ಲೂಸ್ ಯೋಗಿ ಸತ್ಯಾಗ್ರಹ ಜೊತೆಗೆ ನೇಹಾ ಎಂಬ ಹುಡುಗಿ...!

ಲೂಸ್ ಯೋಗಿ ಸತ್ಯಾಗ್ರಹ ಜೊತೆಗೆ ನೇಹಾ ಎಂಬ ಹುಡುಗಿ...!

ಸತ್ಯಾಗ್ರಹದಿಂದ ಏನೂ ಆಗೋದಿಲ್ಲ ಎಂಬ ಸತ್ಯ ತಿಳಿದು ಈಗ ತುಂಬಾ ವರ್ಷವೇ ಆಗಿದೆ. 1947 ಕ್ಕೂ ಮುನ್ನವೇ ಅದು ಮುಗಿದು ಹೋಗಿದೆ. ಆದ್ರೆ, ಅಣ್ಣಾ ಹಜಾರೆ ಮಾಡಿದ ಕ್ರಾಂತಿ ಈಗಿನ ಯುವಕರಿಗೆ ಹೋರಾಟದ   ಪ್ರಭಾವವನ್ನ ತೋರಿಸಿದ್ದೇನೋ ನಿಜ. ಇತ್ತೀಚಿಗೆ ಅಮಿತಾಭ್ ಬಚ್ಚನ್ ಸತ್ಯಾಗ್ರಹ ಅನ್ನೋ ಚಿತ್ರದಲ್ಲಿ ಅಭಿನಹಯಿಸಿದ್ರು. ಯುವ ಜನರನ್ನ ಬಡಿದೆಬ್ಬಿಸೋ ಕೆಲಸ ಮಾಡಿದ್ರು. ಅಲ್ಲೂ ನಿರ್ದೇಶಕ ಪ್ರಕಾಶ್ ಝಾ ಬೆನ್ನಿಗೆ ನಿಂತು ನಿರ್ದೇಶನ ಮಾಡಿದ್ರು. ಇದು ಹಿಂದಿ ಸಿನಿಮಾಗಳ ವಿಷ್ಯ. ನಮ್ಮ ಕನ್ನಡದಲ್ಲೂ ಸತ್ಯಾಗ್ರಹ ಮತ್ತು ಹೋರಾಟವನ್ನ ಆಧರಿಸಿದ ಚಿತ್ರಗಳು ಬಂದು ಹೋಗಿವೆ. ಈ ನಡುವೇನೆ ಮತ್ತೆ ಸತ್ಯಾಗ್ರಹ ಅನ್ನೋ ಚಿತ್ರವೊಂದು ಸದ್ದಿಲ್ಲದೇ ತೆರೆಗೆ ಬರಲು ಸಜ್ಜಾಗಿದೆ. ಬಹುತೇಕ ಚಿತ್ರೀಕರಣವೂ ಪೂರ್ಣಗೊಂಡಿದೆ. ವಿಶೇಷವೆಂದ್ರೆ, ಇದಕ್ಕೆ ದುಡಿದ ಎಲ್ಲ ಟೆಕ್ನಿಷನ್ ಗಳೂ ಸಿನಿಮಾದಲ್ಲಿ ಆಕ್ಟಿಂಗ್ ಮಾಡಿದ್ದಾರೆ. 

ಮತ್ತೆ ಸತ್ಯಾಗ್ರಹದ ವಿಶೇಷ;  ಈ ಸಿನಿಮಾದಲ್ಲಿ ವಿಶೇಷವೆನಿಸೋದು ನಾಯಕ ನಟ ಲೂಸ್ ಯೋಗಿ. ಆರಂಭದಿಂದ ಹಿಡಿದು,ಇಲ್ಲಿವರೆಗೆ ಮಾಡಿರೋ ಸಿನಿಮಾಗಳಲ್ಲಿ  ಲಾಂಗು ಮತ್ತು ಮಂಚು ಹಿಡಿದಿದ್ದೇ ಹೆಚ್ಚು.ಎಲ್ಲ ಪಾತ್ರಗಳೂ ಅಷ್ಟೇ ಲೋಕಲ್.ಲೋಕಲ್. ಅದೆಲ್ಲಿಂದ ಬಂತೂ ಸತ್ಯಾಗ್ರಹದ ಬಗೆಗಿನ ಆಸಕ್ತಿ ಗೊತ್ತಿಲ್ಲ. ಕಮರ್ಷಿಲ್ ಸಿನಿಮಾಗಳಲ್ಲಿ ಮಿಂಚಿದ್ದ ಯೋಗೀ ಇಲ್ಲಿ ಲಾಂಗ್ ಬದಲು ಧ್ವಜ ಹಿಡಿದಿದ್ದಾರೆ. ಗಾಂಧಿ ಚಲುವಳಿ ಸಂಘದ ಸದಸ್ಯರೇ ಆಗಿದ್ದಾರೆ. ತಲೆ ಮೇಲೆ ಒಂದು ಗಾಂಧಿ ಟೋಪಿ. ಹೆಗಲಿಗೊಂದು ಚೀಲ. ಥೇಟ್ ಹೋರಾಟಗಾರನ ಖಾದಿ ಉಡುಪು ಧರಿಸಿಕೊಂಡು ಮತ್ತೆ ಸತ್ಯಾಗ್ರಹ ಮಾಡ್ತಿದ್ದಾರೆ..

