ಮನಸ್ಸಿನ ಪರದೆ ಮೇಲೆ ಸಿನಿಮಾ ಪಯಣ..! (ಚಿತ್ರಮಂದಿರದಲ್ಲಿ)
ನಾಳಿನ ಆಟದಲ್ಲಿ ನಾವು ಇರುತ್ತೆವೋ ಇಲ್ಲವೋ. ಆಕಾಶದಲ್ಲಿ ನಕ್ಷತ್ರಗಳು ಇದ್ದೇ ಇರುತ್ತವೆ. ಮೇರಾ ನಾಮ್ ಜೋಕರ್ ಚಿತ್ರದಲ್ಲಿ ಚಿತ್ರ ಸಾಹಿತಿ ಶೈಲೇಂದ್ರ ಹೀಗೆ ಬರೆದಿದ್ದರು. ಕಲ್ ಕೇಲ್ ಮೇ ಹಮ್ ಹೋನಾ ಹೋ. ಗರ್ದಿಶ್ ಮೇ ತಾರೆ ರಹೇಂಗೆ ಸದಾ. ಈ ಮಾತು ಎಲ್ಲ ದಶಕದಲ್ಲೂ ಅನ್ವಿಸುತ್ತದೆ. ಚಿತ್ರಮಂದಿರದಲ್ಲಿ ಎಂಬ ಚಿತ್ರ ಆರಂಭವಾಗೋದು ಇದೇ ರೀತಿ. ಆದ್ರೆ, ಇಲ್ಲಿ ಬರೋ ಮೊದಲು ಸಾಲು ಬೇರೆ. ಮಳೆಯೇ ಬರಲಿ. ಬಿಸಿಲೇ ಇರಲಿ. ಚಿತ್ರಮಂದಿರದಲ್ಲಿ ಸಿನಿಮಾ ಓಡುತ್ತಿರಲಿ. ಹೀಗೆ ಸಾಲುಗಳು ಬೆಳ್ಳಿ ಪರದೆ ಮೇಲೆ ಬರುತ್ತವೆ. ಆಗ ಸಿನಿಮಾದೊಳಗಿನ ಥಿಯೇಟರ್ ನ ಬೆಳ್ಳಿ ಪರದೆ ಮೇಲೆ, ಶೋ ಮಸ್ಟ್ ಗೋ ಆನ್ ಅಂತ ಬರುತ್ತದೆ. ಜೀನಾ ಎಹಾ ಮರನಾ ಯಹಾ ಎಂಬ ಸಾಲನ್ನ ರಾಜ್ ಕಪೂರ್ ಹಾಡ್ತಾರೆ. ಹೀಗೆ ಕನ್ನಡದ ಚಿತ್ರಮಂದಿರದಲ್ಲಿ ಸಿನಿಮಾ ಕತೆ ತೆರೆದು ಕೊಳ್ಳುತ್ತದೆ.
