ಬಂಜೆ
" ಏನು ಮಾಡುವುದು ಭಾಗ್ಯಮ್ಮ? ಯಾವ ಬಂಜೆಯ ಕಣ್ಣು ತಾಗಿತ್ತೊ ಏನೊ? ಅಂತೂ ನನ್ನ ಸೊಸೆಗೆ abortion ಆಗಿಹೊಯ್ತು. ಈ ಊರಲ್ಲಿ ಬಂಜೆಯರ ಹಾವಳಿ... ಏನು ಮಾದುವುದೊ..." ಯಶೂಧಮ್ಮನವರ ಕಟು ನುಡಿಯು ಏರು ದನಿಯಲ್ಲಿ ಸಾಗಿತ್ತು...
ಒಳಗೆ ಮಾಲೆ ಕಟ್ಟುತ್ತಿದ್ದ ನೀರಜಮ್ಮನಿಗೆ ಆ ಮಾತುಗಳು ಬಾಣದಂತೆ ಚುಚ್ಚಿದರೆ, ಅವರ ಆ ಮುಗ್ಧ ಮನ ಎಂದೂ ಉತ್ತರ ಸಿಗದ ಪ್ರಶ್ನೆಯ ವಿಶ್ಲೇಷಣೆಯಲ್ಲಿ ತಲ್ಲೀನವಾಯಿತು...
"ಕುಡಿದು ಬರುತ್ತಿದ್ದ ಗಂಡ, ಕತ್ತೆಯಂತೆ ದುಡಿಸಿಕೊಳ್ಳುವ ಅತ್ತೆ, ಮಾವ ಎನಿಸಿಕೊಂದವನ ತಿರಸ್ಕಾರ, ನಾದಿನಿಯರ ಕೊಂಕು ನುಡಿಗಳು ... ಏನೇನು ಕಂಡಿಲ್ಲ ತಾನು ಆ ಮನೆಯಲ್ಲಿ? ನನಗೆ ಮಕ್ಕಳಾಗುವ ಮುನ್ನ ಕುಡಿಯುವ ಗಂಡ ತೀರಿಕೊಂಡಿದ್ದು ನನ್ನ ತಪ್ಪೇ? ನನಗೇಕೆ ಬಂಜೆ ಪಟ್ಟ? ತನ್ನ ಜೀವನವೆಲ್ಲ ಇಂತಹ ಮಾತುಗಳನ್ನು ಕೇಳುವಲ್ಲಿಯೇ ಕಳೆದುಹೊಯಿತಲ್ಲವೇ?" ಕಂಬನಿಯ ಹನಿಗಳು ಧಾರೆಯಾಗಿ ಅವರು ಕಟ್ಟುತ್ತಿದ್ದ ಮಲ್ಲಿಗೆ ಮಾಲೆಯಲ್ಲಿ ಒಂದಾಗಿಹೊಯಿತು... "ತಾನು ಇದ್ದರೆಷ್ಟು ಸತ್ತರೆಷ್ಟು? ನನ್ನ ಕೇಳುವರ್ಯಾರು? ತಾನು ಸತ್ತರೆ ನನ್ನ ಶವಕ್ಕೆ ಬೆಂಕಿ ಇಕ್ಕುವರ್ಯಾರು? ಎದೆಯಲ್ಲಿ ಏನೊ ಸಂಕಟವಾಗತೊಡಗಿತ್ತು..."
ಅವರ ಕೈಯಲ್ಲಿ ಕೈತುತ್ತು ತಿಂದವರು, ಅವರ ಬಗಲಲ್ಲಿ ಮಲಗಿ ರಾಜಕುಮಾರನ ಕಥೆ ಕೇಳಿದವರು, ಅವರ ಕೈಯ್ಯ ರುಚಿಯಡಿಗೆಯನ್ನು ತಿಂದು ಸವಿದವರು, ಅವರಿಂದ ಕಸೂತಿ, ಕಲೆ , ಹಾಡು ಕಲಿತವರು ಹೀಗೆ ಊರ ಸರಿಸುಮಾರು ಎಲ್ಲ ಮಕ್ಕಳು ನಿಶ್ಚಲವಾಗಿ ಮಲಗಿದ್ದ ನೀರಜಮ್ಮನವರ ದೇಹಕ್ಕೆ ಹೂಹಾರ ಹಾಕಲು ತಾಮುಂದು ನಾಮುಂದು ಎಂದು, ದುಃಖದಿಂದ ಧಾವಿಸುತ್ತಿದ್ದರೆ ತನ್ನ ಸೋಸೆಯದು ಹೆಣ್ಣು ಗರ್ಭ ಎಂದು ಭ್ರೂಣ ಹತ್ಯೆ ಮಾಡಿಸಿ ತನ್ನ ತಪ್ಪನ್ನು ಊರ ಮಹಾತಾಯಿಯ ಮೇಲೆ ಹೇಳುತ್ತಿದ್ದ ಯಶೋಧಮ್ಮನವರ ಕಂಗಳು ತುಂಬಿ ಬಂದವು...