ಬಿಸಿಯೇರುತ್ತಿರುವ ಭೂಮಿಯ ತಾಪಮಾನ ಮತ್ತು ಅಮೇರಿಕಾದ ಪರಿಸರ-ವಿರೋಧಿ ನೀತಿ:

ಬಿಸಿಯೇರುತ್ತಿರುವ ಭೂಮಿಯ ತಾಪಮಾನ ಮತ್ತು ಅಮೇರಿಕಾದ ಪರಿಸರ-ವಿರೋಧಿ ನೀತಿ:

ಬರಹ

ವಿಶ್ವದಾದ್ಯಂತ ತನ್ನ ಹಿತಾಸಕ್ತಿಗಾಗಿ ಬಂಡುಕೋರರಿಗೆ, ಭಯೋತ್ಪಾದಕರಿಗೆ ಒಂದಿಲ್ಲೊಂದು ಹಂತದಲ್ಲಿ ಬೆಂಬಲ ನೀಡುತ್ತಿರುವ ಹಾಗೂ ಜಾಗತಿಕ ಬಂಡವಾಳಶಾಹಿಗಳಿಗೆ ವಿಶ್ವ ನಾಯಕತ್ವ ನೀಡುತ್ತಿರುವ ಅಮೇರಿಕಾವು ಮಾಲಿನ್ಯಕೋರ ಖಾಸಗಿ ಕಂಪನಿಗಳಿಗೂ ಅಂತಹುದೇ ಪರಿಸರ-ವಿರೋಧಿ ನಾಯಕತ್ವವನ್ನು ನೀಡುತ್ತಿದೆ.

