ಎಲ್ಲಿಯ?

ಎಲ್ಲಿಯ?

ಚಿತ್ರ

ಎಲ್ಲಿಯ?
=========
ಎಲ್ಲಿಯ ಉಪ್ಪು ?
ಎಲ್ಲಿಯ ಖಾರ ?
ಎಲ್ಲಿಯ ನೆಲ್ಲಿಕಾಯಿ, ಹುಣಸೆ, ಮಾಂಗಾಯಿ ?
ಹುರಿದ ಮೆಂತ್ಯೆದ ಘಮಲೂ
ಪ್ಚ್ ಪ್ಚ್ ಪ್ಚ್ ...ಚಪ್ಪರಿಸಲು 
ಆಯಿತಲ್ಲ 
ನಮ್ಮ ಮನೆ ಉಪ್ಪಿನಕಾಯಿ.

 

ಚಿತ್ರ ಮೂಲ :https://encrypted-tbn2.gstatic.com/images?q=tbn:ANd9GcQwl-d4lCchfPJXEon6...

 

Rating
No votes yet

Comments

Submitted by H A Patil Fri, 11/15/2013 - 18:47

ಪಾರ್ಥ ಸಾರಥಿಯವರಿಗೆ ವಂದನೆಗಳು
' ಎಲ್ಲಿಯ ' ಒಳ್ಳೆಯ ಸಚಿತ್ರ ಕವನ, ಇದನ್ನು ಓದುತ್ತಿದ್ದಂತೆ ನೆಲ್ಲಿ, ಹುಣಸೆ, ನಿಂಬೆ ಮತ್ತು ಮಾವಿನ ಕಾಯಿಗಳ ಉಪ್ಪಿನಕಾಯಿಗಳು ಬಾಯಲ್ಲಿ ಜಿಲ್ಲನೆ ನೀರೊಡೆಯಿಸಿದವು. ಧನ್ಯವಾದಗಳು. .

Submitted by partha1059 Sat, 11/16/2013 - 22:23

In reply to by H A Patil

ಪಾಟೀಲರಿಗೆ ನಮಸ್ಕಾರಗಳು
ತಮಗೆ ಬಾಯಲ್ಲಿ ನೀರೂರುವಂತೆ ಮಾಡಿದ ಕವನ ! ನನಗೂ ಖುಷಿ ಕೊಟ್ಟಿತು!

Submitted by makara Fri, 11/15/2013 - 20:36

ಪಾರ್ಥ ಸರ್,
ಇದೇ ಅಲ್ಲವಾ ಪ್ರಕೃತಿಯ ವೈಚಿತ್ರ‍್ಯ. ಸಮುದ್ರದ ಉಪ್ಪಿಗೂ ಬೆಟ್ಟದ ನೆಲ್ಲಿಕಾಯಿಗೂ ಎತ್ತಣೆತ್ತಿಂದ ಸಂಭಂದ? ಅವರೆಡು ಒಂದುಗೂಡಿದರಲ್ಲವೇ ರುಚಿಯ ಆಗರ?
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

Submitted by partha1059 Sat, 11/16/2013 - 22:22

In reply to by makara

ಹೌದು ! ಸುಮ್ಮನೆ ಹೀಗೆ ಖುಷಿಯ ಲಹರಿಯಲ್ಲೊಂದು ಪುಟ್ಟ ಕವನ ! ಗೀಚಿದ್ದು!

Submitted by nageshamysore Fri, 11/15/2013 - 20:48

ನಿಮ್ಮನೆ ಉಪ್ಪಿನಕಾಯಿ
ತುಡಿಯುತಿದೆ ಕೈ ಬಾಯಿ
ಸಾಕಾಯ್ತು ಪೋಟೊ ನೋಡಿ
ಇಲ್ಲಿಗು ಕಳಿಸಿಬಿಡಿ ಜಾಡಿ
ಕಣ್ಬಿದ್ರೆ ಒಳ್ಳೆದಲ್ಲ ನೋಡಿ !

Submitted by partha1059 Sat, 11/16/2013 - 22:21

In reply to by nageshamysore

ಬೆಂಗಳೂರಿಗೆ ಬನ್ನಿ ಖಂಡೀತ ನೀವು ಕೇಳುವ ಉಪ್ಪಿಯಕಾಯಿ ಹಾಕಿಸಿಕೊಡುವೆ :-)

Submitted by ಗಣೇಶ Sat, 11/16/2013 - 23:00

In reply to by nageshamysore

ಪ್ಚ್ ಪ್ಚ್ ಪ್ಚ್ ...ಚಪ್ಪರಿಸಲು
ಆಯಿತಲ್ಲ "ಖಾಲಿ"
ನಮ್ಮ ಮನೆ ಉಪ್ಪಿನಕಾಯಿ.
ನಾಗೇಶರೆ, ನೀವು ಬಾಯಿ ಚಪ್ಪರಿಸಿದ್ದೇ ಬಂತು. ಜಾಡಿ ಆಸೆ ಬಿಡಿ.:)

Submitted by kavinagaraj Sat, 11/16/2013 - 19:13

ಕನ್ನಡಿಯ ಗಂಟು ತೋರಿಸಿ ತೆಗೆದುಕೊಳ್ಳಿ ಅಂದರೆ?