ಸರಸಕೆ ಬಾರೇ ಸರಳಾ..!

ಸರಸಕೆ ಬಾರೇ ಸರಳಾ..!

ಸರಸಕೇ ಬಾರೇ...ಸರಳ..ನಿನ್ನ ಲುಕ್ಕು..ಅತಿ ವಿರಳ. ಎಷ್ಟು ಸಿಂಪಲ್ ಸಾಲು. ಸರಳವಾಗಿದೆ. ಸರಳಾ ಅನ್ನೋ ಹುಡುಗಿನೂ ಬಂದು ಹೋಗ್ತಾಳೆ. ಆಕೆ ಚೆಲುವಿನ ವರ್ಣನೆನೂ ಆಗುತ್ತದೆ. ಒಟ್ನಲ್ಲಿ ಸರಳಾ ಮಿಂಚ್ತಾಳೆ. ಇಷ್ಟವಾಗ್ತಾಳೆ. ಯಾಕೆಂದರೆ, ಈಗಾಗಲೆ ಈ ಸಾಲುಗಳು ಹಾಡಾಗಿವೆ. ಸಂಗೀತ ನಿರ್ದೇಶಕನ ಸಂಯೋಜನೆಯಲ್ಲಿ ಸಂಗೀತ ಪ್ರೇಮಿಗಳ ಮನಸ್ಸಿನಲ್ಲಿ ಜಾಗ ಮಾಡಿಕೊಟ್ಟಿದೆ. ಅಷ್ಟೇ ಅಲ್ಲ. ಇದೇ ಒಂದೇ ಒಂದು ಹಾಡಿನಿಂದ ಸುಮಾರು ವರ್ಷಗಳಿಂದ ಸಂಗೀತ ಸೇವೆ ಮಾಡಿಕೊಂಡು ಬಂದ ಮಹಾನ್ ಸಂಗೀತ ವಿದ್ವಾಂಸರ ಹೆಸ್ರು ಖ್ಯಾತಿಗೆ ಬಂದಿದೆ. ಅದರ ಡೀಟೈಲ್ಸ ಬರೀತಾ ಹೋಗ್ತಿನಿ. ಓದುತ್ತಾ ಹೋಗಿ..

ಸರಳ ಸಾಂಗ್ ಹುಟ್ಟಿದ್ದೇ ವಿಶೇಷ. ಸಂಗೀತ ನಿರ್ದೇಶಕ ಅಭಿಮಾನ್ ರಾಯ್ ಹೊಸ ಟ್ಯೂನ್ ಗಾಗಿ ಹುಡುಕ್ತಾಯಿದ್ದರು. ಅದೇ ವೇಳೆನೆ, ಸರಳಾ ಅನ್ನೋ ಪದ ಬಂದಿದೆ. ಬಳಿಕ ಸರಸಕೆ ಅನ್ನೋದು ಅಷ್ಟೇ ಸಲೀಸಾಗಿ ಜೊತೆಯಾಗಿದೆ. ಇನ್ನು ಲುಕ್ಕು.ಬ್ಯೂಟಿ ಸರಳ ಬಂದ್ಮೇಲೆ ಒಂದರ ಹಿಂದೆ ಒಂದರಂತೆ ಬಂದಿವೆ. ಹಾಗೆ ಸೃಷ್ಠಿಯಾದ ಸರಳಾ ಎಂಬ ಸರಳ ಹಾಡು ಸೃಷ್ಟಿಯಾಗಿದೆ. ಕಳೆದ ಕೆಲವು ವರ್ಷದಿಂದ ಜೊತೆಗೇನೆ ಟ್ರ್ಯಾಕ್ ಹಾಡಿಕೊಂಡಿದ್ದ ರಾಮಾನುಜಂ ಎಂಬ ಗಾಯಕ್ರು ಹಾರ್ಮೋನಿಯಂ ಎದುರೆ ಕುಳಿತಿದ್ದರು. ಆಗಲೇ ಬರೆದ ಸಾಲುಗಳನ್ನ ಒಮ್ಮೆ ಹಾಡಿ ಅಂದಿದ್ದಾರೆ ಅಭಿಮಾನ್ ರಾಯ್. ಫ್ರಶ್ ಆಗಿ ಬಂದ ಸಾಲುಗಳನ್ನ ತಮ್ಹಾಮದೇ ಶಾಸ್ತ್ರೀಯ ಶೈಲಿಲ್ಲಿ ಹಾಡಿದ್ದಾರೆ ರಾಮಾನುಜಂ.. ಆಗಲೇ ಅಭಿಮಾನ್ ರಾಯ್ ಗೆ ಖುಷಿ ಆಗಿದೆ. ಬಳಿಕ ಕೇಳುಗ ಸ್ನೇಹಿತರೆಲ್ಲ ಹೇಳಿದ್ದು ಒಂದೇ. ಕರೋಡಪತಿ ಚಿತ್ರದ ಈ ಹಾಡು ಹಿಟ್  ಅಂತ. ಅದರಂತೆ ಈ  ಹಾಡು ಈಗ ಜನಪ್ರಿಯವಾಗುತ್ತಿದೆ.

