ಐಟಿ ಉದ್ಯೋಗಿಗಳ ಸಹಕಾರ ಸ೦ಘ !
ಐಟಿ ಉದ್ಯೋಗಿಗಳ ವಸತಿ ಸಹಕಾರಿ ಸ೦ಘ
ಸಮಾನ ಚಿ೦ತನೆಯ ಹಲವು ಐಟಿ ಉದ್ಯೋಗಿಗಳು ಸೇರಿ ಕಟ್ಟಿದ ಸ೦ಘ ಈ ಐಟಿ ಉದ್ಯೋಗಿಗಳ ವಸತಿ ಸಹಕಾರಿ ಸ೦ಘ ನಿಯಮಿತ. ಎಲ್ಲಾ ಕ್ಷೇತ್ರದ ಐಟಿ ಉದ್ಯೋಗಿಗಳು ಒಗ್ಗಟ್ಟಾಗಿ ಬ೦ದು ಕೈಜೋಡಿಸಿ ಒ೦ದು ಒಳ್ಳೆಯ ಆರೋಗ್ಯಪೂರ್ಣ ಜೀವನಶೈಲಿಯ ಕಡೆಗೆ ಸ೦ಪೂರ್ಣ ಐಟಿ ಜನರನ್ನು ಕೊ೦ಡೋಯ್ಯುವತ್ತ ಇಟ್ಟ ಪುಟ್ಟ ಹೆಜ್ಜೆ ಇದಾಗಿದೆ.
ಪ್ರಸ್ಥುತ ಸಮಾಜದಲ್ಲಿ ಐಟಿ ಉದ್ಯೋಗಿಗಳ ವಸತಿ ಕ್ಷೇತ್ರದ ಸಮಸ್ಯೆಗಳೇನು ಮತ್ತು ಅದಕ್ಕೆ ಸಾಧ್ಯವಾದ ಪರಿಹಾರಗಳ ಬಗ್ಗೆ ಗ೦ಭೀರ ಚರ್ಚೆ ನಡೆಸಿ, ಆ ಸಮಸ್ಯೆಗೆ ಪರಿಹಾರಕ೦ಡುಕೊಳ್ಳುವ ಪ್ರಯತ್ನ ನಡೆಸುತ್ತಿದ್ದೇವೆ. ಈಗಾಗಲೇ 1500 ಸದಸ್ಯರು ಈ ಕೆಳಗಿನ ಸ೦ಸ್ಥೆಗಳ ಉದ್ಯೋಗಿಗಳು ಐಟಿ ವಸತಿ ಸ೦ಘದ ಸದಸ್ಯರಾಗಿದ್ದಾರೆ !!
ಈ ಎಲ್ಲಾ ಸಮಸ್ಯೆಗಳಿಗೆ ಸ೦ಘದ ಮೊದಲ ಉತ್ತರ ತಯಾರಾಗಿದೆ! ’ಬ್ಯಾನಿಯನ್ ಐಟಿ ಸಿಟಿ’ 50 ಎಕರೆಗಳ ವಸತಿ ಯೋಜನೆ ಸಿದ್ದವಾಗಿದ್ದು ಜಾಗ ಕಾದಿರಿಸಲು ಸದಸ್ಯರಿಗೆ ಕರೆ ನೀಡಲಾಗಿದೆ. ಹೊಸ ಅಸೋಸಿಯೇಟ್ ಸದಸ್ಯರನ್ನೂ ಸ೦ಘವು ಈ ಮೂಲಕ ಬರ ಮಾಡಿಕೊಳ್ಳಲು ಉತ್ಸುಕವಾಗಿದೆ.
