ದಾನ
ಮಗನ ಕಟು ನುಡಿಗೆ ಮನ ನೊಂದ ಸೀತಮ್ಮ ತನ್ನ ಬಟ್ಟೆಗಳನ್ನು ಚೀಲಕ್ಕೆ ತುಂಬಿಕೊಂಡಳು. ಊರ ಮುಂದಿನ ಯಾವುದೊ ವೃದ್ದಾಶ್ರಮಕ್ಕೆ ತನ್ನನ್ನು ಸೇರಿಸಲು ಮಗನ ಮನಸ್ಸಾದರೂ ಹೇಗೆ ಒಪ್ಪಿರಬೇಕು? ತಾನು ಊರ ಶ್ರೀಮಂತರ ಮನೆಯ ಮುಸುರೆ ತೊಳೆದು ಅವನನ್ನು ಎಮ್.ಬಿ.ಎ. ಓದಿಸಿದ್ದು ಮರೆತು ಹೋಯಿತೇ? ಆಗಿದ್ದ ಪ್ರೀತಿ ಈಗೆಲ್ಲಿಹೊಯಿತು? ಮನದ ತುಮುಲಗಳು ಒಂದೊಂದಾಗಿ ಕಣ್ಣೀರ ರೂಪದಲ್ಲಿ ಹೊರಬಂದಿತ್ತು.
" ಅನಾಥಾಶ್ರಮಕ್ಕೆ 5 ಲಕ್ಷ ರೂ. ದಾನವಾಗಿ ನೀಡಿದ ಉದ್ಯಮಿ ಮೋಹನ್ ಚಂದ್ರ ಅವರಿಗೆ ಅನೇಕ ಸಂಘ ಸಂಸ್ಥೆಗಳಿಂದ ಸನ್ಮಾನ ಮಾಡಲಾಯಿತು..." ನ್ಯೂಸ್ ಸಾಗುತ್ತಿತ್ತು...
"ಅಬ್ಬ ಈ ಕಲಿಯುಗದಲ್ಲೂ ಎಂಥ ದಾನಿಗಳು" ಎಂಬ ಹೊಗಳಿಕೆಯ ಮಾತಿಗೆ ಸೀತಮ್ಮನವರಿಗೆ ಅರ್ಥಗರ್ಭಿತವಾದ ನಗುವೊಂದನ್ನು ಬಿಟ್ಟು ಬೇರೇನು ಪ್ರತಿಕ್ರಿಯಸಲಾಗಲಿಲ್ಲ. ಹೆತ್ತ ತಾಯಿಯನ್ನು ವೃದ್ದಾಶ್ರಮಕ್ಕೆ ಸೇರಿಸಿದ ಮಗ ಯಾರಿಗೆಷ್ಟು ದಾನ ಕೊಟ್ಟರೇನು...?
Rating