ಸರಳ ಹಾಡನ್ನ ಚಿತ್ರೀಕರಿಸಿರೋ ರೀತಿನೂ ವಿಶಿಷ್ಠವಾಗಿದೆ. ಮೊದ್ಲೇ ಗ್ರೀನ್ ಮ್ಯಾಟ್ ನಲ್ಲಿ ಇಡೀ ಹಾಡನ್ನ ಚಿತ್ರೀಕರಿಸಲಾಗಿದೆ. ಆ ಮೇಲೆ ಒಟ್ಟು ಹಾಡಿಗೆ ತಮಗೆ ಹೇಗೆ ಬೇಕೋ ಹಾಗೆ ಗ್ರಾಫಿಕಲ್ ಸ್ಪರ್ಶ ನೀಡಲಾಗಿದೆ. ಅದರ ಫಲ ಹಾಡಲ್ಲಿ ಬರೋ ಪ್ರತಿ ದೃಶ್ಯಗಳು ವೀಕ್ಷಕರನ್ನ ಸ್ವರ್ಗಕ್ಕೆ ಕರೆದುಕೊಂಡು ಹೋಗುತ್ತವೆ. ಹಾಸ್ಯದ ಹೊನಲಿನಲ್ಲಿ ತೇಲೋ ಹಾಗೆ ಮಾಡುತ್ತವೆ. ಅಷ್ಟು ಚೆನ್ನಾಗಿ ಮೂಡಿ ಬಂದಿದೆ ಹಾಡು.

ಹಾಡಲ್ಲಿ ಕೋಮಲ್ ಪ್ರಮುಖ ಆಕರ್ಷಣೆ. ಒನ್ ಟೀ.. ಒನ್ ಬನ್ ಅನ್ನೋ ಉಪ ಶೀರ್ಷಿಕೆ ಈ ಕರೋಡಪತಿ ಈ ಗೀತೆಯಲ್ಲಿ 6 ಗೆಟಪ್ ಹಾಕಿದ್ದಾರೆ. ಒಂದಕ್ಕಿಂತ ಒಂದು ವಿಭಿನ್ನವಾಗಿರೋ ಈ  ವೇಷಗಳು  ಹಾಸ್ಯಕ್ಕೆ ಹೊಸದಂದು ಭಾವತಂದು ಕೊಟ್ಟಂತೆ ತೋರುತ್ತವೆ. ನಿರ್ದೇಶಕ ರಮೇಶ್ ಪಿಸಿಆರ್. ತಮ್ಮ ಕಲ್ಪನೆಯಂತೆ, ಹಾಡಿನ ಚಿತ್ರೀಕರಣ ಮಾಡಿಸಿದ್ದಾರೆ. ಪ್ಯಾರ್ಗೆ ಆಗ್ಬಿಟೈತೆ ಹಾಡಿನ ಕೋರಿಯೋಗ್ರಾಫರ್ ಮುರಳಿ ಈ ಗೀತೆಯ ನಿರ್ದೇಶಕರು. ಸಂಗೀತ ನಿರ್ದೇಶಕ ಅಭಿಮಾನ್ ರಾಯ್ ಕಲ್ಪನೆಯಂತೆ ಹಾಡನ್ನ ಇನ್ನಷ್ಟು ಹಾಸ್ಯಭರಿತವಾಗಿಸಿದ್ದಾರೆ.