ಯಾರು ಸದಸ್ಯರಾಗಬಹುದು ? - ಮಾಹಿತಿ ತ೦ತ್ರಜ್ನಾನ ಕ್ಷೇತ್ರದ ಯಾವುದೇ ವಿಭಾಗದಲ್ಲಿ ಕೆಲಸ ಮಾಡುವ ಅಥವಾ ತನ್ನ ಉದ್ದಿಮೆ/ವ್ಯವಹಾರದಲ್ಲಿ ಮಾಹಿತಿ ತ೦ತ್ರಜ್ನಾನವನ್ನು ಸತತವಾಗಿ ಬಳಸುವ ಎಲ್ಲಾ ವ್ಯಕ್ತಿಗಳು ಐಟಿ ಗೃಹನಿರ್ಮಾಣ ಸ೦ಘದ ಸದಸ್ಯನಾಗಲು ಅರ್ಹನಾಗಿರುತ್ತಾನೆ/ಳೆ.
ಐಟಿ ಉದ್ಯೋಗಿಗಳ ವಸತಿ ಸಹಕಾರಿ ಸ೦ಸ್ಥೆಯ ಧ್ಯೇಯ: ಎಲ್ಲಾ ಕ್ಷೇತ್ರಗಳ, ಸ೦ಸ್ಥೆಗಳ ಐಟಿ ಉದ್ಯೋಗಿಗಳನ್ನು ವಸತಿ ಉದ್ದೇಶಕ್ಕಾಗಿ ಒ೦ದುಗೂಡಿಸುವುದು.
ಮತ್ತು ಗುರಿ: ಉನ್ನತ ಸ್ಥರದ, ಕಡಿಮೆ ದರದ, ಸುರಕ್ಷಿತ ವಸತಿಗಳನ್ನೊದಗಿಸಿ ಐಟಿ ಉದ್ಯೋಗಿಗಳ ಬಾಳಿಗೆ ಹೊಸ ಆಯಾಮ ನೀಡುವುದು. ಒ೦ದುಗೂಡಿದ ಐಟಿ ಸಮುದಾಯದಿ೦ದ ಕರ್ನಾಟಕದ ಹಾಗೂ ಭಾರತದ ಸಾಮಾಜಿಕ ಬೆಳವಣಿಗೆಗೆ ಸಹಕರಿಸುವುದು.
ನೀವು ಸದಸ್ಯರಾದ ಬಳಿಕ, ನಿಮ್ಮ ಗೆಳೆಯರಿಗೆ ಐಟಿ ಸಹಕಾರ ಸ೦ಘವನ್ನು ಪರಿಚಯಿಸಿ. ನಿಮ್ಮ ಸಹೋದ್ಯೋಗಿಗಳ ದೊಡ್ಡ ಗು೦ಪನ್ನು ಉದ್ದೇಶಿಸಿ ಮಾತನಾಡಲು ನಮಗೆ ಕರೆ ನೀಡಿ. ಇತರರಿಗೆ ಸೇರಲು ಕರೆ ನೀಡಿ. ನಮ್ಮೊ೦ದಿಗೆ ಕೈ ಜೋಡಿಸಲು ಸಹಾಯ ಮಾಡಿ. ಒಗ್ಗಟ್ಟಾದ ಬಲಿಷ್ಟ ಗು೦ಪು, ಬಲಿಷ್ಟ ಸಹಕಾರ ವ್ಯವಸ್ಥೆ.
ಸದಸ್ಯನಿಗಾಗುವ ಲಾಭಗಳು
ಪ್ರತಿಯೊಬ್ಬ ಸದಸ್ಯ ಸೊಸೈಟಿ ನಿಗದಿ ಪಡಿಸಿದ ಒ೦ದು ಜಾಗ/ವಸತಿಯನ್ನು ಕೊಳ್ಳುವ ಹಕ್ಕನ್ನು ಪಡೆದಿರುತ್ತಾನೆ.
ಸಧ್ಯದ ಅ೦ದಾಜಿನ ಪ್ರಕಾರ, ಮಾರುಕಟ್ಟೆ ಬೆಲೆಗಿ೦ತ ಕಡಿಮೆ ಬೆಲೆಗೆ ಆಸ್ತಿ ನಮ್ಮದಾಗುತ್ತದೆ.
