ಬಟ್ಟೆ ಬಿಚ್ಚಿದವಳ ಬಟ್ಟೆ ಮೋಹ..!

ಬಟ್ಟೆ ಬಿಚ್ಚಿದವಳ ಬಟ್ಟೆ ಮೋಹ..!

ಪೂನಂ ಪಾಂಡೆ. ಯಾರು. ಇದರ ಬಗ್ಗೆ ಹೆಚ್ಚು ಹೇಳೋಕೆ ಏನೂ ಇಲ್ಲ. ಮಾಡಿದ್ದು ಒಂದೇ ಚಿತ್ರ. ಅದು ನಶಾ. ಖಾಲಿ-ಪೀಲಿ ಸೌಂಡ್ ಮಾಡಿದ್ದೇ ಹೆಚ್ಚು. ಬಟ್ಟೆ ಬಿಚ್ಚಲಿಲ್ಲ. ಹೇಳಿದನ್ನ ಮಾಡಲಿಲ್ಲ. ಮಾಡಿದಲ್ಲ ಲಾಜಿಕಲ್ ಟಾಕೇ. ಐಪಿಎಲ್ ಮ್ಯಾಚ್​ನಲ್ಲಿ ಇಂಡಿಯಾ ಗೆದ್ರೆ ಬಟ್ಟೆ ಬಿಚ್ಚುತ್ತೇನೆ ಎಂದು ಹೇಳಿದ್ದೆ ಬಂತು. ಇಂಡಿಯಾ ಗೆಲ್ಲಲಿಲ್ಲ. ಪೂನಂ ಬೆಟ್ಟೆ ತೆಗೆಯಲಿಲ್ಲ. ಆದ್ರೆ, ರಾತ್ರೋ ರಾತ್ರಿ ಸುದ್ದಿಯಾದಳು ಈ ಪೂನಂ ಪಾಂಡೆ. ಇದೇ ಪೂನಂ ಮತ್ತೆ ಸುದ್ದಿಯಲ್ಲಿದ್ದಾರೆ. ಅದು  ಬಟ್ಟೆ ಬಿಚ್ಚೋ ಮತ್ತೊಂದು ಕಾರ್ಯಕ್ರಮ ಅಲ್ಲವೇ ಅಲ್ಲ...ಅದೇನೂ...ಮುಂದಿದೆ ಡಿಟೈಲ್ಸ್ ಓದಿ..

ಬೆಂಗಳೂರು ಏರ್ಪೋಟ್;
ಬೆಳಗ್ಗೆ 11 ಗಂಟೆ. ವಿಮಾನ ನಿಲ್ದಾಣದಲ್ಲಿ ಎಂದಿನಂತೆ ಜನ ವಿಮಾನ ಇಳಿದು ಕಾರು ಹತ್ತುತ್ತಿದ್ದರು. ಮಾಧ್ಯಮವರನ್ನ ಕಂಡ ಅಲ್ಲಿಯ ಜನಕ್ಕೆ ಏನೋ ಕುತೂಹಲ. ಯಾರು ಬರ್ತಿದ್ದಾರೆ. ನೀವೆಲ್ಲ ಯಾಕೆ ಬಂದಿದ್ದೀರಿ. ಈ ಥರದ ಪ್ರಶ್ನೆಗೇಳೆ ತೂರಿ ಬಂದವು.ಆದ್ರೆ, ಪೂನಂ ಪಾಂಡೆ ಅಂದಾಗಲೇ ಅಲ್ಲಿರೋ ಗಂಡಸರಿಗೆ ಏನೋ ಕುತೂಹಲ. ಐಪಿಎಲ್​ ಪೂನಂ ಪಾಂಡೇನಾ ಅಂತ ಕೇಳಿಯೇ ಬಿಟ್ಟರು. ಬಳಿಕ ಹಾಗಿದ್ದೇ ಏನೂ ಮಹಾನ್ ಬದಲಾವಣೆ ಅಲ್ಲ. ಯಾಕೆಂದರೆ,  ಪೂನಂ ಅಲ್ಲಿಗೆ ಆಗಮಿಸಿದ್ರು, ವಿಥ್ ಫುಲ್ ಬಟ್ಟೆ...