ಇಲ್ಲಿಂದ ಮುಂದೇನೂ...? ಕಟ್ ಮಾಡಿದ್ರೆ ಮುಂದಿನ ಸೀನ್. ಹೀಗೆ ನೀವು ಗೆಸ್ ಮಾಡೋಕೆ ಆಗೋದಿಲ್ಲ. ಹಾಗಂತ ಹೇಳೋದಿಲ್ಲ. ಕಟ್ ಮಾಡಲು ಆಗದೇ ಇರೋ ಬದುಕಿ ಸತ್ಯಗಳಿವೆ. ಗಾಂಧಿನಗರದಲ್ಲಿ ವ್ಯಾಪಾರವಾಗಿ ಚಿತ್ರಮಂದಿರಕ್ಕೆ ಬರೋ ಸಿನಿಮಾಗಳನ್ನ ನೋಡಲು ಬರೋ ಸಿನಿಪ್ರೇಮಿಗಳಿದ್ದಾರೆ. ಹುಚ್ಚು ಅಭಿಮಾನಿಗಳ ದಂಡೇಯಿದೆ. ಆದರೆ, ಸಿಂಬಲಿಕ್ ಆಗಿ ನಿಮ್ಮಗೆ ಇಲ್ಲಿ ಸಿಗೋದು ಒಬ್ಬನೇ. ಆತ ಶಂಕರ್ ನಾಗ್ ಅಭಿಮಾನಿ. ಈ ಅಭಿಮಾನಿಗೂ. ಚಿತ್ರಮಂದಿರದಲ್ಲಿ ಚಿತ್ರಕ್ಕೂ ಎಲ್ಲಿ ಸಂಬಂಧವಿಲ್ಲ. ಈತವೊಂದು ಕ್ಯಾರೆಕ್ಟರ್ ಅಷ್ಟೆ. ಹಿಂದೆ..ಹಿಂದೆ ಬರಬೇಡ. ಯಾಕೆ ಬರ್ತಿಯಾ ಅನ್ನೋ ಹುಡುಗಿ ಆಕೆ. ಆದ್ರೂ, ಅವಳ ಹಿಂದೇನೇ ಬರೋ ಹುಡುಗ ಆತ. ಇಲ್ಲಿ ಕಟ್ ಮಾಡಿದ್ರೆ ಒಂದು ಸತ್ಯ ಅರ್ಥ ಆಗುತ್ತದೆ. ಆಕೆ ವೇಶ್ಯೆ. ಆತ ಗಿರಾಕಿ. ಎಷ್ಟು ನಿನ್ನ ರೇಟು ಅಂತಾನೆ. ಆಕೆ 500 ರುಪಾಯಿ. ಜೆಸ್ಟ್ ಜೊತೆಯಲಿ ಸಿನಿಮಾ ನೋಡೋಕೆ ಎಂದು ವ್ಯವಹಾರ ಮಾಡ್ತಾಳೆ. ಆದ್ರೆ, ಇವರ ಮಧ್ಯೆ ಯೊಬ್ಬ ವ್ಯಕ್ತಿಯಿದ್ದಾನೆ. ಫೇಲವ ಮುಖ. ಇಸ್ಟ್ತಿ ಕಾಣದ ಅಂಗಿ. ಎಣ್ಣೆನೂ ಹಚ್ಚದ ತಲೆಗೂದಲು. ಮೂಗಿನ ಮೇಲೊಂದು ಕನ್ನಡಕ. ಈತ ನೋಡಲು ಹುಚ್ಚನ ಥರ ಕಾಣುತ್ತಾನೆ. ಈತನ ಸಿನಿಮಾ ನೋಡುವ ರೀತಿನೇ ಬೇರೆ. ತೆರೆ ಮೇಲೆ ಒಂದು ಮಹಾನ್ ಚಿತ್ರ ಓಡುತ್ತಿರುತ್ತದೆ. ಈತನ ಮನಸ್ಸಿನಲ್ಲಿ ಇನ್ನೊಂದು ಚಿತ್ರ ಮೂಡುತ್ತದೆ. ಕಣ್ಮುಂದಿನ ಪರದೆ ಮೇಲೂ ಅದೇ ಕತೆ ಸಿನಿಮಾಗಿ ಮೂಡುತ್ತದೆ...