ಲೂಸ್ ಗೆ ನೇಹಾ ಜೋಡಿ; ಈ ಲೂಸ್ ನಾಯಕನ ಹೋರಾಟಕ್ಕೆ ಜೊತೆಯಾದವ್ರು ಯುವ ನಟಿ ನೇಹಾ ಪಾಟೀಲ್. ಕ್ರಾಂತಿ ಕಾರಿ ಮನಸ್ಸಿನ ಹುಡುಗಿ ಅಂದ್ರೂ ತಪ್ಪು ಇಲ್ಲವೇನೋ. ಅದೇ ಮನಸ್ಶಿತಿಯಲ್ಲಿಯೇ ಇಲ್ಲೂ ಹೋರಾಟಕ್ಕೆ ಇಳಿದಂತಿದೆ.ಬಿಳಿ ಸೀರೆ.ಕೈಯಲ್ಲಿ ಗಾಂಧಿ ಚಳುವಳಿ ಸಂಘ ಅನ್ನೋ ಬೋರ್ಡು. ತಲೆ ಮೇಲೆ ಗಾಂಧಿ ಟೋಪಿ.ಆದ್ರೆ, ನೇಹಾ ಕೂಡ ಕಮರ್ಷಿಲ್ ಸಿನಿಮಾ ಮಾಡಿರೋ ನಟಿ. ಆದ್ರೂ, ಇತ್ತೀಚಿಗೆ ತಿಪ್ಪಜ್ಜಿ ಸರ್ಕಲ್ ಅನ್ನೋ ಕಲಾತ್ಮಕ ಚಿತ್ರದಲ್ಲಿ, ದೇವದಾಸಿ ಮಗಳ ಪಾತ್ರದಲ್ಲಿ ಕಾಣಿಸಿಕೊಂಡಾಗಿದೆ. ಇದು ಬಿಟ್ಟರೆ, ಮತ್ತೆ ಸತ್ಯಾಗ್ರಹ ಕಲಾತ್ಮಕ ಸ್ಪರ್ಶದ ಎರಡನೇ ಚಿತ್ರವಿದಾಗಿದೆ ಎಂದು ಹೇಳಬಹುದು.