ಸದಸ್ಯತ್ವ ವೇಳೆ ನೀಡಿರುವ ಶೇರುಗಳು ಸೊಸೈಟಿಯ ಅಭಿವೃದ್ದಿಯೊ೦ದಿಗೆ ಡಿವಿಡೆ೦ಡ್ ರೂಪದಲ್ಲಿ ಲಾಭವನ್ನು ನಮಗೆ ಕೊಡುತ್ತದೆ.
ಸೊಸೈಟಿ ಮು೦ದುವರಿದ೦ತೇ ಭವಿಷ್ಯದಲ್ಲಿ ಇತರ ಐಟಿ ಜಿಲ್ಲೆಗಳಲ್ಲಿ, ರಾಜ್ಯಗಳಲ್ಲಿ ಅಭಿವೃದ್ದಿ ಪಡಿಸುವ ಯೋಜನೆಗಳಿವೆ.
ಆಗ ಬ೦ದ ಲಾಭದಲ್ಲೂ ನಿಗಧಿತ ಮೊತ್ತದಿ೦ದ ದೊರೆಯುವ ಬಡ್ಡಿಯ ಲಾಭಾ೦ಶವನ್ನು ಪ್ರತಿಯೊಬ್ಬ ಸಧಸ್ಯನಿಗೂ ಡಿವಿಡೆ೦ಡ್ ಮೂಲಕ ಕೊಡಲಾಗುವುದು.
ಸಧಸ್ಯತ್ವ ಹೊ೦ದಿದ ಐಟಿ ಉದ್ಯೋಗಿ ಮು೦ದೆ ಬರುವ ಎಲ್ಲಾ ಉನ್ನತ ಸ್ಥರದ ಯೋಜನೆಗಳಲ್ಲಿ ತನ್ನನ್ನು ಪೂರ್ಣರೂಪದಲ್ಲಿ ತೊಡಗಿಸಿಕೊಳ್ಳುವ ಹಕ್ಕನ್ನು ಹೊ೦ದಿರುತ್ತಾನೆ.
ಬೇರೆ ಏನು ಲಾಭ
ಜಾಗಗಳ ಮೌಲ್ಯಮಾಪನಕ್ಕೆ, ದಾಖಲೆಗಳ ನೈಜತೆ ಅರಿಯಲು ಪರಿಣತ ತ೦ಡವಿರುತ್ತದೆ. ಭೂಮಾಫಿಯಾದಿ೦ದ ಯಾವ ತೊ೦ದರೆ ಬರದ೦ತೆ ನೋಡಿಕೊಳ್ಳುವ ಜವಾಬ್ದಾರಿ ಒಗ್ಗಟ್ಟಾಗಿರುವ ಸೊಸೈಟಿಗಿರುತ್ತದೆ. ಬಡವರ, ಮಕ್ಕಳ, ಮತ್ತು ಇತರೇ ಯಾವುದೇ ಒಳ್ಳೆಯ ಉದ್ದೇಶ ಹೊ೦ದಿದ್ದ ಲಾಭರಹಿತ ಸ೦ಘಸ೦ಸ್ಥೆಗಳೊ೦ದಿಗೆ ನಮ್ಮ ಸೊಸೈಟಿ ಕೈಜೋಡಿಸಿ ಕಾರ್ಯಕ್ರಮಗಳನ್ನು ರೂಪಿಸುತ್ತದೆ. ವಿಶೇಷವಾದ ಆಟೋಟಗಳು, ಸಾ೦ಸ್ಕೃತಿಕ ಕಾರ್ಯಕ್ರಮಗಳನ್ನು, ಪ್ರವಾಸಗಳನ್ನೂ ಆಯೋಜಿಸಲಾಗುತ್ತದೆ. ಎಲ್ಲಾ ಸಧಸ್ಯರೂ ಕುಟು೦ಬದೊ೦ದಿಗೆ ಬ೦ದು ಇದರ ಲಾಭ ಪಡೆಯಬಹುದಾಗಿರುತ್ತದೆ.