ಏರುತ್ತಿರುವ ಜಾಗತಿಕ ತಾಪಮಾನ:
ಭೂಮಿಯ ತಾಪಮಾನವು ಜಾಗತಿಕ ಮಟ್ಟದಲ್ಲಿ ಸತತವಾಗಿ ಏರುತ್ತಲೇ ಇದೆ. ಕೈಗಾರಿಕಾ ಚಟುವಟಿಕೆಗಳಿಂದ ಬಿಡುಗಡೆಯಾಗುವ ಮಲಿನಕಾರಕ ಅನಿಲಗಳು ವಾತಾವರಣದೊಳಗೆ ಸೇರಿ ಭೂಮಿಯ ವಾತಾವರಣವನ್ನು ರಕ್ಷಿಸುತ್ತಿರುವ ಓಜೋನ್ ಪದರವನ್ನು ನಾಶಪಡಿಸುತ್ತಿವೆ. ಇದರಿಂದಾಗಿ ಸೂರ್ಯನಿಂದ ಬಿಡುಗಡೆಯಾಗುವ ಅತಿನೇರಳೆ ಕಿರಣಗಳು ಭೂಮಿಯನ್ನು ತಲುಪಿ ಭೂಮಿಯ ಮೇಲ್ಮೈನ ವಾತಾವರಣದಲ್ಲೇ ಉಳಿದು ಭೂಮಿಯ ತಾಪಮಾನವನ್ನು ಮತ್ತಷ್ಟು ಹೆಚ್ಚಿಸುತ್ತಿವೆ. ಕಳೆದ ಶತಮಾನವೊಂದರಲ್ಲಿಯೇ 1 ಡಿಗ್ರಿ ಫ್ಯಾರನ್ಹೀಟ್ನಷ್ಟು ಹೆಚ್ಚಿರುವ ಉಷ್ಣಾಂಶವು ಮುಂಬರುವ ವರ್ಷಗಳಲ್ಲಿ ಕ್ಷಿಪ್ರಗತಿಯಲ್ಲಿ ಏರುತ್ತದೆ. ಕೆಲವು ಭೂಭಾಗಗಳಲ್ಲಿ 3ರಿಂದ 4 ಡಿಗ್ರಿ ಫ್ಯಾರನ್ಹೀಟ್ನಷ್ಟು ಉಷ್ಣಾಂಶ ದಾಖಲಾಗಿದೆ. ಹೆಚ್ಚುತ್ತಿರುವ ಉಷ್ಣಾಂಶದಿಂದಾಗಿ ಮಂಜುಗಡ್ಡೆಗಳು ಕರಗಿ ನೀರಾಗಿ ಹರಿಯುತ್ತಿವೆ. ಕೆಲವೇ ವರ್ಷಗಳಲ್ಲಿ ಹಿಮಪರ್ವತಗಳು ನೀರಾಗಿ ಹರಿಯತೊಡಗುತ್ತವೆ. ಕಡಲ ತೀರಗಳಲ್ಲಿ ಭೂಭಾಗವನ್ನು ಹೆಚ್ಚುತ್ತಿರುವ ಸಮುದ್ರ ನೀರಿನ ಮಟ್ಟವು ಆಕ್ರಮಿಸಿಕೊಳ್ಳತೊಡಗುತ್ತಿದೆ. 1999-2002 ದಲ್ಲಿ ದಾಖಲಾಗಿರುವ ಬರವು ಇಡೀ 40 ವರ್ಷಗಳಲ್ಲೇ ತೀವ್ರತರಹದ್ದಾಗಿದೆ. 2002 ರಲ್ಲಿ ಪಶ್ಚಿಮ ಅಮೇರಿಕಾದಲ್ಲಿ ಜರುಗಿದ ಕಾಳ್ಗಿಚ್ಚು 70 ಲಕ್ಷ ಎಕರೆಯನ್ನು ಭಸ್ಮಗೊಳಿಸಿದ್ದು ಕಳೆದ 50 ವರ್ಷಗಳಲ್ಲೇ ಎರಡನೇ ಅತಿದೊಡ್ಡ ನೈಸಗರ್ಿಕ ವಿಕೋಪವೆನಿಸಿದೆ. ಆಗಾಗ್ಗೆ ಮಾರಣಾಂತಿಕವಾಗಿ ಬೀಸುವ ಬಿಸಿಗಾಳಿಯಿಂದಾಗಿ 2003ನೇ ವರ್ಷವೊಂದರಲ್ಲಿ, ಯೂರೋಪ್ನಲ್ಲಿ 20,000 ಮಂದಿ ಸಾವನ್ನಪ್ಪಿದ್ದರೆ, ಭಾರತದಲ್ಲಿ 1,500 ಮಂದಿ ಸಾವನ್ನಪ್ಪಿದ್ದಾರೆ. ಡೆಂಗೆ ಮತ್ತು ಮಲೇರಿಯಾದಂಥಹ ಕಾಯಿಲೆ ಹರಡುವ ಸೊಳ್ಳೆಗಳು ಈ ಮೊದಲು ಸಮುದ್ರ ಮಟ್ಟದಿಂದ 3,200 ಅಡಿ ಎತ್ತರದ ಪ್ರದೇಶಗಳಿಗಷ್ಟೇ ಸೀಮಿತವಿದ್ದವು. ಆದರೀಗ ಉಷ್ಣಾಂಶದ ಹೆಚ್ಚಳದಿಂದಾಗಿ ಇಂಡೋನೇಷ್ಯಾ ಮತ್ತು ಕೊಲಂಬಿಯಾದ ಆಂಡೀಸ್ ಪರ್ವತಗಳಂಥಹ 7,200 ಅಡಿ ಎತ್ತರದ ಪ್ರದೇಶಗಳಿಗೂ ಪ್ರವೇಶಿಸಿ ಸೊಳ್ಳೆಗಳು ಬದುಕುವ ಶಕ್ತಿಹೊಂದಿವೆ. ಬದಲಾಗುವ ಹವಾಮಾನ ವೈಪರೀತ್ಯಕ್ಕೆ ಹೊಂದಿಕೊಳ್ಳಲಾಗದೆ ಅಪಾರ ಜೀವ ವೈವಿಧ್ಯವು ವಿನಾಶದ ಅಂಚನ್ನು ತಲುಪುತ್ತವೆ.

