ಇಂದು ನಮ್ಮ ಮಕ್ಕಳು,,, ನಾಳೆ ನಮ್ಮವೇ ?

ಇಂದು ನಮ್ಮ ಮಕ್ಕಳು,,, ನಾಳೆ ನಮ್ಮವೇ ?

ಪ್ರತಿ ಮನುಷ್ಯನಲ್ಲು ಒಂದು ಮಗು ಮನಸ್ಸು,,,,ಆ ಮಗು ಮನಸ್ಸಿಗೆ ಮಕ್ಕಳ ದಿನದ ಶುಭಾಷಯಗಳು,,,,

     ಭಾರತದಿಂದ ಮೊಟ್ಟಮೊದಲ ಬಾರಿಗೆ ಎವರೆಷ್ಟ್ ಏರಿದ ಮಹಿಳೆ ಬಚ್ಚೇಂದ್ರಿಪಾಲ್ ಅವರಿಗೆ ಸಂದರ್ಶನ ಒಂದರಲ್ಲಿ, ಹಳ್ಳಿ ಮಕ್ಕಳಿಗೂ ಹಾಗು ಪೇಟೆಯಲ್ಲಿ ಬೆಳೆದ ಮಕ್ಕಳಿಗೂ ಇರುವ ವ್ಯತ್ಯಾಸ ಏನು ಎಂದು ಕೇಳಲಾಯಿತು, ಆಗ ಅವರು ಕೊಟ್ಟ ಉತ್ತರ ನನ್ನನ್ನು ದಂಗು ಬಡಿಸಿತ್ತು, "ಹಳ್ಳಿ ಮಕ್ಕಳಿಗೂ ಹಾಗು ಪೇಟೆಯಲ್ಲಿ ಬೆಳೆದ ಮಕ್ಕಳಿಗೂ" ಯಾವುದೇ ವ್ಯತ್ಯಾಸ ಇಲ್ಲ, ಇಬ್ಬರ ಮುಗ್ದತೆಯು ಒಂದೇ, ಆದರೆ ದೊಡ್ಡವರಾದ ನಾವು ಅವರ ಬಾವನೆಗಳನ್ನು ಬದಲಾಯಿಸುತ್ತಿದ್ದೇವೆ ಅಷ್ಟೆ ಎಂಬುದಾಗಿತ್ತು, ಸತ್ಯ ಇರಬಹುದೇನೊ ಎನಿಸಿತು ನನಗೆ,

