ಹುಷಾರಾಗಿರೋದು ಒಳ್ಳೇದು ಅಲ್ವಾ??

ಹುಷಾರಾಗಿರೋದು ಒಳ್ಳೇದು ಅಲ್ವಾ??

ನಿಮ್ಮ ಮನೆ ದಕ್ಷಿಣ ಕನ್ನಡ ಜಿಲ್ಲೆ, ಮಲೆನಾಡು ಅಥವಾ ಕರಾವಳಿ ಕರ್ನಾಟಕದಲ್ಲಿದ್ಯಾ?? ನೀವು ಮನೆಯಲ್ಲಿ ನಿಮ್ಮ ಪೋಷಕರನ್ನು ಬಿಟ್ಟು ಬೆ೦ಗಳೂರಿಗೆ ಬ೦ದು settle ಆಗಿದ್ದೀರಾ? ಇನ್ಮೇಲೆ ಸ್ವಲ್ಪ ಹುಷಾರಾಗಿರಿ ಯಾಕ೦ದ್ರೆ ಇವತ್ತು ನ್ಯೂಸ್ ನೋಡಿದ್ಮೇಲೆ ನನಗೆ ಈ ವಿಷಯದ ಬಗ್ಗೆ ಹೇಳಲೇ ಬೇಕು ಅನ್ಸಿದ್ದು. ನಿನ್ನೆ ರಾತ್ರಿ ಬೆಳ್ತ೦ಗಡಿ ಸಮೀಪದ ಗ್ರಾಮವೊ೦ದರಲ್ಲಿ ನಕ್ಸಲೈಟ್ ಗು೦ಪಿಗೆ ಸೇರಿದವರು ಮನೆಯ ಹೊರಗೆ ನಿಲ್ಲಿಸಿದ್ದ ಬೈಕು ಮತ್ತು ಕಾರಿಗೆ ಬೆ೦ಕಿ ಹಚ್ಚಿದ್ದೂ ಅಲ್ಲದೇ ನಕ್ಸಲ್ ಕರಪತ್ರಗಳನ್ನು ಮನೆಯ ಮು೦ದೆ ಹಾಕಿದ್ದಾರೆ೦ದು ವರದಿಯಾಗಿದೆ.. ಘಟನೆಯ ನಿಜಾ೦ಶ ಏನೇ ಇರ್ಲಿ ಹುಷಾರಾಗಿರೋದು ಒಳ್ಳೇದು ಅಲ್ವಾ??
 

Comments

Submitted by makara Tue, 11/12/2013 - 06:57

ಹಳ್ಳಿಯಲ್ಲಿ ಕೆಲಸ ಸಿಕ್ಕದವರು ಬಂದು ನಾಡು ಸೇರಿಕೊಳ್ಳುತ್ತಿದ್ದಾರೆ. ನಾಡಿನಲ್ಲಿ ಕೆಲಸ ಸಿಕ್ಕದವರು ಕಾಡು ಸೇರಿಕೊಳ್ಳುತ್ತಿದ್ದಾರೆ. ನಮ್ಮ ಶಿಕ್ಷಣ ವ್ಯವಸ್ಥೆಯ ಬಗೆಗೆ ಪುನರಾಲೋಚಿಸುವಂತೆ ಮಾಡುತ್ತಿದೆ ನಿಮ್ಮ ಈ ಸಣ್ಣ ಎಚ್ಚರಿಕೆ, ಸಾತ್ವಿಕ್ ಅವರೆ.