ದಾರಿ ತಪ್ಪಿದ ಹುಡುಗ..!

ದಾರಿ ತಪ್ಪಿದ ಹುಡುಗ..!

ಮನೆಯಲ್ಲಿ ಇಬ್ಬರು ಸೋದರಿಯರು. ಇಬ್ಬರೂ ಈತನಿಗೆ ಚಿಕ್ಕವರೇ. ಅಮ್ಮ ಸಡನ್ ಆಗಿ ತೀರಿ ಹೋಗುತ್ತಾಳೆ. ಹಳ್ಳಿ ಬಿಟ್ಟು ಶಹರಕ್ಕೆ ಬರುವಂತೆ ಸಂಬಂಧಿಕರ ಒತ್ತಾಯ. ಬಿ.ಎ.ಪಾಸ್ ಮಾಡಿಕೊಂಡು ಏನೋ ಸಾಧಿಸಬೇಕೆಂಬ ಅಂಬಲ. ಕನಸು ಹೊತ್ತು ಹಾಗೆ ದೆಹಲಿಗೆ ಬಂದದ್ದು ಆಯಿತು. ಅತ್ತೆ ಮನೆನೆ ಆಶ್ರಯ. ಅವರ ಮನೇನೂ ಅಂತಹ ದೊಡ್ಡದೇನೂ ಇಲ್ಲ. ಅವರಿಗೊಬ್ಬ ಹುಡಾಳು ಮಗ.ಆದ್ರೆ ಮಾವ ಒಳ್ಳೆ ಮನುಷ್ಯ. ದೊಡ್ಡ ಕಚೇರಿಯಲ್ಲಿ ಕೆಲಸ ಮಾಡ್ತಾರೆ. ಅವರ ಆಫೀಸ್ ನಲ್ಲಿ ಇರೋ ಅಶೋಕ ಸಾಹೇಬರ ಹೆಂಡ್ತ ಸಾರಿಕಾ ಅಂಡ್ ಫ್ರೆಂಡ್ಸ್  ಅತ್ತೆ ಮನೆಗೆ ಬರ್ತಾನೇ ಇರ್ತಾರೆ. ಅವರಿಗೆ ಸ್ನ್ಯಾಕ್ಸು. ಪೆಪ್ಸಿ ಸರ್ವ ಮಾಡೋದು,ಕಾಲೇಜಿನಿಂದ ಬಂದ್ಮೇಲೆ ಮಾಡಲೇಬೇಕಾದ ಕೆಲಸ..

ಬದುಕು ಹೀಗೆ ಸಾಗಿತ್ತು. ಒಮ್ಮೆ ಸಾರಿಕಾ ಮನೆಗೆ ಬಂದಿದ್ದರು. ನಮ್ಮನೆಗೂ ಬಾ ಎಂದು ಹೇಳಿದ್ರು. ಪ್ರತಿ ಸಲ ಪೆಪ್ಸಿ ಕೋಡೋಕೆ ಹೋದಾಗ ಆಗೋ ಕೆಟ್ಟ ಅನುಭವ ಇದು. ಅತ್ತೆ ಒತ್ತಾಯಕ್ಕೆ ಅವರ ಮನೆಗೆ ಓದಾಗ ಅಲ್ಲಿ ಆದ ಅನುಭವ ಬೇರೆ. ಹಣ್ಣು.ಹಣ್ಣು ಮುದುಕಿಯೊಬ್ಬಳು ಮನೆಗೆ ಬರಬೇಡ. ಸಾರಿಕಾ ರಾಕ್ಷಸಿ ಅಂತ ಹೇಳಿದ್ಲು. ಅತ್ತೆ ಒತ್ತಾಯಕ್ಕೆ ಬಂದಾಗಿತ್ತು. ಅಜ್ಜಿಯ ಒತ್ತಾಯಕ್ಕೆ ಮನೆಗೆ ಮರಳುವಾಗ್ಲೇ, ಸಾರಿಕಾ ಕೂಗಿದ್ರು. ಒಳಗೆ ಹೋದಾಗ ಏನೋ ಭಯ. ಆ ಮೇಲೆ ಸಾರಿಕಾ ವರ್ತನೆ ಯಾಕೋ ಅಸಹನಿಯ. ಆಗ ಸರಿ ಹೋಗಬಹುದು. ಈಗ ಸರಿ ಹೋದೀತು. ಎಂಬ ಲೆಕ್ಕಾಚಾರದಲ್ಲಿ ಇರೋವಾಗ್ಲೆ, ಸಾರಿಕಾ ತನ್ನ ಮೈಮೇಲಿನ  ಕುರ್ತಾ ತೆಗೆದಳು. ಸೋಪಾ ಮೇಲೆ ಮಲುಗು ಅಂತ ಜೋರು ಮಾಡಿದಳು. ಏನೂ ಹೊಳೆಯದೇ ಸಾರಿಕಾ ಹೇಳೋವಂತೆ ಮಾಡಿದ್ದು ಆಯಿತು. ಅಲ್ಲಿಂದಲೇ ಬದುಕು, ದಾರಿ ತಪ್ಪಿಸೋ ಸೂಚನೆ ನೀಡಿತ್ತು.

