ದಿಲ್ ಹೈ ಮಗರ್ ಪ್ಯಾರ್ ನಹೀ...!

ಈ ದಿಲ್..ಈ ಹಾರ್ಟ್...ಅಂತೀವಲ್ಲ..ಇದಕ್ಕೆ ಕೈ ಹಾಕಿ ಪರಾ..ಪರಾ ಕೆರ್ಕೋಬೇಕು ಅನಿಸ್ತಿದಿಯಾ..? ಹಾಗಾದ್ರೆ, ದಿಲ್ವಾಲಾ..ನೋಡಿ. ಹಾಗಂತ ಇದು ಮುಂಗಾರು ಮಳೆ ಖದರ್ ಇರೋ ಸಿನಿಮಾ ಅನ್ಕೋ ಬೇಡಿ. ಇಲ್ಲಿ ಇರೋದೆಲ್ಲ ಎಕ್ಸಟ್ರಾನೇ...! ಬೇಕಾದ್ರೆ ಬನ್ನಿ, ದಿಲ್ವಾಲಾನ ಹೃದಯದೊಳಗಿನ ಸತ್ಯ ಏನು ಅಂತ ಹೇಳ್ತಿನಿ...
ಸಂಪಿಗೆ ಒಂದೂರು. ಮಲ್ಲಿಗೆ ಇನ್ನೋಂದೂರು. ನಡುವೆ ಒಂದು ಸೇತುವೆ. ಸೇತುವೆ ಮೇಲೆ ಇಬ್ಬರು ಯಂಗ್ ಪ್ರೇಮಿಗಳು. ಇವರ ಪ್ರೀತಿಗೆ ಸಾಕ್ಷಿ ಎಂಬಂತೆ. ಶಂಕರ್ನಾಗ್ ಅವರ ಆಟೋರಾಜ ಚಿತ್ರ ಹಾಡು ಹಿಂದೆ ಪ್ಲೇ ಆಗುತ್ತದೆ. ಹಾಗೆ ದಿಲ್ವಾಲಾ ಚಿತ್ರ ಓಪನ್ ಆಗುತ್ತದೆ. ಟೈಟಲ್ ಕಾರ್ಡ್ ನಲ್ಲಿ ಒಂದೊಂದಾಗಿ ಹೆಸ್ರುಗಳು ಬರ್ತಾ ಹೋಗುತ್ತವೆ. ಅಲ್ಲಿಗೆ ಸಿನಿಮಾ ಶೃತಿ ಹಿಡಿಯುತ್ತದೆ. ಕಾಲೇಜ್ನ ಡೆಸ್ಕ್ ಮೇಲೆ ಹುಡುಗ್ರು ಕುತೀದ್ದಾರೆ. ಹುಡುಗಿಯರೂ ಇದ್ದಾರೆ. ಯಾಕೆಂದೆ ಇದು ಹುಡುಗ-ಹುಡುಗಿಯರ ಕಾಲೇಜು.
ಎಂದಿನಂತೆ ಮೇಷ್ಟ್ರು ಅಟೆಂಡೆನ್ಸ್ ತೆಗೆದುಕೊಳ್ಳುತ್ತಾರೆ. ಆಗ ಪ್ರೇಮ್ ಇಲ್ಲ. ಅವನ ಗೆಳೆಯರು ಡೆಸ್ಕ್ ನಲ್ಲಿದ್ದಾರೆ. ಅಲ್ಲಿ ಕುಳಿತ ಒಬ್ಬ ಹುಡುಗ ಗೆಳೆಯ ಪ್ರೇಮ್ ಗೆ ಫೋನ್ ಮಾಡ್ತಾನೆ. ಆಗ ಪ್ರೇಮ್, ಅಲ್ಲಿಂದಲೇ ಫೋನ್ನಲ್ಲಿ ಪ್ರೆಸೆಂಟ್ ಸರ್ ಅಂತ ಕೂಗ್ತಾನೆ. ಅಲ್ಲಿಗೆ ಅಟೆಂಡೆನ್ಸ್ ಮುಗೀತು. ಆದ್ರೆ, ನಾಯಕ ಪ್ರೇಮ್ ಕಾಲೇಜಿಗೆ ಬರಲೇಬೇಕು ಅಲ್ಲವೇ. ಆತ ಬರುತ್ತಾನೆ. ನೋ ಆಟೋ..ನೋ ಬಸ್. ಆಗ ಅಲ್ಲಿ ಎಲ್ಲೋ ಅಶ್ವದಳ ಪೊಲೀಸ್ರು ನಿಂತಿರುತ್ತಾರೆ. ಅವರ ಕುದುರೇಯನ್ನೆ ಕದ್ದು ತೆಗೆದುಕೊಂಡು ಹೊರಡುತ್ತಾನೆ ನಾಯಕ. ಅವನ ಹಿಂದೆ ಒಂದಿಷ್ಟು ಪೊಲೀಸ್ರು ಕುದುರೆ ಏರಿ ಬೆನ್ನಟ್ಟುತ್ತಾರೆ.ಹೀಗೆ ನಾಯಕನ ಇಂಟ್ರಡಕ್ಷನ್.