ಕೋಮಲ್  ಗೆ ಇದು ಮತ್ತೊಂದು ಬ್ರೇಕ್ ಕೊಡಬಹುದಾದ ಚಿತ್ರವಾಗಿ ಕಂಡು ಬರುತ್ತಿದೆ. ಗೋವಿಂದಾಯನಮ; ಚಿತ್ರದ ಪ್ಯಾರ್ಗೇ ಆಗ್ಬಿಟೈತೆ ಗೀತೆಯಿಂದ ಹೀರೋ ಪಟ್ಟ ಗಿಟ್ಟಿಸಿಕೊಂಡ ಕೋಮಲ್, ನಂತರ ಮಾಡಿದ್ದ ಚತ್ರಗಳೆಲ್ಲ ಅಷ್ಟೇನೂ ಇಷ್ಟವಾಗಲಿಲ್ಲ ಪ್ರೇಕ್ಷಕರಿಗೆ. ಆದ್ರೆ, ಕರೋಡಪತಿ ಹೊಸದೊಂದು ಉತ್ಸಾಹವನ್ನ ಕೋಮಲ್ ಮನಸ್ಸಿನಲ್ಲಿ ಈಗಲೇ ತುಂಬಿದೆ. ಕಾರಣ, ಸರಳ ಸಾಂಗ್ ಜನರ ಮೆಚ್ಚಿಗೆಗೆ ಪಾತ್ರವಾಗಿದೆ. ಗೋವಿಂದಾಯನಮ: ಕೂಡ ಆರಂಭದಲ್ಲಿ ಇದೇ ರೀತಿಯ ನಿರೀಕ್ಷೆ ಹುಟ್ಟುಹಾಕಿತ್ತು. ಇಷ್ಟೆಲ್ಲ ಓದಿದ ಮೇಲೆ ಹಾಡನ್ನ ಕೇಳಬೇಕು ಅನಿಸಿದ್ರೆ.ಯುಟ್ಯೂಬ್ ನಲ್ಲಿ ಸರಳಾ ಸಾಂಗ್  ಕರೋಡಪತಿ ಅಂತ ಟೈಟಪ್ ಮಾಡಿದ್ರೆ ಸಾಕು. ಕೋಮಲ್ ಭಿನ್ನ ಗೆಟಪ್ ನ ಸರಳ ಹಾಡು ಸರಳವಾಗಿಯೇ ನಿಮ್ಮ ಮನಸ್ಸಿನಲ್ಲಿ ಇಳಿಯುತ್ತದೆ. ಸದಾ ಗುನುಗುವಂತೆ ಮಾಡುತ್ತದೆ. ಬೇಕಾದ್ರೆ ಒಮ್ಮೆ ಟ್ರೈ ಮಾಡಿ..

-ರೇವನ್ ಪಿ.ಜೇವೂರ್

 

Comments

Submitted by H A Patil Thu, 10/10/2013 - 19:24

ರೇವನ್ ಜೇವೂರು ರವರಿಗೆ ವಂದನೆಗಳು ಈ ಲೇಖನ ಓದಿದೆ, ಒಂದು ಸಿನೆಮಾ ಹಾಡು ಹೇಗೆ ರೂಪುಗೊಳ್ಳುತ್ತದೆ ಎಂಬುದನ್ನು ಸರಳವಾಗಿ ಅರ್ಥವಾಗುವಂತೆ ವಿವರಿಸಿದ್ದೀರಿ, ಹಾಸ್ಯ ನಟ ಕೋಮಲ್ ಚಿತ್ರದ ಬಗ್ಗೆ ಆಸಕ್ತಪೂರ್ಣವಾಗಿ ದಾಖಲಿಸಿದ್ದೀರಿ.ಕನ್ನಡಸದಲ್ಲಿ ಅದ್ಭುತ ತಿಳುವಳಿಕೆಯ ಹಾಸ್ಯ ನಟರಿದ್ದಾರೆ, ಅದು ಕೋಮಲ್, ಜಗ್ಗೇಶ, ಶರಣ್, ಸಾಧು ಕೋಕಿಲ ಮತ್ತು ಮಂಡ್ಯ ರಮೇಶ ಮುಂತಾದ ಪ್ರತಿಭಾವಂತರನ್ನು ಹೆಸರಿಸ ಬಹುದು, ಧನ್ಯವಾದಗಳು.