ಪೂನಂ ಅಂದರೆ ನಶಾ..ನಶಾ ಅಂದ್ರೆ ಜಹರ್;
ಪೂನಂ ಪಾಂಡೆಗೆ ನಶಾ ಬಲು ಜೋರಾಗಿದೆ. ಅದು ಬಟ್ಟೆ ಬಿಚ್ಚೋ ನಶಾ ಅಲ್ಲಾ. ಬದಲಿಗೆ ನಶಾ ಅನ್ನೋ ನಗ್ನ ಚಿತ್ರದ ಬಗ್ಗೆ. ಸಿನಿಮಾ ಇತ್ತೀಚಿಗೆ ಬಂದು ಹೋಗಿದೆ. ಅದರಿಂದ ಪೂನಂಗೆ ಹೆಸ್ರು ಬಂತೋ ಇಲ್ಲವೋ.  ಪೂನಂ ನಶಾದಲ್ಲಿ ಅಭಿನಯಿಸಿದ್ದಾರೆಂಬ ವಿಷ್ಯ ಮಾತ್ರ ಪೂನಂ ಚಿತ್ರ ಬದುಕಿನಲ್ಲಿ ಉಳಿದು ಹೋಗಿದೆ.  ಆದ್ರೆ, ನಶಾ ಕೂಡ ಜಹರ್ ಅಂತ ಪೂನಂ ಹೇಳಿದ್ದು ವಿಶೇಷವಾಗಿತ್ತು. ಕಾರಣ, ಪೂನಂ ಲವ್ ಈಜ್ ಪಾಯಿಸನ್ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪೂನಂ ಬದುಕಿನಲ್ಲಿ ಪ್ರೀತಿ ವಿಷ ವಾಗಿದೆಯೇ ಅನ್ನೋ ಪ್ರಶ್ನೆಗೆ ಪೂನಂ ಹೇಳಿದ್ದು ಒಂದೇ. ನಶಾ ಕೂಡ ವಿಷವೇ. ಎಲ್ಲಿ ಪೂನಂ ಇರ್ತಾಳೋ. ಅಲ್ಲಿ ವಿಷದ ನಶೆ ಕಂಡಿತ ಅಂತ ಹೇಳಿ ನಕ್ಕರು.ನಲಿದರು...

ಲವ್ ಈಜ್​ ಪಾಯಿಸನ್​ನಲ್ಲಿ ಐಟಂ;
ಪೂನಂ ಪಾಂಡೆ ನಗ್ನ ಸತ್ಯ ಹೇಳ್ತಾರೆ. ಮಾಡೋದಿಲ್ಲ. ನಶಾ ಚಿತ್ರದಲ್ಲಿ ಆ ಸತ್ಯ ಒಂಚೂರು ಬಹಿರಂಗೊಂಡಿತ್ತು. ಈಗ ಲವ್​  ಈಜ್​ ಪಾಯಿಸನ್​ನಲ್ಲಿ ಸಖತ್ ಹಾಟ್ ಆಗಿಯೇ ಬರ್ತಾಯಿದ್ದಾರೆ. ಕನ್ನಡದ ಈ ಮೊದಲ ಚಿತ್ರಕ್ಕೆ 60 ಲಕ್ಷದಷ್ಟು ದುಡ್ಡು ಪಡೆದಿರೋ ಪೂನಂ, ನಾಲ್ಕು ದಿನ ಬೆಂಗಳೂರಲ್ಲಿಯೇ ಇರಲ್ಲಿದ್ದಾರೆ. ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ ಹಾಕಲಾಗಿರೋ ಸೆಟ್​ನಲ್ಲಿ ಹೆಜ್ಜೆ ಹಾಕಿ ಹಾಟ್..ಹಾಟ್ ಆಗಿ ಕಾಣಿಸಿಕೊಳ್ಳಲಿದ್ದಾರೆ..

