ಒಪ್ಪಿಗೆಯ ನಗು ಬೀರಿ...
ಬರಬೇಡ ಗೆಳೆಯ
ನೀ ನನ್ನ ಸನಿಹ,
ನಾ ಕಳೆದುಹೋಗುವೆ ನಿನ್ನೊಳಗೆ...
ಮತ್ತೆ ಸಿಗಲಾರದಂತೆ;
ಹುಚ್ಚು ಮನವೀಗ
ಗೆಜ್ಜೆ ಕಟ್ಟಿದೆ ನೋಡು;
ಎದೆಯ ತುಂಬೆಲ್ಲ ಕುಣಿಯುತಿದೆ
ನನಗೆ ಹೇಳದಂತೆ...
ನನ್ನ ಮನಕೀಗ ನನ್ನ ಮೇಲೆ ಮುನಿಸು...
ನಿನ್ನ ನಾ ನೂಡಲಿಲ್ಲವೆಂದು
ಹಾರಿ ಹೋಗಿದೆ ನಭಕೆ,
ಕನಸ ರೆಕ್ಕೆಯನೇರಿ.
ಕನಸ ತೂರಣವ ಕಟ್ಟಿ
ಕಾಯುತಿರುವೆ ಗೆಳೆಯ
ಬಂದುಬಿಡು ನನ್ನೆದೆಗೆ
ಒಪ್ಪಿಗೆಯ ನಗು ಬೀರಿ...
Rating