        ಆದರೆ ಒಂದಂತು ಸತ್ಯ, ಈಗಿನ ಮಕ್ಕಳನ್ನು ಹುಟ್ಟುತ್ತಲೇ ಬಹುರಾಷ್ಟ್ರಿಯ ಕಂಪನಿಯ ಕೆಲಸಕ್ಕೆ ತಯಾರು ಮಾಡುತ್ತಿದ್ದೇವೆ ಹೊರತು ಮಕ್ಕಳ ವಯಕ್ತಿಕ ಬೆಳವಣಿಗೆಗೆ ಅವಕಾಶವೇ ಕೊಡುತ್ತಿಲ್ಲ, ಆದರೆ ಇದಕ್ಕೆಲ್ಲ ನಾವು ಕಾರಣ ಕೊಡುವುದು, ಜಾಗತೀಕರಣ ಎನ್ನುವ ಒಂದು ಪದ,,,,, ಸುಂದರ ಕನಸು ಕಾಣುತ್ತಾ ಮಣ್ಣಿನ ಸ್ವಾದದಲ್ಲಿ ಆಡಬೇಕಿದ್ದ ಮಕ್ಕಳು, ಕಂಪ್ಯೂಟರ್, ಮೊಬೈಲ್ ಮುಂತಾದವುಗಳ ಎದುರಲ್ಲಿ, ನಪುಂಸಕವಾಗುತ್ತಿವೆ, ಮನುಷ್ಯರೊಂದಿಗೆ ಬೆರೆಯುವುದನ್ನು ಮರೆತುಬಿಟ್ಟಿವೆ, ಮುಂದೆ ಒಂದು ದಿನ ಇಂತಹ ಮಕ್ಕಳಿಂದ ಸಮಾಜಕ್ಕಾಗಲಿ, ಹೆತ್ತವರಿಗಾಗಲಿ, ಪ್ರಯೋಜನವಂತು ಇಲ್ಲ, ಎನ್ನುವುದು ಅವರ ಬದುಕಿನಶ್ಟೆ ಸತ್ಯ, ಆಗ ಮಕ್ಕಳನ್ನು ಹಳಿದು ಏನು ಪ್ರಯೋಜನ ಇಲ್ಲ, ಎಲ್ಲೊ ಒಂದು ಕಡೆ ನಾವೆಲ್ಲ ತಪ್ಪು ಮಾಡುತ್ತಿರುವುದಂತು ಸತ್ಯ, ಈ ಬರಹ ಒಂದು ನಕಾರಾತ್ಮಕ ರೂಪ ಹೊಂದಿದೆ ನನಗೆ ಅನಿಸುತ್ತಿದೆ, ಅದು ಸತ್ಯ ಕೂಡ, ನಾನು ಇತ್ತೀಚಿಗೆ ದೂರದರ್ಶನದಲ್ಲಿ ಬರುವ ಚಿಣ್ಣರ ಚಿಲಿಪಿಲಿ ಕಾರ್ಯಕ್ರಮ ನೋಡುತ್ತಿದ್ದೆ, ಮಕ್ಕಳ ಬದುಕಿನ ಮೇಲೆ ಅವರ ತಂದೆ ತಾಯಿ ಬೀರಿದ ಪರಿಣಾಮಗಳು ಕಣ್ಣಿಗೆ ಗೋಚರಿಸಿದವು, ಒಂದು ಮಗುವೂ ಮನೆಯಲ್ಲಿ ಮಾಡುವ ಪೂಜೆ ಪುನಸ್ಕಾರದ ಬಗ್ಗೆ ಮಾತನಾಡಲಿಲ್ಲ, ಅಪ್ಪ ಅಮ್ಮ ಅಜ್ಜಿ ಹೇಳುವ ದೇಶದ ಕಥೆಯಬಗ್ಗೆ ಹೇಳಲಿಲ್ಲ, ಮಣ್ಣಿನ ಸ್ವಾದದ ಅರಿವಿರದ ಮಗುವಿಗೆ, ಆ ಮಣ್ಣಿನ ಮೇಲೆ ಪ್ರೀತಿ ಹೇಗಾದರು ಬಂದೀತು ಹೇಳಿ, ನಾಳೆ ಹೆತ್ತವರು ವೃದ್ದಾಶ್ರಮದ ಪಾಲಗುತ್ತಾರೆ, ಆಗ ಮಕ್ಕಳಿಗೆ ತಪ್ಪಿತಸ್ತರನ್ನಾಗಿ ಮಾಡುವುದರಲ್ಲಿ ಹುರುಳಿಲ್ಲ,

   ನಾವೆಲ್ಲ ಹೆಮ್ಮೆಯಿಂದಾ ಹೇಳುತ್ತೇವೆ, ಭಾರತ ಈಗ ಯುವ ರಾಷ್ಟ್ರ ಎಂದು, ನಿಜವಾಗಿಯು ಸತ್ಯನಾ, ನಮ್ಮ ಯುವಕರೆಲ್ಲ ನಿಜವಾಗಿಯು ಇದನ್ನು ಹೇಳುವಷ್ಟು ಶಕ್ತಿವಂತರೆ ? ನಾವು ಪರಕೀಯರ ದಾಳಿಗೆ ಮತ್ತೊಮ್ಮೆ ಒಳಗಾಗಿದ್ದೇವೆ, ಹಿಂದೆ ಒಂದು ಸಲ ಒಡೆದು ಆಳುವ ನೀತಿ ಅನುಸರಿಸಿದ ಪರಕೀಯರು, ಕೊನೆಗೆ ನಮ್ಮನ್ನು ಬಿಟ್ಟು ಅವರು ಸ್ವತಂತ್ರ ಆಗುವಾಗಲೂ(ಇಲ್ಲಿ ನಮ್ಮ ಸ್ವತಂತ್ರ ಎಂದು ಹೇಳಲು ನಾನು ಇಷ್ಟ ಪಡುವುದಿಲ್ಲ, ಯಾಕೆಂದರೆ ಇದು ನನ್ನದೇ ಭರತ ಭೂಮಿ, ಸ್ವತಂತ್ರ ಕೊಡಲು ಅವರಾರು) ನಮ್ಮನ್ನು ಒಡೆದು ಹೋದರು ಅದರ ಫಲವೆ ನಮ್ಮ ಹಾಗು ಪಾಕಿಸ್ತಾನಿ ಬಂದುಗಳ ಒಳ ಜಗಳ,,,, ಈಗ ಜಾಗತೀಕರಣದ ಹೆಸರನ್ನಿಟ್ಟುಕೊಂಡು, ಮತ್ತೊಮ್ಮೆ ನಮ್ಮ ಯುವ ಶಕ್ತಿಯನ್ನು ಕೊಳ್ಳೆ ಹೊಡೆಯುತ್ತಿದ್ದಾರೆ, ನಾವು ನಪುಂಸಕರಂತೆ ಅವರಿಗಾಗಿ ದುಡಿಯುತ್ತಿದ್ದೇವೆ, ಜಗತ್ತಿಗೆ ಬದುಕು ಕಲಿಸಿಕೊಟ್ಟ ದಿವ್ಯ ಪರಂಪರೆ ನಮ್ಮದು, ನಾವು ನಮ್ಮ ಪರಂಪರೆಯನ್ನೇ ಹೀಯಳಿಸುವ ಮಟ್ಟಿಗೆ ಇಳಿದು ಬಿಟ್ಟಿದ್ದೇವೆ, ಎಂತಹ ವಿಪರ್ಯಾಸ ಅಲ್ಲವೆ, ಮುಂದಿನ ನನ್ನ ದೇಶದ ಸ್ತಿತಿ ನೆನೆಸಿಕೊಂಡರೆ ಅಳು ಕಿತ್ತು ಬರುತ್ತದೆ,

