಯಾವಾಗ..ಏನು ಮಾಡುತ್ತಾರೆ. ಯಾವಾಗ ನಾಯಕರಾಗ್ತಾರೆ. ಇನ್ಯಾವಾಗ ನಿರ್ದೇಶನ ಮಾಡ್ತಾರೆ. ಗೊತ್ತಿಲ್ಲ. ಇಲ್ಲಿ ಸಿಂಪಲ್ಲಾಗ್ ಒಂದು ಸ್ಟೋರಿ ಇದೆ ಬನ್ನಿ ಹೇಳ್ತಿನಿ....

ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ. ಈ ಸಿನಿಮಾ ಮಾಡಿದ ಕ್ರಾಂತಿ ಗೊತ್ತಲ್ಲ. ಸಿಂಪಲ್ ಕತೆ. ಆಡಿದ ಮಾತು ತುಂಬಾ ಪರಿಣಾಮಕಾರಿ. ಬಾಯಿ ಚಪ್ಪರಿಸಿಕೊಂಡೇ ಕೇಳಿದ್ದರು ಸಿನಿಪ್ರಿಯರು. ಗಾಂಧಿನಗರದ ಮಂದಿಗೆ ಇದು ಹೊಸದು. ಅಷ್ಟೇ ಕೆಲಸಕ್ಕೆ ಬಾರದ ಸಿನಿಮಾ. ಎಲ್ಲಿವರೆಗೇ ತೆರೆಗೆ ಬರೋವರೆಗೆ. ನಾಯಕಿ ಶ್ವೇತಾ ಶ್ರೀವತ್ಸ ವಯಸ್ಸಾಗಿರೋ ನಟಿ. ಬೇಡಿಕೆ ಕಮ್ಮಿ ಅಂದವ್ರೇ ಹೆಚ್ಚು. ನಾಯಕ ನಟ ರಕ್ಷಿತ್​ ಶೆಟ್ಟಿ ಕತೆನೂ ಬೇರೆ ಇರಲಿಲ್ಲ. ರಕ್ಷಿತ್ ಐರನ್ ಲೆಗ್ ಅಂದ್ರು. ಅದೇ ಐರನ್ ಲೆಗ್​ ರಕ್ಷಿತ್ ಚಿತ್ರ ಗೆಲುವು ಕಂಡಿದ್ದೇ ತಡ. ಎಲ್ಲರ ಕಣ್ಣು ಮೊದ್ಲು ಬಿದ್ದದ್ದು, ನಿರ್ದೇಶಕ ಸುನೀಲ್ ಮೇಲೆ. ಆ ಮೇಲೆ ನಾಯಕ ರಕ್ಷಿತ್..

ಈಗ ಇದೇ ಹುಡುಗ್ರು ಉಳಿದವರು ಕಂಡಂತೆ ಅಂತಿದ್ದಾರೆ. ಅರ್ಥಾಥ ಹೊಸ ಸಿನಿಮಾ ಮಾಡ್ತಿದ್ದಾರೆ. ಸಿಂಪಲ್ ರಕ್ಷಿತ್ ಇಲ್ಲಿ ನಾಯಕ. ಸುನೀಲ್ ನಿರ್ದೇಶಕ ಅಲ್ಲ. ನಿರ್ಮಾಪಕ. ಹಾಗಾದ್ರೆ, ನಿರ್ದೇಶಕ ಯಾರು ಅನ್ನೋ ಅನುಮಾನ ಮೂಡಿರಬೇಕಲ್ಲವೇ. ಅದು ಬೇರೆ ಯಾರು ಅಲ್ಲ. ಸಿಂಪಲ್ ರಕ್ಷಿತ್. ಕತೆನೂ ಬರೆದು ಕೊಂಡು ಉಳ್ಳವರು ಕಂಡಂತೆ ಅಂತಿದ್ದಾರೆ ರಕ್ಷಿತ್..