ಮತ್ತೆ ಸತ್ಯಾಗ್ರಹದ ಶೂಟಿಂಗ್; ನಿರ್ದೇಶಕ ಬಿ.ಶಿವಾನಂದ್ ಅವರಿಗೆ ಇದು ಚೊಚ್ಚಲ ಚಿತ್ರ. ನಟನೆ, ಬಹರವಣಿಗೆ,ವೈಚಾರಿಕ ಚಿಂತನೆ. ಹೀಗೆ ಇದರಲ್ಲಿಯೇ ಇದ್ದವ್ರು ಶಿವಾನಂದ್. ಸತ್ಯಾಗ್ರಹದಂತ ವಿಷ್ಯವನ್ನ ಎತ್ತಿಕೊಂಡು ಏನೋ ಹೇಳೊಕೆ ಹೊರಟ್ಟಿದ್ದಾರೆ. ಮಾಸ್ಟರ್ ಹಿರಣ್ಣಯ್ಯ ಸೇರಿದಂತೆ, ದತ್ತಣ್ಣ, ಶರತ್ ಲೋಹಿತಾಶ್ವ ಅಭಿನಯಿಸಿರೊ ಈ ಚಿತ್ರದ ಶೂಟಿಂಗ್ ಬಹುತೇಕ ಕಂಪ್ಲೀಟ್ ಆಗಿದೆ. ಮಡಿಕೇರಿ, ಮಂಗಳೂರು, ಹುಬ್ಬಳ್ಳಿ-ಧಾರವಾಡ,ಹಾಸನ, ಮೈಸೂರು ಈ ಥರ, ಬೇರೆ..ಬೇರೆ ಸ್ಥಳಗಳಲ್ಲಿ ಭಾಕಿ ಉಳಿದಿರೋ ಕೊನೆಯ ದೃಶ್ಯಗಳ ಚಿತ್ರೀಕರಣ ಮಾಡ್ತಿದ್ದಾರೆ.ಕ್ಯಾಮೆರಾಮನ್ ಮ್ಯಾಥ್ಯೂರಾಜನ್ ಮತ್ತೆ ಸತ್ಯಾಗ್ರಹವನ್ನ ಚಿತ್ರೀಕರಿಸುತ್ತಿದ್ದಾರೆ. ಸತ್ಯಾಗ್ರಹ ಮತ್ತೆ..ಮತ್ತೆ ಮಾಡಿದ್ರೂ ಏನೂ ಪ್ರಯೋಜನ ಅನ್ನೋ ಮಾತುಗಳ ಮಧ್ಯೇನೆ, ಪರಿಣಾಮಕಾರಿ ಮಾಧ್ಯಮವಾದ ಸಿನಿಮಾದಿಂದ, ಈ ತಂಡ ಬೆಳ್ಳಿ ಪರದೆ ಮೇಲೆ ಮತ್ತೆ ಸತ್ಯಾಗ್ರಹ ಮಾಡ್ತಿದೆ. 

-ರೇವನ್.ಪಿ.ಜೇವೂರ್

Comments

Submitted by venkatb83 Thu, 11/14/2013 - 17:12

ಪ್ರಕಾಶ್ ಝಾ ಅವರು ಅಯ್ಯಾಯ ಕಾಲದಲ್ಲಿ ನಡೆವ ನಡೆದ ಘಟನೆಗಳ ಕುರಿತ ಚಿತ್ರ ತೆಗೆಯುವುದರಲ್ಲಿ ಎತ್ತಿದ ಕೈ .. ಅವರ ಗಂಗಾ ಜಲ್ ,ಅಪಹರಣ್ ,ಚಕ್ರವ್ಯೂಹ ,ರಾಜನೀತಿ ,ಅರಕ್ಸ್ಹಣ್ ,ಸತ್ಯಾಗ್ರಹ ,ಹೀಗೆ ಎಲ್ಲವೂ ಸೂಪರ್ .. ಒಂಥರಾ ರಿಯಲಿಸ್ಟಿಕ್ ..
ಎಲ್ಲ ಚಿತ್ರಗಳನ್ನೂ ನೋಡಿರುವೆ ..
ಇತ್ತೀಚೆಗಿನ ಸತ್ಯಾಗ್ರಹ ಅಸ್ಟೇನು ಹಿಟ್ ಆಗಿಲ್ಲ ಪರಿಣಾಮ ಬೀರಿಲ್ಲ ,,ಅದಕ್ಕೂ ಮೊದಲು ನಾನು ಅಮಿತಾಬ್ ಅವರ ವಿರುದ್ಹ್ ನೋಡಿದ್ದೆ , ಅದರ ಪಾತ್ರಕ್ಕೂ ಮತ್ತು ಸತ್ಯಾಗ್ರಹ ಪಾತ್ರಕ್ಕೂ ಹೋಲಿಕೆ ಇದೆ ಅದೇ ಕಾರಣ ಇರ್ಬೇಕು ..
ಇನ್ನು ಲೂಜ್ ಮಾದ ಯೋಗೇಶ್ ಸತ್ಯಾಗ್ರಹ ಕುರಿತ ಚಿತ್ರದಲ್ಲಿ ನಟಿಸುತ್ತಿರುವುದು ಕೇಳಿ ಖುಷಿ ಆಯ್ತು ..
ಅವರ ನಟನಾ ಪ್ರತಿಭೆ ಪರಿಚಯ - ಸಿದ್ಲಿಂಗು ,ಹುಡುಗರು ,ಚಿತ್ರಗಳಲಿ ಆಗಿದೆ ..
ಶುಭವಾಗಲಿ
\।/