ಮಂಪರು ಪರೀಕ್ಷೆ:

ಮಂಪರು ಪರೀಕ್ಷೆ:

Comments

ಬರಹ

ಬಹು ಕೋಟಿ ಛಾಪಾ ಕಾಗದ ಹಗರಣಯಾದಿಯಾಗಿ ಇತ್ತೀಚಿನ ಗಂಭೀರ ಅಪರಾಧ ಪ್ರಕರಣಗಳೆಲ್ಲದರಲ್ಲೂ ಮಂಪರು ಪರೀಕ್ಷೆ ಮತ್ತು ಸಂಬಂಧಿಸಿದ ಇತರೆ ಪರೀಕ್ಷೆಗಳನ್ನು ಭಾರತದಲ್ಲಿನ ಅಪರಾಧ ವಿಚಾರಣಾ ಸಂಸ್ಥೆಗಳು ವ್ಯಾಪಕವಾಗಿ ಬಳಸಲು ಯತ್ನಿಸುತ್ತಿವೆ.
ಸತ್ಯವನ್ನು ಹೊರಗೆಳೆಯಲು ಮತ್ತು ಸಾಕ್ಷಿ ಸಂಗ್ರಹಣೆಗಾಗಿ ಹಲವಾರು ವೈಜ್ಞಾನಿಕ ಪರೀಕ್ಷೆಗಳನ್ನು ಅಪರಾಧಿಗಳ ಮೇಲೆ ನಡೆಸಲಾಗುತ್ತದೆ. ಅವುಗಳಲ್ಲಿ ಇತ್ತೀಚಿನ ದಿನಗಳಲ್ಲಿ ಜನಪ್ರಿಯಗೊಂಡಿರುವ ಪರೀಕ್ಷೆಗಳೆಂದರೆ:
1) ಪಾಲಿಗ್ರಾಫ್ ಅಥವಾ ಸುಳ್ಳು ಪತ್ತೆ ಹಚ್ಚುವ ಪರೀಕ್ಷೆ: ಆರೋಪಿಯನ್ನು ಯಂತ್ರವೊಂದಕ್ಕೆ ಕಟ್ಟಲಾಗುತ್ತದೆ. ಆ ಯಂತ್ರವು ವ್ಯಕ್ತಿಯ ರಕ್ತದೊತ್ತಡ, ನಾಡಿ ಮಿಡಿತ, ಉಸಿರಾಟ ಮತ್ತು ಸ್ನಾಯು ಚಲನೆಗಳನ್ನು ದಾಖಲಿಸುತ್ತಾ ಹೋಗುತ್ತದೆ. ಆರೋಪಿಗೆ ಹಾಕಲಾಗುವ ಪ್ರಶ್ನೆಗಳಿಗೆ ಆತನ ಪ್ರತಿಕ್ರಿಯೆಗಳನ್ನು ಅಳೆಯಲಾಗುತ್ತದೆ. ಆರೋಪಿಯು ಸುಳ್ಳು ಹೇಳಿದಾಗ ಹೆಚ್ಚಿಗೆ ಬೆವರುತ್ತಾನೆಂದು, ಅವನ ರಕ್ತದೊತ್ತಡ ಹೆಚ್ಚುತ್ತದೆಂದು ತಜ್ಞರು ಹೇಳುತ್ತಾರೆ. ಇತರೆ ಸಾಕ್ಷ್ಯಗಳೊಂದಿಗೆ ಈ ಎಲ್ಲ ಪ್ರತಿಕ್ರಿಯೆಗಳನ್ನು ವಿಶ್ಲೇಷಿಸಲಾಗುತ್ತದೆ. ಇದು ಮೊದಲ ಬಾರಿಗೆ ತಜ್ಞರು ಬಳಕೆಗೆ ತಂದ ವೈಜ್ಞಾನಿಕ ಪರೀಕ್ಷೆಯಾಗಿದೆ. ಇದನ್ನು ಪ್ರಕರಣದ ಆರಂಭಿಕ ಅಥವಾ ಖಚಿತಪಡಿಸಿಕೊಳ್ಳುವ ಸಲುವಾಗಿ ಮಾತ್ರವೇ ಬಳಸಲಾಗುತ್ತದೆ.
