ಮತ್ತೆ ಮತ್ತೆ ಬಸ್ಸುಗಳಿಗೆ ಬೆಂಕಿ ಹತ್ತುವ ಸುದ್ದಿ ಕೇಳಿಬರುತ್ತಿದೆ. ಬಸ್ಸುಗಳಲ್ಲಿ ಬೆಂಕಿಯ ಕಾರಣ...

ಮತ್ತೆ ಮತ್ತೆ ಬಸ್ಸುಗಳಿಗೆ ಬೆಂಕಿ ಹತ್ತುವ ಸುದ್ದಿ ಕೇಳಿಬರುತ್ತಿದೆ. ಬಸ್ಸುಗಳಲ್ಲಿ ಬೆಂಕಿಯ ಕಾರಣ...

Submitted by H A Patil Thu, 11/21/2013 - 19:35

ಮಾನ್ಯರೆ
ಕರ್ನಾಟಕದ ಎರಡು ಬಸ್ ಗಳಿಗೆ ರಾತ್ರಿಯ ವೇಳೆ ಅಕಸ್ಮಿಕ ಬೆಂಕಿ ತಗುಲಿ ಎರಡು ಐಷಾರಾಮಿ ಬಸ್ ಗಳು ಸುಟ್ಟು ಕರಕಲಾಗಿ ಜೀವ ಹಾನಿಗಳು ಸಂಭವಿಸಿವೆ. ಒಂದು ಆಂಧ್ರ ಪ್ರದೇಶದ ವ್ಯಾಪ್ತಿಯಲ್ಲಾದರೆ ಇನ್ನೊಂದು ಎನ್.ಹೆಚ್.4 ರಲ್ಲಿ ಹಾವೇರಿ ಸಮೀಪದ ಕುಣಿಮೆಳ್ಳಳ್ಳಿ ಹತ್ತಿರ ಸಂಭವಿಸಿವೆ. ಮೊದಲನೆ ದುರ್ಘಟನೆಯಲ್ಲಿ ಲಗೇಜ್ ಬಾಕ್ಸ್ ನಲ್ಲಿ ಕೂದಲುಗಳ ಮೂಟೆಯನ್ನು ಇಡಲಾಗಿತ್ತು ಎನ್ನಲಾಗಿದೆ,. ಮತ್ತು ಎರಡನೆ ಅವಘಡದಲ್ಲಿ ಚಾಲಕನ ನಿದ್ರೆಯ ಮಂಪರಿನಲ್ಲಿ ಆದ ಅವಘಡ ಎನ್ನಲಾಗಿದೆ. ಎರಡನೆಯ ಅವಘಡದಲ್ಲಿ ಆ ಬಸ್ ಮಾಲಿಕರು ಚಾಲಕನ ಮೇಲೆಯೆ ಗೂಬೆ ಕೂರಿಸಿದ್ದಾರೆ ಆತನೆ ಹಣದ ಆಸೆಗೆ ಓವರ್ ಟೈಮ್ ಕೆಲಸಕ್ಕೆ ಬಂದ ಎನ್ನುವ ಅರ್ಥದಲ್ಲಿ.ಆದರೂ ದೀರ್ಘ ಪಯಣಗಳಲ್ಲಿ ಇಬ್ಬರು ಚಾಲಕರು ಇರಬೇಕಾದುದು ಅಗತ್ಯ, ಬರಿ ಚಾಲಕನ ಮೇಲೆ ಗೂಬೆ ಕೂರಿಸಿ ಕೂಡುವುದು ಅಮಾನವೀಯತೆ ಎನಿಸುತ್ತದೆ. ಇವುಗಳಿಗೆ ನೇರ ಹೊಣೆಯನ್ನು ಟ್ರಾವೆಲ್ಸ್ ನವರು ಮತ್ತು ಚಾಲಕ ಮತ್ತು ಆಯಾ ಬಸ್ ಗಳ ಸಿಬ್ಬಂದಿಗಳು ಹೊರ ಬೇಕಾಗುತ್ತದೆ.