ಕನ್ನಡ ವಿಕಿಪೀಡಿಯ ದಶಮಾನೋತ್ಸವ.
ಕನ್ನಡ ವಿಕಿಪೀಡಿಯಕ್ಕೆ ಈಗ ದಶಮಾನೋತ್ಸವ. ಬನ್ನಿ. ಸಂಭ್ರಮದಿಂದ ಆಚರಿಸೋಣ. ವಿಕಿಪೀಡಿಯಾದಲ್ಲಿ ಜ್ಞಾನವನ್ನು ಹಂಚಿಕೊಳ್ಳುತ್ತಿರುವ ಎಲ್ಲರಿಗೂ ಅಭಿನಂದನೆಗಳು. ಕನ್ನಡ ವಿಕಿಪೀಡಿಯ ಮತ್ತಷ್ಟು ಬೆಳೆಯಲಿ, ಮತ್ತಷ್ಟು ಜ್ಞಾನದ ಸೊಗಡು ಎಲ್ಲರಿಗೂ ಹರಡಲಿ ಎಂದು ಆಶಿಸುತ್ತ, ನಿಮ್ಮೆಲ್ಲರನ್ನೂ ವಾರ್ಷಿಕೋತ್ಸವದ ಆಚರಣೆಗೆ ಆಹ್ವಾನಿಸುತ್ತಿದ್ದೇವೆ.
ಕನ್ನಡ ವಿಕಿಪೀಡಿಯ ಬಗ್ಗೆ, ಅದರಲ್ಲಿ ಹೊಸ ಲೇಖನಗಳನ್ನು ಸಂಪಾದಿಸುವುದರ ಬಗ್ಗೆ, ಹಳೆಯ ಲೇಖನಗಳ ಸಂವರ್ಧನೆಯ ಬಗ್ಗೆ ನಿಮ್ಮ ಗೆಳಯರಿಗೆ, ಸಹವರ್ತಿಗಳಿಗೆ ತಿಳಿಸುತ್ತಾ, ನೀವೂ ಆಚರಣೆಯಲ್ಲಿ ಭಾಗವಹಿಸಬಹುದು. ಸಣ್ಣದೊಂದು ಕಾರ್ಯಾಗಾರವನ್ನು ನೀವು ಇರುವೆಡೆಯಲ್ಲಿಯೇ ಕೆಲವೇ ನಿಮಿಷಗಳಲ್ಲಿ ಆಯೋಜಿಸಬಹುದು.
ದಿನಾಂಕ - ನವಂಬರ್ ೧೭ರಂದು.
ಸಮಯ - ಬೆಳಿಗ್ಗೆ ೯:೩೦ರಿಂದ ಮಧ್ಯಾಹ್ನ ೧:೦೦ ಗಂಟೆ ತನಕ.
ಸ್ಥಳ - ಬಸವನಗುಡಿ ನ್ಯಾಶನಲ್ ಕಾಲೆಜಿನ ಎಚ್.ಎನ್. ಸಭಾಂಗಣದಲ್ಲಿ.
ಹೆಚ್ಚಿನ ಮಾಹಿತಿಗೆ ಈ ಕೊಂಡಿ ನೋಡಿ - https://kn.wikipedia.org/wiki/%E0%B2%B5%E0%B2%BF%E0%B2%95%E0%B2%BF%E0%B2...
ಚಿತ್ರ ಕೃಪೆ - https://kn.wikipedia.org/wiki/%E0%B2%9A%E0%B2%BF%E0%B2%A4%E0%B3%8D%E0%B2...