2) ಪಿ 300 ಅಥವಾ ಮಂಪರು ಪರೀಕ್ಷೆ (ಬ್ರ್ಯೇನ್ ಮ್ಯಾಪಿಂಗ್): ಆರೋಪಿಯ ತಲೆಗೆ ಸೆನ್ಸಾರುಗಳನ್ನು ಅಳವಡಿಸಿ ಕಂಪ್ಯೂಟರ್ ಮಾನಿಟರ್ ಮುಂದೆ ಅವನನ್ನು ಕೂರಿಸಲಾಗುತ್ತದೆ. ಆರೋಪಿಗೆ ಕೆಲವು ಚಿತ್ರಗಳನ್ನು ತೋರಿಸಿ ಮತ್ತೆ ಕೆಲವು ಶಬ್ದಗಳನ್ನು ಕೇಳಿಸಲಾಗುತ್ತದೆ. ಘಟನೆಗೆ ಸಂಬಂಧಿಸಿದ ಮತ್ತು ಸಂಬಂಧಿಸಿಲ್ಲದ ಪದಗಳನ್ನು ಪರದೆಯ ಮೇಲೆ ತೋರಿಸಲಾಗುತ್ತದೆ. ಈ ಸಮಯದಲ್ಲಿ ಮೆದುಳಿನಲ್ಲಿ ಉದ್ಭವಿಸುವ ವಿದ್ಯುತ್ ಚಟುವಟಿಕೆಗಳನ್ನು ಸೆನ್ಸಾರುಗಳು ಗ್ರಹಿಸಿ ಪಿ 300 ಕಂಪನಗಳನ್ನು ದಾಖಲಿಸುತ್ತವೆ. ನಿದರ್ಿಷ್ಟವಾದ ಚಿತ್ರಗಳು ಅಥವಾ ಶಬ್ದಗಳೊಂದಿಗೆ ಆರೋಪಿಗೆ ಸಂಬಂಧವಿದ್ದಲ್ಲಿ ಮಾತ್ರವೇ ಮೆದುಳಿನಲ್ಲಿ ಪಿ 300 ಕಂಪನಗಳು ಉತ್ಪತ್ತಿಯಾಗುತ್ತವೆ. ಉದಾಹರಣೆಗೆ ಛಾಪಾ ಕಾಗದ ಹಗರಣದ ಆರೋಪಿ ತೆಲಗಿಗೆಯಿಂದ ಪ್ರತಿಕ್ರಿಯೆ ಪಡೆಯಲು ತೋರಿಸಲಾದ ಕೆಲವು ವಾಕ್ಯಗಳೆಂದರೆ: 'ರೋಷನ್ಬೇಗ್ ಯಿಂದ ಬೆದರಿಕೆಯಿದೆ', ದಿಲೀಪ್ ಕಾಮತ್ಗೆ ರೂ. 75 ಲಕ್ಷ ಹಣ ನೀಡಿದ್ದೀಯಾ', ಇತ್ಯಾದಿ. ತಜ್ಞರ ನೀಡಿರುವ ಹೇಳಿಕೆಯ ಪ್ರಕಾರ ತೆಲಗಿಯು ಇದಕ್ಕೆ ಕೆಲವು ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾನಂತೆ!
