ಆ ಸೀರೆ
'ಅಬ್ಬ...!!! ಅದೆಂಥ ಸೀರೆ? ಹಾಲು ಬಿಳುಪಿನ ಸೀರೆಗೆ ಅಚ್ಚು ಮರೂನ್ ಬಣ್ಣದ ಅಂಚು, ನಸು ನಗುತಿರುವ ಮುದ್ದುಕೃಷ್ಣನ ಸೆರಗು... ಮೈತುಂಬ ಮರೂನ್ ಬಣ್ಣದ ನವಿಲುಗರಿಯದೆ ಮೆರಗು...' ಕಣ್ಣುಗಳು ಬೇರೆತ್ತಲೂ ನೋಡಲು ಮುಷ್ಕರ ಹೂಡಿದ್ದವು... ನೇಕಾರ ತನ್ನ ಮನದನ್ನೆಯ ನಸುಗೋಪವನಾರಿಸಲು ನೆಯ್ದ ಸೇರೆಯೇನೊ ಎಂಬಂತಿತ್ತು. ಹೇಗಾದರೂ ಮಾಡಿ ಈ ಸೀರೆಯನ್ನು ಕೊಳ್ಳಲೇ ಬೇಕೆಂದುಕೊಂಡೇ... ಕಣ್ಣು ಸೀರೆಯ ಬೆಲೆಯತ್ತ ಹೊರಳಿತು. '೩೦೦೦ ರೂಪಾಯಿಗಳಾ? ನನ್ನ ತಿಂಗಳ ಸಂಬಳವೇ ೪೦೦೦ ಅಲ್ಲವೇ? ಛೆ! ನನ್ನದೂ ಒಂದು ಬದುಕ?...'
ಆದರೆ ಆ ಸೀರೆಯನ್ನು ಮಾತ್ರ ನನಗೆ ಮರೆಲಾಗಲಿಲ್ಲ ...
"ಬಂದ ಗ್ರಾಹಕರಿಗೆ ಸೀರೆಗಳನ್ನು ತೋರಿಸಮ್ಮ ಅದೇನು ಹಾಗೆ ಕನಸು ಕಾಣುತ್ತ ನಿಂತುಬಿಟ್ಟೆ?" ಎಂಬ ಮಾಲಿಕರ ಗದರುವಿಕೆಗೆ ನಾನು ಎಚ್ಚೆತ್ತುಕೊಂಡೆ. ನನ್ನ ಕೈಯಲ್ಲಿದ್ದ 'ಆ ಸೀರೆ'ಯನ್ನು ಯಾರಿಗೂ ಕಾಣದಂತೆ ಎಲ್ಲದರಕೆಳಗೆ ಕೆಳಗೆ ಇಟ್ಟೆ .
ಸೀರೆ ಕೊಳ್ಳಲು ಬಂದ ಹೆಂಗಸಿಗೆ ಯಾವ ಸೀರೆಯೂ ಇಷ್ಟವಾಗಲಿಲ್ಲವಾದ್ದರಿಂದ ಮಾಲಿಕರೇ ಬಂದು "ಏನಮ್ಮ? ಯಾವ ಸೀರೆಯೂ ಇಷ್ಟವಾಗಲಿಲ್ಲವಾ? ಎನ್ನುತ್ತ ನಾನಡಗಿಸಿಟ್ಟ 'ಆ ಸೀರೆ'ಯನ್ನೇ ಕೈಯಲ್ಲಿ ತೆಗೆದುಕೊಂಡಾಗ ಮಾತ್ರ ನಾನೆಷ್ಟು ಬಾರಿ ದೇವರಲ್ಲಿ ಬೇಡಿಕೊಂಡೆನೊ...
ಮದ್ಯಾಹ್ನ ಊಟ ಮುಗಿಸಿ ಅಂಗಡಿಗೆ ಬಂದಾಗಲೂ ಆ ಸೀರೆಗಾಗಿಯೇ ಹುಡುಕಿದೆ. ಒಮ್ಮೆಲೇ ಮನ ಭಾರವಾದಂತೆನಿಸಿತು. ಕಾಣದ ಸೀರೆಗಾಗಿ ಅಂಗಡಿಯೆಲ್ಲ ಹುಡುಕಿದೆ. ಕಣ್ಣೀರ ಹನಿಯೂ ನನಗೆ ಸಮಾಧಾನವಿಯಲಿಲ್ಲ. ದಿನವೆಲ್ಲ ಅದೇ ಬೆಸರದಲ್ಲಿದ್ದೆ. ಏನೇನೋ ಆಲೋಚನೆಗಳ ದಾಳಿಗೆ ಮನ ಅಲ್ಲೋಲಕಲ್ಲೋಲವಾಗಿತ್ತು...
ಇನ್ನೂ ಏನೆನೋ ಮಾಡಿಬಿಡುತ್ತಿದ್ದೆನೇನೊ ನನ್ನವನು "ಹುಟ್ಟು ಹಬ್ಬದ ಶುಭಾಷಯಗಳು ನನ್ನವಳೆ..." ಎನ್ನುತ್ತ 'ಆ ಸೀರೆ' ನೀಡದಿದ್ದರೆ..
Comments
ಉ: ಆ ಸೀರೆ
ಸೀಮಾರವರೆ, ದೇವರ ದಯೆ ಸದ್ಯ - ಕಾಕತಾಳೀಯವೊ, ಅಥವಾ ನಿಮ್ಮಾತನ ಚಾಣಾಕ್ಷತೆಯೊ 'ಸೀರೆಯೂ ಬದುಕಿತು', 'ನಿಮ್ಮಾತನು ಬದುಕಿಕೊಂಡ ಹಾಗಾಯ್ತು' - ಚೋಟು ಕಥೆ ಚೆನ್ನಾಗಿದೆ. [(ಒಂದಕ್ಕಿಂತ ಹೆಚ್ಚು ಚುಟುಕು ಕಥೆ ಒಟ್ಟಾಗಿ ಪ್ರಕಟಿಸುವಾಗ ಒಂದರಲ್ಲೆ ಎರಡು ಮೂರು ಸೇರಿಸಿ ಹಾಕಿದರೆ ಚೆನ್ನಿರುತ್ತೆನಿಸುತ್ತದೆ - ಪುಟ್ಟ ಸಲಹೆ, ತಮ್ಮ ಪರಿಗಣನೆಗೆ :-)] - ವಂದನೆಗಳು, ನಾಗೇಶ ಮೈಸೂರು
In reply to ಉ: ಆ ಸೀರೆ by nageshamysore
ಉ: ಆ ಸೀರೆ
ಧನ್ಯವಾದಗಳು... ನಿಮ್ಮ ಸಲಹೆಗಳನ್ನು ಪರಿಗಣಿಸುತ್ತೇನೆ... ನಾನು 'ಸಂಪದ'ಕ್ಕೆ ಹೊಸಬಳು... ನಿಮ್ಮ ಎಲ್ಲಾ ಸಲಹೆಗೆ ಸದಾ ಸ್ವಾಗತ