ಮುಂದೆ ಆಗೋದೆಲ್ಲ ದಿಲ್ಕಿ ಬಾತ್. ಪ್ರತಿ ಮಾತಲ್ಲೂ ದಮ್ ಇದೆ. ಮುಜುಗರ ತರೋ ಹಾಗೇ ಇಲ್ಲದೇ ಇದ್ದರೂ. ಅತೀ ಆಯಿತೇನೋ ಅನ್ನೋ ಮಟ್ಟಿಗೆ ಡೈಲಾಗ್ ಬರೆದಿದ್ದಾರೆ ನಿರ್ದೇಶಕ ಅನಿಲ್ಕುಮಾರ್. ಯಾಕೆ ಇಷ್ಟು ಬರೆದ್ರೋ ಗೊತ್ತಿಲ್ಲ. ಅದಕ್ಕೆ ಹೋಲೊ ಹಾಗೇನೆ ಪ್ರತಿ ದೃಶ್ಯದಲ್ಲೂ ಒಂದೊಂದು ಬಿಲ್ಡ್ ಶಾರ್ಟ್. ನಾಯಕ ಬಂದಾಗಲೂ ಬಿಲ್ಡಪ್. ಹೋದಾಗ್ಲು ಬಿಲ್ಡಪ್. ಇಷ್ಟೆಲ್ಲ
ಬಿಲ್ಡಪ್ ಮಧ್ಯೇನೆ ಇಡೀ ಸಿನಿಮಾ ಸಾಗಿದೆ.
ಸಂಗೀತಕ್ಕೆ ಇಲ್ಲಿ ನಿಜಕ್ಕೂ ಕೊರತೆ ಇಲ್ಲವೇ ಇಲ್ಲ. ಸುಮಾರು ಹಾಡುಗಳೂ ಚಿತ್ರದಲ್ಲಿವೆ. ಎಲ್ಲವನ್ನೂ ಒಂದೇ ಅದ್ಧೂರ ಸೆಟ್ನಲ್ಲಿ ಚಿತ್ರೀಕರಿಸಿದ್ದಾರೆ. ಹಾಗಂತ ಎಲ್ಲ ಹಾಡುಗಳ ಫೀಲ್ ಒಂದೇ ಥರವಿಲ್ಲ. ಬೇರೆ...ಬೇರೆ ಭಾವಗಳೂ ಮೂಡುತ್ತವೆ ನೋಡುಗರಲ್ಲಿ. ಆದ್ರೆ, ಹಾಡುಗಳೂ ಅತೀಯಾಯಿತು ಅನಿಸುತ್ತದೆ. ಅದೇ ರೀತಿನೇ ನಾಯಕ ಪ್ರತಿ ಹಾಡಲ್ಲೂ ನಿರ್ಭಾವುಕ ಮೊಗದೊಂದಿಗೆ ಕಾಣಿಸಿಕೊಳ್ಳುತ್ತಾರೆ. ಡೈಲಾಗ್ ಹೊಡೆಯೋದ್ರಲ್ಲಿ ನಾಯಕ ಸುಮಂತ್ ಪರ್ಫೆಕ್ಟ್ ಆಗಿದ್ದಾರೆ. ಎಕ್ಸಪ್ರೆಷನ್ಗೆ ಒತ್ತು ಕೊಟ್ಟಿದ್ದರೇ, ಸುಮಂತ್ ಇಂಪ್ರೂ ಆಗಿದ್ದಾರೆ ಅನಿಸುತ್ತಿತ್ತು...
ರಾಧಿಕಾ ಪಂಡಿತ್ ಎಂದಿನಂತೆ ಅಭಿನಯ ಮುಂದುವರೆಸಿದ್ದಾರೆ. ಪಾಗಲ್ ಪ್ರೇಮಿನೂ ಅಲ್ಲದೇ. ಚೆಂದನೆಯ ಸೀದಾ-ಸಾದಾ ಹುಡುಗಿಯಾಗಿ ರಾಧಿಕಾ ಇಷ್ಟವಾಗುತ್ತಾರೆ. ಒಳ್ಳೆ ಕಾಸ್ಟ್ಯೂಮಗಳೇ ಈ ನಟಿಗೆ ಸಿಕ್ಕಿರೋದ್ರಿಂದ ಸಿಂಪಲ್ಲಾಗ್ ಇಷ್ಟವಾಗ್ತಾ ಹೋಗ್ತಾರೆ. ಕಾಲೇಜು ಹುಡುಗಿಯಾಗಿ ಕಾಣಿಸಿಕೊಂಡು ದಿಲ್ವಾಲಾಗಳ ದಿಲ್ ಗೆದ್ದು ಬಿಟ್ಟಿದ್ದಾರೆ.