ಕ್ಯೋಟೋ ಒಪ್ಪಂದ:
ಕ್ಯೋಟೋ ಒಪ್ಪಂದದ ಪ್ರಕಾರ 2010ರ ವೇಳೆಗೆ ಕೈಗಾರಿಕಾ ರಾಷ್ಟ್ರಗಳು 1990ರ ಮಟ್ಟದಲ್ಲಿ ಶೇ. 8ರಷ್ಟು ಅನಿಲ ವಿಸರ್ಜನೆಯನ್ನು ಕಡಿತಗೊಳಿಸುವಂತೆ ನಿಬಂಧನೆಗೆ ಒಳಪಡಬೇಕಾಗುತ್ತದೆ. ಇಂಥಹ ವಿಷಪೂರಿತ ಅನಿಲಗಳ ವಿಸರ್ಜನೆಯನ್ನು ಕಡಿತಗೊಳಿಸುವಂತೆ ಕ್ಯೋಟೋ ಒಪ್ಪಂದಕ್ಕೆ ಯೂರೋಪ್ ರಾಷ್ಟ್ರಗಳಾದಿಯಾಗಿ ವಿಶ್ವದ ಬಹುತೇಕ ಎಲ್ಲ ಕೈಗಾರಿಕೀಕೃತ ಮತ್ತು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು (ಅಂದಾಜು 160 ರಾಷ್ಟ್ರಗಳು) ಮುಂದಾಗಿ ಸಹಿ ಹಾಕಿವೆ. ಆದರೆ ಅಮೇರಿಕಾದ ಬಂಡವಾಳಿಗರ ದೊರೆಯೂ ವಿಶ್ವದ ನಂ.1 ಮಲಿನಕೋರ ರಾಷ್ಟ್ರದ ಅಧ್ಯಕ್ಷರೂ ಆದ ಬುಶ್ ಮಾತ್ರ ಇಡೀ ವಿಶ್ವದ ಪ್ರಶ್ನಾತೀತ ನಾಯಕನಾದ ತಾನು ಇಂಥಹ ನಿಬಂಧನೆ ವಿಧಿಸುವ ಒಪ್ಪಂದಗಳಿಗೆಲ್ಲ ಸಹಿ ಹಾಕಿ ತನ್ನ ದೇಶೀಯ ಎಕ್ಸಾನ್, ಮೊಬಿಲ್ ನಂಥಹ ತೈಲ ಉತ್ಪಾದಿಸುವ ಮಲಿನಕೋರ ದೈತ್ಯ ಕಂಪನಿಗಳಿಗೆ ಕಡಿವಾಣ ಹಾಕುವುದಿಲ್ಲವೆಂದು ಬಾಲಿಶವಾಗಿ ವತರ್ಿಸುತ್ತಿದ್ದಾರೆೆ.