ಅಜಯ್ ಬಾಹಲ್ ನಿರ್ದೇಶನದಲ್ಲಿ ಬಂದ ಬಿ.ಎ.ಪಾಸ್ ಚಿತ್ರ ಕತೆಯಿದು. ಇದೇ ಅಗಸ್ಟ್-2 ಕ್ಕೆ ಚಿತ್ರ ತೆರೆಗೆ ಬಂದು ಹೋಗಿದೆ. ಸಮಯ ಸಿಕ್ಕಾಗ ಸಿನಿಮಾ ನೋಡುವ ಮಂದಿಗೆ ಇದು ಯಾವಾಗ್ಲು ಇಷ್ಟವಾಗೋ ಒಂದು ಚಿತ್ರ. ಒಳ್ಳೆ ಕತೆ ಇರೋ ಚಿತ್ರ. ನೀವೆಲ್ಲ ಕೇಳಿರಬೇಕು. ದೊಡ್ಡ ದೊಡ್ಡ ನಗರಗಳಲ್ಲಿ ವೇಶ್ಯೆಯರ ಥರ ಗಂಡು ವೇಶ್ಯೆಯರು ಇರುತ್ತಾರೆಂಬ ಸತ್ಯ. ಈ ಚಿತ್ರ ಅದೇ ಗಟ್ಟಿ ಎಳೆಯಲ್ಲಿ ಅದ್ಭುತವಾಗಿ ಮೂಡಿ ಬಂದಿರೋ ಒಂದು ಅಪರೂಪದ ಚಿತ್ರವೇನೋ ಅನಿಸುವ ಮಟ್ಟಿಗೆ. ಆದ್ರೆ, ಇದು ಚಿಕ್ಕವರು ನೋಡಬಾರದ ಸಿನಿಮಾ. ದಾರಿ ತಪ್ಪೋ ಯುವಕರಿಗೆ ಇದು ಹೇಳಿ ಮಾಡಿಸಿದ ಫಿಕ್ಚರ್. ಇನ್ನೂ ಮತ್ತೆ ಕತೆಗೆ ಬರೋಣ. 

ಸಾರಿಕಾ ಅಂಟಿಯಿಂದ ಹಾಳಾಗಿ ಹೋದ ಹುಡುಗ ಏನ್ ಮಾಡಬೇಕು. ಗೊತ್ತಿಲ್ಲ. ಹೊಸ ಅನುಭವ. ಬಿಡಲಾರದ ಸೆಳೆತ. ಆ ಕಡೆ ಅತ್ತೆಯ ಕಾಟ. ಇನ್ನೊಂದು ಕಡೆ ಸೋದರಿಯರ ಜವಾಬ್ದಾರಿ. ಬಿ.ಎ.ಪಾಸ್ ಆಯಿತೋ ಇಲ್ಲವೋ. ಕಾಲೇಜಿಗೆ ಹೋಗೋ ನೆಪದಲ್ಲಿ ಸಾರಿಕಾ ಮನೆಗೆ ಸಾಗೋದೇ ಕೆಲಸ. ಅವಳೋ. ಮನೆಯೊಳಗೆ ಕಾಲಿಡುತ್ತಿದ್ದಂತೆ ತನ್ನ ಹಸಿವನ್ನ ನೀಗಿಸಿಕೊಳ್ಳೋದೇ ಆಕೆ ಮುಖ್ಯ ಉದ್ದೇಶ. ಅದು ದಿನವೂ ನಡೀತ್ತಿದ್ದ ಸತ್ಯ ಆದ್ರೆ, ಇದೇ ವೇಳೆ ಇನ್ನೊಂದು ನಿಜವೂ ತಿಳಿದು ಹೋಯಿತು. ಎಲ್ಲ ಕಷ್ಟ-ನಷ್ಟಗಳು ಸಾರಿಕಾಗೆ ಗೊತ್ತಿದೆ. ಅದನ್ನ ಬಳಸಿಕೊಂಡು ಆಕೆ ಇನ್ನೊಂದು ಕೆಲಸವನ್ನೂ ಮಾಡಿಸಿಕೊಳ್ಳು ಆರಂಭಿಸಿದಳು. ಅದು ಗಂಡು ಸೂಳೆ ಕೆಲಸ. ತನ್ನ ಕ್ಲಬ್ ನ ಮಹಿಳೆಯರಿಗೆ ಬೇಕು ಅನಿಸಿದಾಗ ಹೋಗಬೇಕು. ಅವರು ಹೇಳೋ ಹಾಗೆ ನಡೆದುಕೊಳ್ಳಬೇಕು. ನಂತರವೇ ದುಡ್ಡು ಕೈಗೆ ಸಿಗುತ್ತಿತ್ತು. ಅದರಲ್ಲಿ ಅರ್ಧ ಪಾಲು ಸಾರಿಕಾಗೆ. 