ಇದರ ಹಿಂದಿನ ಸತ್ಯವೇನು...? ಏನೂ ವಿಶೇಷವಿಲ್ಲ. ಈತ ಡೈರೆಕ್ಟರ್. ಹೆಸ್ರು ಉಲ್ಲಾಸ್. ನಿಮಾರ್ಪಕರಿಗೆ ಕತೆಗಳನ್ನ ಹೇಳಿ..ಹೇಳಿಯೇ ಸೋತು ಹೋಗಿದ್ದಾನೆ. ಕತೆ ಕೇಳಿದವ್ರು ಕೇಳೋ ಮೊದ್ಲೇ ನಿದ್ದೇ ಹೋಗುತ್ತಾರೆ. ಹಾಗಿರುತ್ತವೆ ಈತನ ಕತೆಗಳೂ. ತಂದೆಯಂತು ದಿನವೂ ಬೈಯೋ ಸ್ಟ್ರಿಕ್ಟ್ ಅಪ್ಪ.ವೃತ್ತಿಯಿಂದ ಪುರೋಹಿತ. ಜೋತ್ಯಿಷ್ಯ ನೋಡದು ಗೊತ್ತಿದೆ. ಮಗನನ್ನ ಎಲ್ಲರ ಮುಂದೇ ಬೈಯೋದೇ ಈ ಅಪ್ಪನ ದೈನಂದಿನ ಚಟುವಟಿಕೆ. ಇದರಿಂದ ಬೇಸತ್ತ ಉಲ್ಲಾಸ್ ಒಮ್ಮೆ ವೈದ್ಯರ ಬಳಿಗೆ ಹೋಗ್ತಾನೆ. ವೈದ್ಯ ಈತನ ಸ್ನೇಹತನೇ ಬಿಡಿ. ಚೆಕ್ ಮಾಡಿದ ಮೇಲೆ, ಒಮ್ಮೆ ಮನೆಗೆ ಬರ್ತಾನೆ. ಬಂದವನೇ ಉಲ್ಲಾಸ್ ಇನ್ನು ಎರಡೇ ದಿನದ ಅತಿಥಿ. ನಂತರ ಈತ ಸತ್ತು ಹೋಗುತ್ತಾನೆ. ಈ ಸತ್ಯ ನಾಯಕನಿಗೂ ತಿಳಿಯುತ್ತದೆ.ತಂದೆ-ತಾಯಿ ಪ್ರೀತಿಯು ಆಗ ಹೆಚ್ಚಾಗುತ್ತದೆ. ಈ ಸಮಯದಲ್ಲೂ ನಾಯಕ ಉಲ್ಲಾಸ್ ಸಿನಿಮಾ ಪ್ರೀತಿ ಕಡಿಮೆಯಾಗೋದಿಲ್ಲ. ಕೊನೆಯದೊಂದು ಕತೆಯಿದೆ. ಚಿಕ್ಕ ಕತೆ. ಅದನ್ನ ತೆರೆ ಮೇಲೆ ನೋಡಬೇಕಂಬ ಆಸೆಯಿದೆ. ನೋಡಿ ಬಿಡುವೆ ಎಂದು ಚಿತ್ರ ಮಂದಿರಕ್ಕೆ ಬರುತ್ತಾನೆ. ಬಂದಾಗ, ಹೊರಗಡೆ ನಿಲ್ಲಿಸಿದ ಶಂಕರ್ ನಾಗ್ ಕಟೌಟ್ ಈ ಉಲ್ಲಾಸ್ ಕಣ್ಣಿಗೆ, ತನ್ನ ಚಿತ್ರದ ಕಥಾನಾಯಕನೇ ಆ ಕಟೌಟ್ ನಲ್ಲಿದ್ದಾನೆಂದು ಭ್ರಮೆ ಮೂಡುತ್ತದೆ. ಹಾಗೆ ಕಲ್ಪಿಸಿಕೊಂಡ ಆ ಹೀರೊ ಬೇರೆ ಯಾರು ಅಲ್ಲ. ಅದು ಈತನೇ..