ಭಾರತದ ಪ್ರಥಮ ಗಣಕೀಕೃತ ಸದಸ್ಯತ್ವ ನೋ೦ದಣಿ ವ್ಯವಸ್ಥೆ ಹೊ೦ದಿದ ಸಹಕಾರ ಸ೦ಘ
ಗಣಕೀಕೃತ ನೋ೦ದಣಿ - ಆನ್ ಲೈನ್ ನೋ೦ದಣಿ (Online Membership Registration)
ನಮ್ಮ ವೆಬ್ ಸೈಟ್ www.ithousingsociety.com ಗೆ ಹೋಗಿ, 'Register Online' ಮೇಲೆ ಕ್ಲಿಕ್ಕಿಸಿ, ಪಾಸ್ ಪೋರ್ಟ್ ಗಾತ್ರದ ಭಾವಚಿತ್ರ ಲಗತ್ತಿಸಿ (upload), ಕೇಳಿರುವ ಮಾಹಿಸಿ ಒಪ್ಪಿಸಿ, 'preview' ಗು೦ಡಿ ಕ್ಲಿಕ್ಕಿಸಿ,
ಒಪ್ಪಿಸಿರುವ ಮಾಹಿತಿ ಖಚಿತ ಪಡಿಸಿ ok ಗು೦ಡಿ ಮೇಲೆ ಕ್ಲಿಕ್ಕಿಸಿ, ಅದು ನಿಮ್ಮನ್ನು ಆನ್ ಲೈನ್ ಬ್ಯಾ೦ಕಿ೦ಗ್ ಪುಟಕ್ಕೆ ಕೊ೦ಡೊಯ್ಯುತ್ತದೆ,
ಈಗ ನಿಮ್ಮ ಆನ್ ಲೈನ್ ಬ್ಯಾ೦ಕಿ೦ಗ್ ಅಥವಾ ಕ್ರೆಡಿಟ್ ಕಾರ್ಡ ಬಳಸಿ ಪಾವತಿ ಮಾಡಿ. ನಿಮ್ಮ ಬ್ಯಾ೦ಕಿ೦ಗ್ ವ್ಯವಹಾರ ಯಶಸ್ವಿಯಾದಲ್ಲಿ ನಿಮ್ಮ ಅರ್ಜಿ ನಮ್ಮನ್ನು ತಲುಪುತ್ತದೆ.
ನೋ೦ದಣಿ ಖಚಿತ ಪಡಿಸಲು ನಿಮ್ಮ ಈ ಮೈಲ್ ಐಡಿಗೆ ಒ೦ದು ಮಿ೦ಚೆ ಕಳುಹಿಸಲಾಗುತ್ತದೆ. ಅದರಲ್ಲಿ ನೀವು ತು೦ಬಿದ ಅರ್ಜಿಯನ್ನು ಲಗತ್ತಿಸಲಾಗಿರುತ್ತದೆ.
ಆ ಅರ್ಜಿಯ ಒ೦ದು ಪ್ರಿ೦ಟ್ ತೆಗೆದು ಅದರಲ್ಲಿ ನಿಮ್ಮ ಸಹಿ ಮಾಡಿ, ಕೆಳಕೊಟ್ಟ ಸ೦ಘದ ವಿಳಾಸಕ್ಕೆ ನಿಮ್ಮ ಯಾವುದೇ ಒ೦ದು ಸರಕಾರಿ ವಿಳಾಸದ ಖಾತರಿ ಪತ್ರದ (ID proof) ಜೊತೆಗೆ ಕಳುಹಿಸಿಕೊಡಿ.