3) ಸತ್ಯ ಶೋಧಕ ಔಷಧೀಯ ಪರೀಕ್ಷೆ (ನ್ಯಾಕರ್ೋ-ಅನಾಲಿಸಿಸ್): ಈ ಪರೀಕ್ಷೆಯಲ್ಲಿ ಕೆಲವು ಗ್ರಾಂ ನಷ್ಟು ಸೋಡಿಯಂ ಪೆಂಟೋತಾಲ್ ಅಥವಾ ಸೋಡಿಯಂ ಅಮೈಟಾಲ್ ನ್ನು ಶುದ್ದ ನೀರಿನಲ್ಲಿ ಕರಗಿಸಲಾಗುತ್ತದೆ. ವ್ಯಕ್ತಿಯ ಲಿಂಗ, ವಯಸ್ಸು, ಆರೋಗ್ಯ ಮತ್ತು ದೈಹಿಕ ಸ್ಥಿತಿಯ ಆಧಾರದ ಮೇಲೆ ಈ ಮಿಶ್ರಣವನ್ನು ಇಂಜೆಕ್ಷನ್ ಮೂಲಕ ನೀಡಲಾಗುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಬಳಸಿದಲ್ಲಿ ವ್ಯಕ್ತಿಯು ಪ್ರಜ್ಞಾಹೀನತೆಗೊಳ್ಳಬಹುದು ಅಥವಾ ಸಾವಿನ ಹಂತವನ್ನು ಮುಟ್ಟಬಹುದು. ಔಷಧವು ಕೇಂದ್ರೀಯ ನರ ವ್ಯವಸ್ಥೆಯನ್ನು ತನ್ನ ನಿಯಂತ್ರಣಕ್ಕೆ ತಂದು ರಕ್ತದೊತ್ತಡವನ್ನು ಕಡಿಮೆಗೊಳಿಸುತ್ತದೆ, ಹೃದಯ ಬಡಿತವನ್ನು ನಿಧಾನಗೊಳಿಸುತ್ತದೆ ಮತ್ತು ವ್ಯಕ್ತಿಯನ್ನು ವಶೀಕರಣ ಹಂತಕ್ಕೊಯ್ಯುತ್ತದೆ. ಈ ಹಂತದಲ್ಲಿ ವ್ಯಕ್ತಿಯನ್ನು ಅರೆ-ಪ್ರಜ್ಞಾವಸ್ಥೆಗೆ ತರುವ ಮೂಲಕ ಅವನ ಕಲ್ಪನೆಯನ್ನು ತಟಸ್ಥಗೊಳಿಸಲಾಗುತ್ತದೆ. ಅರೆ-ಪ್ರಜ್ಞಾವಸ್ಥೆಯಲ್ಲಿರುವ ಅವನು ತನ್ನ ಕಲ್ಪನಾ ಶಕ್ತಿಯನ್ನು ಬಳಸಿಕೊಳ್ಳಲು ಅಶಕ್ತನಾಗುವುದರಿಂದ ಸುಳ್ಳು ಹೇಳಲು ಸಾಧ್ಯವಾಗುವುದಿಲ್ಲವೆಂದು ತಜ್ಞರ ಅಂಬೋಣ!
ಸತ್ಯ ಶೋಧಕ ಔಷಧೀಯ ಪರೀಕ್ಷೆಯನ್ನು ಬಳಸಲು ನ್ಯಾಯಾಲಯ ಮತ್ತು ಸಂಬಂಧಿಸಿದ ವ್ಯಕ್ತಿಯ ಒಪ್ಪಿಗೆಯನ್ನು ಪಡೆಯಬೇಕಾಗುತ್ತದೆ. ಈ ಪರೀಕ್ಷೆಯನ್ನು ವಿಚಾರಣೆಗೆ ಪೂರಕವಾಗಿ ಬಳಸಿಕೊಳ್ಳಬಹುದೇ ಹೊರತು ನ್ಯಾಯಾಲಯದಲ್ಲಿ ಯಾವುದೇ ಸಾಕ್ಷ್ಯದ ಮೌಲ್ಯವನ್ನು ಈ ಪರೀಕ್ಷಗೆ ನೀಡಲಾಗುವುದಿಲ್ಲ. ಈ ಪರೀಕ್ಷಾ ವಿಧಾನದ ವಿಶ್ವಾಸಾರ್ಹತೆಯನ್ನೇ ಹಲವು ತಜ್ಞರು ಪ್ರಶ್ನಿಸುತ್ತಾರೆ. ಇದನ್ನು ಅವೈಜ್ಞಾನಿಕವೆಂದು, ಮೂರನೇ ದಜರ್ೆಯ ವಿಚಾರಣಾ ವಿಧಾನವೆಂದು ಟೀಕಿಸಲಾಗುತ್ತದೆ. ವ್ಯಕ್ತಿಯು ಕೆಲವೊಮ್ಮೆ ತಾನು ಯಾವುದೋ ಘಟನೆಯು ಜರುಗಬೇಕೆಂದು ಬಯಸಿದ್ದಾಗ ವಾಸ್ತವವಾಗಿ ಅದು ಜರುಗಿಲ್ಲದಿದ್ದರೂ ಅದು ಜರುಗಿದ್ದಿತೆಂದು ಹೇಳುವ ಸಾಧ್ಯತೆಯೂ ಇದೆ. ಇಂಥಹ ಸಂಖ್ಯೆಯೇ ಶೇ. 50 ರಷ್ಟಿದೆಯೆಂದು ಮನೋವಿಜ್ಞಾನಿಗಳು ಹೇಳುತ್ತಾರೆ. ನ್ಯಾಯಾಲಯಗಳು ಕೆಲವೊಮ್ಮೆ ಇಂಥಹ ಪರೀಕ್ಷೆಗಳು ವ್ಯಕ್ತಿಯೊಬ್ಬನ ಮೂಲಭೂತ ಹಕ್ಕನ್ನು ಕಿತ್ತುಕೊಳ್ಳುವುದಿಲ್ಲವೆಂದು ಹೇಳುತ್ತವಾದರೂ ಸಂವಿಧಾನದ 20(3)ಯು ಈ ಖಾತರಿ ನೀಡುತ್ತದೆ: ಯಾವುದೇ ಆರೋಪಕ್ಕೊಳಗಾದ ಯಾವೊಂದು ವ್ಯಕ್ತಿಯನ್ನು ತನ್ನ ವಿರುದ್ದ ತಾನೇ ಸಾಕ್ಷಿ ಹೇಳುವಂತೆ ಮಾಡಬಾರದು.