ಅಮೇರಿಕಾವೊಂದು ಅತಿದೊಡ್ಡ ಬಹುರಾಷ್ಟ್ರೀಯ ಕಂಪನಿ?:
ಪರಿಸರ ಸಂರಕ್ಷಣೆಗೆ ಅವಶ್ಯವಾದ ಬಂಡವಾಳ ಹೂಡಿಕೆ ಮಾಡಬೇಕಾಗಿರುವುದರಿಂದ, ತಾವೇ ಉಗುಳುವ ಮಲಿಕಾರಕ ಅನಿಲಗಳನ್ನು ಶುದ್ದಿಗೊಳಿಸಲು ತಗಲುವ ವೆಚ್ಚವನ್ನು ಭರಿಸಲು ಲಾಭದಾಸೆಗಾಗಿ ಈ ದೈತ್ಯ ಕಂಪನಿಗಳು ಇಚ್ಚಿಸುವುದಿಲ್ಲ. ಹಾಗೆಯೇ ಕೊಳ್ಳುಬಾಕ ಪ್ರವೃತ್ತಿಯಿಂದಾಗಿ ಕೈಗಾರೀಕಾ ರಾಷ್ಟ್ರಗಳಲ್ಲಿರುವ ಶೇ. 20ರಷ್ಟು ವಿಶ್ವದ ಜನತೆಯು ಶೇ. 80ರಷ್ಟು ಸಂಪನ್ಮೂಲಗಳನ್ನು ಬಳಸಿ ಬಿಸಾಡುತ್ತಿದ್ದು ಅತೀವ ಮಾಲಿನ್ಯಕ್ಕೆ ಕಾರಣರಾಗಿದ್ದರೆ, ಹಿಂದುಳಿದ ರಾಷ್ಟ್ರಳಲ್ಲಿರುವ ಶೇ. 80ರಷ್ಟು ವಿಶ್ವದ ಜನತೆಯು ಬರೇ ಶೇ. 20ರಷ್ಟು ಸಂಪನ್ಮೂಲಗಳನ್ನಷ್ಟೆ ಬಳಸುತ್ತಿದ್ದಾರೆ. ಜೊತೆಗೆ ಅಮೇರಿಕಾದ ಯುದ್ದ-ಸಂಬಂಧಿತ ಶಸ್ತ್ರಾಸ್ತ್ರ, ತೈಲ ಮತ್ತು ವಿಮಾನ ತಯಾರಿಕಾ ಕಾಖರ್ಾನೆಗಳಿಂದ ಹೆಚ್ಚಿನ ಮಾಲಿನ್ಯವುಂಟಾಗುತ್ತಿದೆ ಮತ್ತು ಈ ಕೈಗಾರಿಕಾ ಲಾಬಿಗೆ ಬುಷ್ ಸಹಜವಾಗಿಯೇ ಮಣಿದಿದ್ದಾರೆ. ಆಟೋಮೊಬೈಲ್, ತೈಲ, ಅನಿಲ, ಕಲ್ಲಿದ್ದಲು ಮತ್ತು ನ್ಯೂಕ್ಲಿಯರ್ ಕಂಪನಿಗಳು ಬುಷ್ ರವರ ಬೆನ್ನೆಲುಬಾಗಿದ್ದು ಚುನಾವಣಾ ಸಮಯದಲ್ಲಿ 5 ಕೋಟಿ ಡಾಲರ್ಗೂ ಹೆಚ್ಚಿನ ನಿಧಿಯನ್ನು ಅವರಿಗೆ ನೀಡಿವೆ. ಚುನಾವಣೆಯಲ್ಲಿ ಗೆದ್ದು ಬಂದಾಕ್ಷಣವೇ ಕ್ಯೋಟೋ ಒಪ್ಪಂದಕ್ಕೆ ತಾವು ಸಹಿ ಹಾಕುವುದಿಲ್ಲವೆಂದು ಘೋಷಿಸಿದ ಬುಷ್, ನಮಗೆ ನಮ್ಮ ಆಥರ್ಿಕತೆ ಮುಖ್ಯವೇ ಹೊರತು, ಅಮೇರಿಕಾದಲ್ಲಿ ವಾಸಿಸುವ ಜನ ಮುಖ್ಯವೇ ಹೊರತು ಮತ್ತಿನ್ನೇನಲ್ಲ ಎಂದಿದ್ದರು. ಅಮೇರಿಕಾವೊಂದು ರಾಷ್ಟ್ರವೇ ಅಥವಾ ಅದೊಂದು ಬಹುರಾಷ್ಟ್ರೀಯ ಕಂಪನಿಯೇ ಎಂದು ಸಂಶಯಪಡುವಂತಾಗಿದೆ.

ವಿಶ್ವದ ಅನಿಲ ವಿಸರ್ಜನೆಯ ಪಾಲುದಾರರು:
ಇಂಗಾಲದ ಡೈ ಆಕ್ಸೈಡ್ ಅನಿಲವನ್ನು ವಿಸಜರ್ಿಸುವ ವಿಶ್ವದ ಮೂರು ದೊಡ್ಡ ರಾಷ್ಟ್ರಗಳು/ಒಕ್ಕೂಟಗಳು (ಶೇಕಡಾವಾರು)
ಯು.ಎಸ್.ಎ ಯೂರೋಪ್ ರಾಷ್ಟ್ರಗಳು ಚೀನಾ ಒಟ್ಟು
ವಿಶ್ವದ ಜನಸಂಖ್ಯೆಯಲ್ಲಿನ ಪಾಲು 4.6 6.3 21 31.9
ವಿಶ್ವದ ಆಥರ್ಿಕತೆಯಲ್ಲಿನ ಪಾಲು 30 23 3.2 56.2
ಇಂಗಾಲದ ಡೈ ಆಕ್ಸೈಡ್ ವಿಸರ್ಜನೆ 24 14 13 51