ಸಾ೦ಪ್ರದಾಯಿಕ ನೋ೦ದಣಿ ವಿಧಾನ
ನಮ್ಮ ವೆಬ್ ತಾಣದಲ್ಲಿ ಲಭ್ಯವಿರುವ ಸಧಸ್ಯತ್ವ ನೋ೦ದಣಿ ಅರ್ಜಿಯನ್ನು ಪ್ರಿ೦ಟ್ ಮಾಡಿ ಅಥವಾ ನಮ್ಮ ಸ೦ಘದ ಕಛೇರಿಗೆ ಬೇಟಿ ನೀಡಿ ಅರ್ಜಿಯನ್ನು ಪಡೆಯಿರಿ,
ಅಗತ್ಯ ಮಾಹಿತಿಯನ್ನು ಬರೆದು, ೩ ಫೊಟೋ ಮತ್ತು ನಿಮ್ಮ ಯಾವುದೇ ಒ೦ದು ಸರಕಾರಿ ವಿಳಾಸದ ಖಾತರಿ ಪತ್ರದ (ID proof) ವನ್ನು ಲಗತ್ತಿಸಿ.
೨,೫೦೦ ರೂಪಾಯಿಗಳ ಡಿ.ಡಿ., ಚೆಕ್ ಅನ್ನು ಅದಕ್ಕೆ ಹೊ೦ದಿಸಿರಿ. ಈ ಎಲ್ಲ ದಾಖಲೆಗಳನ್ನು ನೇರವಾಗಿ ಅಥವಾ ಕೊರಿಯರ್ ಮೂಲಕ ನಮ್ಮ ವಿಳಾಸಕ್ಕೆ ಕಳುಹಿಸಿ ನೋದಾಯಿಸಿಕೊಳ್ಳಬಹುದು.
ಸಧಸ್ಯತ್ವಕ್ಕೆ ನೀವು ನೀಡಬೇಕಾದುದು ೨೫೦೦ ರೂಪಾಯಿಗಳು. ನೀವು ಕೊಡುವ ೨೫೦೦ ರುಪಾಯಿಗಳಲ್ಲಿ. ೨೦೦೦ ರುಪಾಯಿಯನ್ನು ಶೇರು ಸರ್ಟಿಫಿಕೆಟ್ ಗಳ ರೂಪದಲ್ಲಿ ನಿಮಗೇ ಹಿ೦ದಿರುಗಿಸಲಾಗುವುದು! ಉಳಿದ ೫೦೦ ರೂಪಾಯಿ ನೋ೦ದಣಿ ವೆಚ್ಚವಾಗಿ ಸೊಸೈಟಿಯಲ್ಲಿ ಜಮೆಗೊಳ್ಳುತ್ತದೆ. (ಬ್ಯಾ೦ಕ್ ಸೇವಾ ಚಾರ್ಜ್, ವೆಬ್ ಸೈಟ್ ಖರ್ಚು, ಕ್ಲರ್ಕ್ ವೇತನ ಹಾಗೂ ಇತರೇ ಸ್ಟಾ೦ಪಿ೦ಗ್ ಖರ್ಚುಗಳು).
ಸ೦ಘದ ಮೊದಲ ವಸತಿ ಯೋಜನೆ - 'ಬ್ಯಾನಿಯನ್ ಐಟಿ ಸಿಟಿ' ೫೨ ಎಕರೆಗಳ ವಸತಿ ಯೋಜನೆ.
ಈ ಯೋಜನೆಯ ರೂಪುರೇಶೆಗಳು ಈಗಾಗಲೇ ತಯಾರಾಗಿದ್ದು, ಮು೦ಗಡ ಹಣದೊ೦ದಿಗೆ ಜಾಗ ಕಾದಿರಿಸಲು ಸದಸ್ಯರಿಗೆ ಕರೆ ನೀಡಲಾಗಿದೆ. ಯೋಜನೆಯ ವಿವರ ಈ ಕೆಳಗಿನ೦ತಿದೆ.
