ನಿಯತ್ತು

ನಿಯತ್ತು

ನೆರಿಗೆ ಬಿದ್ದ ಮೊಗ, ಹಳೆಯ ಹೊಲಸಾದ ಬಟ್ಟೆ, ಗುಳಿ ಬಿದ್ದ ಕಂಗಳು... ಆದರೂ ಬದುಕಲೇಬೇಕೆಂಬ ಛಲ... ಮದನಪಲ್ಲಿ ಬಸ್ ಸ್ಟಾಂಡ್ ನಲ್ಲಿ ನನಗೆ ಕಂಡ ಆ ಅಜ್ಜನ ರೂಪ ಹೀಗಿತ್ತು... ಬಣ್ಣ ಮಾಸಿದ ಚೈನು ಉಂಗುರಗಳು, ಒಂದಷ್ಟು ಹಳೆಯದಾಗಿದ್ದ ಪ್ಲಾಸ್ಟಿಕ್ ಸಾಮಗ್ರಿಗಳು ಮತ್ತು ಹೀಗೆ ಎನೇನೊ ವಸ್ತುಗಳನ್ನು ಮಾರಲು ಕುಳಿತಿದ್ದ ...  ಖರೀದಿಸಲು  ಮಾತ್ರ ಯಾರೂ ಬರುತ್ತಿರಲಿಲ್ಲ... 

ನನ್ನ ಮನಸ್ಸು ಎಂದಿನಂತೆ ಏನೇನನ್ನೋ ಯೋಚಿಸುತ್ತಿತ್ತು. "ಇವನ ಮಗ ಯಾವ I.T. ಕಂಪನಿಯ A.C.ಯಲ್ಲಿ   ಕುಳಿತು ಬೆವರು ಒರೆಸಿಕೊಳ್ಳುತ್ತಿರಬಹುದೋ ಅಥವಾ ಯಾವ ಮಾರ್ಕೆಟ್ ನಲ್ಲಿ  ಬೆವರುತ್ತ ತರಕಾರಿ ಮಾರುತ್ತಿರಬಹುದೋ.." ಚುರುಕ್ ಎಂದಿತ್ತು  ಮನ... ಅಪ್ರಯತ್ನವಾಗಿ ಕೈ ಪರ್ಸ್ ಒಳಗಿದ್ದ 50 ರ ನೋಟನ್ನು  ಅವನೆಡೆಗೆ ಚಾಚಿತು.

ಗುಹೆಯಿಂದ  ಹೊರ ಬಂದಂತ್ತಿತ್ತು ಅವನ ಧ್ವನಿ. " ತಲ್ಲಿ,  ನಾನು ಭಿಕ್ಷುಕನಲ್ಲ, ನಿಮಗೆನಾದರೂ ಬೇಕೆಂದರೆ ಹಣಕೊಟ್ಟು ತೆಗೆದುಕೊಳ್ಳಿ..."

 

'Fridge charge' ಎಂದು 28 ರೂಪಾಯಿಯ 'ಕೂಲ್ ಡ್ರಿಂಕ್ಸ್' ನ್ನು 34ರೂಪಾಯಿಗೆ ಮಾರುವ ಬಸ್ಸ್ಟ್ಯಾಂಡ್ನ ಅಂಗಡಿಯವರು, ಅಂಗಡಿಯ ಬಾಡಿಗೆ ಎಂದು 5 ರೂಪಾಯಿಯ  laysನ್ನು 7 ರೂಪಾಯಿಗೆ ಮಾರುವವರು, 'value added services' ಎಂಬ ಹೆಸರಿನಲ್ಲಿ ಹಣ ದೋಚುವ ಮೊಬೈಲ್  ಕಂಪನಿಗಳು, 6 ರೂಪಾಯಿಯ ಟಿಕೆಟ್ ಗೆ ಚಿಲ್ಲರೆ ಕೊಡದೇ 4 ರುಪಾಯಿ ದೋಚುವ ಕಂಡಕ್ಟರ್ಗಳು... ಇವರಿಗಿಲ್ಲದ ನಿಯತ್ತು ಆ ಅಜ್ಜನಿಗೆ ಹೇಗೆ ಬಂದಿತ್ತೊ... 

Rating
No votes yet