ಹೀಗೆ ಜಮೆಯಾದ ಅಷ್ಟೂ ದುಡ್ಡನ್ನ ಮನೆಯ ಕಬೋರ್ಡ್ ನಲ್ಲಿ ಜೋಪಾನದಿಂದ ಇಟ್ಟಾಗಲೇ, ಅತ್ತೆ ಮಗ ಕಬೋರ್ಡ್ ಕೀ ತೆಗೆದು ದುಡ್ಡು ಹೊಡೆಯೋಕ ನೋಡಿದೆ. ಇದನ್ನ ಕಂಡ್ಮೇಲೆ ಗಳಿಸಿದ ದುಡ್ಡನ್ನ ಸೇಫ್ ಅಗಿ ಇಡಲೇಬೇಕು ಅನ್ನೋ ಎಚ್ಚರಿಕೆಯಲ್ಲಿ, ಸಾರಿಕಾ ಕೈಯಲ್ಲಿಯೇ ದುಡಿದ ದುಡ್ಡನ್ನೂ ಕೊಟ್ಟಿದೇ ಬಂತು. ಅದೇ ವೇಳೆ ಸಾರಿಕಾ ಮತ್ತದೆ ದೈನಂದಿನ ಚಾಳಿಯಲ್ಲಿ ಕಳೆದು ಹೋದಳು. ಆಗಲೇ ಬರಬೇಕಿತ್ತು ಆಕೆ ಪತಿ. ಆತನೋ ಮಹಾನ್ ವಿಕೃತ. ಕಣ್ಮುಂದೇನೆ ಅವಳನ್ನ ವಿಕೃತವಾಗಿ ಅನುಭವಿಸಿ ಬಿಟ್ಟ. ಈ ಪ್ರಕರಣ ಆದ್ಮೇಲೆ ಎಲ್ಲವೂ ತಿರುವು-ಮುರುವು. ಅತ್ತೆ ಎದುರು ಸಾರಿಕಾ ಗಂಡ ಅಶೋಕ್ ಕಂಪ್ಲೇಂಟ್ ಮಾಡಿದ. ಅದರಿಂದ ಅತ್ತೆ ಮನೆ ಬಿಟ್ಟೇ ಓಡಿಸಿದ್ರು. ಇದೇ ಸಮಯಕ್ಕೇನೆ, ಹಾಸ್ಟೆಲ್ ನಲ್ಲಿದ್ದ ಸೋದರಿಯರಿಗೆ ವಾರ್ಡನ್ ಕಾಟ. ಅವರನ್ನೂ ದಾರಿ ತಪ್ಪಿಸೋ ಪ್ರಯತ್ನವದು. ಅದರಿಂದ ಬೇಸರಗೊಂಡ ತಂಗೀಯರು ಬೇಗ ಬಾ ಅಂತಲೇ ಕರೆ ಮಾಡ್ತಿದ್ದರು.