ಒಳಗಡೆ ಎಲ್ಲರ ಮಧ್ಯೆ ನಾಯಕ ಸಿನಿಮಾ ನೋಡಲು ಆರಂಭಿಸುತ್ತಾನೆ. ತೆರೆ ಮೇಲೆ ಒಂದು ಸಿನಿಮಾ ಓಡುತ್ತದೆ. ಈತನ ಮನಸ್ಸಿನಲ್ಲಿ ಉಳಿದು ಹೋದ ಕಟ್ಟಕಡೆಯ ಮೃಗಶಿರ ಕತೆ ತೆರೆದು ಕೊಳ್ಳುತ್ತದೆ. ಆ ಕತೆಯಲ್ಲಿ ಬರೋ ನಾಯಕನ ಹೆಸ್ರು ಭೈರ. ಈತ ಓದಿದ್ದು ನಾಲ್ಕನೆ ಕ್ಲಾಸು. ಪಾತಾಳಗರಡಿ ಹಾಕಿ, ಬಾವಿಯಿಂದ ಬಿಂದಿಗೆ ತೆಗೆಯೋದೆ ಈತನ ವೃತ್ತಿ. ಬಿಂದಿಗೆ ತೆಗೆಸಿದವ್ರು ಈತನಿಗೆ ದುಡ್ಡು ಕೊಡೋದಿಲ್ಲ. ಬದಲಾಗಿ, ಊಟ ಕೊಡ್ತಾರೆ. ಇಂತಹ ವ್ಯಕ್ತಿಗೆ ಒಮ್ಮೆ , ಒಂದು ಕವರ್ ಬರುತ್ತದೆ. ಪೋಸ್ಟ್ ಮ್ಯಾನ್ ತಂದುಕೊಡ್ತಾನೆ. ಆ ಕವರ್ ನಲ್ಲಿ ಒಂದು ಚೀಟಿ. ಆ ಸೀಟಿಯಲ್ಲಿ ಮೂಲೆ ಮನೆ ಆ ಹೆಣ್ಮಮಗಳು ಸತ್ತರೇ ನಿನಗೆ ಇಷ್ಟು ದುಡ್ಡು ಬರುತ್ತದೆ. ಹೀಗೆ ಬರೆದಿರುತ್ತದೆ. ಲೆಟರ್ ಬಂದು ಕೆಲವೇ ದಿನಗಳಲ್ಲಿ ಆ ಹೆಣ್ಮಗಳು ಸತ್ತು ಹೋಗುತ್ತಾಳೆ. ಈತನಿಗೆ ದುಡ್ಡು ಬರುತ್ತದೆ. ಇದೇ ರೀತಿ ಹಲವು ಲೆಟರ್. ಹಲವರು ಸತ್ತು ಹೋಗುತ್ತಾರೆ. ಭೈರನಿಗೆ ದುಡ್ಡು ಬರುತ್ತದೆ. ಆದ್ರೆ, ಇದು ಹೇಗೆ ಸಾದ್ಯ. ಯಾರೋ ಸತ್ತರೇ ಈತನಿಗೆ ಏಕೆ ದುಡ್ಡು ಬರಬೇಕು. ಇದನ್ನ ಕಂಡಿತ ನೀವು ಚಿತ್ರಮಂದಿರಕ್ಕೆ ಹೋಗಿಯೇ ನೋಡಿ. ಒಂದು ಸಣ್ಣ ಕತೆ ಓದಿದ ಅನುಭವ ಕಂಡಿತ ಆಗುತ್ತದೆ..
ಕೊನೆಯ ಕತೆ ಕಲ್ಪಿಸಿಕೊಂಡ ಬಳಿಕ ನಾಯಕ ಉಲ್ಲಾಸ್ ಮನೆಗೆ ಬರುತ್ತದೆ. ಡಾಕ್ಟರ್ ಮತ್ತೆ ಬಂದು ಈತನ ಸಾವಿನ ಕಾಮೆಂಟ್ರಿ ಕೊಡ್ತಾರೆ. ಕಾಮೆಂಟ್ರಿ ಎಂಥ ಉಲ್ಲಾಸ್ ಸತ್ತು ಹೋಗುತ್ತಾನೆ. ಅಲ್ಲಿಗೆ ತೆರೆ ಮೇಲೆ ಇಂಟರವಲ್. ಹೊರಗಡೆಬಂದು, ನೀವು ಪೆಪ್ಸಿ, ಪಾಲ್ ಕಾನ್, ಇಲ್ಲವೋ ಇನ್ನೇನೋ ತಿನ್ನುತ್ತಿರೋವಾಗ್ಲೇ ಉಲ್ಲಾಸ್ ಸತ್ತು ಹೋದ್ನಾ. ಇಲ್ಲ ಜೀವಂತ ಇದ್ದಾನೆ. ಇಲ್ಲಾ ಮತ್ತೆ ಜೀವ ಬರುತ್ತದಾ..? ಈ ಎಲ್ಲ ಪ್ರಶ್ನೆಗಳು ನಿಮ್ಮಲ್ಲಿ ಕಂಡಿತ ಮೂಡುತ್ತವೆ. ಆದ್ರೆ, ಇಂಟರ್ ವಲ್ ನಂತರದ ಕತೆ ನಿಮ್ಮಲ್ಲಿ ಆಶ್ಚರ್ಯ ಮೂಡಿಸುತ್ತದೆ, ಕಾರಣ, ಉಲ್ಲಾಸ್ ಸತ್ತಿರೋದಿಲ್ಲ. ಸತ್ತ ಹಾಗೆ ನೋವು ಅನುಭವಿಸಿ ನಿದ್ದೆ ಹೋಗಿರುತ್ತಾನೆ. ಈ ಒಂದು ನಟನೆಯಲ್ಲಿ ನಾಯಕ ನಟ ಶಂಕರ್ ಆರ್ಯನ್ ಪರಕಾಯ ಪ್ರವೇಶ ಮಾಡಿದಂತಿದೆ.