ಲವ್ ಯಾರದು..ಪಾಯಿಸನ್ ಯಾರದು..?
ಲವ್​ ಈಸ್ ಪಾಯಿಸನ್ ಚಿತ್ರದ ಹೀರೋ ಯಾರು. ಹೀಗೊಂದು ಪ್ರಶ್ನೆ ಸಹಜ. ಯಾಕೆಂದ್ರೆ, ಇದು ಆಗೊಮ್ಮೆ..ಈಗೊಮ್ಮೆ. ಅಲ್ಲೊಮ್ಮೆ..ಇಲ್ಲೊಮ್ಮೆ ಕೇಳಿ ಬಂದ ಸಿನಿಮಾ ಶೀರ್ಷಿಕೆ. ಶುರುವಾಗಿ ಬಹುತೇಕ ಒಂದು ವರ್ಷವೇ ಕಳೆಯುತ್ತ ಬಂತು. ಆದ್ರೆ, ಇದರ ಹೀರೋ ಬೇರೆ ಯಾರು ಅಲ್ಲ. ಅದೇ ಜಂಗಲ್ ಜಾಕಿ ಚಿತ್ರದ ನಾಯಕ ರಾಜೇಶ್.  ಮುಂಬೈನ ಇಬ್ಬರು ಯುವ ನಟಿಯರು ಲವ್ ಈಜ್​ ಪಾಯಿಸನ್​ನ ಲೆಫ್ಟ್​ ರೈಟ್. ಇವರ ಮಧ್ಯೆ ಪೂನಂ ಕಿಚ್ಚು ಹಚ್ಚಲು ಬರ್ತಾಯಿದ್ದಾರೆ. ಕಂಡೆಕ್ಟರ್ ಕಮ್ ನಿರ್ದೇಶಕ ನಂದನ್​ಪ್ರಭು ಈ ಚಿತ್ರ ಡೈರೆಕ್ಟರ್. ಪ್ರೀತಿಯ ಲೋಕ ಮೂಲಕ ನಿರ್ದೇಶರಾಗಿರೋ ನಂದನ್​ ಪ್ರಭು, ಈಗ ಲವನ್ನೇ ಪಾಯಿಸನ್ ಅಂತ ಹೇಳೋಕೆ ಹೊರಟಿದ್ದಾರೆ. ಉಮೇಶ್ ಹಾಗೂ ಕೇಶವ ಮೂರ್ತಿ ಪ್ರೀತಿ ತುಂಬಿದ ಈ ಚಿತ್ರಕ್ಕೆ ದುಡ್ಡು ಹಾಕ್ತಾಯಿದ್ದಾರೆ.

ಪೂನಂ ಐಟಂ ವರ್ಕ್ ಆಗುತ್ತಾ..?
ಪೂನಂ ಬಿಚ್ಚಮ್ಮ. ಆದ್ರೆ, ನಟನೆ ಶೂನ್ಯ. ನೃತ್ಯವನ್ನ ತಿಳಿದಿರಬಹುದು. ಕನ್ನಡದಲ್ಲಿ ಕಿಚ್ಚು ಹಚ್ತಾರಾ..? ನೋಡಬೇಕು. ಈಗಷ್ಟೇ ಬಂದಿದ್ದಾರೆ. ಮುಂಬೈನಿಂದ ಈಗಾಗಲೇ ವೀಣಾ ಮಲ್ಲಿಕ್  ಬಂದು ಹೊಗಿದ್ದಾರೆ. ಪೂನಂ ಆ ಸಾಲಿನ ಮತ್ತೊಬ್ಬ ಮುಂಬೈನ ಬಾಂಬ್ ಸೆಲ್...

-ರೇವನ್ ಪಿ.ಜೇವೂರ್