ಆದ್ರೆ, ಸಾರಿಕಾ ಬಳಿ ಸಿಕ್ಕಿ ಹಾಕಿಕೊಂಡ ದುಡ್ಡು ಸಿಗೋದು ಯಾವಾಗ. ಸಾಧ್ಯವೇಯಿಲ್ಲ ಅನ್ನೋ ಹಂತಕ್ಕೆ ಬಂದಾಗ, ಸ್ಮಶಾನದಲ್ಲಿ ಚೆಸ್ ಆಡೋವಾಗ ಗೆಳೆಯನಾದ ಜಾನಿನೇ ಸೂಕ್ತ ಅಂತ ಅವನ್ನೇ ಸಾರಿಕಾ ಮನೆಗೆ ಕಳಿಸಿದ್ದು ಆಯಿತು. ಅದರ ಫಲ ಏನೂ ಆಗಲೇ ಇಲ್ಲ. ಸಾರಿಕಾ ಎಲ್ಲೇ ಸಿಕ್ಕರೂ ಥೇಟ್  ವ್ಯಾಪಾರಿಯ ಹಾಗೆ ಟ್ರೀಟ್ ಮಾಡ್ತಿದ್ದಳು. ಒಮ್ಮೆ ಸಿಟ್ಟು ಬಂದು, ಆಕೆಯ ಮನೆಯ ಹಿಂದಿನ ಬಾಗಿಲಿನಿಂದ ಒಳಗೆ ನುಗ್ಗಿ ಕಬೋರ್ಡ್ ತೆರೆದ್ರೆ ದುಡ್ಡೇಯಿಲ್ಲ. ಅದೇ ಟೈಮ್ ನಲ್ಲಿ ಸಾರಿಕಾ ಬಂದ್ಲೂ ಆಗಲೂ ಅದೇ ಮಾತು. ನೋ ಮನಿ. ಇದರಿಂದ  ಕುಪಿತಗೊಂಡು ಅಲ್ಲಿಯೇ ಇದ್ದ ಚಾಕೂ ತೆಗೆದುಕೊಂಡು ಅವಳನ್ನ ಹೆದರಿಸೋಕೆ ಪ್ರಾರಂಭಿಸಿದ್ರೂ ಏನೂ ಪ್ರಯೋಜನವಾಗಲಿಲ್ಲ. ಆಗಲೇ ಸಾರಿಕಾ ಗಂಡ ಮನೆ ಬಾಗಿಲಿಗೆ ಬಂದು ನಿಂತಿದ್ದ. ಅದನ್ನೇ ಎನ್ ಕ್ಯಾಶ್ ಮಾಡಿಕೊಂಡು ಉಳಿಯಲು ನೋಡಿದ ಸಾರಿಕಾಳನ್ನ ಅದೇ ಚಾಕುವಿನಿಂದ ಕೊಂದು ಓಡಿದೆ..ಓಡಿದೆ...

ಏನು ಉಪಯೋಗ. ಹಿಂದೆ ಪೊಲೀಸ್ರು. ಮುಂದೇ ದಾರಿ. ಸೋದರಿಯರು ರೇಲ್ವೆ ಸ್ಷೇಷನ್ ಗೆ ಬಂದಾಗಿದೆ. ಅವರನ್ನ ಕರೆದುಕೊಂಡು ಬಂದು, ಮನೆ ಮಾಡಬೇಕು. ಇರಲು ಮನೆನೂ ಇಲ್ಲ. ಜೇಬ್ ನಲ್ಲಿ ನಯಾ ಪೈಸಾನೂ ಇಲ್ಲ. ಏನು ಮಾಡೋದು. ಕಣ್ಣಿಗೆ ಕಾಡಿಗೆ, ತುಟಿಗೆ ಲಿಪ್ ಸ್ಟಿಕ್ ಹಚ್ಚಿಕೊಂಡು ರೋಡ್ ಸೈಡ್ ನಿಂತು ಗಿರಾಕಿಗಳನ್ನ ಕರೆದರಾಯಿತು ಅಂದುಕೊಂಡು ರೆಡಿಯಾಗಿ ಬಂದ್ರೆ, ಪೊಲೀಸ್ರು ಬೆನ್ನಟ್ಟಿ ಬರುತ್ತಿದ್ದಾರೆ. ಸಾರಿಕಾ ಕೊಲೆ ಕೇಸ್ ನಲ್ಲಿ ಅರೆಸ್ಟ್ ಮಾಡೋಕೆ. ಇದರಿಂದ ತಪ್ಪಿಸಿಕೊಳ್ಳೋದು ಹೇಗೆ. ಗೊತ್ತಿಲ್ಲ. ಓಡಿದ್ದೇ ಬಂತು. ಮಧ್ಯೆ..ಮಧ್ಯೆ ತಂಗೀಯರ ಫೋನ್ ಬೇರೆ. ಅತಿ ಎತ್ತರ ಬಿಲ್ಡಿಂಗ್ ಏರಿ ತಪ್ಪಿಸಿಕೊಂಡರಾಯಿತು ಅನ್ಕೊಂಡ್ರೆ ಎಲ್ಲಡೆ ಪೊಲೀಸ್ರು. ದಾರಿನೇ ಇಲ್ಲ. ತಪ್ಪಿದ ದಾರಿಯನ್ನ ಸರಿ ಮಾಡಿಕೊಳ್ಳೋಕೆ ಬೇರೆ ಮಾರ್ಗವೇ ಇಲ್ಲ. ಅದಕ್ಕೇ ಮೇಲಿಂದ ಕಳೆಗೆ ಹಾರಿದಾಗ ಹೋಗಿದ್ದು ಪ್ರಾಣ ಪಕ್ಷಿ. ಅಲ್ಲಿ ಮುಗಿಯಿತು. ಬಿ.ಎ.ಪಾಸ್  ಮುಖೇಶ್ ಎಂಬ ಹುಡುಗನ ಕತೆ.