     ರಾಣಿ ಚನ್ನಮ್ಮನಂತಹ ಇತಿಹಾಸ ಉಳ್ಳ ಹೆಣ್ಣುಮಕ್ಕಳು ಆಧುನಿಕತೆಗೆ ಮಾರು ಹೋಗಿ ಭಾರತೀಯ ಸಂಸ್ಕ್ರುತಿಯಲ್ಲಿ ಏನಪ್ಪ ಇದೆ ಎಂದು ಎದೆ ಉಬ್ಬಿಸಿ ಕೇಳುತ್ತಿದ್ದಾರೆ, ಭಗತ್ ಸಿಂಗ್, ಅಜಾದ್ ರಂತಹ ಧೀರರ ನಾಡಿನಲ್ಲಿ ಹುಟ್ಟಿದ ಗಂಡುಗಲಿಗಳು ನಪುಂಸಕರಂತೆ ಅನೇಕ ಚಟಗಳಿಗೆ ಬಲಿಯಾಗಿ ಇನ್ನೊಬ್ಬನ ಚಾಕರಿಯಲ್ಲಿ ತೊಡಗಿದ್ದಾರೆ, ಇವರೆಲ್ಲ (ನನ್ನನ್ನು ಸೇರಿಸಿ)ಸ್ವಲ್ಪ ದಿನದ ಹಿಂದೆ ಮಕ್ಕಳೇ ಆಗಿದ್ದರಲ್ಲ, ಇವರಿಗೂ ಮಕ್ಕಳ ದಿನದ ಶುಭಾಶಯ ದೊರಕಿತ್ತಲ್ಲ,,,,,, ಹಾಗದರೆ ನಾವು ತಪ್ಪಿದ್ದೆಲ್ಲಿ ? ಇಂದು ಮಕ್ಕಳಾಗಿರುವವರು, ನಾವು ಬಾಯಿಯಲ್ಲಿ ಹೇಳುವ ಪಾಠದಲ್ಲಿ ಏನನ್ನು ಕಲಿಯುವುದಿಲ್ಲ, ನಾವು ಮಾಡುವುದನ್ನು ಅನುಕರಿಸುತ್ತವೆ, ಆ ಅನುಕರಣೆಗೆ ನಮ್ಮಲ್ಲಿ ಶೇಕಡ ಒಂದರಶ್ಟು ಯೋಗ್ಯರಿದ್ದೇವೆ ಎಂದು ಎದೆ ತಟ್ಟಿ ಹೇಳುವವರು ಯಾರಾದರು ಇದ್ದಾರೆಯೆ ?