ಬಾಜಿಗರ್ ರಾಧಿಕಾ ಪಂಡಿತ್; ಬಾಜಿಗರ್ ಚಿತ್ರದಲ್ಲಿ ಕಾಜೋಲ್ ಹಾಕಿರೋ ಗೆಟಪ್ನಲ್ಲಿ ರಾಧಿಕಾ ಕಾಣಿಸಿಕೊಂಡಿದ್ದಾರೆ. ಆದ್ರೆ, ಇದು ಚಿತ್ರ ಕತೆಗೆ ಎಲ್ಲೂ ಸಂಬಂಧವಿಲ್ಲ. ನಾಯಕ ಪ್ರೇಮ್-ನಾಯಕಿ ಪ್ರೀತಿಯ ಮಧ್ಯೆ ಪ್ರೀತಿ ಅರಳಿ-ಮರಳಿ ಕಾಡೋ ರಾತ್ರಿಯಲ್ಲಿ ಪ್ರೀತಿಗೊಂದು ಕನಸು ಬೀಳುತ್ತದೆ. ಆ ಕನಸಲ್ಲಿ ರಾಧಿಕಾ ಪಂಡಿತ್, ಕಾಜೋಲ್ ಥರ ವೈಟ್ ಅಂಡ್ ವೈಟ್ನಲ್ಲಿ ಬರ್ತಾರೆ.ಶಾರುಖ್ ಖಾನ್ ಥರ ಸುಮಂತ್ ಕುದುರೇ ಏರಿ ಕಂಗೊಳಿಸುತ್ತಾರೆ.
ವಿಲನ್ ರವಿಶಂಕರ್ ಕಾಮಿಡಿ ಕಿಕ್; ನಟ ರವಿಶಂಕರ್ ಇಲ್ಲಿ ವಿಲನ್ಗಿರಿಗಿಂತಲೂ ಹಾಸ್ಯದಿಂದಲೇ ತುಂಬಾ ಇಷ್ಟವಾಗುತ್ತಾರೆ. ಇಡೀ ಚಿತ್ರದಲ್ಲಿ ಬರೋ ಸುಮಾರು ಹಾಡುಗಳಲ್ಲಿ ಯಾವುದೂ ಇಷ್ಟವಾಗೋದಿಲ್ಲ. ಆದ್ರೆ, ರವಿಶಂಕರ್ ಹಾಗೂ ಅವರ ವಿಲನ್ ತಂಡ ಹಾಡೋ ಹಳೇ ಹಾಡುಗಳ ಒಟ್ಟು ಮಿಶ್ರಣದ ಗೀತೆ, ನಿಜಕ್ಕೂ ಸಿನಿಮಾ ನೋಡಿದವರ ಬೇಸರವನ್ನೂ ಹೊಡೆದು ಹಾಕುತ್ತದೆ. ಸಿನಿಮಾ ನೋಡೋಕೆ ಹೋದ್ರೆ ಈ ಹಾಡು ಸಖತ್ ಮಜಾ ಕೊಡುತ್ತದೆ...
ಹೊಸ ದಿಲ್...ಹಳೇ ಭಾವ; ಚಿತ್ರದಲ್ಲಿ ಬರೋ ಭಾವನೆಗಳು ತುಂಬಾ ಹಳೇಯದಾಗಿವೆ. ಪ್ರೀತಿ-ಪ್ರೇಮದ ಆಗಿನ ಹಳೇ ಅಭಿವ್ಯಕ್ತಿನೇ ಇಲ್ಲಿ ಹೊಸರೂಪ ಪಡೆದಿದೆ. ಎಂದೂ ನಿರೀಕ್ಷಿಸದೇ ಇರೋ ಪ್ರೇಮ ನಿವೇದನೆ ಕಂಡಿತ ಇಲ್ಲಿ ಸಿಗೋದೇಯಿಲ್ಲ. ಆದ್ರೆ,ನಾಯಕ ಪ್ರೇಮ್, ನಾಯಕಿ ಪ್ರೀತಿಯ ಊರಿಗೆ ಬರುತ್ತಾನೆ. ಆಕೆಯ ತೋಟಕ್ಕೂ ಬಂದು ಪ್ರೀತಿಯ ನಿವೇದನೆ ಮಾಡುತ್ತಾನೆ. ಅದು ಹೇಗಂತಿರೋ. ಟ್ರ್ಯಾಕ್ಟರ್ ಬಳಸಿಕೊಂಡು ಹೊಲವನ್ನ ಊಳ್ತಾನೆ. ಹಾಗೆ ಊಳೋವಾಗಲ್ಲೇ ಅದರಲ್ಲಿಯೇ ಇಂಗ್ಲೀಷ್ ನಲ್ಲಿ ‘ಐ ಲವ್ ಯು’ ಅಂತಾ ಬರೆಯುತ್ತಾನೆ. ಇದು ಹೊಸದು ಅನಿಸುತ್ತದೆ...