ದೇಶದ ಗಂಭೀರ ಅಪರಾಧ ಪ್ರಕರಣಗಳೆಲ್ಲವನ್ನು ಬೆಂಗಳೂರಿನ ಅಪರಾಧ ಶೋಧನಾ ವಿಜ್ಞಾನದ ಪ್ರಯೋಗಾಲಯಕ್ಕೆ ರವಾನಿಸಲಾಗುತ್ತಿದೆ. ಭಾರತದ ವೈಜ್ಞಾನಿಕ ನೆಲೆಯೆಂದೇ ಹೆಸರುಗಿಟ್ಟಿಸಿರುವ ಬೆಂಗಳೂರು, ವೈಜ್ಞಾನಿಕ ಸಾಧನಗಳನ್ನು ಬಳಸಿಕೊಂಡು ಯಾವುದೇ ಅಪರಾಧ ಅಥವಾ ಪ್ರಕರಣಗಳನ್ನು ಪತ್ತೆ ಹಚ್ಚಿ ಬಗೆಹರಿಸುತ್ತದೆಂಬ ತಪ್ಪು ಕಲ್ಪನೆಯು ಇದ್ದಂತಿದೆ. ಅಮೇರಿಕಾವು ಅಧಿಕೃತವಾಗಿ ಈ ಪರೀಕ್ಷೆಯನ್ನು ಬಳಸುವುದಿಲ್ಲವಾದರೂ ಯುದ್ದ ಖೈದಿಗಳ ವಿರುದ್ದ ಹಾಗೂ ತನ್ನ ನೀತಿ ಒಪ್ಪದ ತನ್ನದೇ ಜನರ ವಿರುದ್ದ ರಹಸ್ಯವಾಗಿ ಈ ಪರೀಕ್ಷೆಯೂ ಸೇರಿದಂತೆ ಹತ್ತಲವು ಅಪಾಯಕಾರಿ ಪರೀಕ್ಷೆಗಳನ್ನು ಅದು ನಡೆಸುತ್ತದೆ. ! ಸತ್ಯ ಶೋಧಕ ಔಷಧೀಯ ಪರೀಕ್ಷೆಯು ವಿಶ್ವಾಸಾರ್ಹ ವಿಜ್ಞಾನವೇನೂ ಅಲ್ಲವೆಂದು ಅಂತರಾಷ್ಟ್ರೀಯ ಮಟ್ಟದ ತಜ್ಞರು ಮತ್ತು ನ್ಯಾಯಾಲಯಗಳ ಅಭಿಪ್ರಾಯಗಳು ಹೇಳುತ್ತವೆ.
ವ್ಯಕ್ತಿ ಸ್ವಾತಂತ್ರ್ಯ ಮತ್ತು ಸ್ವಚ್ಛ ನ್ಯಾಯಾಲಯ ವ್ಯವಸ್ಥೆಗೆ ಬದ್ದವಾಗಿರಬೇಕಾದರೆ, ಕೇಂದ್ರ ಸಕರ್ಾರವು ಇಂಥಹ ವೈಜ್ಞಾನಿಕ ಪರೀಕ್ಷೆಗಳನ್ನು ಕುರಿತಂತೆ ಸ್ಪಷ್ಟ ನೀತಿಯನ್ನು ಹೊರತರಬೇಕಾಗಿದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Average: 5 (2 votes)
Rating
Average: 5 (2 votes)