ಹೆಜ್ಜೆ ಹಾಕುವ ಕೈ ಹಿಡಿದು...

ಹೆಜ್ಜೆ ಹಾಕುವ ಕೈ ಹಿಡಿದು...

ಕಳೆದು ಹೋಗಿದೆ  ಗೆಳೆಯ ,

ಬಚ್ಚಿಟ್ಟ ಹುಚ್ಚು ಹೃದಯವು 

ನೆನಪಿನಂಗಡಿಯ ಸಾಲಿನಲಿ 

ತುಮುಲದಲಿ ನಾನಲೆವಾಗ...

 

ನೀ ನನ್ನೆದುರು ಬಂದಾಗ 

ಎಲ್ಲೆ ಮೀರಿ ಉಲಿಯುತ್ತಿತ್ತು,

ಕಣ್ಣೆವೆಗಳು ಮುಚ್ಚಲಾರದೆ ಮುಚ್ಚಿದಾಗ,

ಜಾರಿ ಹೋಗಿದೆಯೇನೋ ಈ  ಹೃದಯ...

 

ಹೆಚ್ಚು ಹೇಳಲಿ ಏನು?

ಬಚ್ಚಿಟ್ಟುಕೊ ನಿನ್ನೊಳಗೆ.

ಕಾಣದ ಹೊಸಿಲೆಡೆಗೆ 

ಹೆಜ್ಜೆ ಹಾಕುವ ಕೈ ಹಿಡಿದು...

Rating
No votes yet