ಈ ಘಟನೆಯಿಂದ ಉಲ್ಲಾಸ್ ಬದುಕು ಬದಲಾಗುತ್ತದೆ. ಸಿನಿಮಾ ಜಗತ್ತು ಬಿಟ್ಟು ನಿಜಜೀವನ ಸಾಗಿಸಲು ಉಲ್ಲಾಸ್ ಮುಂದಾಗುತ್ತಾನೆ. ಆದ್ರೂ, ಸಿನಿಮಾ ಹುಚ್ಚು ಬಿಡೋದಿಲ್ಲ. ಚೆಂದಗೆ ಚಿತ್ರ ಬಿಡಿಸಬಲ್ಲ ಈ ಉಲ್ಲಾಸ್, ಸ್ಟುಡಿಯೋದಲ್ಲಿ ಕೆಲಸ ಮಾಡುತ್ತಲೇ ಒಮ್ಮೆ ನಿರ್ಮಾಪಕರ ತಾಯಿ ಫೋಟೋವೊಂದನ್ನ ತುಂಬಾ ನೈಜವಾಗಿ ಬರೆದು ಕೊಡುತ್ತಾನೆ. ಅದರಿಂದ ಸಂತೋಷಗೊಂಡ ನಿರ್ಮಾಪಕ, ಈ ಹಿಂದೆ ಉಲ್ಲಾಸ್ ಕೊಟ್ಟು ಹೋದ ಕತೆಯನ್ನ ಓದಿ ಕಠೋರವಾದ ಅಭಿಪ್ರಾಯವನ್ನೂ ತಿಳಿಸುತ್ತಾನೆ. ಹೀಗೆ ಏರಿಳಿತಗಳ ಮಧ್ಯೆ ಒಮ್ಮೆ ಅದೇ ಪ್ರೋಡ್ಯೂಸರ್ ಸ್ಟುಡಿಯೋಗೆ ಬರುತ್ತಾನೆ. ಬಂದು ಉಲ್ಲಾಸ್ ಬಿಡಿಸೋ ಚಿತ್ರಗಳನ್ನ ನೋಡುತ್ತಾನೆ. ಅಷ್ಟೇ ಕುತೂಹಲದಿಂದಲೂ ಏನಿದು ಅಂತ ಕೇಳುತ್ತಾನೆ. ಆಗ ಉಲ್ಲಾಸ್ ಬಿಡಿಸಿದ ಪ್ರತಿ ಚಿತ್ರದ ಹಿಂದಿನ ತನ್ನ ಫ್ಲಾಷ್ ಬ್ಯಾಕ್ ಕತೆ ಹೇಳುತ್ತಾನೆ. ಅಲ್ಲಿ ಒಬ್ಬಳು ಹುಡುಗಿ. ಆಕೆ ಅಂದ್ರೆ ಈತನಿಗೆ ಪ್ರಾಣ. ಆಕೆಗೂ ಈತ ತುಂಬಾ ಪ್ರಿಯವಾದ ಪ್ರೇಮಿ. ಇವರ ಪ್ರೇಮ ನಿವೇದನೆಯ ಪರಿನೇ ಚೆಂದ. ಅಷ್ಟೇ ವಿಭಿನ್ನ. ಹುಡುಗಿಯ ತಂದೆ ಕೈಯಲ್ಲಿಯೇ ಪ್ರೇಮ ಪತ್ರ ಬರೆದು ಕಳಿಸೋದು ಈ ಉಲ್ಲಾಸನ ಎದೆಗಾರಿಕೆ. ಆದ್ರೆ, ಆ ಪತ್ರ ನೋಡಲು ಖಾಲಿ ಹಾಳೆ. ಆಕೆ ಅದರ ಮೇಲೆ ಬಣ್ಣ ಬಳೆದ್ರೆ ಅಲ್ಲಿ ಮೂಡುವುದು ಐ ಲವ್ ಯು ಎಂಬ ಎದೆಯೊಳಗಿನ ಪ್ರೀತಿಯ ಮಾತು..