ಚಿತ್ರದ ಚಿತ್ರೀಕರಣ ಆರಂಭವಾಗಿದೆ. ಉಡುಪಿಯ ಆಸು-ಪಾಸಿನಲ್ಲಿ ಕತೆ ನಡೆಯುತ್ತದೆ. ಅಲ್ಲಿಯೇ ಹುಟ್ಟಿ ಬೆಳೆದಿರೋದ್ರಿಂದ ರಕ್ಷಿತ್ ತಾನು ಕಂಡ
ಸತ್ಯವನ್ನ ಕತೆಯಾಗಿಸಿದ್ದಾರೆ. ತಮ್ಮ ಕತೆಗೆ ತಾವೇ ಹೀರೋ ಕೂಡ ಆಗಿದ್ದಾರೆ. ವಿಶೇಷವೆಂದ್ರೆ, ಇದು ಬೇರ ಥರದ ಸಿನಿಮಾ. ಮಂಗಳೂರು ಮಂದಿ ಇಷ್ಟಪಡಬಹುದಾದ ಕತೇನೂ ಇದಾಗಬಹುದೇನೋ. ಆದ್ರೆ, ರಕ್ಷಿತ್ ನಿರ್ದೇಶಕನಾಗಿ ಎಷ್ಟು ಮಿಂಚ್ತಾರೋ ಗೊತ್ತಿಲ್ಲ. ಪ್ರತಯ್ನವಂತೂ ಭರ್ಜರಿಯಾಗಿಯೇ ಇದೆ..

ಶೆಟ್ಟರಂಗಡಿ ಚೆಲುವಿನ ಚಿಟ್ಟೆ; ಹೌದು..! ಉಳಿದವರು ಕಂಡಂತೆ ಸಿನಿಮಾದಲ್ಲಿ ಚಿಟ್ಟೆ ಒಂದಿದೆ. ಈ ಚಿಟ್ಟೇನೆ ಕತೆಗೆ ತಿರುವು ಕೊಡದು. ಒಂದು ರೀತಿ ಪ್ರಮುಖ ಪಾತ್ರ. ಆದ್ರೆ, ಹೀರೋಯಿನ್​ ಅಲ್ಲ ಅನ್ನೋದು ನಿರ್ಮಾಪಕ ಸುನೀಲ್ ಹೇಳೋ ಸತ್ಯ.  ಸರಿ ಅದ್ಯಾರು ಅನ್ನೋ ನಿಮ್ಮ ಪ್ರಶ್ನೆಗೆ ಉತ್ತರ ಶೀತಲ್​​ ಶೆಟ್ಟಿ. ಸದಾ ನುಲಿಯುತ್ತಲೇ ಆಕರ್ಷಿಸುತ್ತಿದ್ದ ನ್ಯೂಸ್​ ಆಂಕರ್. ಹೇಳೋ ಸುದ್ದಿ ನೆನಪಿನಲ್ಲಿ ಉಳಿಯುತ್ತಿತ್ತೋ ಇಲ್ಲವೋ. ಶೀತಲ್ ಮ್ಯಾನರಿಸಂ ಕಂಡತಿ ವೀಕ್ಷಕರಿಗೆ ಕಾಡಿದಿದೆ. ಯುವ ನಿರೂಪಕಿಯರಿಗೂ ಶೀತಲ್ಲಳದ್ದೇ ಸೌಂದರ್ಯ ಸಮರ. ಈಗ ಶೀತಲ್​ ಹೊರ ನಡೆದು ಬಂದಿರೋ ಸುದ್ದಿನೂ ಇದೆ.

ಸುದ್ದಿ ಸಂತೆಯಿಂದ ಬಣ್ಣದ ಜಗತ್ತಿಗೆ; ಶೀತಲ್ ಬಗ್ಗೆ ಹೇಳೊದಾದ್ರೆ, ಶೀತಲ್ ಆಂಕರ್ ಆಗಿ ಮಿಂಚಿದ್ದೇ ಹೆಚ್ಚು. ಈಗ ಸುದ್ದಿಗಳ ಸಂತೆಯಿಂದ ಸಿನಿಮಾ ಪ್ರಪಂಚಕ್ಕೆ ಕಾಲಿಟ್ಟಿದ್ದಾರೆ. ಮಾಯಾನಗರಿಗೆ ಬಂದಿರೋ ಶೀತಲ್​ ಶೆಟ್ಟಿಗೆ ಗುಡ್​​ಲಕ್.  ಇನ್ನೂ ಉಳಿದವರು ಕಂಡಂತೆ ಚಿತ್ರಕ್ಕೂ ಒಂದ್​ ವಿಶ್​..

-ರೇವನ್ ಪಿ.ಜೇವೂರ್