 ಕವಿಯೊಬ್ಬ ಹೇಳುತ್ತಾನೆ,,,

ಮೂರು ಸಾಗರ,,,, ನೂರು ಮಂದಿರ,,,,  

ದೈವ ಸಾವಿರವಿದ್ದೊಡೆ,,,,,,,  

ಸಿಂದುವಿದ್ದೊಡೆ,,,,, ಗಂಗೆಇದ್ದೊಡೆ,,,,,

ಗಿರಿ ಹಿಮಾಲಯವಿದ್ದೊಡೆ,,,,

ವೇದವಿದ್ದೊಡೆ,,,,,ಶಾಸ್ತ್ರವಿದ್ದೊಡೆ,,,,

ಘನ ಪರಂಪರೆ ಇದ್ದೊಡೆ,,,,

"ಏನು ಸಾರ್ಥಕ ಮನೆಯ ಮಕ್ಕಳೇ, ಮಲಗಿ ನಿದ್ರಿಸುತ್ತಿದ್ದೊಡೆ",,,,

       ಜಾಗತೀಕರಣ ಎನ್ನುವ ಹುಚ್ಚು ಕುದುರೆಯ ಮೇಲೆ ಏರುವ ಮುನ್ನ ನಮ್ಮ ತನವನ್ನು, ಪ್ರಕೃತಿಯ ದಿವ್ಯ ಪ್ರೀತಿಯನ್ನು ಮರೆಯದಿರೋಣ,,,,,, ಜಾಗತೀಕರಣವನ್ನು ಮೀರಿ ಬೆಳೆದವರು ನಾವು,,,,,, ನಮ್ಮ ಶಕ್ತಿಯನ್ನು ಮತ್ತೊಮ್ಮೆ ತೋರಿಸೊಣ,,,,,,, ಪುಟ್ಟ ಮಕ್ಕಳು, ನಮ್ಮ ನೋಡಿ ಕಲಿಯುವ ಯಾವುದಾದರು ಒಂದು ಘನ ಕಾರ್ಯವ ಮಾಡೋಣ,,,,       

ಇಂದು ನಮ್ಮ ಮಕ್ಕಳು,,,, ಮುಂದೆಯು ನಮ್ಮವರಾಗಿರಲಿ,,,,,   

Comments

Submitted by nageshamysore Fri, 11/15/2013 - 02:09

ಮಕ್ಕಳ ದಿನಾಚರಣೆಯ ದಿನಕ್ಕೆ ಒಂದು ಸೂಕ್ತ ಹಾಗೂ ಕಳಕಳಿಯುಕ್ತ ಬರಹ. ಮಕ್ಕಳ ವ್ಯಕ್ತಿತ್ವ ರೂಪಿಸುವಲ್ಲಿ ಪರಿಸರ ಪ್ರಮುಖ ಪಾತ್ರ ವಹಿಸುವುದರಿಂದ ಭವಿತದ ಮಕ್ಕಳ ಕುರಿತು ಕಳವಳ, ಚಿಂತೆ ಸಹಜ. ಇಲ್ಲಿ ಮಕ್ಕಳಷ್ಟೆ ಗಣನೀಯ ಪಾಲು ಪೋಷಕರದು - ಅವರಿಗೆ ಸೂಕ್ತ ವಾತಾವರಣವನ್ನು ಒದಗಿಸಿ, ವಿವೇಚನಾ ಶಕ್ತಿಯನ್ನು ಬೆಳೆಸುವಲ್ಲಿ.

Submitted by naveengkn Fri, 11/15/2013 - 13:04

In reply to by nageshamysore

ಖಂಡಿತಾ ಸತ್ಯವಾದ ಮಾತು ನಾಗೆಶ್ ಅವರೇ, ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎನ್ನುವ ಮಾತಿನಂತೆ, ಇಂದಿನ ನಾವುಗಳೇ ಮುಂದಿನ ಪ್ರಜೆಗಳು ಹೌದು, (ಏಕೆಂದರೆ ಮಕ್ಕಳು ನಮ್ಮನ್ನು ಅನುಕರಿಸುತ್ತವೆ) ಅದನ್ನು ಅರಿಯದ ನಾವು ಮಕ್ಕಳನ್ನು ತಪ್ಪಿತಸ್ತರನ್ನಾಗಿ ಮಾಡುತ್ತಿದ್ದೇವೆ, -- ನಾವು ಎಚ್ಚೆತ್ತುಕೊಳ್ಳಬೇಕು