ಇವರ ಲವ್ ಹೀಗೆ ಸಾತ್ತಿದೆ. ಪ್ರೋಡ್ಯೂಸರ್ ಕತೆ ಕೇಳುತ್ತಿದ್ದಾನೆ. ಮಧ್ಯೆ ನನ್ನ ಫೋನ್ ರಿಂಗ್ ಆಯಿತು. ಆಫೀಸಿನಿಂದ ಫೋನ್ ಬಂದಿತ್ತು. ಮರಳಿ ಏನು ವಿಷ್ಯ ಮ್ಯಾಡಂ ಎಂದು ಸಂದೇಶ ಕಳಿಸಿದೆ. ಆ ಕಡೆಯಿಂದ ಗಾಯಕ ಮನ್ನಾಡೇ ಮನೆಗೆ ಸಿ.ಎಂ.ಸಿದ್ಧರಾಮಯ್ಯ ನವ್ರು ಭೇಟಿ ಕೊಡ್ತಾರೆಂಬ ಸಂದೇಶ. ಟೈಮ್ ಗೊತ್ತಿಲ್ಲ. ಈಗಲೇ ಹೋಗೇಬೇಕಾ...? ಹೌದು ಎಂಬ ಮತ್ತೊಂದು ಸಂದೇಶ. ಇಲ್ಲಿಗೆ, ನಾನು ಮೆಜೆಸ್ಟಿಕ್ ನ ಅನುಪಮಾ ಚಿತ್ರಮಂದಿರದಿಂದ ಹೊರಗೆ ಬಿದ್ದೆ. ಆದ್ರೆ, ನಾಯಕ ನಟ ಶಂಕರ್ ಆರ್ಯನ್ ಹೊರಗಡೆ ಸಿಕ್ಕರು. ಹೇಗಿದೆ ಸಿನಿಮಾ ಅಂದ್ರೆ ಚೆನ್ನಾಗಿ ಅಂದೆ. ಪೂರ್ತಿ ನೋಡಲು ಆಗಲಿಲ್ಲ ಎಂದು ಕೇಳಿದ್ರು. ಹೌದು. ಎಂದೆ. ಅಲ್ಲಿಗೆ ನಾನು ನೋಡಿದ ಚಿತ್ರದ ಒಟ್ಟು ಲೆಕ್ಕ ಮುಕ್ಕಾಲು. ಕ್ಲೈಮ್ಯಾಕ್ಸ್ ಏನಾಯಿತು..? ಹೀರೋ ಡೈರೆಕ್ಟರ್ ಆದ್ನಾ..? ನಾಯಕಿ ಏನ್ ಆದ್ಲೂ, ಈ ಎಲ್ಲ ಪ್ರಶ್ನೆಗಳಿಗೆ ನಾನು ಇನ್ನೊಮ್ಮೆ ಚಿತ್ರಮಂದಿರದಲ್ಲಿ ನೋಡಬೇಕು. ನೀವು ಒಮ್ಮ ಟ್ರೈ ಮಾಡಿ...
-ರೇವನ್ ಪಿ.ಜೇವೂರ್