ಮೇಲಿನ ಕೋಷ್ಟಕದಲ್ಲಿ ಕಾಣುವಂತೆ ಯೂರೋಪ್ ರಾಷ್ಟ್ರಗಳು ಮತ್ತು ಚೀನಾ ದೇಶವು ಅಮೇರಿಕಾಗಿಂತ ಕಡಿಮೆ ಅನಿಲ ವಿಸರ್ಜನೆ ಮಾಡುತ್ತಿರುವುದಲ್ಲದೆ, ಚೀನಾವು 1990ರ ದಶಕದಿಂದೀಚೆಗೆ ಶೇ. 17 ರಷ್ಟು ಅನಿಲ ವಿಸರ್ಜನೆಯನ್ನು ಕಡಿತಗೊಳಿಸಿದೆ. ಇವೆರಡೂ ಉಪಖಂಡಗಳಿಗಿಂತ ಕಡಿಮೆ ಜನಸಂಖ್ಯೆಯನ್ನು ಹೊಂದಿರುವ ಅಮೇರಿಕಾ ಮಾತ್ರ ಹೆಚ್ಚೆಚ್ಚು ವಿಷಾನಿಲಗಳನ್ನು ರಾಸಾಯನಿಕಗಳನ್ನು ವಾತಾವರಣಕ್ಕೆ ಸೇರಿಸುತ್ತಾ ಪರಿಸರ ಸಂರಕ್ಷಣೆಗೆ ಮಾತ್ರ ಕಿಂಚಿತ್ತೂ ಗಮನಹರಿಸಿಲ್ಲ. ವಿಶ್ವದ ಜನಸಂಖ್ಯೆಯಲ್ಲಿ ಕೇವಲ ಶೇ.4ರಷ್ಟು ಜನಸಂಖ್ಯೆಯನ್ನು ಹೊಂದಿರುವ ಅಮೇರಿಕಾ ಶೇ. 25ರಷ್ಟು ಮಲಿನಕಾರಕ ಅನಿಲಗಳನ್ನು ವಿಸಜರ್ಿಸುತ್ತಿದೆ. ಇಂಗ್ಲೆಂಡ್ ಶೇ.3 ರಷ್ಟು ಅನಿಲ ವಿಸಜರ್ಿಸಿದರೆ, ಇಂಗ್ಲೆಂಡ್ಗಿಂತ 15 ಪಟ್ಟು ಹೆಚ್ಚಿನ ಜನಸಂಖ್ಯೆ ಹೊಂದಿರುವ ಭಾರತ ಸರಿಸುಮಾರು ಇಂಗ್ಲೆಂಡ್ನಷ್ಟೆ ಅನಿಲ ವಿಸಜರ್ಿಸುತ್ತಿದೆ.

ಪರಿಸರ ಸಂರಕ್ಷಣೆಯಾಧಾರಿತ ಕೈಗಾರಿಕಾಭಿವೃದ್ಧಿ ನೀತಿಯನ್ನು ಅಳವಡಿಸಕೊಳ್ಳದಿದ್ದಲ್ಲಿ ಮುಂಬರುವ ದಿನಗಳು ಇನ್ನಷ್ಟು ಬರ, ಕ್ಷಾಮ, ಕಾಳ್ಗಿಚ್ಚು, ಚಂಡಮಾರುತಗಳಂಥಹ ನೈಸಗರ್ಿಕ ವಿಕೋಪಗಳು ನಿಯಂತ್ರಣಕ್ಕೆ ಸಿಗದ ಪೆಡಂಭೂತಗಳಾಗುತ್ತವಷ್ಟೆ.