ಚಿತ್ರವನ್ನ ನೋಡಿದ ಮೇಲೆ ತುಂಬಾ ಕಾಡುತ್ತದೆ. ಮನಸ್ಸು ಮರಗುತ್ತದೆ. ಹೆಣ್ಮಕ್ಕಳು ವೇಶ್ಯೆಯಾದ್ರೆ ಏನೇಲ್ಲ ಆಗುತ್ತದೆಂಬ ಕಲ್ಪನೆ ಸಹಜವಾಗಿ ತಿಳಿದಿರುತ್ತದೆ. ಗಂಡು ಸೂಳೆಯ ಈ ಕತೆ ನಿಜಕ್ಕೂ ನೋವುಂಟು ಮಾಡುತ್ತದೆ. ಕತೆಯನ್ನ ನಿರ್ದೇಶಕ ಅಜಯ್ ತುಂಬಾ ಇನ್ ಟೆನ್ಸ್ ಆಗಿ ಕಟ್ಟಿಕೊಟ್ಟಿದ್ದಾರೆ. ನಿಧಾನವಾಗಿಯೇ ಸಾಗುವ ಈ ಕತೆ, ಪ್ರತಿ ದೃಶ್ಯಕ್ಕೂ ತೀವ್ರತೆ ಪಡೆಯುತ್ತಲೇ ಮುನ್ನುಗ್ಗುತ್ತದೆ. ಇಡೀ ಚಿತ್ರದಲ್ಲಿ ಬರೋ ಪಾತ್ರಧಾರಿಗಳೂ ಅಷ್ಟೇ ನೆನಪಿನಲ್ಲಿ ಉಳಿಯುತ್ತಾರೆ. ಹಾಗೆ, ಸಾರಿಕಾ ಪಾತ್ರಧಾರಿ ಶಿಲ್ಪಾ ಶುಕ್ಲಾ ಥೇಟ್  ಅತೃಪ್ತ ಮಹಿಳೆಯಾಗಿ ಮಿಂಚ್ತಾರೆ. ಮುಖೇಶ್ ಪಾತ್ರವನ್ನ ನಿರ್ವಹಿಸಿದ ಶಾದಾಬ್ ಕಮಲ್ ಗೆ ಇದು ಮೊದಲ ಚಿತ್ರ. ದಾರಿ ತಪ್ಪಿದ ಯುವಕನಾಗಿ ಕಾಣಿಸಿಕೊಂಡು ಎಲ್ಲರ ಮನಸ್ಸಿನಲ್ಲಿ ಉಳಿಯುತ್ತಾನೆ. ಇನ್ನಿತರ ಪಾತ್ರಗಳು ಇಲ್ಲಿವೆ. ಆದ್ರೆ, ಸಾರಿಕಾ ಮತ್ತು ಮುಖೇಶ್ ಚಿತ್ರದ ಪ್ರಮುಖ ಪಾತ್ರಧಾರಿಗಳು. ಇವರ ಮೇಲೆನೆ ಸಿನಿಮಾ ಚಿತ್ರಿತವಾಗಿದೆ. ಒಮ್ಮೆ ನೋಡಲೇಬೇಕು ಅಂತ ಹೇಳಬೇಕಾಗಿರೋ ಚಿತ್ರವಿದಾಗದೇ ಇದ್ದರೂ. ವಯಸ್ಕರ ಸಿನಿಮಾ ಇದು ಅಂತಲೇ ನೋಡಲು ಉತ್ಸಾಹ ತೋರುವ ಹುಡುಗರಿಗೆ ಇದು, ಕಂಡಿತ ಬುದ್ದಿ ಹೇಳೋ ಕೆಲಸ ಮಾಡುತ್ತದೆ. ಪೂರ್ತಿ ನೋಡಿದ್ರೆ...

-ರೇವನ್ ಪಿ.ಜೇವೂರ್