ದಂಡುಪಾಳ್ಯ ಕಾಮಿಡಿ; ಸಾದು ಕೋಕಿಲ ಎಂದಿನಂತೆ ಕೆಂಪೇಗೌಡ ಸ್ಟೈಲ್ನಲ್ಲಿ ಕಾಮಿಡಿ ಮಾಡ್ತಾರೆ. ಇದು ಏನೂ ಹೊಸತು ಅನಿಸೋದಿಲ್ಲ. ಇದೇ ಸಾಧುನ ಲಾಕ್ಪ್ನಲ್ಲಿ ಕಾಮಿಡಿ ನಡೆಯುತ್ತದೆ. ಪ್ರೇಮ್ ನ ಗೆಳೆಯನೊಬ್ಬನ್ನ ಸಾಧು ಅರೆಸ್ಟ್ ಮಾಡಿಕೊಂಡು ಬರುತ್ತಾರೆ. ಆಗ ಅದೇ ಲಾಕಪ್ನಲ್ಲಿ ದಂಡುಪಾಳ್ಯ ಗ್ಯಾಂಗ್ ಇರುತ್ತದೆ. ಜೊತೆಗೆ ಲಕ್ಷ್ಮೀನೂ ಇರ್ತಾಳೆ. ಆಕೆ ಒಂದು ರೀತಿ ಪೂಜಾ ಗಾಂಧಿ ಸ್ಟೈಲ್ನಲ್ಲಿ ಬೆನ್ನು ತೋರಿಸಿಕೊಂಡು ಕುಳಿತುಕೊಂಡಿರುತ್ತಾಳೆ. ಅಷ್ಟೇ ಆಗಿದ್ದರೆ ಹಾಸ್ಯ ಹೊಮ್ಮುತ್ತಿರಲಿಲ್ಲವೋ ಏನೋ. ಆಕೆ ಸ್ವಲ್ಪ ಬೆನ್ನು ಕೆರೆಯುತ್ತಿರಾ..? ಅಂತ ಕೇಳ್ತಾನೆ. ಇದು ಮಜ್ವಾಗಿದೆ..
ಅರ್ಜುನ್ ಜನ್ಯ ಸಂಗೀತ; ಅರ್ಜುನ್ ಜನ್ಯ ಸಂಗೀತ ಅಷ್ಟೇನೂ ಖುಷಿ ಕೊಡೋದಿಲ್ಲ. ಈ ಹಿಂದಿನ ಹಾಡುಗಳನ್ನ ನೋಡಿದ್ರೆ, ಸೌಂಡಿಂಗೇ ಬೇರೆಯೇ ಆಗಿದೆ.. ಆದ್ರೆ,
ದಿಲ್ವಾಲಾದಲ್ಲಿ ಅದು ಕಳೆದು ಹೋಯಿತೇನೋ ಅನ್ನೋ ಭಾವ, ಸಂಗೀತ ಪ್ರೇಮಿಗಳಲ್ಲಿ ಕಂಡಿತ ಮೂಡುತ್ತದೆ.
ನಿರ್ದೇಶಕ ಅನಿಲ್ಕುಮಾರ್; ಅನಿಲ್ಕುಮಾರ್ ಶಕ್ತಿ ಚಿತ್ರ ಮಾಡಿದ್ರು. ಡೈಲಾಗ್ಗಳನ್ನೂ ಬರೆದಿದ್ದರು. ಅದು ಮಾಲಾಶ್ರೀ ಅವರಿಗೆ ಸೂಕ್ತ ಅನಿಸುತ್ತದೆ. ದಿಲ್ಲಾವಾದಲ್ಲಿ ಕೊಂಚ ಜಾಸ್ತಿನೇ ಆಯಿತೇನೋ ಅನಿಸುತ್ತದೆ. ಕತೆಗೂ ಒತ್ತು ಕೊಟ್ಟಿದ್ದರೆ, ದಿಲ್ವಾಲಾ ಚಿತ್ರ ಹರಾ..ಬಾರಾ ಆಗಿರುತ್ತಿತ್ತೇನೋ...
-ರೇವನ್ ಪಿ.ಜೇವೂರ್