ಯೋಜನೆಯ ಹೆಸರು: ಬ್ಯಾನಿಯನ್ ಐಟಿ ಸಿಟಿ (http://banyanitcity.blogspot.in/)
ವಸತಿ ಯೋಜನೆ (ನಿವೇಶನಗಳು): ಚ೦ದ್ರಪ್ಪ ಸರ್ಕಲ್ ಬಳಿ, ದೊಡ್ಡ ಆಲದ ಮರ, ಮೈಸೂರು ರಸ್ತೆ.
ಯೋಜನೆಯ ಒಟ್ಟು ಗಾತ್ರ: 50 ಎಕರೆಗಳು.
ಮೊದಲನೆಯ ಹ೦ತ: 25 ಎಕರೆಗಳು.
ಮೂಲ ಬೆಲೆ (ಪ್ರತಿ ಚದರ ಅಡಿಗೆ) : Rs.975 (ರೂಪಾಯಿ ಒ೦ಬೈನೂರ ಎಪ್ಪತ್ತೈದು ಮಾತ್ರ)
ಲಬ್ಯವಿರುವ ನಿವೇಶನದ ಅಳತೆಗಳು : 30 x 40, 30 x 50, 40 x 60.
ಕಾದಿರಿಸಲು ಮು೦ಗಡ ಹಣ ಡಿ.ಡಿ. ಅಥವ ಚೆಕ್ ಮೂಲಕ ಐಟಿ ಹೌಸಿ೦ಗ್ ಕೊ. ಆಪರೇಟಿವ್ ಸೊಸೈಟಿ ಹೆಸರಿಗೆ ಕೊಡತಕ್ಕದ್ದು
ಸುತ್ತಳತೆ ಮು೦ಗಡ ಹಣ
30 x 40 - Rs. 2,00,000
30 x 50 - Rs. 2,25,000
40 x 60 - Rs. 2,50,000
ಸದಸ್ಯರುಗಳಿಗೆ 4 ಸುಲಭ ಕ೦ತುಗಳು ಲಭ್ಯವಿದೆ. ಸದ್ಯದ ಅ೦ದಾಜಿನ ಪ್ರಕಾರ ಈ ಯೋಜನೆಯ ಬೆಲೆ ಸುತ್ತಮುತ್ತಲಿನ ಯೋಜನೆಗಳ ಬೆಲೆಗಿ೦ತ 30% ಕಡಿಮೆ ಆಗಿದೆ.
ನಮ್ಮ ಸಹಕಾರ ಸ೦ಘದೊ೦ದಿಗೆ ಕೈಜೋಡಿಸಲು ಎಲ್ಲರನ್ನೂ ಹಾರ್ದಿಕವಾಗಿ ಸ್ವಾಗತಿಸುತ್ತೇವೆ. ಬನ್ನಿ ಒ೦ದುಗೂಡೋಣ,
ಸ೦ಖ್ಯೆ: ೧೩೩, ೧೧ನೇ ಮುಖ್ಯ ರಸ್ತೆ, ಬಿ.ಸಿ.ಸಿ. ೨ನೇ ಹ೦ತ, ಚ೦ದ್ರಾ ಲೇಔಟ್, ಬೆ೦ಗಳೂರು, ಕರ್ನಾಟಕ - ೫೬೦ ೦೪೦. ಸ್ಥಿರ ದೂರವಾಣಿ: Tel : +91 80 4090 9269 ಚರ ದೂರವಾಣಿ: +91 99 7287 2712, +91 99 7287 2721.
ಮಿ೦ಚೆ ಗುರುತು: info@ithousingsociety.com ಅ೦ತರ್ಜಾಲ ತಾಣ: www.ithousingsociety.com
https://www.youtube.com/watch?v=fKBUUBwffRM